• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾ। ಲೀಲಾ ಶ್ರೀನಿವಾಸ್‌ : ಹೆಮ್ಮೆಯ ಮಹಿಳಾ ವಿಜ್ಞಾನಿ!

By Staff
|

ಡಾ। ಲೀಲಾ ಶ್ರೀನಿವಾಸ್‌ : ಹೆಮ್ಮೆಯ ಮಹಿಳಾ ವಿಜ್ಞಾನಿ!

‘ಕರ್ನಾಟಕ ಶ್ರೇಷ್ಠ ರತ್ನ’ ಪ್ರಶಸ್ತಿ ಪಡೆದಿರುವ ಡಾ.ಲೀಲಾ ಶ್ರೀನಿವಾಸ್‌ ಅವರ ಸಾಧನೆಗಳು ಹತ್ತಾರು. ಕಳೆದ ಒಂಭತ್ತು ವರ್ಷಗಳಲ್ಲಿ ಡಾ। ಲೀಲಾ ಅವರು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಸಂಶೋಧನೆಗಾಗಿ ವಿಶ್ವದ ನಾನಾ ಭಾಗಗಳಿಂದ ನಾಲ್ಕು ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಅವರು ಪಡೆದಿದ್ದಾರೆ. ಮಹತ್ವದ ಸಂಶೋಧನೆಗಳಲ್ಲಿ ತಲ್ಲೀನರಾಗಿರುವ ಹೆಮ್ಮೆಯ ವನಿತೆಯಾಬ್ಬಳ ಸಾಧನೆಯನ್ನು ಅರಿಯೋಣವೆ?

Dr. G.V. Kulkarni ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

ಉದಯ ಟಿ.ವಿ.ಯ ‘ಪರಿಚಯ’ ಕಾರ್ಯಕ್ರಮದಲ್ಲಿ ಡಾ। ಲೀಲಾ ಅವರ ಸಂದರ್ಶನವನ್ನು ಶೈಲಜಾ ಅವರು ಎರಡು ದಿನ ನಡೆಸಿದ್ದರು. ಆ ಕಾರ್ಯಕ್ರಮ ಲೀಲಾ ಅವರ ಬದುಕು-ಸಾಧನೆಯನ್ನು ಬಿಂಬಿಸಿತ್ತು.

ಬಸವನಗುಡಿಯ ವಾಣಿಜ್ಯ ಸಮಾಜವು ಅವರನ್ನು ಗೌರವಿಸಿದೆ. ಪ್ರಸಿದ್ಧ ವಿಜ್ಞಾನಿಯೂ, ಗಾಂಧೀವಾದಿಗಳೂ, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳೂ ಆಗಿದ್ದ ಡಾ। ಎಚ್‌. ನರಸಿಂಹಯ್ಯನವರ ಸ್ಮರಣಾರ್ಥ ಸ್ಥಾಪಿಸಿದ, ‘ಕರ್ನಾಟಕ ಶ್ರೇಷ್ಠ ರತ್ನ’ ಎಂಬ 2005 ವರ್ಷದ ಪ್ರಶಸ್ತಿಯನ್ನು ವಾಣಿಜ್ಯ ಸಮಾಜ ಡಾ। ಲೀಲಾ ಅವರಿಗೆ ಕೊಟ್ಟು ಪುರಸ್ಕರಿಸಿದೆ.

ಈ ಪಶಸ್ತಿಯನ್ನು ಪೇಜಾವರ ಮಠಾ-ೕಶರಾದ ಶ್ರೀಶ್ರೀ ವಿಶ್ವೇಶತೀರ್ಥರು ಮತ್ತು ಆದಿಚುಂಚನಗಿರಿಯ ಮಠಾ-ೕಶರಾದ ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಅಮೃತ ಹಸ್ತಗಳಿಂದ ಕೊಡಿಸಲಾಗಿತ್ತು. ಕ್ಯಾನ್ಸರ್‌ ರೋಗದ ನಿಯಂತ್ರಣ ಕ್ಷೇತ್ರದಲ್ಲಿ ಡಾ। ಲೀಲಾ ಅವರು ಮಾಡಿದ ಸಂಶೋಧನೆಗೆ (ಅರಿಷಣ ರಸಾಯನಕ್ಕೆ) ಇವರಿಗೆ ಪೇಟೆಂಟು ದೊರೆತಿದೆ. ಇಂಥ ಖ್ಯಾತಿಯ ಡಾ। ಲೀಲಾ ಅವರ ಆವರ ಸಾಧನೆಯ ಹಿಂದೆ ಇದ್ದ ಅಪೂರ್ವ ಪರಿಶ್ರಮ, ತಪಸ್ಸು, ಶ್ರದ್ಧೆಗಳನ್ನು, ಜೊತೆಗೆ ಅವರ ಸಾಧನೆಯ ಹಿಂದೆ ಶ್ರೀರಕ್ಷೆ ನೀಡುತ್ತಲಿರುವ ಆದಿಚುಂಚನಗಿರಿಯ ಮಠಾ-ೕಶರ ಅನುಗ್ರಹದ ಕೃಪಾ ಹಸ್ತವನ್ನು ನಾವು ಮರೆಯುವಂತಿಲ್ಲ.

Dr. Leela Srinivas receiving award from Pejavar Swamiji and Balagangadhar Swamijiಶ್ರೀಮತಿ ಲೀಲಾ ಅವರು ಕೊಯಿಮತ್ತೂರವರು (ಜ. 1-6-1943). ಸಂಪ್ರದಾಯಸ್ಥ ಕುಟುಂಬದ ಅಕ್ಕರೆಯ ವಾತಾವರಣದಲ್ಲಿ ಬೆಳೆದರು. ಅವರಿಗೆ ಡಾಕ್ಟರ್‌ ಆಗುವ ಹೆಬ್ಬಯಕೆ ಇತ್ತು. ಇವರು ಮೆಡಿಕಲ್‌ ಸೀಟನ್ನು ತಮ್ಮ ಅರ್ಹತೆಯ ಬಲದಿಂದ ಗಳಿಸಿದ್ದರೂ ಇವರ ಅಜ್ಜ ಇವರನ್ನು ಪರಸ್ಥಳದಲ್ಲಿ ಹಾಸ್ಟೇಲಿನಲ್ಲಿ ಇಟ್ಟು ಕಲಿಸಲು ಒಪ್ಪಲಿಲ್ಲ. ಹೀಗಾಗಿ ಆ ಯೋಗ ತಪ್ಪಿತು.

ಅವಿನಾಶಿ ಲಿಂಗಂ ಕಾಲೇಜು ಸೇರಿ ನ್ಯೂಟ್ರಿಶನ್‌ ಹಾಗೂ ರಸಾಯನಶಾಸ್ತ್ರದಲ್ಲಿ ಬಿ.ಎಸ್‌ಸಿ.(1961), ಎಂ.ಎಸ್‌ಸಿ.(1963) ಪದವಿಗಳನ್ನು ಮದ್ರಾಸ್‌ ವಿಶ್ವವಿದ್ಯಾಲಯದಿಂದ ಪಡೆದರು. ಮೈಸೂರಲ್ಲಿರುವ ಸೆಂಟ್ರಲ್‌ ಫುಡ್‌ ಟೆಕ್ನಾಲಜಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧಕಿಯಾಗಿ ಸೇರಿಕೊಂಡರು. ಅಲ್ಲೇ (ತಾವು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿಯೇ) ಕೆಲಸ ಮಾಡುತ್ತಿರುವ ವಿಜ್ಞಾನಿ ಶ್ರೀನಿವಾಸನ್‌ ಅವರನ್ನು ಕಂಡರು, ಮದುವೆಯಾದರು. ಪತಿ ಮುಂಬೈಗೆ ತೆರಳಿ ಯು.ಡಿ.ಸಿ.ಟಿ. ಸೇರಿ ಫುಡ್‌ ಟೆಕ್ನಾಲಜಿಯಲ್ಲಿ (‘ಪೊಪಿ ಸೀಡ್ಸ್‌’ ಬಗ್ಗೆ ಸಂಶೋಧನೆ ಮಾಡಿ) ಡಾಕ್ಟರೇಟ್‌ ಪಡೆದರು. ಲೀಲಾ ಅವರಿಗೆ ಪುತ್ರ ಸಂತಾನವಾಯ್ತು. ಆದರೂ ಅವರ ವ್ಯಾಸಂಗಕ್ಕೆ ತಡೆಯುಂಟಾಗಲಿಲ್ಲ. ಅವರು ಡಾ। ಟಿ.ಬಿ.ರಾಮರಾವ್‌ ಅವರ ಮಾರ್ಗದರ್ಶನದಲ್ಲಿ ‘ವಿಟಮಿನ್‌ ಎ ಡೆಫಿಶಿಯನ್ಸಿ’ ವಿಷಯದಲ್ಲಿ ಪ್ರಬಂಧ ಬರೆದು ಮದ್ರಾಸ್‌ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪಡೆದರು(1978).

ಡಾಕ್ಟರೇಟ್‌ ದೊರೆತ ಮೇಲೆ ರಿಸರ್ಚ್‌ ಫೆಲೋಶಿಪ್‌ ಪಡೆದು 1978ರಿಂದ 1984ರ ವರೆಗೆ ಆರು ವರ್ಷಗಳ ಕಾಲ ಅಮೇರಿಕಾ ಮತ್ತು ಸ್ವಿಝರ್‌ಲಂಡ್‌ಗಳಲ್ಲಿ ಪೋಸ್ಟ್‌-ಡಾಕ್ಟರಲ್‌ ರಿಸರ್ಚ್‌ ಮಾಡಿದ್ದಾರೆ. ಅವರು ಸಂಶೋಧನೆ ಮಾಡಿದ ಕೇಂದ್ರಗಳು ಹಾಗೂ ಅವರು ಸಂಶೋಧನೆಗೆ ಆಯ್ದುಕೊಂಡ ವಿಷಯಗಳು ಹೀಗಿವೆ :

  1. ಸೇಂಟ್‌ ಲೂಯಿಸ್‌ ಮೆಡಿಕಲ್‌ ಸ್ಕೂಲ್‌, ಯುಎಸ್‌ಎ, ‘‘ಬಯೋಸಿಂಥೆಸಿಸ್‌ ಆಫ್‌ ಲೈಸೊಸೋಮಲ್‌ ಎನ್‌ಝಾಯಿಮ್‌’’
  2. ನ್ಯಾಶನಲ್‌ ಇನ್ಸಿಟ್ಯೂಟ್‌ ಆಫ್‌ ಹೆಲ್ಥ, ಮೆರಿಲ್ಯಾಂಡ್‌, ಯುಎಸ್‌ಎ, ‘‘ಕಾರ್ಸಿನೋಜನೇಸಿಸ್‌/ಟ್ಯೂಮರ್‌ ಪ್ರೊಮೊಶನ್‌, ಗ್ಲೈಕೋ ಲಿಪಿಡ್ಸ್‌, ಮೆಂಬ್ರೇನ್‌ ಬಯಾಲಜಿ, ಕಾರ್ಸಿನೋಜನೇಸಿಸ್‌, ಟಿಶ್ಯು ಕಲ್ಚರ್‌’’
  3. ಫ್ರೆಡ್‌ ಹಚಿನ್‌ಸನ್‌ ಇನ್ಟಿಟ್ಯೂಟ್‌, ಸಿಯಾಟಲ್‌, ಯುಎಸ್‌ಎ, ‘‘ಮೆಂಬ್ರೇನ್‌ ಮಾಡಿಫಿಕೇಶನ್‌ ಥ್ರೂ ಸಿಯಾಲಿಕ್‌ ಆಸಿಡ್‌ ಇನ್‌ಸರ್‌ಶನ್‌, ಸೆಲ್‌ ಬಯಾಲಜಿ, ಟಿಶ್ಯು ಕಲ್ಚರ್‌’’
  4. ಸ್ವಿಸ್‌ ಇನ್ಸ್ಟಿಟ್ಯೂಟ್‌ ಆಫ್‌ ಕ್ಯಾನ್ಸರ್‌ ರಿಸರ್ಚ, ಲಿಸ್ಸಾನೆ, ಸ್ವಿಝರ್‌ಲಂಡ್‌, ‘‘ಟ್ಯೂಮರ್‌ ಪ್ರೊಮೋಶನ್‌ ಅಂಡ್‌ ಸಿಯಾಲಿಕ್‌ ಆಸಿಡ್‌ ಆಕ್ಸಿಡೇಶನ್‌, ಸೆಲ್‌ ಬಯಾಲಜಿ, ಟಿಶ್ಯೂ ಕಲ್ಚರ್‌’’
  5. ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಹೆಲ್ಥ, ಫ್ರೆಡ್ರಿಕ್‌, ಯುಎಸ್‌ಎ, ‘‘ಕಾರ್ಸಿನೋಜನೇಸಿಸ್‌/ಟ್ಯೂಮರ್‌ ಪ್ರೊಮೋಶನ್‌, ಒಂಕೋಜನೆ ಎಕ್ಸ್‌ಪ್ರೆಶನ್‌ ಅಂಡ್‌ ಟ್ರ್ಯಾನ್‌ಸ್ಕಿೃಪ್ಶನ್‌ ಫ್ಯಾಕ್ಟರ್ಸ್‌, ಸೆಲ್‌ ಬಯಾಲಜಿ, ಟಿಶ್ಯು ಕಲ್ಚರ್‌, ಸಿಕ್ವೆನ್ಸಿಂಗ ಆಫ್‌ ಟರ್‌ಮೆರಿಕ್‌ ಆಂಟಿಒಕ್ಸಿಡೆಂಟ್‌ ಪೆಪ್ಟೈಡ್‌ ಟರ್‌ಮೆರಿನ್‌’’
ಇದಲ್ಲದೆ ವಿಶ್ವದ ಖ್ಯಾತ ಜರ್ನಲ್‌ಗಳಲ್ಲಿ 60 ಸಂಶೋಧನಾ ಪ್ರಬಂಧಗಳನ್ನು ಅವರು ಪ್ರಕಟಿಸಿದ್ದಾರೆ. 1998ರಲ್ಲಿ ಮೈಸೂರಿನ ಸೆಂಟ್ರಲ್‌ ಫುಡ್‌ ಟೆಕ್ನಾಲಜಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಿಂದ, ನಿವೃತ್ತಿಗೆ ಇನ್ನೂ ಐದು ವರ್ಷ ಇರುವಾಗಲೇ, ಐಚ್ಛಿಕ ನಿವೃತ್ತಿ ಪಡೆದರು. ಇದಕ್ಕೆ ಕಾರಣ ಶ್ರೀ ಆದಿಚುಂಚುನಗಿರಿ ಮಠದ ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಡಾ।ಲೀಲಾ ಅವರು ಸಂಶೋಧನೆಯ ಕ್ಷೇತ್ರದಲ್ಲಿ ಗಳಿಸಿದ ಅಂತಾರಾಷ್ಟ್ರೀಯ ಮನ್ನಣೆಯನ್ನು ಗುರುತಿಸಿ, ಆದಿಚುಂಚನಗಿರಿ ಬಯೋಟೆಕ್ನಾಲಜಿ ಅಂಡ್‌ ಕ್ಯಾನ್ಸರ್‌ ರಿಸರ್ಚ ಇನ್‌ಸ್ಟಿಟ್ಯೂಟ್‌ನ ಡೈರೆಕ್ಟರ್‌ ಹುದ್ದೆಯನ್ನು ನೀಡಲು ಮತ್ತು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಮುಂದೆ ಬಂದರು.

. ಕಳೆದ ಒಂಭತ್ತು ವರ್ಷಗಳಲ್ಲಿ ಡಾ। ಲೀಲಾ ಅವರು ಸಾಕಷ್ಟು ಪ್ರಗತಿ ಸಾ-ಸಿದ್ದಾರೆ. ರಿಸರ್ಚ್‌ಗಾಗಿ ವಿಶ್ವದ ನಾನಾ ಭಾಗಗಳಿಂದ ಒಂದು ಕೋಟಿ ರೂಪಾಯಿಗಳಷ್ಟು ಫಂಡ್‌ ಪಡೆದಿದ್ದಾರೆ. ಇತ್ತೀಚೆಗೆ ಅಮೇರಿಕೆಯ ಕ್ಯಾನ್ಸರ್‌ ಪ್ರಿವೆನ್‌ಶನ್‌ ಡಿವಿಜನ್‌ ‘‘ರ್ಯಾಪಿಡ್‌’’ ನಿಂದ ಅರವತ್ತು ಲಕ್ಷದಷ್ಟು ಗ್ರಾಂಟ್‌ (ಅನುದಾನವನ್ನು) ಪಡೆದಿದ್ದಾರೆ.

ಪೂರಕ ಓದಿಗೆ-

ಉರಗತಜ್ಞ, ಉರಗರಕ್ಷಕ ‘ಸ್ನೇಕ್‌ ಶ್ಯಾಮ್‌’

ಆದಿಚುಂಚನಗಿರಿ ಗಂಗಾ : ಹಳ್ಳಿಗರಿಗೆ ವರದಾನ

ಆದಿಚುಂಚನಗಿರಿಯ ನೆತ್ತಿಯಲ್ಲಿ ಪುಣ್ಯಧಾಮ...

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more