ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಶಾಲೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳೋಣ

By Prasad
|
Google Oneindia Kannada News

How many Kannada medium schools are there in Karnataka?
ಕರ್ನಾಟಕದಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿರುವ ಇನ್ಫೋಸಿಸ್ ಚೇರ್ಮನ್ ನಾರಾಯಣ ಮೂರ್ತಿ ಕನ್ನಡ ಶಾಲೆಗಳ ಪ್ರಸ್ತುತತೆಯ ಬಗ್ಗೆ ಚರ್ಚೆಗೆ ನಾಂದಿ ಹಾಡಿದ್ದಾರೆ. ಮಕ್ಕಳಲ್ಲಿ ಕನ್ನಡದ ಬೀಜ ಬಿತ್ತುವುದು ಕನ್ನಡ ಶಾಲೆಗಳಿಂದ ಮಾತ್ರ ಸಾಧ್ಯ ಎಂಬುದು ಸರ್ವವಿದಿತ ವಿಚಾರ. ಇದು ಇಂಗ್ಲಿಷ್ ಶಾಲೆಗಳಿಂದ ಸಾಧ್ಯವೇ ಇಲ್ಲ. ಕನ್ನಡ ಕಲಿಸುತ್ತೇವೆಂದು ಹೇಳಿಕೊಂಡು ಅನುದಾನ ಬಾಚಿಕೊಳ್ಳುವ ಕೆಲ ಇಂಗ್ಲಿಷ್ ಮಾಧ್ಯಮ ಶಾಲೆಗಳು ಕನ್ನಡ ಪಾಠ ಮತ್ತು ಕನ್ನಡ ವಿದ್ಯಾರ್ಥಿಗಳನ್ನು ಕಸಕ್ಕಿಂತ ಕಡೆಯಾಗಿ ಕಾಣುತ್ತಿವೆ. ಇದು ಕಂಡಿರುವ ಸತ್ಯ. ಹೀಗಿರುವಾಗ, ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಆದ್ಯತೆ ಸಿಗಬೇಕೆಂದು ಆಗ್ರಹಿಸುವವರು ಈ ಕಾರ್ಯಕ್ಕೆ ಕೈಜೋಡಿಸಿ.

ಕಲಿಕೆಯ ಬಗ್ಗೆ ಹೊಸದಾಗಿ ಬಳಗದ ವತಿಯಿಂದ ಒಂದು ಬ್ಲಾಗನ್ನು "ಕಲಿಕೆಯು" ಹೆಸರಿನಲ್ಲಿ ಶುರುಮಾಡಿರೋ ವಿಷಯ ಕಳೆದ ಸಲ ಬರೆದಿದ್ದೆವು. ಈ ಬ್ಲಾಗಿನಲ್ಲಿ ಕನ್ನಡಿಗರ ಕಲಿಕೆ ಏರ್ಪಾಡಿನ ಬಗ್ಗೆ ಮಾಹಿತಿ, ಚರ್ಚೆ, ಸರಿ ನಿಲುವುಗಳನ್ನು ಹಂಚಿಕೊಳ್ಳೋದ್ರು ಜೊತೆಯಲ್ಲಿಯೇ ಖಾಸಗಿ (ಅನುದಾನಿತ/ ಅನುದಾನರಹಿತ) ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಆದಷ್ಟೂ ಮಾಹಿತಿ ಕಲೆ ಹಾಕಿ ಹಂಚಿಕೊಳ್ಳೋ ಯೋಜನೆಯೊಂದನ್ನು ಹಮ್ಮಿಕೊಂಡಿದ್ದೀವಿ.

ಒಳ್ಳೆಯ ಕನ್ನಡ ಶಾಲೆಯ ಮಾಹಿತಿ

ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಬೇಕೆಂದು ಅಂದುಕೊಳ್ಳೋ ಎಷ್ಟೊಂದು ತಾಯಿತಂದೆಯರಿಗೆ ಯಾವ ಶಾಲೆ ಚೆನ್ನಾಗಿದೆ? ಎಲ್ಲಿಗೆ ಸೇರಿಸಬೇಕು? ಅನ್ನೋ ಗೊಂದಲ ಇರೋ ಸಾಧ್ಯತೆ ಇದೆ. ಅಂತಹವರಿಗೆ ಅನುಕೂಲ ಆಗಲಿ ಅನ್ನೋ ಕಾರಣದಿಂದಲೂ ಈ ಮಾಹಿತಿ ಕೂಡಿಹಾಕೋ ಕೆಲಸ ಪ್ರಮುಖವಾಗುತ್ತದೆ. ನೀವೂ ನಮ್ಮೊಡನೆ ಕೈಜೋಡಿಸಿ ಎಂದು ಕೇಳಿಕೊಳ್ಳುತ್ತೇವೆ.

ಮೊದಲಿಗೆ ಬೆಂಗಳೂರಿನ ಶಾಲೆಗಳ ಬಗ್ಗೆ ಮಾಹಿತಿ ಕೂಡಿಹಾಕೋ ಯೋಚನೆಯಿದೆ. ನೀವು ಬೆಂಗಳೂರಿನಲ್ಲಿ ಕನ್ನದ ಮಾಧ್ಯಮದಲ್ಲಿ ಓದಿದವರಾಗಿದ್ದರೆ... ನೀವು ಓದಿದ ಶಾಲೆಯಿರಬಹುದು, ನಿಮ್ಮ ಮನೆಯ, ಬಡಾವಣೆಯ ಹತ್ತಿರದ ಶಾಲೆಯಿರಬಹುದು... ಅವುಗಳ ಬಗ್ಗೆ "ಹೆಸರು ಮತ್ತು ವಿಳಾಸ"ಗಳ ಸಣ್ಣ ಮಾಹಿತಿ ಒದಗಿಸಿದರೆ ಸಾಕು. ಆ ಶಾಲೆಗೆ ನಮ್ಮ ಬಳಗದ ತಂಡದ ಸದಸ್ಯರು ಭೇಟಿಕೊಟ್ಟು, ಮಾಹಿತಿ ಕಲೆಹಾಕಿ ಕಲಿಕೆಯು ಬ್ಲಾಗಿನಲ್ಲಿ ಪ್ರಕಟಮಾಡುತ್ತೇವೆ. (ಕೃಪೆ : ಏನ್ ಗುರು ಕಾಫಿ ಆಯ್ತಾ?)

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X