ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋದ್ರೆಜ್ ಗೇಮ್ ಗೆ ಇಂಗ್ಲೀಷ್ ಆಡ್ ಏಕೆ?

By * ಏನ್ಗುರು
|
Google Oneindia Kannada News

ಇಂಥಾ ಒಂದು ಜಾಹೀರಾತು ಇತ್ತೀಚೆಗೆ ಪ್ರಜಾವಾಣಿ ಸೇರಿದಂತೆ ಪ್ರಮುಖ ದಿನಪತ್ರಿಕೆಯ ಮೊದಲನೆ ಪುಟದಲ್ಲಿ ರಾರಾಜಿಸ್ತಾ ಇದೆ ಗುರೂ! ಗಾಡ್ರೆಜ್ ಸಂಸ್ಥೆಯೋರು ಹೊರಡಿಸಿರೋ ಈ ಜಾಹೀರಾತು ಒಂದೊಳ್ಳೆ ಮಾರುಕಟ್ಟೆ ತಂತ್ರವಾಗಿದೆ ಅನ್ನೋದು ಕಾಣ್ತಾಯಿದೆ.

ತಮ್ಮ ಉತ್ಪನ್ನಗಳನ್ನು ಜನರಿಗೆ ಪರಿಚಯಿಸೋಕೆ ಅಂತಾ ಸಂಸ್ಥೆಗಳು ಟಿ.ವಿಗಳಲ್ಲಿ ಜಾಹೀರಾತು ಕೊಡೋದ್ರು ಜೊತೆ ಹೊಸ ಹೊಸ ಸ್ಪರ್ಧೆಗಳನ್ನು ಏರ್ಪಡಿಸೋದನ್ನು ನಾವೆಲ್ಲಾ ನೋಡ್ತಾನೆ ಇದೀವಿ. ಇದೂ ಅಂಥದ್ದೇ ಒಂದು ಸ್ಪರ್ಧೆ ಅನ್ನೋದು ಒಂದು ಲೆಕ್ಕದಲ್ಲಿ ನಿಜವೇ ಆದರೂ, ಗಾಡ್ರೆಜ್ ಸಂಸ್ಥೆ ಈ ಬಾರಿ ಭಾರತದ ಭಾಷಾ ವೈವಿಧ್ಯತೇನಾ ಗಮನಕ್ಕೆ ತೆಗೆದುಕೊಂಡಿರೋದು ಎದ್ದು ಕಾಣ್ತಿದೆ. ಇದು ಮೆಚ್ಚತಕ್ಕ ವಿಷಯವಾಗಿದೆ.

ತಮಿಳುನಾಡಿನಲ್ಲಿ ತಮಿಳು, ಕರ್ನಾಟಕದಲ್ಲಿ ಕನ್ನಡ ಕರ್ನಾಟಕದಲ್ಲಿ "ಗೇಮ್ ಆಡಿ, ಲೈಫ್ ಛೇಂಜ್ ಮಾಡಿ" ಹೆಸರಲ್ಲಿ ಶುರುವಾಗ್ತಿರೋ ಈ ಕಾರ್ಯಕ್ರಮಾನಾ ತಮಿಳುನಾಡಿನಲ್ಲಿ ತಮಿಳಿನಲ್ಲಿ "ಗಾಡ್ರೆಜ್ ವಾಳ್ವೈ ಮಾಟ್ರಲಾಂ ವಾಂಗೋ " ಎಂದೂ, ಆಂಧ್ರಪ್ರದೇಶದಲ್ಲಿ ತೆಲುಗಿನಲ್ಲಿ "ಆಡಂಡಿ, ಲೈಫ್ ಮಾರ್ಚುಕೊಂಡಿ" ಎಂದೂ ಆಯಾಯಾ ಭಾಷೆಗಳಲ್ಲೇ ಮಾಡಲು ಗಾಡ್ರೆಜ್ ಸಂಸ್ಥೆ ಮುಂದಾಗ್ತಿದೆ. ಇದು ಒಳ್ಳನಡೆಯಾಗಿದೆ.

ನಮ್ಮೂರ ಎಫ್.ಎಂ ವಾಹಿನಿಗಳನ್ನು ಕೇಳುದ್ರೆ ಕಿವಿ ಮೇಲೆ ರಾಚೋದು ಹಿಂದೀ ಜಾಹೀರಾತುಗಳೇ. ಇದ್ಯಾಕಪ್ಪಾ ಹೀಗ್ ಮಾಡ್ತೀರಾ ಅಂದ್ರೆ "ನಮಗೆ ಎಲ್ಲಾ ದಿಲ್ಲಿಯಿಂದ ಬರುತ್ತೆ, ಮುಂಬೈಯಿಂದ ಬರುತ್ತೆ" ಅನ್ನೋ ಸಬೂಬು ಕೇಳುತ್ತೆ. ಅವರ ಪ್ರಕಾರ ಆಯಾ ಭಾಷೆಗಳಲ್ಲಿ ಜಾಹೀರಾತು ಮಾಡ್ಸಿ ಹಾಕೋದು ಖರ್ಚಿನ ಬಾಬತ್ತು. ಇರಲಿ. ಆದರೆ ಕನ್ನಡಿಗರನ್ನು ಕನ್ನಡದಲ್ಲೇ ಪರಿಣಾಮಕಾರಿಯಾಗಿ ಮುಟ್ಟೋಕೆ ಸಾಧ್ಯ ಅಂತಾ ಮನವರಿಕೆ ಆದವರು ಕರ್ನಾಟಕದಲ್ಲಿ ಕನ್ನಡದಲ್ಲಿ ಜಾಹೀರಾತು ಹಾಕಕ್ಕೆ ಹಿಂಜರಿಯಲಾರರು ಅಲ್ವಾ ಗುರೂ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X