ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಹದೊಳಗಿನ ಕೊಳೆ ತೊಳೆವ ಇನ್ನಷ್ಟು ವಿಧಾನಗಳು!

By Staff
|
Google Oneindia Kannada News


ಇದು ‘ಯೋಗವಿದ್ದಲ್ಲಿ ರೋಗವಿಲ್ಲ’ ಮಾಲಿಕೆಯ ಐದನೇ ಭಾಗ. ಇಲ್ಲಿನ ಮಾಹಿತಿಯನ್ನು ಅನುಸರಿಸಲು ಮುಂದಾಗುವವರಿಗೆ ಒಂದು ಎಚ್ಚರಿಕೆ; ಪ್ರಯೋಗದ ಸಂದರ್ಭದಲ್ಲಿ ಸೂಕ್ತ ಗುರು ನಿಮ್ಮ ಜೊತೆ ಕಡ್ಡಾಯವಾಗಿ ಇರಲಿ.

Yoga helps keep your body clean(ಅ) ಮಹಾಧೌತಿ :

‘‘ನಾಭಿಮಗ್ನ ಜಲೇ ಸ್ಥಿತ್ವಾ ಶಕ್ತಿ ನಾಡೀಂ ವಿಸರ್ಜಯೇತ್‌ ।
ಕರಾಭ್ಯಾಂ ಕ್ಷಾಲಯೇನ್ನಾಡೀಂ ಯಾವನ್ಮಲವಿಸರ್ಜನಮ್‌।।’’(ಘೕರಂಡ ಸಂಹಿತಾ-22)

ನಾಭಿಯವರೆಗೆ ನೀರಿನಲ್ಲಿ ನಿಂತುಕೊಂಡು ಶಕ್ತಿನಾಡಿಯನ್ನು ಹೊರತೆಗೆಯಬೇಕು, ಅದನ್ನು ಪ್ರಕ್ಷಾಲನೆ ಮಾಡಬೇಕು ಎಂದು ‘ಘೕರಂಡ ಸಂಹಿತಾ’ದಲ್ಲಿ ಹೇಳಲಾಗಿದೆ. ಇದರ ಅಭ್ಯಾಸವನ್ನು ಹರಿವ ನೀರಿನಲ್ಲಿ ಮಾಡಬೇಕಾಗುವದು. ಅಶ್ವಿನಿ-ವಜ್ರೋಲಿ ಮಾಧ್ಯಮದಿಂದ ನೀರನ್ನು ಗುದದ್ವಾರದ ಮುಖಾಂತರ ಒಳಗೆ ಎಳೆಯಲಾಗುತ್ತದೆ.

ಮಧ್ಯಮ ಬೆರಳಿಗೆ ತೈಲವನ್ನು ಹಚ್ಚಿ, ಬೆರಳನ್ನು ಗುದದ್ವಾರದಲ್ಲಿ ಸೇರಿಸಿ ಮಲವನ್ನು ಸ್ವಚ್ಛಗೊಳಿಸುವ ಕ್ರಮವಿದೆ. ಇದರಿಂದ ಒಳಗಿನ ಶಕ್ತಿ ನಾಡಿಯು ಶುದ್ಧಗೊಳ್ಳುತ್ತದೆ. ಇದರ ಸಂವೇದನೆಯಿಂದ ಪಿಂಗಳಾ ನಾಡಿಯು ಜಾಗ್ರತಗೊಳ್ಳುತ್ತದೆ. ಅದರಿಂದ ಶರೀರದಲ್ಲಿ ಪ್ರಾಣಶಕ್ತಿಯು ಜಾಗ್ರತಗೊಳ್ಳುತ್ತದೆ. ಈ ಅವಸ್ಥೆಗೆ ‘ಪ್ರಾಣೋತ್ಥಾನ’ ಎನ್ನುತ್ತಾರೆ. ನಂತರ ಕುಂಡಲಿನಿ ಶಕ್ತಿಯು ಜಾಗ್ರತಗೊಳ್ಳುವ ಕ್ರಿಯೆಗೆ ಚಾಲನೆ ದೊರೆಯುತ್ತದೆ.

ಈ ಕ್ರಿಯೆಯ ವಿವರಗಳನ್ನು ಗುರುಮುಖೇನ ತಿಳಿದು ಮಾಡಬೇಕು. ಗುದದ್ವಾರದ ಬಲಭಾಗದಲ್ಲಿ ಇನ್ನೊಂದು ನಾಡಿ ಇದೆ. ಅದಕ್ಕೆ ವಜ್ರನಾಡಿ ಎನ್ನುತ್ತಾರೆ. ವಜ್ರಾಸನದಲ್ಲಿ ಕುಳಿತಾಗ ವಜ್ರನಾಡಿಯ ಮೇಲೆ ಪ್ರಭಾವ ಉಂಟಾಗುತ್ತದೆ. ಈ ನಾಡಿಯಿಂದಾಗಿಯೇ ವಜ್ರಾಸನಕ್ಕೆ ಆ ಹೆಸರು ಬಂದಿರಬೇಕು. ಈ ನಾಡಿಗೆ ದೇಹದ ಪಚನಕ್ರಿಯೆಗೆ ನೇರವಾದ ಸಂಬಂಧವಿದೆ. ಇದರ ಸಂಬಂಧ ಸಿಯಾಟಿಕಾ ನಾಡಿಯಾಂದಿಗೂ ಇದೆ. ವಜ್ರನಾಡಿಯಿಂದ ಸಿಯಾಟಿಕಾ ನಾಡಿಯಿಂದಾಗುವ ನೋವು ಕಡಿಮೆಯಾಗುತ್ತದೆ. ಯೋಗ ವಿಜ್ಞಾನದ ಪ್ರಕಾರ ಸ್ವಾಧಿಷ್ಠಾನ ಚಕ್ರದಲ್ಲಿ ಪಿಂಗಲಾ ನಾಡಿ ಬಂದು ಸೇರುತ್ತದೆ. ಪಿಂಗಲಾ ನಾಡಿಯಲ್ಲಿ ಸೂರ್ಯಶಕ್ತಿ ಇದೆ. ಈ ಭಾಗದ ಧೌತಿಗೆ ‘ಮಹಾಧೌತಿ’ ಎಂದೂ ಕರೆಯಲಾಗುತ್ತದೆ.

(ಬ) ದಂತಧೌತಿ :

‘‘ದಂತಮೂಲಂ ಜಿಹ್ವಾಮೂಲಂ ರಂಧ್ರಂ ಚ ಕರ್ಣಯುಗ್ಮಯೋಃ ।
ಕಪಾಲ ರಂಧ್ರಂ ಪಂಚೈತೇ ದಂತ ಧೌತಿರ್ವಿಧೇಯತೇ।।’’ ( ಘೕ.ಸಂ.-25).

ದಂತ ಧೌತಿಯಲ್ಲಿ ಐದು ಪ್ರಕಾರಗಳಿವೆ. ದಂತಮೂಲ, ಜಿಹ್ವಾಮೂಲ, ಕರ್ಣರಂಧ್ರ, ಕಪಾಲರಂಧ್ರ (ಕರ್ಣ ರಂಧ್ರ ಎರಡು ಇರುವುದರಿಂದ ಒಟ್ಟು ಐದು ಆದವು). ಈ ಧೌತಿಯ ವಿವರಗಳನ್ನು ಘೕರಂಡರು ಕೊಡುತ್ತಾರೆ. ಯಾವ ಬೆರಳುಗಳನ್ನು ಬಳಸಿ ಯಾವ ಭಾಗ ಸ್ವಚ್ಛಗೊಳಿಸಬೇಕೆನ್ನುವುದರ ವಿವರ ಕೊಡುತ್ತಾರೆ.

ದಂತಮೂಲ ಧೌತಿ : ಒಸಡುಗಳನ್ನು ಮೊದಲಿನ ಕಾಲದಲ್ಲಿ ಸೋಸಿದ ಮಣ್ಣಿನಿಂದ ತಿಕ್ಕುತ್ತಿದ್ದರು. ಈಗಿನ ಕಾಲದಲ್ಲಿ ದೊರೆಯುವ ಪೌಡರ್‌ ಯಾ ಪೇಸ್ಟ ಹಚ್ಚಿ ಬೆರಳಿನಿಂದ ಮಾಸಾಜು ಮಾಡಬಹುದು. ಬೆರಳಿನಿಂದ ಒಸಡು ತಿಕ್ಕುವುದು ಬಹಳ ಮಹತ್ವದ್ದು. ಬ್ರಶ್‌ನಿಂದ ಆ ಕೆಲಸ ಆಗುವುದಿಲ್ಲ. (‘ದಂತಮೂಲಂ ಪರಾಧೌತಿರ್ಯೋಗಿನಾಂ ಯೋಗಸಾಧನೆ । ನಿತ್ಯಂ ಕುರ್ಯಾತ್ಪ್ರಭಾತೆ ಚ ದಂತರಕ್ಷಾಯ ಯೋಗವಿತ್‌’)

ಜಿಹ್ವಾಮೂಲ ಧೌತಿ : ‘ತರ್ಜನೀಮಧ್ಯಮಾನಾಮಾ ಅಂಗುಲಿತ್ರಯಯೋಗತಃ’, ಮೂರು ಬೆರಳುಗಳಿಂದ ನಾಲಗೆ ಸ್ವಚ್ಛಮಾಡುವುದೇ ಜಿಹ್ವಾಶೋಧನ. ಜಿಹ್ವಾಶೋಧನದಿಂದ ನಾಲಗೆಯು ಉದ್ದವಾಗುತ್ತದೆ. ಇದರಿಂದ ವ್ಯಾಧಿ, ಮುಪ್ಪು ಹಾಗೂ ಮೃತ್ಯುವನ್ನು ಕೂಡ ದೂರ ಸರಿಸಬಹುದು ಎಂದೂ ಹೇಳುತ್ತಾರೆ. ತರ್ಜನೀಯ, ಮಧ್ಯಮ, ಅನಾಮಿಕಾ ಬೆರಳುಗಳನ್ನು ಬಳಸಿ ನಾಲಗೆಯ ಮೂಲವನ್ನು ಹೇಗೆ ಸ್ವಚ್ಛಗೊಳಿಸಬೇಕೆಂಬುದನ್ನು ಹೇಳುತ್ತಾರೆ.

ಕರ್ಣರಂಧ್ರ ಧೌತಿ : ‘‘ತರ್ಜನ್ಯನಾಮಿಕಾ ಯೋಗಾನ್ಮಾರ್ಜಯೇತ್ಕರ್ಣರಂಧ್ರಯೋಃ ।
ನಿತ್ಯಮಭ್ಯಾಸ ಯೋಗೇನ ನಾದಾಂತರಂ ಪ್ರಕಾಶಯೇತ್‌ ।।’’ ಘೕ.ಸಂ.-32

ತರ್ಜನೀಯ ಮತ್ತು ಅನಾಮಿಕಾ ಬೆರಳುಗಳಿಂದ ಕರ್ಣರಂಧ್ರ (ಕಿವಿ) ಸ್ವಚ್ಛಗೊಳಿಸುವ ಬಗ್ಗೆ ಬರೆಯುತ್ತಾರೆ. ನಿತ್ಯ ಅಭ್ಯಾಸದಿಂದ ನಾದದ ಅನುಭೂತಿಯಾಗುತ್ತದೆ. ಯೋಗಾಭ್ಯಸದಲ್ಲಿ ಧಾರಣಾ ಮತ್ತು ಧ್ಯಾನದ ಅವಸ್ಥೆಯಲ್ಲಿ ಒಳಗೆ ನಾದದ ಅನುಭೂತಿಯಾಗುತ್ತದೆ.

ಕಪಾಲರಂಧ್ರ ಧೌತಿ : ಕಪಾಲರಂಧ್ರ ಧೌತಿ ಮಾಡುವಾಗ ಅಂಜಲಿಯನ್ನು ಕಪ್‌ನಂತೆ ಮಾಡಿ ನೀರನ್ನು ನಡುನೆತ್ತಿಗೆ ಬಡಿಸುವುದರಿಂದ ಕಪಾಲರಂಧ್ರ ಧೌತಿ ಮಾಡಲಾಗುತ್ತದೆ. ಕಪಾಲ ಮಧ್ಯದಲ್ಲಿ ಬ್ರಹ್ಮರಂಧ್ರವಿದೆ. ತಲೆಯಲ್ಲಿರುವ ಎಲ್ಲ ಸಂವೇದನಾಶೀಲ ನಾಡಿಗಳು ಇಲ್ಲಿವೆ. ನೀರನ್ನು ಈ ಭಾಗಕ್ಕೆ ಬಡಿಯುವುದರಿಂದ ಈ ಭಾಗ ಸ್ವಚ್ಛಗೊಳ್ಳುತ್ತದೆ. ಇದರಿಂದ ಮಸ್ತಿಷ್ಕ ತಂಪಾಗುವುದೆಂದು ಘೕರಂಡರು ಹೇಳುತ್ತಾರೆ. ಇದರಿಂದ ಕಣ್ಣಿನ ದೋಷಗಳು ವಾಸಿಯಾಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X