ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಂಗಾರದ ಮನುಷ್ಯ'ನ ಬಂಗಾರದಂಥಾ ಹಾಡು

By Super
|
Google Oneindia Kannada News

Rajkumar
ಸಾವಿರಾರು ಜನರ ಜೀವನ ಶೈಲೀನೆ ಬದಲ್ಸೋ ಶಕ್ತಿ ಒಂದು ಸಿನಿಮಾ ಹಾಡಿಗೆ ಇರುತ್ತೆ ಅಂದ್ರೆ ಅಚ್ಚರಿ ಆಗುತ್ತಲ್ವಾ? ಸಾವಿರ ಮೈಲಿಯ ಪಯಣವೂ ಒಂದು ಹೆಜ್ಜೆಯಿಂದಲೇ ಆಗೋದು, ಪ್ರಯತ್ನ ಪಡಬೇಕು, ಎಂದೆಗುಂದಬಾರ್ದು ಅನ್ನೋ ಸಂದೇಶಗಳನ್ನೆಲ್ಲಾ ಅದೆಷ್ಟು ಚೆನ್ನಾಗಿ ರಾಜ್ ಕುಮಾರ್ ಅಮೋಘ ಅಭಿನಯದ ಬಂಗಾರದ ಮನುಷ್ಯ ಚಿತ್ರದ ಈ ಹಾಡಲ್ಲಿ ಕೊಟ್ಟಿದಾರೆ ನೋಡಿ.

ಈ ಸಿನಿಮಾನಾ, ಈ ಹಾಡನ್ನ ನೋಡ್ಕೊಂಡು ಎಷ್ಟೋ ಜನರು ತಮ್ಮ ಬದುಕಿನ ದೃಷ್ಟಿಕೋನವನ್ನೇ ಬದಲಿಸಿಕೊಂಡ್ರಂತೆ. ಕನ್ನಡ ನಾಡು ಕಟ್ಟೋಕೆ ಹೊರಡೋ ಕಟ್ಟಾಳುಗಳಿಗೂ ಹೆಜ್ಜೆಗೊಂದು ಸವಾಲು ಎದ್ರಾಗಬೋದು. ಏನೆ ಬಂದ್ರೂ ಮುಂದಡಿಯಿಡ್ತೀವಿ ಅನ್ನೋ ಧೃಡಸಂಕಲ್ಪ ಇದ್ರೆ ಎದ್ರಾಗೋ ಬಂಡೆಗಳೂ ಪುಡಿಪುಡಿ.. ಇಂಥಾ ಹಾಡುಗಳು ಈಗ್ಲೂ ಪರಿಣಾಮಕಾರಿಯಾಗಿ ಪ್ರೇರಣೆ ನೀಡ್ತಿರೋದು ಅವುಗಳ ಸಾರ್ಥಕತೆಗೆ ಸಾಕ್ಷಿ.

ಸಖತ್ ಸ್ಪೂರ್ತಿ ಕೊಡೋ ಈ ಹಾಡಲ್ಲಿರೋ ವಿಶೇಷನಾದ್ರೂ ಏನಂತೀರಾ? ಎಷ್ಟು ಸಾರ್ತಿ ಕೇಳುದ್ರೂ ಇಂಪಾಗಿರೋ ಸಂಗೀತ, ಮೈ ಮನಗಳಲ್ಲಿ ಅದಮ್ಯವಾದ ಕಸುವು ತುಂಬುವ ಸಾಹಿತ್ಯ, ಕಣ್ ತಣಿಸೋ ನೋಟ, ಮನ ತಟ್ಟೋ ಅಭಿನಯಾ... ಆಹಾ ಇನ್ನೊಂದಪಾ ನೋಡೋಣ ಬನ್ನಿ.

(ಸ್ನೇಹಸೇತು:ಏನ್‌‍ಗುರು)

English summary
Golden song from the golden movie" Bangarada Manushya". It has inspired millions of kannada movie fans to carve objectivity for their life-goals
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X