ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರಿಗೆ ಕನ್ನಡ ಕಲ್ಸಣಾ

|
Google Oneindia Kannada News

Kannada coaching classes for govt servants!
ಆರು ಲಕ್ಷಕ್ಕೂ ಹೆಚ್ಚಿರುವ ಕರ್ನಾಟಕ ಸರ್ಕಾರಿ ನೌಕರರ ಪೈಕಿ ಸುಮಾರು ಒಂದು ಲಕ್ಷಕ್ಕೂ ಅಧಿಕ ನೌಕರರಿಗೆ (ಅಂದರೆ ಸುಮಾರು 17% ನೌಕರರು!) ಕನ್ನಡ ಬಳಸಕ್ಕೆ ತ್ರಾಸಂತೆ! ಇವರಿಗೆ ಸುಲಲಿತವಾಗಿ ಕನ್ನಡಾನ ಬರೆಯಕ್ಕೆ ಬರಲ್ಲ ಅನ್ನೋ ಹೌಹಾರುವಂತಾ ಸುದ್ದೀನಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಹೊರ ಹಾಕಿದ್ದಾರೆ ಗುರು!

ಈಗ ಇವರೆಲ್ಲರಿಗೂ ಸುಮಾರು 2.5 ಕೋಟಿ ರೂಪಾಯಿ ಸರ್ಕಾರಿ ವೆಚ್ಚದಲ್ಲಿ ಕನ್ನಡ ಕಲಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕಲಿದೆ ಅಂತಾನೂ ಹೇಳಿದ್ದಾರೆ. ಕರ್ನಾಟಕದ ಆಡಳಿತ ಭಾಷೆಯನ್ನೇ ಸಲೀಸಾಗಿ ಬಳಸಕ್ಕೆ ಬರದವರು ನಮ್ಮ ರಾಜ್ಯಸರ್ಕಾರಿ ನೌಕರಿಯಲ್ಲಿ ವರ್ಷಗಟ್ಲೆ ಅರಾಮಾಗಿ ಕೆಲಸ ಮಾಡಕ್ಕೆ ಆಗುತ್ತೇ ಅನ್ನೋದೆ ತಮಾಷೆ ಸುದ್ದಿ ಅಲ್ವಾ? ಪಾಪಾ! ಚಂದ್ರು ಅವ್ರು ಈಗ ಇವರಿಗೆ ಪಾಠ ಹೇಳಿಕೊಡೋದು ಬಿಟ್ಟು ಇನ್ನೇನು ತಾನೆ ಮಾಡಬಲ್ಲರು?

ಕನ್ನಡ ಬಳುಸ್ತಿಲ್ಲ ಅಂದ್ರೆ ಯಾರು ಕಾರಣ?

ಅಲ್ಲಾ ಗುರು! ನಾಡಿನ ಜನರ ನುಡಿಯಾದ ಕನ್ನಡದಲ್ಲೇ ನಮ್ಮ ಆಡಳಿತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳೆಲ್ಲಾ ನಡೀಬೇಕು ಅನ್ನೋದನ್ನು ಸರಿಯಾಗಿ ಸರ್ಕಾರ ಅರ್ಥ ಮಾಡ್ಕೊಂಡು ವ್ಯವಸ್ಥೆ ಜಾರಿಗೆ ತಂದಿದ್ರೆ ಇಂಥಾ ಕೆಟ್ಟ ಪರಿಸ್ಥಿತಿ ಬರ್ತಿತ್ತಾ? ಈಗ ಇರೋರಲ್ಲಿ ಲಕ್ಷಾಂತರ ಜನಕ್ ಕನ್ನಡ ಬಳಸಕ್ ಆಗದೆ ಇರೋದ್ರಿಂದ ಎಷ್ಟು ಜನರಿಗೆ ಸಮಸ್ಯೆ ಅಲ್ವಾ?

ಸರ್ಕಾರಗಳು ಮೊದ್ಲಿಂದ ಬಿಗಿಯಾಗಿ ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾಡದೇ ಈಗ 17% ನೌಕರರಿಗೆ ಕನ್ನಡದಲ್ಲಿ ಸರಿಯಾಗಿ ವ್ಯವಹರಿಸಕ್ ಆಗಲ್ಲಾ ಅಂದ್ರೆ ಕನ್ನಡ ಅನುಷ್ಠಾನ ಮಾಡಕ್ಕೆ ನಮ್ಮ ಸರ್ಕಾರಗಳು ಎಷ್ಟೊಂದು ಕಾಳಜಿ ತೋರಿಸಿವೆ ಅನ್ನೋದ್ ತಿಳಿಯಲ್ವಾ? ಆಡಳಿತ ಭಾಷೆಯ ಅನುಷ್ಠಾನಕ್ಕೆ ಅಂತ ಯಾವ್ದೋ ಸಮಿತಿ, ಸುಡ್ಗಾಡು ಶುಂಠಿ ಅಂತ ಮಾಡಿ ಸರ್ಕಾರ ಕೈತೊಳ್ಕೊಂಬುಟ್ರೆ ಆಗೋಯ್ತಾ?

ಪಾಪಾ, ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅನ್ನೋ ಹಲ್ಲು ಕಿತ್ತ ಹಾವು ಎಷ್ಟು ಭುಸುಗುಟ್ಟುದ್ರೆ ತಾನೇ ಏನಾಗುತ್ತೆ? ಈಗಲಾದರೂ ಸರ್ಕಾರ ತನ್ನ ಕೆಲಸದಲ್ಲಿ ಆಗ್ತಿರೋ 20% ಕ್ಷಮತೆಯ ನಷ್ಟಾನಾ ಅರ್ಥ ಮಾಡ್ಕೊಂಡು ಸರೀಗೆ ಕನ್ನಡದಲ್ಲಿ ಆಡಳಿತ ಮಾಡಬೇಕು ಗುರು!

(ಸ್ನೇಹಸೇತು : ಏನ್ ಗುರು?)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X