• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಹದೊಳಗಿನ ಕೊಳೆ ತೊಳೆವ ಇನ್ನಷ್ಟು ವಿಧಾನಗಳು!

By Staff
|


(ಕ) ಹೃದ್‌ ಧೌತಿ :

ಇನ್ನು ಹೃದ್‌ಧೌತಿಯಲ್ಲಿ ಮೂರು ಪ್ರಕಾರಗಳಿವೆ.

1) ಧಂಡಧೌತಿ, 2) ವಮನಧೌತಿ, 3) ವಸ್ತ್ರಧೌತಿ.

ಇದರಿಂದ ಅನ್ನನಲಿಕೆ, ಪುಪ್ಫುಸ ಸ್ವಚ್ಛವಾಗುತ್ತವೆ.

ಧಂಡಧೌತಿ : ‘‘ರಂಭಾದಂಡಂ ಹರಿದ್ದಂಡಂ ವೇತ್ರದಂಡಂ ತಥೈವ ಚ ।
ಹೃನ್ಮಧ್ಯೇ ಚಾಲಯಿತ್ವಾ ತು ಪುನಃ ಪ್ರತ್ಯಾಹರೇಚ್ಛನೈಃ ।36।

ಕಫಂ ಪಿತ್ತಂ ತಥಾ ಕ್ಲೇದಂ ರೇಚಯೇದೂರ್ಧ್ವವರ್ತ್ಮನಾ ।
ಗಂಡಧೌತಿವಿಧಾನೇನ ಹೃದ್ರೋಗಂ ನಾಶಯೇದ್‌ ಧ್ರುವಮ್‌ ।37।

(ಬಾಳೆಯ ದಿಂಡು, ಅರಿಷಣ ಬೇರು ಅಥವಾ ಬೆತ್ತದಿಂದ ಹೃದಯ ಮಧ್ಯದಲ್ಲಿ ಸೇರಿಸಿ ಸಾವಕಾಶವಾಗಿ ಹೊರತೆಗೆದು ಕಫ, ಪಿತ್ತ, ಕ್ಲೇದಗಳನ್ನು ರೇಚನ ಮಾಡಿದರೆ ಹೃದಯ ರೋಗಗಳು ನಿಶ್ಚಿತವಾಗಿ ನಾಶಹೊಂದುತ್ತವೆ ಎನ್ನುತ್ತಾರೆ ಘೕರಂಡರು. ಇಂಥ ಕ್ರಿಯೆಗಳನ್ನು ಈ ಕಾಲದಲ್ಲಿ ಕಲಿಯುವವರು, ಕಲಿಸುವವರು ವಿರಳ.)

ವಮನ ಧೌತಿ : ‘‘ಭೋಜನಾಂತೇ ಪಿಬೇದ್ವಾರಿ ಚಾಕಂಠಂ ಪೂರಿತಂ ಸುಧೀಃ ।
ಊರ್ಧ್ವಾ ದೃಷ್ಟಿಂ ಕ್ಷಣಂ ಕೃತ್ವಾ ತಜ್ಜಲಂ ವಮಯೇತ್‌ ಪುನಃ ।
ನಿತ್ಯಮಭ್ಯಾಸಯೋಗೇನ ಕಫಪಿತ್ತಂ ನಿವಾರಯೇತ್‌ ।।’’ (ಘೕ.ಸಂ.-39)

ವಮನಧೌತಿಯ ಬಗ್ಗೆ ಈ ಮೊದಲು ಬರೆಯಲಾಗಿದೆ. ಈ ಧೌತಿಯಲ್ಲಿ ಎರಡು ಬಗೆಯ ಕ್ರಿಯೆಗಳು ಇವೆ. ಖಾಲಿ ಹೊಟ್ಟೆ ಇದ್ದಾಗ ನೀರು ಕುಡಿದು ವಮನ ಮಾಡುವ ಕ್ರಿಯೆಗೆ ಕುಂಜಲಕ್ರಿಯಾ ಎನ್ನುತ್ತಾರೆ. (ಬಿ.ಪಿ. ಇದ್ದವರು ವಮನ ಮಾಡಬಾರದು.) ಇದು ವ್ಯಕ್ತಿಯನ್ನು ವಿಕಾರರಹಿತ ಸ್ಥಿತಿಗೆ ತರುತ್ತದೆ. ದಮ್ಮು ಇದ್ದವರಿಗೆ ಈ ಕ್ರಿಯೆಯಿಂದ ಲಾಭವಿದೆ.

ಎರಡನೆಯ ಕ್ರಿಯೆ ವ್ಯಾಘ್ರಕ್ರಿಯೆ. ಊಟವಾದ ನಂತರ ಮಾಡುವ ವಮನ ಕ್ರಿಯೆ ಇದು. ಇದನ್ನು ಪ್ರಾಣಿಗಳು ಮಾಡುತ್ತವೆ. ಊಟವಾದ ಮೇಲೆ ಅನ್ನವೆಲ್ಲ ಪಚನವಾಗಿಬಿಡುತ್ತದೆ. ಆಗದಿದ್ದರೆ ಅನ್ನಕಣಗಳು ಹೊರಗೆ ಉಳಿದು ಅಸುಖ ಉಂಟುಮಾಡುತ್ತವೆ. ಅವು ವಿಷಕಾರಿಯಾಗಿ ಪರಿಣಮಿಸುತ್ತವೆ. ಕಂಠದವರೆಗೆ ನೀರು ಕುಡಿದು ವಮನ ಮಾಡಬೇಕು. ಆ ಅನ್ನ ಕಣಗಳು ಈ ಕ್ರಿಯೆಯಿಂದ ಹೊರಬರುತ್ತವೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಪಚನ ರೋಗದಿಂದ ಬಳಲುವವರಿಗೆ ಈ ಕ್ರಿಯೆ ಬಹಳ ಹಿತಕಾರಿಯಾಗಿದೆ.

ಕುಡಿದ ನೀರು ಗಂಟಲ ವರೆಗೆ ಬರಬೇಕು. ಮೂರು ಬೆರಳುಗಳನ್ನು ಹಾಕಿ ವಮನ ಮಾಡಿಕೊಳ್ಳಬೇಕು. ಇದಕ್ಕೆ ಅಂತರ್‌ಧೌತಿ ಎಂದೂ ಕರೆಯುತ್ತಾರೆ. ಇದನ್ನು ವಾರಕ್ಕೊಂದು ಸಲ ಮಾಡಬೇಕು. ಇದರಿಂದ ಜಠರ ವಿಕಾರರಹಿತವಾಗುತ್ತದೆ, ಹೊಟ್ಟೆಯಲ್ಲಿ ಕೀಟಾಣುಗಳು ಉತ್ಪನ್ನವಾಗುವುದಿಲ್ಲ ಎನ್ನುತ್ತಾರೆ. ವಾಯುವಿಕಾರ, ಪಿತ್ತವಿಕಾರ, ವಿಷಾಣುತತ್ವವಿಕಾರ ಇದರಿಂದ ಆಗುವುದಿಲ್ಲ.

ವಸ್ತ್ರಧೌತಿ : ವಸ್ತ್ರಧೌತಿಯ ಬಗ್ಗೆ ಪ್ರಾರಂಭದಲ್ಲಿ ಬರೆಯಲಾಗಿದೆ. ಅದು ಕಫ ನಿವಾರಣೆಗೆ ರಾಮಬಾಣವಿದ್ದಂತೆ. ಅದರಿಂದ ಅಸ್ತಮಾ ವಾಸಿಯಾಗುತ್ತದೆ. ದಮ್ಮು ಇರುವವರಿಗೆ ಇದನ್ನು ಪ್ರತ್ಯೇಕವಾಗಿ ಕಲಿಸಲಾಗುತ್ತದೆ. ಆಮಾಂಶ, ಚರ್ಮರೋಗ ಬಾಧೆಗೂ ಇದು ಉಪಶಮನಕಾರಿ.

ಮೂಲಶೋಧನ :

ಇನ್ನೊಂದು ಮಹತ್ವದ ಶೋಧನೆ ಇದೆ. ಅದರ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲ. ಅದುವೆ ಮೂಲಶೋಧನ.

‘‘ಅಪಾನಕ್ರೂರತಾ ತಾವದ್‌ ಯಾವನ್ಮೂಲಂ ನ ಶೋಧಯೇತ್‌ ।
ತಸ್ಮಾತ್‌ ಸರ್ವ ಪ್ರಯತ್ನೇನ ಮೂಲಶೋಧನಮಾಚರೇತ್‌।।’’(ಘೕ. ಸಂ.- 42)

‘‘ಪೀತ ಮೂಲಸ್ಯ ದಂಡೇನ ಮಧ್ಯಮಾಂಗುಲಿನಾǚಪಿವಾ ।
ಯತ್ನೇನ ಕ್ಷಾಲಯೇತ್‌ ಗುಹ್ಯಂ ವಾರಿಣಾ ಚ ಪುನಃ ಪುನಃ ।।’’(ಘೕ.ಸಂ.-43)

‘ಮೂಲ ಶೋಧನ’ ಎಂದರೆ ಅರಿಷಿಣ ಬೇರನ್ನು ಅಥವಾ ಮಧ್ಯಮ ಬೆರಳನ್ನು ಬಳಸಿ ಗುದದ್ವಾರವನ್ನು ಸ್ವಚ್ಛಗೊಳಿಸುವ ಕ್ರಿಯೆ. ಅರಿಷಿಣದಲ್ಲಿ ಬಹಳ ಔಷಧೀಯ ಗುಣಗಳಿರುವುದರಿಂದ ಅದರ ಬಳಕೆ ಬೆರಳಿಗಿಂತ ಉತ್ತಮ. ಮೇಲಿನ ಶ್ಲೋಕದಲ್ಲಿ ‘ಅಪಾನಕ್ರೂರತಾ’ ಎಂಬ ಶಬ್ದ ಬಹಳ ಮಹತ್ವದ್ದು. ನಾವು ಮೂಲವನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅಪಾನವಾಯು ನಮ್ಮೊಡನೆ ಕ್ರೂರವಾಗಿ ನಡೆದುಕೊಳ್ಳುತ್ತದೆ ಎಂದು ಅದರ ಅರ್ಥ. ಪ್ರಾಣ ಎಂದರೆ ವಾಯು. ನಮ್ಮ ದೇಹದಲ್ಲಿ ಐದು ವಿಧದ ವಾಯುಗಳಿವೆ. ಅವಕ್ಕೆ ಪಂಚಪ್ರಾಣ ಎಂದೂ ಕರೆಯುತ್ತಾರೆ.

1) ಪ್ರಾಣವಾಯು : ಇದರ ಪ್ರದೇಶ ಹೃದಯ. ಕಂಠಪಟಲ ಹಾಗೂ ತಂತುಪಟಲದ ಮಧ್ಯೆ ಇದು ಇರುತ್ತದೆ. ಯೋಗಶಾಸ್ತ್ರದ ಪ್ರಕಾರ ಪ್ರಾಣವಾಯುವಿನ ನಿಯಂತ್ರಣ ಪುಫ್ಫುಸ, ಹೃದಯ ಹಾಗೂ ರಕ್ತಸಂಚಾರದ ಮೇಲೆ ಇದೆ. ಇದರಿಂದ ರಕ್ತ ಶುದ್ಧವಾಗುತ್ತದೆ.

2) ಸಮಾನವಾಯು : ಇದು ಊರ್ಧ್ವ ದಿಶೆಯಲ್ಲಿ ಹರಿಯುತ್ತದೆ. ಇದು ಪಚನ ಕ್ರಿಯೆಯನ್ನು ನಿಯಂತ್ರಿಸುವ ವಾಯು. ಇದು ಶಕ್ತಿಯನ್ನು ಸಮರೂಪದಲ್ಲಿ ದೇಹಕ್ಕೆ ಪೂರೈಸುತ್ತದೆ. ಇದು ಸರಿ ಇಲ್ಲದಿದ್ದರೆ ಆಮಾಂಶ ರೋಗ ಹುಟ್ಟುತ್ತದೆ.

3) ಅಪಾನವಾಯು : ಇದು ಅಧೋಗಾಮಿ, ಕೆಳಗೆ ಹರಿಯುತ್ತದೆ. ಶರೀರದಿಂದ ಹೊರಡುವ ಬೆವರು, ಮೂತ್ರ, ಮಲ, ವಿಷಯುಕ್ತ ತತ್ವಗಳನ್ನು ಇದು ನಿಯಂತ್ರಿಸುತ್ತದೆ. ಯಕೃತ್ತು, ಕರುಳು, ಮೂತ್ರಕೋಶ ಅಪಾನವಾಯುವಿನ ನಿಯಂತ್ರಣದಲ್ಲಿರುತ್ತವೆ. ಮಲಬದ್ಧತೆ ಕೂಡ ಇದರಿಂದ ಆಗುತ್ತದೆ.

4) ಉದಾನವಾಯು : ಇದು ತಲೆ, ಎರಡು ಭುಜ, ಎರಡು ಕಾಲುಗಳಲ್ಲಿ ಕ್ರಿಯಾಶೀಲಶೀಲವಾಗಿರುತ್ತದೆ. ಈ ವಾಯು ವಿಕಾರಗೊಂಡರೆ ಕೈಕಾಲುಗಳು ಚಲಿಸುವುದಿಲ್ಲ.

5) ವ್ಯಾನವಾಯು : ಇದು ಶರೀರದ ಎಲ್ಲ ನಾಡಿಗಳಲ್ಲಿ ಪ್ರವಹಿಸುವ ಶಕ್ತಿಯಾಗಿದೆ. ವ್ಯಾನ ಶಬ್ದವು ವ್ಯಾಪ್ತ ಶಬ್ದಕ್ಕೆ ಸಂಬಂಧಿಸಿದೆ. ಇದು ಇಡೀ ಶರೀರವನ್ನು ವ್ಯಾಪಿಸಿದೆ.

ಐದೂ ವಾಯುಗಳನ್ನು ಮೂಲ ಶೋಧನದಿಂದ ಶುದ್ಧಿಗೋಳಿಸುವುದು ಸಾಧ್ಯವಿದೆ. ಮಲವು ಒಳಗೇ ಉಳಿದುಬಿಟ್ಟರೆ ಅದು ವಿಷವಾಗುತ್ತದೆ. ಅದರ ನಿರ್ಮೂಲನೆ ಅವಶ್ಯ. ಹೆಚ್ಚಿನ ರೋಗಗಳಿಗೆ ಮೂಲವಾಗಿರುವದು ಮಲಬದ್ಧತೆ. ಅದರ ನಿವಾರಣೆ ಅತ್ಯವಶ್ಯಕ.

ಮೂಲಶೋಧನೆಯ ಮರ್ಮವನ್ನು ಋಷಿಗಳು ತಿಳಿದಿದ್ದರು ಅರಿಷಣ ಬೇರನ್ನು ಚೆನ್ನಾಗಿ ತೊಳೆದು ಅದನ್ನು ಗುದದ್ವಾರದಲ್ಲಿ ಸೇರಿಸಿ ಶುದ್ಧಿಗೊಳಿಸುತ್ತಿದ್ದರು. ಇದು ಸರಳವಾಗಿರಬೇಕು, ಗಂಟಾಗಿರಬಾರದು, ನಾಲ್ಕು ಇಂಚು ಉದ್ದವಾಗಿರಬೇಕು. ಅರಿಷಿಣದ ಒಂದು ವೈಶಿಷ್ಟ್ಯವೆಂದರೆ ಅದು ವಿಷವನ್ನು ಎಳೆಯುತ್ತದೆ. 2-3 ನಿಮಿಷ ಒಳಗೆ ಇಟ್ಟು ನಂತರ ಹೊರತೆಗೆದು ಬೀಸಾಕಿ ಬಿಡಬೇಕು. ಒಳಗೆ ಗಾಯವಾದರೆ ಗುಣಪಡಿಸುವ ಔಷಧೀಯ ಗುಣ ಅದರಲ್ಲಿದೆ.

ಮಧ್ಯಮ ಬೆರಳು ಉಪಯೋಗಿಸುವಾಗ ಉಗುರನ್ನು ತೆಗೆದಿರಬೇಕು. ಈ ಕ್ರಿಯೆಯಿಂದ ಮಲಬದ್ಧತೆ ನಿವಾರಣೆಗೊಳ್ಳುತ್ತದೆ. ಇದು ಮೂಲವ್ಯಾಧಿ ರೋಗಕ್ಕೂ ಒಳ್ಳೆಯದು. ಉಪಶಮನಕಾರಿಯಾಗಿದೆ. ಈ ಪ್ರಯೋಗ ಮುಂಜಾನೆ ಮಾಡಬೇಕು. ಸ್ವಚ್ಚವಾದ ಬೆಚ್ಚಗಿನ ನೀರನ್ನು ಬಳಸಬೇಕು. ಇದಕ್ಕೆ ಮಹಾಧೌತಿ, ಜಲಮೂಲಶೋಧನ ಎಂದೂ ಕರೆಯುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+1353354
CONG+09090
OTH09898

Arunachal Pradesh

PartyLWT
BJP23436
JDU077
OTH11112

Sikkim

PartyWT
SKM1717
SDF1515
OTH00

Odisha

PartyWT
BJD112112
BJP2323
OTH1111

Andhra Pradesh

PartyLWT
YSRCP0151151
TDP02323
OTH011

LOST

Nimmala Kistappa - TDP
Hindupur
LOST
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more