• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯೋಗವಿದ್ದಲ್ಲಿ ರೋಗವಿಲ್ಲ!

By Staff
|


GV Kulkarni demonstrating Jalaneti(1) ಜಲನೇತಿ

ಶುದ್ಧಿಕ್ರಿಯೆಗಳಲ್ಲಿ ‘ಜಲನೇತಿ’ ಬಹಳ ಮಹತ್ವದ್ದು. ನಾನು ಎಂಟು ವರ್ಷದ ಬಾಲಕನಿದ್ದಾಗ ನಮ್ಮ ಕಕ್ಕಂದಿರಾದ (ವಿಜಾಪುರವಾಸಿ) ವೆಂಕಣ್ಣಾಚಾರ್‌ ಕಟ್ಟಿಯವರು ನನಗೆ ಒಂದು ಶ್ಲೋಕ ಕಲಿಸಿದ್ದರು. ಅದು ಜಲನೇತಿಯ ಮಹತ್ವವನ್ನು ಬಣ್ಣಿಸುತ್ತದೆ.

‘‘ವಿಗತ ಘನ ನಿಶೀಥೇ ಪ್ರಾತರುತ್ಥಾಯ ನಿತ್ಯಂ ।
ಪಿಬತಿ ಖಲು ನರೋಯೋ ಘ್ರಾಣರಂಧ್ರೇಣ ವಾರೀಮ್‌ ।।
ಸ ಭವತಿ ಮತಿಪೂರ್ಣಃ ಚಕ್ಷುಷಾ ತಾರ್ಕ್ಷ್ಯತುಲ್ಯೋ ।
ವಲಿಪಲಿತ ವಿಹೀನಃ ಸರ್ವ ರೋಗೈರ್ವಿಮುಕ್ತಃ ।।’’

(ಬೆಳಗಿನ ಜಾವದಲ್ಲಿ ನಿತ್ಯ ಎದ್ದು ಯಾವ ನರನು ತನ್ನ ಮೂಗಿನ ಹೊರಳೆಯಿಂದ ನೀರನ್ನು ಕುಡಿಯುತ್ತಾನೋ, ಅವನು ಬುದ್ಧಿವಂತನಾಗುತ್ತಾನೆ, ಅವನ ಕಣ್ಣುಗಳು ತೀಕ್ಷ್ಣವಾಗುತ್ತವೆ, ಅವನ ಚರ್ಮ ಸುಕ್ಕುವುದಿಲ್ಲ, ಕೂದಲು ನೆರೆಯುವುದಿಲ್ಲ, ಅವನು ಎಲ್ಲ ರೋಗಗಳಿಂದ ಮುಕ್ತನಾಗುತ್ತಾನೆ.)

ನಮ್ಮ ಕಕ್ಕ ನಮಗೆ ಬರೀ ಶ್ಲೋಕ ಕಲಿಸಲಿಲ್ಲ, ಮೂಗಿನಿಂದ ನೀರು ಕುಡಿಯಲೂ ಕಲಿಸಿದ್ದರು. ದಶಕಗಳ ಹಿಂದೆ ನಡೆದ ಘಟನೆ. ಒಮ್ಮೆ ಎಂ.ವಿ.ಕಾಲೇಜ್‌ ಸ್ಟಾಫ್‌ ರೂಮಿನಲ್ಲಿ ಈ ಶ್ಲೋಕ ಉದ್ಧರಿಸಿ ಜಲನೇತಿಯ ಮಹತ್ವದ ಬಗ್ಗೆ ನನ್ನ ಸಹಪ್ರಧ್ಯಾಪಕರಿಗೆ ಹೇಳುತ್ತಿದ್ದೆ. ಒಬ್ಬರು ‘ಮೂಗಿನಿಂದ ನೀರು ಕುಡಿಯಲು ಸಾಧ್ಯವೇ? ಮೂರ್ಖ ವಾರ್ತಾಪ್ರಲಾಪ’ ಎಂದು ನಕ್ಕಿದ್ದರು.

ಆ ಕಾಲದಲ್ಲಿ ‘ನೇತಿ-ಪಾಟ್‌’ ಬಂದಿರಲಿಲ್ಲ. ‘ತಲೆ ಹರಟೆ ಬೇಡ, ನಾನು ಮೂಗಿನಿಂದ ನೀರು ಕುಡಿದು ತೋರಿಸಿದರೆ ನೀವು ಏನು ಕೊಡುವಿರಿ?’ ಎಂದಿದ್ದೆ. ಕಿಸೆಯಿಂದ ನೂರು ರೂಪಾಯಿ ನೋಟು ಹೊರ ತೆಗೆದು, ‘ಇದನ್ನು ಕೊಡುವೆ. ನೀನು ಕುಡಿಯದಿದ್ದರೆ ನನಗೆ 200 ಕೊಡಬೇಕು’ ಎಂದು ಚಾಲೇಂಜ್‌ ಮಾಡಿದರು.

ನಾನು ಅವರ ಶರತ್ತು ಒಪ್ಪಿದೆ. ಆ ಕಾಲದಲ್ಲಿ ನೂರು ರೂಪಾಯಿಗೆ ಬಹಳ ಬೆಲೆ ಇತ್ತು. 150 ರೂಪಾಯಿಗೆ ಹತ್ತು ಗ್ರಾಂ ಬಂಗಾರ ದೊರೆಯುತ್ತಿದ್ದ ಕಾಲವದು. ಇಡೀ ಸ್ಟಾಫ್‌-ರೂಮಿನಲ್ಲಿ ಅಲ್ಲೋಲ ಕಲ್ಲೋಲ. ಒಂದು ಗ್ಲಾಸ್‌ ನೀರು ತಂದು ನನಗೆ ಕೊಡಲಾಯ್ತು. ಬಾಯಿಯಿಂದ ನೀರು ಕುಡಿಯುವಂತೆ ಗಟಗಟನೇ ಮೂಗಿನಿಂದ ನೀರು ಕುಡಿದು ತೋರಿಸಿದೆ.

ಆ ಕಾಲದಲ್ಲಿ ಜಲನೇತಿ ಮಾಡುವವರು ಬಹಳ ಕಡಿಮೆ ಜನ ಇದ್ದರು. ಈಗ ಅದು ಬಹಳ ಸುಲಭವಾಗಿದೆ. ಚಿಕ್ಕ ಮಕ್ಕಳೂ ಮಾಡಬಹುದು. ಜಲನೇತಿ-ಪಾಟ್‌ ಯೋಗ ಕುಟೀರಗಳಲ್ಲಿ ದೊರೆಯುತ್ತವೆ (ಅಂಬಿಕಾ ಯೋಗ ಕುಟೀರ, ಠಾಣಾ, ಮುಂಬಯಿ; ವಿವೇಕಾನಂದ ಯೋಗ ಸೆಂಟರ್‌, ಬೆಂಗಳೂರು)

ನಿಮ್ಮ ಅಭಿಪ್ರಾಯ ತಿಳಿಸಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more