ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯ್ನುಡಿಯಲ್ಲಿನ ಮನರಂಜನೆ ಹಕ್ಕಿಗಾಗಿ ದನಿ ಎತ್ತಿ

By Prasad
|
Google Oneindia Kannada News

Satyameva Jayate by Aamir Khan
ಹಾಗೆ ನೋಡಿದರೆ ಡಬ್ಬಿಂಗ್ ಬೇಕಾ? ಬೇಡ್ವಾ? ಅನ್ನೋದು ಮತದಾನದಿಂದ ತೀರ್ಮಾನವಾಗೋ ಮಾತಲ್ಲವೇ ಅಲ್ಲ. ಹೀಗೆ ಮಾಡಬೇಕೂ ಅನ್ನೋದೇ... ಜೋಗಿ ಪುಸ್ತಕ ಬರೀಬೇಕೋ ಬೇಡ್ವೋ, ವಿಜಯಕರ್ನಾಟಕ ಪತ್ರಿಕೆ ಪ್ರಕಟವಾಗಬೇಕೋ ಬೇಡವೋ? ಪುನೀತ್ ಸಿನಿಮಾದಲ್ಲಿ ನಟಿಸಬೇಕೋ ಬೇಡವೋ? ಸುರೇಶ್ ಸಿನಿಮಾ ನಿರ್ದೇಶನ ಮಾಡಬೇಕೋ ಬೇಡವೋ? ಅಂತಾ ಮತದಾನ ಮಾಡಿ ತೀರ್ಮಾನಿಸಬೇಕು ಎನ್ನುವಷ್ಟೇ ಮೂರ್ಖತನವಾಗುತ್ತದೆ.

ಇವೆಲ್ಲವೂ ಮಾರುಕಟ್ಟೆಯಲ್ಲಿ ಹೇಗೆ ತಮ್ಮನ್ನು ತಾವು ಜನರ ಮುಂದೆ ನಿಂತು ಪರೀಕ್ಷೆಗೆ ಒಡ್ಡಿಕೊಂಡು ಜನರ ಮೆಚ್ಚುಗೆಗೆ ಅಥವಾ ತಿರಸ್ಕಾರಕ್ಕೆ ಎದೆಯೊಡ್ಡುತ್ತಾವೋ ಅಂಥದ್ದೇ ಅವಕಾಶ ಡಬ್ ಆಗಿರೋ ಸಿನಿಮಾಗಳಿಗೂ ಇರಬೇಕು. ಇದೇ ಸರಿಯಾದ ಮಾರ್ಗ. ಹಾಗಾದ್ರೆ ಬ್ಲೂಫಿಲಂ ತೆಗೀಬೋದಾ ಅನ್ನೋ ಮೊಂಡುವಾದವೂ ಬರುತ್ತೆ! ಸ್ವಾಮೀ... 'ಅದು ಕಾನೂನು ಬಾಹಿರವಾಗಿದ್ದರೆ ತೆಗೆಯುವಂತಿಲ್ಲ! ಕಾನೂನು ಬಾಹಿರವಾಗಿಲ್ಲದಿದ್ದರೆ ತೆಗೆಯಬಹುದು’ ಎನ್ನುವುದು ಕಾನೂನಿನ ಪ್ರಾಥಮಿಕ ಜ್ಞಾನವಿರುವವರಿಗೆ ಅರ್ಥವಾಗೋ ವಿಷಯವಾಗಿದೆ. ಗ್ರಾಹಕನೇ ಬೇಕು ಬೇಡಾ ನಿರ್ಧಾರ ಮಾಡೋ ಅತಿದೊಡ್ಡ ವ್ಯಕ್ತಿ, ಶಕ್ತಿ. ಇದನ್ನು ಕೃತಕವಾಗಿ ನಿಷೇಧಗಳ ಮೂಲಕ ಕಟ್ಟಿ ಹಾಕೋದನ್ನು ಪ್ರಜಾಪ್ರಭುತ್ವವಾದಿಗಳು ಎಂದು ಹೇಳಿಕೊಳ್ಳುವವರೇ ಒಪ್ಪುವುದಾದರೆ ಸಾಮಾನ್ಯ ಜನರೂ ಸುಮ್ಮನಿರಲಾದೀತೇ?

ಈ ಪಿಟಿಶನ್ ಮೂಲಕ ದನಿ ಎತ್ತೋಣ!

ಮತದಾನವಲ್ಲದ ದಾರಿಯ ಮೂಲಕ ನಾವು ಎಚ್ಚೆತ್ತ ಗ್ರಾಹಕರು ಎನ್ನುವ ಸಂದೇಶವನ್ನು ನೀಡಲು... ನಮ್ಮ ಹಕ್ಕುಗಳನ್ನು ಇನ್ನು ದಮನಿಸಲಾಗದು ಎನ್ನುವುದನ್ನು ಸಾರಲು... ಎಲ್ಲಕ್ಕಿಂತಾ ಮುಖ್ಯವಾಗಿ ಸುವರ್ಣ/ ಸ್ಟಾರ್ ಸಮೂಹದವರಿಗೆ ಪ್ರೇಕ್ಷಕರಾದ ನಮ್ಮ ನಿಲುವು ತಿಳಿಸಲು, 'ಪಟ್ಟಭದ್ರರ ಬೆದರಿಕೆಗೆ ಬಾಗಬೇಡಿರೆಂದೂ ನಿಮ್ಮೊಂದಿಗೆ ನಾವಿದ್ದೇವೆಂದೂ’ ಸಾರಲು ಈ ಒಂದು ಮಿಂಬಲೆ ಮನವಿ("ಆನ್‍ಲೈನ್ ಪಿಟಿಶನ್")ಯನ್ನು ಸಮಾನ ಮನಸ್ಕರು ಆರಂಭಿಸಿದ್ದೇವೆ. ಜಾಗೃತ ಗ್ರಾಹಕರು ಎನ್ನುವ ಹೆಸರಿನಲ್ಲಿ ನಾವು ಇದನ್ನು ಮಿಂಬಲೆ ತಾಣದಲ್ಲಿ ಹಾಕಿದ್ದೇವೆ.

ದೂರದರ್ಶನ/ ಚಿತ್ರರಂಗದ ಕೆಲಸಂಘಟನೆಗಳ ಜನವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯನ್ನೂ ಖಂಡಿಸುತ್ತಾ, ನಮ್ಮ 'ತಾಯ್ನುಡಿಯಲ್ಲಿನ ಮನರಂಜನೆಯ ಹಕ್ಕಿ’ಗಾಗಿ ದನಿ ಎತ್ತೋಣ. ಈ ಮನವಿಗೆ ನೀವೂ ಸಹಿ ಹಾಕಿ, ನಿಮ್ಮ ಗೆಳೆಯರಿಗೂ ಸಹಿ ಹಾಕಲು ಹೇಳಿ. ಇದನ್ನು ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸವನ್ನು ನಾವು ಮಾಡುತ್ತೇವೆ. ಕನ್ನಡ ಕನ್ನಡಿಗ ಕರ್ನಾಟಕಗಳ ಒಳಿತಿಗೆ ಡಬ್ಬಿಂಗ್ ಚಿತ್ರಗಳು ಪೂರಕವಲ್ಲವಾಗಬಲ್ಲುವೇ ಹೊರತು ಮಾರಕವಲ್ಲಾ ಎನ್ನುವ ದಿಟವೇ ಗೆಲ್ಲಲಿ. [ಸ್ನೇಹಸೇತು : ಏನ್ ಗುರು?]

English summary
Should good quality TV programs be allowed to be dubbed to Kannada or not? Enguru Kannada blog has started one petition seeking opinion of the Kannadigas on dubbing issue. Kannada film industry says Aamir Khan's Satyameva Jayate should not be dubbed to Kannada. What do you say?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X