ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಪಿ ರೈಟ್ - ಸಮಿತಿ ಮಾತ್ರ ರಾಂಗ್!

By Prasad
|
Google Oneindia Kannada News

Indian Copyright Act
1957ರಲ್ಲಿ ಬಂದ ಕಾಪಿ ರೈಟ್ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳನ್ನ ಪರಿಶೀಲಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ರಚಿಸಿರೋ ಸಮಿತಿಯ ಸದಸ್ಯರು ಕಿತ್ತಾಡ್ಕೊಂಡಿರೋ ಸುದ್ದಿ ಫೆಬ್ರವರಿ 18ರ ಡೆಕ್ಕನ್ ಹೆರಾಲ್ಡ್ ನಲ್ಲಿ ಬಂದಿದೆ. ಕಿತ್ತಾಡ್ಕೊಂಡಿದ್ದು ಯಾಕೆ ಏನು ಅನ್ನೋದು ಅತ್ಲಾಗಿಟ್ಟು, ಈ ಸಮಿತಿಲಿ ಇರೋರು ಯಾರು ಅಂತ ನೋಡಿದ್ರೆ ಬೇಸರಾ ಮೂಡುತ್ತೆ. ಇಡೀ ದೇಶಕ್ಕೆ ಅನ್ವಯಿಸೋ ಈ ಕಾನೂನಿನ ಪರಿಶೀಲನೆ ನಡೆಸೋ ಸಮಿತಿಯಲ್ಲಿ ಸಹಜವಾಗಿ ದೇಶದ ಎಲ್ಲ ಭಾಗದ ಪ್ರತಿನಿಧಿಗಳಿಗೆ ಅವಕಾಶ ಸಿಗಬೇಕಿತ್ತು, ಆದ್ರೆ ಇಲ್ಲಿರೋ 10 ಜನ ಸದಸ್ಯರಲ್ಲಿ ಹೆಚ್ಚಿನವರು ಬಾಲಿವುಡ್ ಸಿನೆಮಾದವರು. ಭಾರತ ಅಂದ್ರೆ ಹಿಂದಿ ಸಿನೆಮಾ ಅಂದ್ಕೊಂಡಿರೋ ಜನರ ಮೂರ್ಖತನಕ್ಕೆ ಏನ್ ಹೇಳ್ತಿಯಾ ಗುರು.

ಏನಿದು ಕಾಪಿ ರೈಟ್ ಕಾಯ್ದೆ?

ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಿನೆಮಾ, ವಾಸ್ತು ಶಿಲ್ಪ, ಕಂಪ್ಯೂಟರ್ ಪ್ರೋಗ್ರಾಮ್ ಸೇರಿದಂತೆ ಕ್ರಿಯಾಶೀಲತೆಯ ಎಲ್ಲ ಪ್ರಕಾರದ ಆಲೋಚನೆ, ಉತ್ಪನ್ನಗಳ ವಿಷಯಕ್ಕೂ ಈ ಕಾನೂನು ಅನ್ವಯಿಸುತ್ತೆ. ಸೃಜನಶೀಲತೆಯ ಎಲ್ಲ ಪ್ರಕಾರಗಳಲ್ಲೂ ಮೂಲ ಸೃಷ್ಟಿಕರ್ತನ ಹಕ್ಕನ್ನು ಕಾಪಾಡುವ ಉದ್ದೇಶದಿಂದ 1957ರಲ್ಲಿ ಜಾರಿಗೆ ಬಂದ ಕಾಯ್ದೆಯೇ ಈ ಕಾಪಿ ರೈಟ್ ಕಾಯಿದೆ.

ಬಾಲಿವುಡ್ ಸಮಿತಿ ಎಷ್ಟು ಸರಿ?

ಈ ಕಾಯ್ದೆ ಅಸ್ತಿತ್ವಕ್ಕೆ ಬಂದು ಸುಮಾರು 53 ವರ್ಷಗಳಾಗಿರೋದ್ರಿಂದ, ಹಾಗೇ ಕಳೆದ 50 ವರ್ಷಗಳಲ್ಲಿ ಎಷ್ಟೋ ಹೊಸ ಬಗೆಯ ವಿಷಯಗಳು ಕಾಪಿ ರೈಟ್ ನ ಪಟ್ಟಿಗೆ ಸೇರುವುದರ ಬಗ್ಗೆ ಸ್ಪಷ್ಟತೆ ಬೇಕಿರೋದ್ರಿಂದ ಈ ಪರಿಶೀಲನೆ ಸಮಿತಿ ರಚಿಸಿರೋದು. ಸಮಿತಿ ರಚಿಸೋ ಉದ್ದೇಶಾ ಏನೋ ಒಳ್ಳೇದೆ, ಆದ್ರೆ ಇಷ್ಟು ವೈವಿಧ್ಯತೆ ಇರೋ ಭಾರತದ ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಿನೆಮಾ ಮುಂತಾದ ವಿಷ್ಯಗಳ ಕಾಪಿ ರೈಟ್ ಬಗ್ಗೆ, ಇಡೀ ದೇಶಕ್ಕೆ ಅನ್ವಯಿಸುವಂತೆ ಕಾನೂನು ಬದಲಾಯಿಸಲು ಹೊರಟಾಗ ಅಲ್ಲಿ ದೇಶದ ಎಲ್ಲ ಭಾಗದ ಜನರಿಗೂ ಪ್ರಾತಿನಿಧ್ಯ ಸಿಗಬೇಕು ಅನ್ಸಲ್ವಾ ಗುರು? ಸ್ಥಳೀಯವಾದ ಸಮಸ್ಯೆಯೊಂದಕ್ಕೆ ಪರಿಹಾರ ಸೂಚಿಸಲು, ಆ ಸಮಸ್ಯೆಯನ್ನಿರಿತ ಸ್ಥಳೀಯರಿಗಲ್ಲದೇ ಇನ್ನಾರಿಗಾದರೂ ಸಾಧ್ಯವಾದೀತಾ? ಹಾಗಿದ್ದಾಗ, ಕರ್ನಾಟಕದಲ್ಲಿನ ಯಾವುದೋ ಒಬ್ಬ ಲೇಖಕ, ಇಲ್ಲವೇ ಚಿತ್ರ ನಿರ್ದೇಶಕ, ಇಲ್ಲವೇ ಸಂಗೀತ ನಿರ್ದೇಶಕ ಎದುರಿಸುವ ಕಾಪಿ ರೈಟ್ ಸಂಬಂಧಿತ ಸಮಸ್ಯೆ ಬಾಲಿವುಡ್ ನ ಪಂಡಿತರಿಗೆ ಎಂದಿಗಾದರೂ ಅರ್ಥವಾದೀತಾ?

ಕೊನೆಹನಿ

ಕಾಪಿ ರೈಟ್ ಕಾಯಿದೆಗೆ ಇರೋ ವ್ಯಾಪ್ತಿ ನಿಜಕ್ಕೂ ದೊಡ್ಡದು. ಅದು ಬರೀ ಸಿನೆಮಾ, ಸಿನೆಮಾ ಸಾಹಿತ್ಯ ಅನ್ನೋದಕ್ಕೆ ಸೀಮಿತವಾಗಿಲ್ಲ. ಜಾನಪದ, ಸುಗಮ ಸಂಗೀತ, ಸಾಹಿತ್ಯ, ನಾಟಕ, ಚಿತ್ರಕಲೆ, ಹೀಗೆ ಸೃಜನಶೀಲತೆಯ ಹತ್ತು ಹಲವು ಪ್ರಕಾರಗಳಿಗೆ ಈ ಕಾಯ್ದೆ ಅನ್ವಯಿಸುತ್ತೆ. ಹಾಗೆಯೇ, ಈ ಎಲ್ಲ ಕ್ಷೇತ್ರಗಳ ಕಾಪಿ ರೈಟ್ ಸಮಸ್ಯೆಗಳು ಅಷ್ಟೇ ಬೇರೆಯಾದದ್ದು. ಆಯಾ ಭಾಗದಲ್ಲಿನ ಕಾಪಿ ರೈಟ್ ಸಮಸ್ಯೆಗಳ ಅರಿವೇ ಇಲ್ಲದೇ ಈ ಬಾಲಿವುಡ್ ಪಂಡಿತರು, ಸ್ಥಳೀಯರಿಗೆ ಬೇಡದ ಪರಿಹಾರ ಕೊಡಲು ಹೊರಟ್ರೆ ಅದು ಇನ್ನೊಂದು ರೀತಿಯ ಹೇರಿಕೆ ಅನ್ನಿಸಿಕೊಳ್ಳಲ್ವಾ ಗುರು?

(ಸ್ನೇಹಸೇತು : ಏನ್ ಗುರು?)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X