• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರಕವಿ ಡಾ। ದ.ರಾ. ಬೇಂದ್ರೆ ಜೊತೆ ನಾನು!

By Staff
|

ನಾಲ್ಕು ವರ್ಷ ಬೇಂದ್ರೆ ಸಾಮೀಪ್ಯ, ಸಹಚರ್ಯ, ಸಹವಾಸ, ಸಂವಾದ ಭಾಗ್ಯ ಲಭಿಸಿತು. ‘ಬೇಂದ್ರೆಕಾವ್ಯಗಂಗೆ’ಯಲ್ಲಿ ಮುಳುಗಿದೆ, ನನ್ನನ್ನೇ ಕಳೆದುಕೊಂಡೆ, ಬೇಂದ್ರೆಮಯನಾದೆ, ‘ಜೀವಿ’ ಕಾವ್ಯನಾಮ ಗುರುಗಳಿಂದ ಪಡೆದೆ, ನನ್ನತನ ಉಳಿಸಿಕೊಂಡೆ.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

A seminar conducted in Bengalooru on Da.Ra. Bendreಜೀವನದಲ್ಲಿ ಅವಿಸ್ಮರಣೀಯವಾದ ಒಂದು ಅನುಭವ, ಬೇಂದ್ರೆ ಅನುಭಾವ. ‘ಬೇಂದ್ರೆ’ ಎಂದೊಡನೆ ಮನ ಪುಳಕಿತಗೊಳ್ಳುತ್ತದೆ, ಮೈಯಲ್ಲಿ ಮಿಂಚಿನ ಸಂಚಾರವಾಗುತ್ತದೆ. ಇಂಥ ಒಬ್ಬ ವ್ಯಕ್ತಿ ನಮ್ಮ ಮಧ್ಯೆ ಬಾಳಿ ಬದುಕಿದ ಎಂದು ಹೇಳಿದರೆ ಇಂದಿನ ಜನಾಂಗಕ್ಕೆ ನಂಬುವುದು ಕಷ್ಟವಾಗುತ್ತದೆ.

ಅವನೊಬ್ಬ ದಾರ್ಶನಿಕ, ಚಿಂತಕ, ಶಬ್ದಗಾರುಡಿಗ, ಶ್ರಾವಣಕವಿ, ಜನಮಾನಸದ ಕವಿ. ತನ್ನಪಾಡು ತನಗೇ ಇಟ್ಟುಕೊಂಡು ಅದರಿಂದ ಹುಟ್ಟಿದ ಹಾಡನ್ನು ನಮಗೆ ಕೊಟ್ಟ ಕವಿ. ಕಲ್ಲುಸಕ್ಕರೆಯಂಥ ನಮ್ಮ ಹೃದಯ ಕರಗಿದಾಗ ಅದರ ಸವಿಯನ್ನು ಬಯಸಿದ ವರಕವಿ. ಬಾಳ ವಿಷವನ್ನುಂಡು ಅಮೃತವನ್ನು ಹಂಚಿದ ಕವಿ. ಇವನು ಜಗದಕವಿ, ಯುಗದಕವಿ, ವಿಶ್ವಕವಿ.

1956ರಲ್ಲಿ ಸೊಲ್ಲಾಪುರ ಡಿಎವಿ ಕಾಲೇಜಿನಿಂದ ನಿವೃತ್ತರಾಗಿ ಬೇಂದ್ರೆ ಧಾರವಾಡಕ್ಕೆ ತಮ್ಮ ಸಾಧನಕೇರಿಯ ಮನೆಯಲ್ಲಿ ನೆಲೆಸಲು ಬಂದರು. ನಾನು ಆಗ ವಿ.ಕೃ.ಗೋಕಾಕರ ಅಂತೇವಾಸಿಯಾಗಿದ್ದೆ, ಬಿ.ಎ. ಕ್ಲಾಸಿನಲ್ಲಿ ಓದುತ್ತಿದ್ದೆ. ಗೋಕಾಕರೇ ಬೇಂದ್ರೆಯವರ ಪರಿಚಯ ಮಾಡಿಕೊಟ್ಟರು. ಬೇಂದ್ರೆಯವರ ಪ್ರತಿಭೆಗೆ ಮಾರುಹೋದೆ. ಅವರ ಶಿಷ್ಯತ್ವ ವಹಿಸಿದೆ. ನಾಲ್ಕು ವರ್ಷ ಅವರ ಸಾಮೀಪ್ಯ, ಸಹಚರ್ಯ, ಸಹವಾಸ, ಸಂವಾದ ಭಾಗ್ಯ ಲಭಿಸಿತು. ‘ಬೇಂದ್ರೆಕಾವ್ಯಗಂಗೆ’ಯಲ್ಲಿ ಮುಳುಗಿದೆ, ನನ್ನನ್ನೇ ಕಳೆದುಕೊಂಡೆ, ಬೇಂದ್ರೆಮಯನಾದೆ, ‘ಜೀವಿ’ ಕಾವ್ಯನಾಮ ಗುರುಗಳಿಂದ ಪಡೆದೆ, ನನ್ನತನ ಉಳಿಸಿಕೊಂಡೆ.

ಬೇಂದ್ರೆಯವರ ಬಗ್ಗೆ ನೂರಾರು ಲೇಖನಗಳನ್ನು ಬರೆದೆ. ಅಸಂಖ್ಯ ಭಾಷಣಗಳನ್ನು ಮಾಡಿದೆ. ವಾಶಿಂಗ್‌ಟನ್‌, ಫಿಲೆಡೆಲ್ಫಿಯ, ಶಿಕ್ಯಾಗೊ, ಕೆಲಿಫೋರ್ನಿಯಾ ಕನ್ನಡ ಕೂಟಗಳಲ್ಲಿ ಭಾಷಣ ಮಾಡಿದೆ. ಆಯುಷ್ಯ ಕರ್ನಾಟಕದಿಂದ ದೂರ ಮುಂಬಾಪುರಿಯಲ್ಲಿ ‘ಕಾಣದ(ಕಾಣು+ಅದ) ಕಡಲ್ಹಾದಿ’ ಹಿಡಿದಿತ್ತು. ಕರ್ನಾಟಕದ ರಾಜಧಾನಿಯಲ್ಲಿ ಒಮ್ಮೆಯೂ ಬೇಂದ್ರೆಯವರ ಬಗ್ಗೆ ಮಾತನಾಡುವ ಅವಕಾಶ ದೊರೆಯಲಿಲ್ಲವಲ್ಲ ಎಂಬ ಕೊರಗು ಮಾತ್ರ ಉಳಿದಿತ್ತು. ಆದರೆ ಅದು ಇಷ್ಟು ಸಂಭ್ರಮದ ಅವಕಾಶ ಪಡೆದೀತು ಎಂದು ನಾನು ಭಾವಿಸಿರಲೇ ಇಲ್ಲ.

ಕೊನೆಗೂ ಬಯಕೆ ನೆರವೇರಿತು...

ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ ‘ಬಿಹೆಚ್‌ಎಸ್‌ ಪ್ರಥಮ ದರ್ಜೆಯ ಕಾಲೇಜು’ ಇದೆ. ಕನ್ನಡ ಡಿಂಡಿಮವನ್ನು ಬಾರಿಸುತ್ತ ಬಂದ ಕಾಲೇಜಿದು. ಒಂದು ದಿನದ ಪಂಪೋತ್ಸವ, ಮೂರು ದಿನಗಳ ಕುವೆಂಪು-ಪುತಿನ-ಗೊರೂರ್‌ ಉತ್ಸವ ಮಾಡಿತ್ತು.

ಕಳೆದ ವರ್ಷ ಮೂರು ದಿನಗಳ ‘ದಾಸ ಸಾಹಿತ್ಯೋತ್ಸವ’ ಅಭೂತಪೂರ್ವವಾಗಿ ಆಚರಿಸಿತ್ತು. ಮೂರನೆಯ ದಿನ ನಾಡಿನ ಹೆಸರಾಂತ ಗಾಯಕರಾದ ಪಂ. ವಿದ್ಯಾಭೂಷಣರು, ಶೇಷಗಿರಿದಾಸರು, ಹುಸೇನಸಾಹೇಬ್‌, ಮತ್ತು ಆರ್‌.ಕೆ.ಪದ್ಮನಾಭ ಅವರುಗಳಿಂದ ನಾಲ್ಕು ಗಂಟೆಗಳ ದಾಸವಾಣಿ ಕಾರ್ಯಕ್ರಮ ಏರ್ಪಡಿಸಿತ್ತು. ಕನ್ನಡ ರಸಿಕರಿಗೆ ಕರ್ಣರಸಾಯನ ಉಣಬಡಿಸಿತ್ತು.

ಈ ವರ್ಷ ಅಕ್ಟೋಬರ್‌ನಲ್ಲಿ ‘ಬೇಂದ್ರೆ ಸಾಹಿತ್ಯ ಚಿಂತನ- ವಿಚಾರ ಸಂಕಿರಣ’ ಏರ್ಪಡಿಸಿತ್ತು. ಇದು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಎನ್ನುವಷ್ಟು ಭೌಮವಾಗಿತ್ತು. ನಾಲ್ಕು ದಶಕಗಳ ಪ್ರಾಧ್ಯಾಪಕ ವೃತ್ತಿಯಲ್ಲಿ ಅನೇಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಇದು ಮಾತ್ರ ಅಪ್ರತಿಮವಾಗಿತ್ತು ಎಂದು ಹೇಳಬೇಕು.

ಬಿಹೆಚ್‌ಎಸ್‌ ಕಾಲೇಜಿನ ಈ ‘ಬೇಂದ್ರೆ ಕಬ್ಬದ ಹಬ್ಬ’ ಆ ಕಾಲೇಜಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳ ಕಿರೀಟದಲ್ಲಿ ಸುವರ್ಣ ಗರಿಯಂತಿತ್ತು. (ಬೇಂದ್ರೆಯವರ ಪ್ರಥಮ ಕವನ ಸಂಗ್ರಹವೂ ‘ಗರಿ’ಯಾಗಿತ್ತು.)

ಅಕ್ಟೋಬರ್‌ ತಿಂಗಳಲ್ಲಿ(12, 13, 14) ಮೂರು ದಿನಗಳ ಕಾಲ ‘ಬೇಂದ್ರೆ ಸಾಹಿತ್ಯ ಚಿಂತನ’ ಕಾರ್ಯಕ್ರಮವನ್ನು ತಮ್ಮ ಕಾಲೇಜು ಹಮ್ಮಿಕೊಂಡಿರುವುದಾಗಿ ಪ್ರೊ. ವೇಣುಗೋಪಾಲ ಅವರು ನನಗೆ ದೂರವಾಣಿಯ ಮುಖಾಂತರ ಸಪ್ಟೆಂಬರ್‌ನಲ್ಲಿ ಒಂದು ದಿನ ತಿಳಿಸಿದರು.

‘ಇದರ ಉದ್ಘಾಟನೆಯನ್ನು ಬೇಂದ್ರೆ ಅಭಿಮಾನಿ ಬನ್ನಂಜೆ ಗೋವಿಂದಾಚಾರ್ಯರು ಮಾಡಲು ಒಪ್ಪಿದ್ದಾರೆ, ಸಮಾರೋಪ ಭಾಷಣವನ್ನು ಇನ್ನೊಬ್ಬ ಅಭಿಮಾನಿ ‘ಜೀವಿ’ಯವರು ಮಾಡಬೇಕೆಂದು ಕಾರ್ಯಕ್ರಮ ಸಮಿತಿಯ ಇಚ್ಛೆಯಾಗಿದೆ’ ಎಂದರು. ನನಗೆ ಭಾಗವಹಿಸಲು ಆಮಂತ್ರಣ ನೀಡಿದರು. ಸಂತೋಷದಿಂದ ಒಪ್ಪಿಗೆ ನೀಡಿದೆ. ‘ಅರಸುತಿಹ ಲತೆ ಕಾಲತೊಡಕಲು’ ಕವಿ ನುಡಿ ನೆನಪಾಯಿತು. ‘ಇಲ್ಲಿ ಮಂಡಿತವಾಗುವ ಎಲ್ಲ ಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಯೋಜನೆಯೂ ಇದೆ. ನಿಮ್ಮ ಭಾಷಣ ಬರೆದು ಸಿದ್ಧಪಡಿಸಿರಿ.’ ಎಂದು ಅವರು ಹೇಳಿದಾಗ ಇನ್ನಷ್ಟು ಆನಂದವಾಯಿತು. ಈ ಆದರ್ಶ ಮಾದರಿಯನ್ನು ಇತರ ವಿದ್ಯಾಸಂಸ್ಥೆಗಳು ಅನುಸರಿಸಬೇಕು ಎಂದೆನಿಸಿತು.

ಈ ವಿಚಾರ ಸಂಕಿರಣದ ಎಲ್ಲ ಪ್ರಬಂಧಗಳು ಪುಸ್ತಕರೂಪದಲ್ಲಿ ಬರಲಿರುವುದರಿಂದ, ಅಲ್ಲಿ ಮಂಡಿಸಲಾದ ವಿಚಾರಗಳ ಬಗ್ಗೆ ಬರೆಯದೆಯೇ, ಅಲ್ಲಿ ನನಗೆ ದೊರೆತ ಅನುಭವದ ವಿಶಿಷ್ಟತೆಯ ಬಗ್ಗೆ ಮಾತ್ರ ಬರೆಯುವೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಪ್ರಾಧ್ಯಾಪಕರು, ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ತೋರಿಸಿದ ಪ್ರತಿಬದ್ಧತೆ (ಕಮಿಟ್‌ಮೆಂಟ್‌) ಅನನ್ಯವಾಗಿತ್ತು.

ಈ ಕಾರ್ಯಕ್ರಮ ಕೆಲಸದ ದಿನಗಳಲ್ಲಿ (ಗುರು, ಶುಕ್ರ, ಶನಿ) ಇದ್ದುದರಿಂದ, ಬೇರೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರು ‘ಒಒಡಿ’(ಆನ್‌ ಅದರ್‌ ಡ್ಯೂಟ್‌) ಸೌಲಭ್ಯ ಪಡೆದು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಬೆಳಿಗ್ಗೆ ಹತ್ತರಿಂದ ಸಂಜೆ ಐದರ ವರೆಗೆ ಕಾರ್ಯಕ್ರಮ ನಡೆದದ್ದರಿಂದ ಊಟದ ವ್ಯವಸ್ಥೆ ಕಾಲೇಜಿನವರೇ ಮಾಡಿದ್ದರು. ಪ್ರೊ.ಬಿ.ವಿ. ನಾರಾಯಣರಾವ್‌ ಸಭಾಂಗಣವನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು. ವರಕವಿ ಬೇಂದ್ರೆಯವರ ಭಾವಚಿತ್ರಗಳ ಪ್ರದರ್ಶನವಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more