• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಹ ತೊಳೆಯುವುದ ಕಲಿತರೆ ಹತ್ತಾರು ಫಲ!

By Staff
|


‘ಯೋಗವಿದ್ದಲ್ಲಿ ರೋಗವಿಲ್ಲ’ ಮಾಲಿಕೆಯ ನಾಲ್ಕನೇ ಭಾಗದಲ್ಲಿ ‘ಧೌತಿ’ ಶುದ್ಧಿಕ್ರಿಯೆಯ ಹಲವು ಪ್ರಕಾರಗಳ ವಿವರಣೆ.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
    jeevi65@gmail.com
It is better to learn Yoga through a teacherಮುನಿ ಘೕರಂಡರು ನಮ್ಮ ದೇಹವನ್ನು ಘಟಕ್ಕೆ ಹೋಲಿಸುತ್ತಾರೆ. ಮಣ್ಣಿನ ಮಡಕೆ ಹಸಿಯಾಗಿದ್ದರೆ ನಾವು ಅದರಲ್ಲಿ ನೀರನ್ನು ತುಂಬಿ ಇಡಲಾರೆವು. ಅದು ಸೋರಲು ಪ್ರಾರಂಭಿಸುತ್ತದೆ. ಅದನ್ನು ಬೆಂಕಿಯಲ್ಲಿ ಹಾಕಿ ಕಾಸಿದರೆ ನಂತರ ಅದರಲ್ಲಿ ನಾವು ನೀರನ್ನು ತುಂಬಿ ಇಡಬಹುದು. ಅದೇ ರೀತಿ ನಾವು ನಮ್ಮ ದೇಹವೆಂಬ ಮಡಿಕೆಯನ್ನು ತಪದಿಂದ ಕಾಯಿಸಿ ಶುದ್ಧಗೊಳಿಸಬೇಕು. ಇದಕ್ಕೆ ಶುದ್ಧಿಕ್ರಿಯ ಅವಶ್ಯಕವಾಗುತ್ತವೆ. ಅದಕ್ಕೆ ಅವರು ಹೇಳುತ್ತಾರೆ, ‘‘ಧೌತಿಂ ಚತುರ್ವಿಧಾಂ ಕೃತ್ವಾ ಘಟಂ ಕುರ್ವಂತಿ ನಿರ್ಮಲಂ’’ ಎಂದು.

‘ಧೌತಿ’ ಎಂಬ ಶುದ್ಧಿಕ್ರಿಯೆಯಲ್ಲಿ ನಾಲ್ಕು ಪ್ರಕಾರಗಳನ್ನು ಗುರುತಿಸಿದ್ದಾರೆ.

ಅ) ಅಂತರ್‌ ಧೌತಿ ಬ) ದಂತ ಧೌತಿ ಕ) ಹೃದ್‌ ಧೌತಿ ಡ) ಮೂಲ ಶೋಧನ

ಅಂತರ್‌ ಧೌತಿಯಲ್ಲಿ ಮತ್ತೆ ನಾಲ್ಕು ಪ್ರಕಾರಗಳಿವೆ.

1)ವಾತಸಾರ, 2)ವಾರಿಸಾರ, 3)ವಹ್ನಿಸಾರ ಮತ್ತು 4)ಬಹಿಷ್ಕೃತ.

1) ವಾತಸಾರ : ‘‘ವಾತಸಾರಂ ಪರಂ ಗೌಪ್ಯಂ ದೇಹ ನಿರ್ಮಲಕಾರಕಂ ।
ಸರ್ವ ರೋಗಕ್ಷಯಕರಂ ದೇಹಾನಲವಿವರ್ಧಕಂ ।’’ (ಘೕರಂಡ ಸಂಹಿತಾ-16)

ಹಾಗೆ ನೋಡಿದರೆ ಯೋಗ ಮಾರ್ಗದಲ್ಲಿ ಎಲ್ಲವೂ ಗೌಪ್ಯವಾಗಿದೆ. ಯೋಗವನ್ನು ಗುರುವಿನ ಮಾರ್ಗದರ್ಶನದಿಂದಲೇ ಕಲಿಯಬೇಕು. ಇಲ್ಲದಿದ್ದರೆ ಅದರಿಂದ ವಿಪರೀತ ಪರಿಣಾಮ ಆಗಬಹುದು. ವಾತಸಾರ ಕ್ರಿಯೆಯಲ್ಲಿ ಶಿಷ್ಯನು ತನ್ನ ತುಟಿಗಳನ್ನು ಕಾಗೆಯ ಚುಂಚದಂತೆ ಮಾಡಿ ಹವೆಯನ್ನು ನುಂಗಬೇಕು. ನಾವು ಉಸಿರಾಡಿಸುವಾಗ ಹವೆಯು ನಮ್ಮ ಹೃದಯಕ್ಕೆ, ನಮ್ಮ ಪುಫ್ಫುಸಗಳಿಗೆ ತಲುಪುತ್ತದೆ.

ವಾತಸಾರ ಕ್ರಿಯೆಯಲ್ಲಿ ಅದು ನೇರವಾಗಿ ಹೊಟ್ಟೆಗೆ ತಲುಪುತ್ತದೆ. ಇದನ್ನು ಮುಂಜಾನೆ, ಜಠರ ಖಾಲಿ ಇರುವಾಗ ಮಾಡಬೇಕು. ಇದರ ಲಾಭ ಎಂದರೆ ‘ದೇಹನಿರ್ಮಲಕಾರಕಂ’, ಅರ್ಥಾತ್‌ ಸರ್ವರೋಗಗಳಿಂದ ರಕ್ಷೆ ದೊರೆಯುವುದಲ್ಲದೆ, ಜಠರಾಗ್ನಿ ಪ್ರದೀಪ್ತಗೊಳ್ಳುತ್ತದೆ. (ಇದನ್ನು ಹಠಯೋಗಿ ನಿಕಂ ಗುರೂಜಿಯವರು ನಮಗೆ ಕಲಿಸಿದ್ದರು.)

2) ವಾರಿಸಾರ : ಇದು ವಾರಿಧೌತಿ. ಈ ಕ್ರಿಯೆಗೆ ‘ಕಾಯ-ಕಲ್ಪ’ವೆಂದೂ ಕರೆಯುತ್ತಾರೆ. ಇದರಿಂದ ದೇಹದ ನವನಿರ್ಮಾಣ ಸಾಧ್ಯವಾಗುತ್ತದೆ. ಪಚನವಾಗದೆ ಉಳಿದ ಅನ್ನದ ಕಣಗಳು ಇದರಿಂದಾಗಿ ಹೊರಬೀಳುತ್ತವೆ, ಕರುಳು ಸ್ವಚ್ಛವಾಗುತ್ತದೆ. ‘ನಾವು ಹುಟ್ಟಿದಾಗಿನಿಂದ ಇಲ್ಲಿಯ ವರೆಗೆ ನಮ್ಮ ಕರುಳನ್ನು ಸ್ವಚ್ಛಮಾಡಿಕೊಂಡಿದ್ದೇವೆಯೇ?’ ಎಂದು ಸ್ವಾಮಿ ನಿರಂಜನಾನದ ಸರಸ್ವತಿ ಅವರು ಕೇಳುತ್ತಾರೆ. ಅವರೇ ಈ ಸಂಹಿತೆಗೆ ಸುಂದರವಾದ ಭಾಷ್ಯ ಬರೆದಿದ್ದಾರೆ.

ವಾಯುಸಾರ ಮಾಡುವ ಮೊದಲು, ಹಿಂದಿನ ದಿನ ಲಘು ಆಹಾರ ಸೇವಿಸಬೇಕು. ಹಣ್ಣನ್ನು ತಿನ್ನಬೇಕು ಅಥವಾ ಖಿಚಡಿಯನ್ನು ತಿನ್ನಬೇಕು. (ಅಕ್ಕಿ-ಹೆಸರುಬೇಳೆಯಿಂದ ತಯಾರಿಸಿದ ಹುಗ್ಗಿ. ಅದರಲ್ಲಿ ಉಪ್ಪು ಬೆರೆಸಬಾರದು. ತುಪ್ಪ ಹಾಕಬೇಕು.) ವಾಯುಸಾರ ಅಥವಾ ‘ಶಂಖಪ್ರಕ್ಷಾಲನ’ ಕ್ರಿಯೆ ಮಾಡುವ ದಿನ ಬೆಳಗ್ಗೆ ಏಳಬೇಕು. ಅಂದು ಆಸನ ಹಾಕಬೇಕಿಲ್ಲ. ಮುಂಜಾನೆಯ ಚಹ, ಅಲ್ಪೋಪಹಾರ ವರ್ಜ. ಬೆಚ್ಚಗಿನ ಉಪ್ಪುಮಿಶ್ರಿತ ನೀರನ್ನು ಕುಡಿಯಬೇಕು. ಸ್ವಚ್ಛವಾಗ ಗಾಳಿ ಬೆಳಕು ಇರುವ ಪ್ರದೇಶ ಇದಕ್ಕೆ ಒಳ್ಳೆಯದು, ಸಮೀಪದಲ್ಲಿ ಶೌಚಾಲಯದ ವ್ಯವಸ್ಥೆ ಇರಲಿ.

ಎರಡು ಗ್ಲಾಸು ನೀರು ಕುಡಿಯಬೇಕು. ನಂತರ ನಾಲ್ಕು ಆಸನ ಹಾಕಬೇಕು. (ತಾಡಾಸನ, ತಿರ್ಯಕ್‌ ತಾಡಾಸನ, ಕಟಿ ಚಕ್ರಾಸನ, ತಿರ್ಯಕ್‌ ಭಜಂಗಾಸನ). ನಂತರ ಮಲವಿಸರ್ಜನೆ ಮಾಡಬೇಕು. ಹೀಗೆ ಇಪ್ಪತ್ತು ಗ್ಲಾಸ್‌ವರೆಗೆ ನೀರು ಸೇವಿಸಬೇಕು. ಕೊನೆಗೆ ಸ್ವಚ್ಛವಾದ ನೀರು ಮಲದ್ವಾರದಿಂದ ಹೊರಬರುತ್ತದೆ.

‘‘ಆಕಂಠಂ ಪೂರಯೇತ್‌ ವಾರೀ ವಕ್ತ್ರೇಣ ಚ ಪಿಬೇತ್‌ ಶನೈಃ ।
ಚಾಲಯೇತ್‌ ಉದರೇಣೇವ ಚೋದರಾದ್ರೇಚಯೇದ್ಧಃ ।।’’ (ಘೕ.ಸಂ.-17)

(ಬಾಯಿಯಿಂದ ನೀರು ಕುಡಿಯುತ್ತ ಕಂಠದ ವರೆಗೆ ತುಂಬಬೇಕು ನಂತರ ಹೊಟ್ಟೆಯನ್ನು ತಿರುಗಿಸುತ್ತ ಅಧೋಮಾರ್ಗದಿಂದ ನೀರನ್ನು ಹೊರತೆಗೆಯಬೇಕು.)

‘‘ವಾರಿಸಾರಂ ಪರಂ ಗೋಪ್ಯಂ ದೇಹ ನಿರ್ಮಲಕಾರಕಂ ।
ಸಾಧಯೇತ್‌ ಪ್ರಯತ್ನೇನ ದೇವದೇಹಂ ಪ್ರಪದ್ಯತೇ ।।’’ (ಘೕ.ಸಂ.-18)

(ವಾರಿಸಾರ ಕ್ರಿಯೆ ಗೋಪನೀಯವಾಗಿದೆ. ಇದನ್ನು ಪ್ರಯತ್ನಪೂರ್ವಕವಾಗಿ ಸಾಧಿಸಿದರೆ ದೇವತೆಗಳಿಗೆ ಸಮಾನವಾದ ಶರೀರವನ್ನು ಪಡೆಯಬಹುದು.)

ಶಂಖಪ್ರಕ್ಷಾಲನ ಕ್ರಿಯೆ ಎರಡು ದಿನಗಳ ವರೆಗೆ ನಡೆಯುತ್ತದೆ. ಆಹಾರ, ವಿಶ್ರಾಂತಿ ಇವುಗಳ ಬಗ್ಗೆ ನಿಯಮಗಳಿವೆ. ದೇಹವನ್ನು ಶುದ್ಧಿಗೊಳಿಸಲು ಇದಕ್ಕಿಂತ ಉತ್ತಮ ಉಪಾಯ ಇನ್ನೊಂದಿಲ್ಲ ಎನ್ನುತ್ತಾರೆ. ಗುರುಗಳ ಮಾರ್ಗದರ್ಶನದಲ್ಲಿ, ಪ್ರಯತ್ನಪೂರ್ವಕವಾಗಿ ಇದನ್ನು ಸಾಧಿಸಬೇಕು. ಹೈ ಬ್ಲಡ್‌ ಪ್ರೆಶರ್‌, ಹೃದ್ರೋಗ, ಅಲ್ಸರ್‌, ಹರ್ನಿಯಾ, ಮೂಲವ್ಯಾಧಿ ಇರುವವರು ಇದನ್ನು ಪ್ರಯೋಗಿಸಬಾರದು.

3) ವಹ್ನಿಸಾರ : ಇದನ್ನು ಅಗ್ನಿಸಾರ ಅಂತರ್‌ ಧೌತಿ ಎಂದೂ ಕರೆಯುತ್ತಾರೆ.
‘‘ನಾಭಿಗ್ರಂಥಿಂ ಮೇರುಪೃಷ್ಠೇ ಶತವಾರಂ ಕಾರಯೇತ್‌ ।
ಅಗ್ನಿಸಾರಮಿದಂ ಧೌತಿರ್ಯೋಗಿನಾಂ ಯೋಗಸಿದ್ಧಿದಾ ।।’’ (ಘೕ.ಸಂ.-19)

(ನಾಭಿಯನ್ನು ಮೇರುಪೃಷ್ಠ ಭಾಗಕ್ಕೆ ತಗಲಿಸಬೇಕು. ಈ ಕ್ರಿಯೆಯೆ ಅಗ್ನಿಸಾರ ಅಥವಾ ವಹ್ನಿಸಾರ ಎನ್ನುತ್ತಾರೆ.)

ಈ ಕ್ರಿಯೆಯನ್ನು ಬಣ್ಣಿಸುತ್ತ ಘೕರಂಡರು ಹೇಳುತ್ತಾರೆ, ‘ ಇದರಿಂದ ಉದರದ ರೋಗಗಳು ನಷ್ಟವಾಗುತ್ತವೆ, ಜಠರಾಗ್ನಿ ಪ್ರಜ್ವಲಿತವಾಗುತ್ತದೆ. ಈ ಕ್ರಿಯೆಯು ಗೋಪ್ಯವಾಗಿದೆ. ದೇವತೆಗಳಿಗೂ ಇದು ದುರ್ಲಭವಾಗಿದೆ. ಇದರ ಪ್ರಯೋಗದಿಂದ ಮನುಷ್ಯ ದೇವತೆಗಳ ದೇಹವನ್ನು ಪಡೆಯುತ್ತಾನೆ.’ ಎಂದು. ಈ ಕ್ರಿಯೆ ಮಾಡುವಾಗ ಧ್ಯಾನಕ್ಕೆ ಯೋಗ್ಯವಾದ ಯಾವುದೇ ಆಸನದಲ್ಲಿ ಕುಳಿತುಕೊಳ್ಳಬಹುದು.

ಮೊಣಕಾಲ ಮಂಡೆಗಳ ಮೇಲೆ ಕೈಗಳನ್ನು ಇರಿಸಬೇಕು. ಕಣ್ಣು ತೆರೆಯಬಹುದು ಅಥವಾ ಮುಚ್ಚಬಹುದು. ಮೊದಲು ದೀರ್ಘ ಶ್ವಾಸ ತೆಗೆದುಕೊಳ್ಳಬೇಕು. ತುಟಿಗಳನ್ನು ದುಂಡಗೆ ಮಾಡಿ ಪೂರ್ಣ ವಾಯುವನ್ನು ಹೊರಗೆ ಹಾಕಬೇಕು. ಇಲ್ಲಿ ಶ್ವಾಸವನ್ನು ಮೂಗಿನಿಂದಲ್ಲ, ಬಾಯಿಯಿಂದ ಹೊರಹಾಕಬೇಕು. ನಾಲಗೆಯನ್ನು ಹೊರತೆಗೆಯಬೇಕು. ಶ್ವಾಸವನ್ನು ನಿಲ್ಲಿಸಿ ಹೊಟ್ಟೆಯನ್ನು ತ್ವರಿತಗತಿಯಲ್ಲಿ ಒಳಗೆ ಮತ್ತು ಹೊರಗೆ ಒಯ್ಯುತ್ತಿರಬೇಕು. 15 ಸಲ ಆದ ಮೇಲೆ ವಿಶ್ರಾಂತಿಯ ಅವಶ್ಯಕತೆ ಇದೆ.

ಈ ಕ್ರಿಯೆಯನ್ನು ಖಾಲಿಹೊಟ್ಟೆಯಲ್ಲಿ ಮಾಡಬೇಕು. ಇದರಿಂದ ದೇಹಕ್ಕೆ ಲಾಭವಿದೆ. ಪಚನಶಕ್ತಿ ಹೆಚ್ಚುತ್ತದೆ, ಜಠರಾಗ್ನಿ ಪ್ರದೀಪ್ತಗೊಳ್ಳುತ್ತದೆ. ಹೊಟ್ಟೆಯಲ್ಲಿಯ ಕ್ರಿಮಿಗಳು ನಾಶವಾಗುತ್ತವೆ. ಮಲಬದ್ಧತೆ, ಪಿತ್ತ, ವಾಯುಪ್ರಕೋಪ, ಯಕೃತ್ತಿನ ರೋಗ ವಾಸಿಗೊಳ್ಳುತ್ತವೆ. ಮನುಷ್ಯನ ಹೆಚ್ಚಿನ ಕಾಯಿಲೆಗಳು ಹೊಟ್ಟೆಗೆ ಸಂಬಂಧಿಸಿರುತ್ತವೆ. ಇದರಿಂದ ಮಣಿಪುರ ಚಕ್ರ ಜಾಗ್ರತವಾಗುತ್ತದೆ. ಕುಂಡಲಿನಿ ಶಕ್ತಿ ಮೂಲಾಧಾರದಿಂದ ಸ್ವಾಧಿಷಜ್ಞ್ಠನಕ್ಕೆ ಬಂದು, ಮಣಿಪುರ ತಲುಪಿದಾಗ ಆ ಚಕ್ರ ಜಾಗ್ರತವಾಗುತ್ತದೆ. ಮಾನಸಿಕ ರೋಗಿಗಳಿಗೆ, ಅಂತರ್ಮುಖಿಯಾದವರಿಗೆ ಅಗ್ನಿಸಾರದ ಅಭ್ಯಾಸ ಒಳ್ಳೆಯ ಪರಿಣಾಮ ಬೀರುತ್ತದೆ ಎನ್ನುತ್ತಾರೆ. ಇದನ್ನು ಹತ್ತು ಸಲ ಮಾಡಿದರೆ ನಿರಾಶೆಯ ಭಾವದಿಂದ ಹೊರಬರಬಹುದು ಎನ್ನಲಾಗುತ್ತದೆ.

4) ಬಹಿಷ್ಕೃತ : ಇದು ಬಹಿಷೃತ ಅಂತರ್‌ ಧೌತಿ.

‘‘ಕಾಕೀಮುದ್ರಾಂ ಶೋಧಯಿತ್ವಾ ಪೂರಯೇತ್‌ ಉದರ ಮರುತ್‌ ।
ಧಾರಯೇತ್‌ ಅರ್ಧಯಾಮಂ ತು ಚಾಲಯೇತ್‌ ಧೋವರ್ತ್ಮನಾ ।
ಏಷಾ ಧೌತಿಃ ಪರಾ ಗೌಪ್ಯಾ ನ ಪ್ರಕಾಶ್ಯಾ ಕದಾಚನಾ।।’’(ಘೕ.ಸಂ.-21)

(ಕಾಗೆಯ ಚುಂಚದಂತೆ ತುಟಿಮಾಡಿ ವಾಯುಪಾನ ಮಾಡುತ್ತ ಹೊಟ್ಟೆಯನ್ನು ತುಂಬಬೇಕು. ಅರ್ಧಪ್ರಹರ (ತೊಂಬತ್ತು ನಿಮಿಷ) ವಾಯುವನ್ನು ಉದರದಲ್ಲಿ ಹಿಡಿದಿಟ್ಟು ಅಧೋಮಾರ್ಗದಿಂದ ಬಿಡಬೇಕು. ಇದೆ ಗೋಪನೀಯ ಬಹಿಷ್ಕೃತ ಧೌತಿ.)

ಪ್ರಾಣಾಯಾಮದ ಸಿದ್ಧಿಯಾದಮೇಲೆ ಈ ಕ್ರಿಯೆ ಮಾಡಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಈ ಧೌತಿಯ ಪ್ರಯೋಗ ಸಾಧ್ಯವಾಗುವುದಿಲ್ಲ. ಇದನ್ನು ಮಾಡುವಾಗ ಕೂಡ ಶಂಖಪ್ರಕ್ಷಾಲನದ ವೇಳೆಗೆ ಅನುಸರಿಸುವ ಆಸನಗಳನ್ನು ಹಾಕಬೇಕು. (ತಾಡಾಸನ, ತಿರ್ಯಕ್‌ ತಾಡಾಸನ, ಕಟಿ ಚಕ್ರಾಸನ, ತಿರ್ಯಕ್‌ ಭಜಂಗಾಸನ. ಇದನ್ನು ಸಾಮಾನ್ಯರು ಮಾಡಲು ಸಾಧ್ಯವಿಲ್ಲ. ಯೋಗಿಗಳು ಕೂಡ ಇದನ್ನು ಮಾಡುವಾಗ ಕಷ್ಟದ ಅನುಭವ ಪಡೆಯುತ್ತಾರೆ.

ಇಲ್ಲಿ ಶ್ವಾಸಕ್ಕೆ ಬಹಳ ಮಹತ್ವವಿರುತ್ತದೆ. ಇದರಿಂದ ಸೂರ್ಯಶಕ್ತಿ ಹಾಗೂ ಚಂದ್ರಶಕ್ತಿ ಜಾಗ್ರತಗೊಳ್ಳುತ್ತದೆ. (ಹ=ಸೂರ್ಯಶಕ್ತಿ, ಠ=ಚಂದ್ರಶಕ್ತಿಅ ಇದು ಹಠಯೋಗ). ಇದರ ಪ್ರಭಾವ ಮನುಷ್ಯನ ನಾಡಿಗಳ ಮೇಲೆ ಆಗುತ್ತದೆ. ಮನುಷ್ಯನ ದೇಹದಲ್ಲಿ 72 ಸಾವಿರ ನಾಡಿಗಳು ಇವೆ. ಅವುಗಳಲ್ಲಿ ಹತ್ತು ನಾಡಿಗಳು ಪ್ರಮುಖವಾಗಿವೆ. ಇಡಾ, ಪಿಂಗಳಾ, ಸುಷುಂನಾ, ಬ್ರಹ್ಮ, ಕೂರ್ಮ, ಶಕ್ತಿ, ಸಾರಸ್ವತ, ಬ್ರಹ್ಮಪುತ್ರ, ಕಾವೇರಿ ಮತ್ತು ಲಕ್ಷ್ಮಿ. ಇವುಗಳಲ್ಲಿ ಅತಿ ಪ್ರಧಾನವಾದವು ಎಂದರೆ ಇಡಾ, ಪಿಂಗಳಾ, ಸುಷುಮ್ನಾ ಎಂದು ಎಂದು ಸ್ವಾಮಿ ನಿರಂಜನಾನಂದರು ವಿವರಿಸುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more