ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ರಾಜ್ ಅಂಚೆ ಚೀಟಿ ಗೌರವವನ್ನು ಕಾಪಾಡೋಣ

By Staff
|
Google Oneindia Kannada News

Commemorative stamps for Dr.Rajkumarಕೇಂದ್ರ ಸರ್ಕಾರಕ್ಕೆ ಅಂಚೆ ಚೀಟಿ ಸಲಹಾ ಸಮಿತಿಯು ಇತ್ತೀಚೆಗೆ 2008ರ ಸಾಲಿನ ಅಂಚೆ-ಚೀಟಿಗಳ ಪಟ್ಟಿ ಸೂಚಿಸಿದೆ. ಇದ್ರಲ್ಲಿ ಕನ್ನಡಿಗರು ಖುಷಿ ಪಡುವಂತ ಇಸ್ಯ ಇದೆ ಗುರು! ಈ ಬಾರಿ ಹೊರ ಬರ್ತಿರೋ ಅಂಚೆ-ಚೀಟಿಗಳಿಗೆ ಕನ್ನಡದ ಮೇರುನಟ ರಾಜ್ ಅವರನ್ನು ಮತ್ತು ಬೆಂಗಳೂರಲ್ಲಿರೋ ಭಾರತೀಯ ವಿಜ್ಞಾನ ಮಂದಿರಾನ ಆಯ್ಕೆ ಮಾಡಿದಾರೆ. ಆದರೆ ಭಾರತದ ಒಕ್ಕೂಟದಲ್ಲಿ ಕರ್ನಾಟಕಕ್ಕೆ ಈ ರೀತಿ ಎಷ್ಟು ಬಾರಿ ಅಂಚೆ-ಚೀಟಿಗಳ ಒಪ್ಪಿಗೆ ಸಿಕ್ಕಿದೆ? ಎಷ್ಟು ಅಂಚೆ-ಚೀಟಿಗಳು ಕರ್ನಾಟಕವನ್ನು ಪ್ರತಿನಿಧಿಸಿವೆ? 60 ವರ್ಷಗಳಲ್ಲಿ ಹೊರಬಂದಿರೋ 2000ಕ್ಕಿಂತ್ಲೂ ಹೆಚ್ಚು ಅಂಚೆ-ಚೀಟಿಗಳಲ್ಲಿ ಕರ್ನಾಟಕನ ಪ್ರತಿನಿಧಿಸೋ ಚೀಟಿಗಳು ಕೇವಲ 27!

ಅರ್ಹತೆ ಇದ್ರೂ ಹೋರಾಡ್ಬೇಕು. ಹೋರಾಡಿದ್ರೂ ಗೆರೆ ಇರ್ಬೇಕು!

ಭಾರತದ ಅಂಚೆ-ಚೀಟಿ ಇತಿಹಾಸ ದ ಮೇಲೊಂದು ಕಣ್ಣು ಹಾಯಿಸಿ ನೋಡಿದ್ರೆ, ಅದ್ರಲ್ಲೂ ಗಣ್ಯರ ಜ್ಞಾಪಕಾರ್ಥವಾಗಿ ಹೊರಡಿಸಿರೋ ಅಂಚೆ-ಚೀಟಿಗಳ ಲೆಕ್ಕ ನೋಡಿದ್ರೆ, ನಮ್ಮ ನಾಡಿನಲ್ಲಿ ಅಂಚೆ-ಚೀಟಿಗೆ ಲಾಯಕ್ಕಾದ ಉದಾಹರಣೆಯೇ ವಿರಳ ಅನ್ನೋ ಸಂದೇಶ ಕಾಣತ್ತೆ! ಬೇರೆ ರಾಜ್ಯಗಳೊಡನೆ ಹೋಲಿಸಿದ್ರೆ ನಮ್ಗೆ ಸಿಕ್ಕಿರೋದು ಬೆಣ್ಣೆ ಹೆಸ್ರಲ್ಲಿ ಸುಣ್ಣವೇ ಗುರು! ಅಲ್ಲಿ ಇಲ್ಲಿ, ಅದೂ ಕನ್ನಡ ಪರ ಸಂಘಟ್ನೆಗಳ ಒತ್ತಾಯಕ್ಕೆ ಒಂದೋ ಎರ್ಡೋ ಅಂಚೆ-ಚೀಟಿ ಹೊರಬಂದಿವೆ. ಅಂಚೆ-ಚೀಟಿಯ ವಸ್ತು ಆಯ್ಕೆ ನಿಯಮಗಳ ಪ್ರಕಾರ ಅರ್ಹರಾದ ಗಣ್ಯರೇ ಇರ್ಲಿ, ಅಥ್ವಾ ಒಳ್ಳೆಯ ಜಾಗ ಮತ್ತು ನೈಸರ್ಗಿಕ ಸಂಪತ್ತಾಗ್ಲಿ ಕರ್ನಾಟಕದಲ್ಲೇನು ಕಡಿಮೆ? ಇಷ್ಟೆಲ್ಲಾ ಇದ್ರೂ ಪ್ರತಿ-ವರ್ಷ ಅಂಚೆ-ಚೀಟಿ ಹೊರಡಿಸೋ ಮುನ್ನ ಕನ್ನಡಿಗರು ನಮ್ಮ ನಾಡಿನ ಚೀಟಿ ಬರ್ಲಿ... ಬರ್ಲಿ... ಅಂತ ಒತ್ತಾಯ ಮಾಡ್ಬೇಕಾಗಿದೆ. ಇದು ಕನ್ನಡ ನಾಡಿನ ಚುನಾಯಿತ ಪ್ರತಿನಿಧಿಗಳಲ್ಲಿ ಮತ್ತು ರಾಜ್ಯದ ಅಂಚೆ ಇಲಾಖೆ ಯ ಪ್ರಮುಖರಲ್ಲಿ ಕರ್ನಾಟಕದ ಹಿತಾಸಕ್ತಿಯ ಕೊರತೇನ ತೋರ್ಸೋದಲ್ದೆ ಅಂಚೆ-ಚೀಟಿ ವ್ಯವಸ್ಥೆಯ ನ್ಯೂನತೆಯನ್ನೂ ಬಿಂಬಿಸ್ತಾ ಇದೆ.

ಚೀಟಿ ಬರ್ಬೇಕು, ಆದ್ರೆ ಹೇಗಿರ್ಬೇಕು?

ರಾಜ್ ಮುಖ ಇರೋ ಅಂಚೆ-ಚೀಟಿ ಬರ್ತಿರೋದ್ರಿಂದ ನಮಗೆ ಖುಷಿಯಂತೂ ಆಗೋದೇ. ಆದ್ರೆ ಕರ್ನಾಟಕಕ್ಕೆ ಹೆಮ್ಮೆ ತರುವ ಈ ಅಂಚೆ-ಚೀಟಿ ಕೇವಲ ಜ್ಞಾಪಕಾರ್ಥಕದ ನಮೂನೆ ಚೀಟಿಯಾಗದೇ, ನಿಜವಾಗ್ಲೂ ಬಳಕೆಗೆ ಬರುವಂತ ಚೀಟಿ ಆಗ್ಬೇಕು. ಅಂಚೆ ಇಲಾಖೆಯ ನಿಯಮದ ಪ್ರಕಾರ ಜ್ಞಾಪಕಾರ್ಥಕ್ಕೆ ಅಂತ ಹೊರಬರೋ ಚೀಟಿಗಳು ದಿನ-ನಿತ್ಯದ ಉಪಯೋಗಕ್ಕೆ ಬರೋಲ್ವಂತೆ. ಅವು ಕೇವಲ ಸಂಗ್ರಹಕ್ಕೆ ಅಂತ್ಲೇ ಮುದ್ರಿತವಾಗತ್ವಂತೆ! ನಾಡಿನ ಗಣ್ಯರ ಮತ್ತು ನಾಡಿನ ಸಿರಿ-ಸಂಪತ್ತುಗಳ ಬಗ್ಗೆ ಜನರಿಗೆ ತಿಳ್ಸೋಕ್ಕೆ ಒಳ್ಳೇ ಮಾಧ್ಯಮ ಈ ಅಂಚೆ-ಚೀಟಿ ಆಗಿರೋವಾಗ ಚೀಟೀನ ಪುಸ್ತಕದೊಳ್ಗೇ ಇರಿಸೋ ಈ ನಿಯಮ ಯಾರಿಗ್ ಬೇಕು ಗುರು? ನಿಜ್ವಾಗ್ಲೂ ಡಾ. ರಾಜ್ ಅವರ ಹೆಸ್ರಲ್ಲಿ ಬರೋ ಅಂಚೆ-ಚೀಟಿ ಒಂದು ರುಪಾಯಿಂದ ಹಿಡಿದು ಅತಿ ಹೆಚ್ಚಿನ ಮೌಲ್ಯದ ಚೀಟಿವರೆಗೂ ಹೊರಬರ್ಬೇಕು, ದೇಶದೆಲ್ಲೆಡೆ ಸಿಗೋ ಹಾಗೂ ಆಗ್ಬೇಕು. ಹೀಗೆ ಮಾಡೋದ್ರಿಂದ ಬೇರೆ ರಾಜ್ಯದೋರೂ ಕರ್ನಾಟಕದ ಗಣ್ಯರ ಬಗ್ಗೆ ತಿಳ್ಕೊಳೋದು ಸಾಧ್ಯವಾದೀತು. ಆಗ್ಲೇ ಅಂಚೆ ಚೀಟಿಯ ನಿಜವಾದ ಲಾಭ - ನಾಡಿನ ಕನ್ನಡಿಯಾಗಲು ಸಾಧ್ಯ. ಅಲ್ದೇ ಹೋದ್ರೆ ಸುಮ್ನೆ ಟಸ್ಸೆ ಒತ್ತಿ ಕಳ್ಸಿದ್ರೆ ಅಂಚೆ ಏನು ಹೋಗಲ್ಲ ಅಂತದಾ ಗುರು? ಏನಂತ್ಯಾ?

(ಸ್ನೇಹಸೇತು: ಏನ್ಗುರು?)

ಕಡೆಗೂ ಡಾ.ರಾಜ್ ಅಂಚೆ ಚೀಟಿಗೆ ಠಸ್ಸೆ ಒತ್ತಿದ ಕೇಂದ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X