ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರಕವಿ ಡಾ। ದ.ರಾ. ಬೇಂದ್ರೆ ಜೊತೆ ನಾನು!

By Staff
|
Google Oneindia Kannada News


My association with Da.Ra. Bendre ಕಾವ್ಯಗಾರುಡಿಗನ ಗೀತೆಗಳು...

ವೆಂಕಟೇಶ ಎಂಬ ಸಾಹಿತ್ಯ ಹವ್ಯಾಸಿಯಾಬ್ಬರು ಸಂಗ್ರಹಿಸಿದ ಬೇಂದ್ರೆಯವರನ್ನು ಕುರಿತು ಬರೆದ ಸುಮಾರು ನಾಲ್ಕುನೂರು ಲೇಖನಗಳನ್ನು ಪ್ರದರ್ಶಿಸಲಾಗಿತ್ತು. ಕಾಲೇಜಿನ 15-20 ಪ್ರಧ್ಯಾಪಕರದೇ ಒಂದು ವೃಂದಗಾನದ ತಂಡ ರಂಗವನ್ನು ಅಲಂಕರಿಸಿ ಬೇಂದ್ರೆ ಗೀತೆಗಳನ್ನು ಸುಶ್ರಾವ್ಯವಾಗಿ ಬಿತ್ತರಿಸಿದ್ದು ಒಂದು ವೈಶಿಷ್ಟ್ಯವೇ ಆಗಿತ್ತು.

ಈ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ। ಅನುಸೂಯಾದೇವಿಯವರು ಪ್ರಾಧ್ಯಾಪಕಿ ಅಷ್ಟೇ ಅಲ್ಲ, ಲೇಖಕಿ ಮತ್ತು ಗಾಯಕಿ ಕೂಡ. ‘ಅನುವಸಂತ ಸುಗಮ ಸಂಗೀತ ತಂಡ’ದ ಸಂಸ್ಥಾಪಕಿಯೂ ಆಗಿದ್ದಾರೆ. ಇವರು ಕೀಬೋರ್ಡ್‌ ನುಡಿಸುತ್ತಿದ್ದರು. ಹೆಚ್ಚಿನ ಹಾಡುಗಳ ಸ್ವರಸಂಯೋಜನೆ ಮಾಡಿದ್ದರು.

ಸ್ಟೇಜಿನ ತುಂಬ ಪ್ರಾಧ್ಯಾಪಕರು ಹಾಗೂ ಪ್ರಾಧ್ಯಾಪಕಿಯರು ನಿಂತು ಹಾಡುತ್ತಿದ್ದ ದೃಶ್ಯ ಅವರ್ಣನೀಯವಾಗಿತ್ತು. ಮಧ್ಯದಲ್ಲಿ ನಿಂತು ಹಾಡುವವರು ಕಾಲೇಜಿನ ಪ್ರನ್ಸಿಪಾಲ್‌ ಪ್ರೊ. ಡಿ.ಎನ್‌.ವೆಂಕಟರಾವ್‌ ಎಂದು ತಿಳಿದಾಗ ನಮ್ಮ ಸಂತಸ ಇನ್ನೂ ಹೆಚ್ಚಾಯಿತು. ಅವರು ಗಣಿತದ ಪ್ರಧ್ಯಾಪಕರು, ಅವರಿಗೆ ಸಂಗೀತ ಹಾಗೂ ಸಾಹಿತ್ಯದಲ್ಲಿ ಅಷ್ಟೇ ಆಸಕ್ತಿ. ಸಂಜೆ ವಿದ್ಯಾರ್ಥಿಗಳು ಬೇಂದ್ರೆ ಹಾಡು ಹಾಡುತ್ತಿದ್ದರು. ಇವರೆಲ್ಲರಿಗೆ ಗಾನವಿದುಷಿ ಅನುಸೂಯಾದೇವಿಯವರ ಮಾರ್ಗದರ್ಶನ. ಎಲ್ಲರಿಗೂ ಚಹ ಅಲ್ಪೋಪಹಾರ, ಮಧ್ಯಾಹ್ನ ಭೋಜನ. ಕೊನೆಯ ದಿನವಂತೂ ಬೇಂದ್ರೆಯವರಿಗೆ ಪ್ರಿಯವಾದ ಜೋಳದರೊಟ್ಟಿ, ಮತ್ತೆ ಸಿಹಿ ಹೋಳಿಗೆ ಕೂಡ.

ಸರಕಾರದಿಂದಾಗಲಿ ಬೇರೆ ಸಂಸ್ಥೆಯಿಂದಾಗಲಿ ಯಾವುದೇ ಸಹಾಯ ಪಡೆಯದೆಯೇ, ಒಂದು ಕಾಲೇಜಿನವರು, ದೂರದಿಂದ ಅತಿಥಿಗಳನ್ನು ಕರೆಸಿ, ಅವರಿಗೆಲ್ಲ ಸರ್ವವಿಧದ ಅನುಕೂಲತೆ ವ್ಯವಸ್ಥೆ ಮಾಡಿದ್ದು, ಮನೆಯಲ್ಲಿ ನಡೆದ ಮದುವೆಯ ಸಂಭ್ರಮ-ಸಡಗರದಿಂದ ಒಂದು ವಿನೂತನ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದು, ಮೂರು ದಿನಗಳ ಜ್ಞಾನ ಸತ್ರ ನಡೆಸಿದ್ದು, ಮತ್ತೊಂದು ವೈಶಿಷ್ಟ್ಯ ಎಂದೇ ಹೇಳಬೇಕು.

ಇನ್ನೊಂದೆರಡು ಮಾತು...

ಮೂರು ದಿನದ ಕಾರ್ಯಕ್ರಮದ ಬಗ್ಗೆ ಒಂದೆರಡು ಮಾತು. ಬೇಂದ್ರೆಯವರೊಂದಿಗೆ ಹನ್ನೆರಡು ವರ್ಷ ವಿದ್ಯಾರ್ಥಿಯಾಗಿ, ಸಹಪ್ರಧ್ಯಾಪಕನಾಗಿ ಅವರೊಂದಿಗೆ ಸಮಯ ಕಳೆದ (ಅಲ್ಲ, ಗಳಿಸಿದ) ಡಾ। ವಸಂತ ದಿವಾಣಜಿ ಉದ್ಘಾಟಕರು. ಅವರು ಬೇಂದ್ರೆಯವರ ಹಿರಿಮೆಯನ್ನು ಆಪ್ತಶೈಲಿಯಲ್ಲಿ ಬಣ್ಣಿಸಿದರು. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ‘ಆಶಯ ಭಾಷಣ’ ಮಾಡಿದರು.

ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ, ಅವರ ಕವನ ಸಂಗ್ರಹ ‘ನಾಕು ತಂತಿ’ ಅರ್ಥವಾಗುವುದಿಲ್ಲ ಎಂಬ ಅಪಸ್ವರ ವಿಮರ್ಶಕರು ತೆಗೆದಾಗ, ಬೇಂದ್ರೆಯವರ ಕವಿತೆಗಳ ಬಗ್ಗೆ ಹತ್ತಾರು ಕಡೆಗೆ ಭಾಷಣ ಮಾಡಿದವರು ಬನ್ನಂಜೆ. ಅವರ ಭಾಷಣದ ಟೇಪುಗಳನ್ನು ತರಿಸಿ ಬೇಂದ್ರೆಯವರು ಕೇಳಿ ಮೆಚ್ಚಿಗೆ ವ್ಯಕ್ತಪಡಿಸಿದ್ದರು. ಅಧ್ಯಾತ್ಮದಿಂದ ಅನುಭಾವ, ನಾಲ್ಕುತಂತಿಯಿಂದ ವೈದಿಕ ನೆಲೆ, ಸಾಂಖ್ಯದಿಂದ ಶ್ರಾವಣ ಕಾವ್ಯದ ಹರಹಿನ ವರೆಗೆ ಮಾತಾಡಿದರು.

ಅತಿಥಿಗಳಾಗಿ ಬಂದ 96 ವರ್ಷದ ಪ್ರೊ.ಸೇತೂರಾಮ ಮಳಗಿ ಭಾಷಣ ಮಾಡಿದರು. ಅವರ ಉತ್ಸಾಹ ತರುಣರನ್ನು ನಾಚಿಸುವಂತಿತ್ತು. ಬೇಂದ್ರೆಯವರ ನಿಕಟವರ್ತಿಗಳ ಸಂದರ್ಶನವನ್ನು ‘ಈಟಿವಿ’ಯಲ್ಲಿ ಸಮರ್ಥವಾಗಿ ಮಾಡಿ ಖ್ಯಾತಿ ಪಡೆದ ಕವಿ ಜಯಂತ ಕಾಯ್ಕಿಣಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಿಹೆಚ್‌ಎಸ್‌ ಶಿಕ್ಷಣ ಸಂಸ್ಥೆಯ ಸಹಾಯಕ ಕಾರ್ಯದರ್ಶಿಯಾದ ಪ್ರೊ ಆರ್‌.ವಿ.ಪ್ರಭಾಕರ್‌ ಅವರು ಗಣಿತದ ಪ್ರಾಧ್ಯಾಪಕರು, ಹಿಂದೆ ಧಾರವಾಡದಲ್ಲಿ ಶಿಕ್ಷಕರಾಗಿದ್ದಾಗ ಬೇಂದ್ರೆಯವರನ್ನು ಕಂಡವರು, ಬೇಂದ್ರೆ ಕಾವ್ಯದ ಬಗ್ಗೆ ಒಂದು ಪ್ರಬಂಧ ಮಂಡಿಸಿದರು. ಪ್ರಿನ್ಸಿಪಾಲ ಡಿ.ಎನ್‌.ವೆಂಕಟರಾವ್‌ ಅಧ್ಯಕ್ಷತೆ ವಹಿಸಿದ್ದರು.

ವಿರಾಟ್‌ ಪ್ರತಿಭೆ

ತಮ್ಮ ಆಶಯ ಭಾಷಣದಲ್ಲಿ ಪಂ. ಗೋವಿಂದಾಚಾರ್ಯ ಬನ್ನಂಜೆಯವರು ಬೇಂದ್ರೆಯವರ ವಿರಾಟ್‌ ಪ್ರತಿಭೆಯನ್ನು ಪರಿಚಯಿಸುತ್ತ ಬೇಂದ್ರೆಯವರ ಅಧ್ಯಾತ್ಮ, ಅನುಭಾವ, ಸಾಂಖ್ಯ, ‘ನಾಕು ತಂತಿ’, ವೈದಿಕ ನೆಲೆ, ಶ್ರಾವಣ ಕಾವ್ಯದ ವೈಭವದ ಬಗ್ಗೆ ಮಾತಾಡಿದರು.

ಬೇಂದ್ರೆ ನಾಕು ತಂತಿಯ ಚೌದಂತಿ ವೀಣೆ ನುಡಿಸಿದ ಬಗೆ, ‘ನಾನು, ನೀನು, ಆನು, ತಾನು’ ಇವುಗಳ ಮಹತ್ವ, ಅವರು ಕಂಡ ಚತುರ್ಮುಖ ಸೌಂದರ್ಯ ದರ್ಶನ, ಅವರು ಮಾಡಿದ ಕಾಳಿದಾಸನ ಮೇಘದೂತದ ಅನುವಾದ, ‘ಅರಳು-ಮರುಳು’ ಕಾವ್ಯದಲ್ಲಿ ಅವರು ‘ಮರಳಿ ಅರಳಿದ್ದು’, ಸಂಖ್ಯಾಶಾಸ್ತ್ರದಲ್ಲಿ ಬೇಂದ್ರೆಯವರಿಗೂ ತಮಗೂ ಇದ್ದ ಒಲವು, ಶಬ್ದವನ್ನು ಮೀರಿದ ಸತ್ಯ ಅವರಿಗೆ ಸಾಂಖ್ಯದಲ್ಲಿ ದೊರೆತದ್ದು- ಮುಂತಾದ ವಿಷಯಗಳಗಳ ಬಗ್ಗೆ ಮಾತಾಡಿದರು. ತಮ್ಮೊಂದಿಗೆ ಬಂದ ಬೇಂದ್ರೆಯವರ ವೈಯಕ್ತಿಕ ಸಂಬಂಧದ ಬಗ್ಗೆ, ಅವರ ಪ್ರಣಯಗೀತ ಸಂಕಲನ ‘ಒಲವೆ ನಮ್ಮ ಬದುಕು’ ಸಂಪಾದನೆಯ ಅನುಭವದ ಬಗ್ಗೆ ಕೂಡ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X