ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್.ಬಿ.ಎಂ.ನಲ್ಲೀಗ ಕನ್ನಡದ ಕಂಪು

By Staff
|
Google Oneindia Kannada News

State Bank of Mysore starts Kannada website1913ರಲ್ಲಿ ಬ್ಯಾಂಕ್ ಆಫ್ ಮೈಸೂರು ಎಂಬ ಹೆಸರಿನ ಬ್ಯಾಂಕೊಂದನ್ನು ಶುರು ಮಾಡುವ ಮೂಲಕ ವಿಶ್ವೇಶ್ವರಯ್ಯನೋರು ಕನ್ನಡಿಗರ ಆರ್ಥಿಕ ಏಳ್ಗೆಗಾಗಿ ಒಂದು ಉನ್ನತವಾದ ಕನಸನ್ನೇ ಕಂಡಿದ್ರು. ಇಂತಹ ಕನಸು ನನಸಾಗಿಸಲು ಇಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂದು ಹೆಸರು ಮಾಡಿರೋ ಬ್ಯಾಂಕ್ ಆಫ್ ಮೈಸೂರಿನೋರು ಒಂದು ಸೊಗಸಾದ ಕೆಲ್ಸ ಮಾಡಿದಾರೆ ಗುರು! ಎಸ್.ಬಿ.ಎಮ್ ಅಂತ್ಲೇ ಪ್ರಖ್ಯಾತ ಆಗಿರೋ ಈ ಬ್ಯಾಂಕು ಈಚೆಗೆ ತನ್ನ ಅಂತರ್ಜಾಲ ತಾಣದ ಕನ್ನಡ ಆವೃತ್ತಿ ಹೊರತಂದಿದೆ ಗುರು. ಆಹಾ! ಎಂತಾ ಸೊಗಸಾದ ತಾಣ ಅಂತೀರ? ಒಮ್ಮೆ ನೋಡಿ ಹೋಗಿ...

ಸಹಜ ನಡೆ

ಬ್ಯಾಂಕು ಇಲ್ಲೀದು, ಅವರ ಪ್ರಮುಖ ಶಾಖೆಗಳೂ ಕರ್ನಾಟಕದಲ್ಲೇ ಇರೋದು, ಹೆಚ್ಚಿನ ಖಾತೆದಾರ್ರೂ ಕನ್ನಡಿಗರೇ. ಹೀಗಿರುವಾಗ ಬ್ಯಾಂಕಿನ ಇಂತಹ ಅಂತರ್ಜಾಲ ತಾಣವೂ ಕನ್ನಡದಲ್ಲೇ ಇರಬೇಕಾಗಿರೋದು ಸಹಜ ಮತ್ತು ಸರಿ. ಬ್ಯಾಂಕಿನ ಈ ಕನ್ನಡದ ತಾಣದಿಂದ ಕೆಲವರಿಗೆ ಸೇವೆ ಪಡ್ಯೋದು ನಿರಾಳವಾಗಿದ್ರೆ, ಇನ್ನೂ ಕೆಲವರಿಗೆ ಸೇವೆ ಪಡ್ಯೋಕ್ಕೆ ಇಂಗ್ಲಿಷೋ ಹಿಂದಿಯೋ ಗೊತ್ತಿರಬೇಕಿಲ್ಲ ಅನ್ನೋದು ನಿಟ್ಟುಸಿರು ತಂದಿದೆ.ಒಟ್ಟಿನಲ್ಲಿ ಬ್ಯಾಂಕಿನ ಈ ಹೆಜ್ಜೆ ಕರ್ನಾಟಕದಲ್ಲಿ ಸಹಜವಾದ್ದೇ ಆಗಿದ್ದರೂ, ಇದೊಂದು ಸಕ್ಕತ್ ಒಳ್ಳೆ ಮೊದಲ ಹೆಜ್ಜೆಯೆಂದೇ ಹೇಳ್ಬೋದು. ಮತ್ತಿದು ಕರ್ನಾಟಕದಲ್ಲಿ ಬ್ಯಾಂಕಿನ ಕ್ಷೇತ್ರದಲ್ಲಿ ಒಂದು ಒಳ್ಳೇ ಬದಲಾವಣೆಗೆ ಬುನಾದಿಯಾಗಲಿದೆ. ಇವತ್ತೇನಾದ್ರು ವಿಶ್ವೇಶರಯ್ಯನೋರು ನಮ್ಮ ಮಧ್ಯ ಇದ್ದಿದ್ರೆ ಇದನ್ನ ನೋಡಿ ಅದೆಷ್ಟು ಆನಂದ ಪಡ್ತಿದ್ರೋ ಏನೊ ಗುರು!

ಒಳ್ಳೆಯ ಉದಾಹರಣೆ

ಮೈಸೂರು ಬ್ಯಾಂಕಿನ ಈ ಸಕ್ಕತ್ ಹೆಜ್ಜೆ ತನ್ನ ಅಂತರ್ಜಾಲ ತಾಣಕ್ಕೇ ಸೀಮಿತವಾಗದೆ, ಪ್ರತಿದಿನ ಗ್ರಾಹಕರು ಭೇಟಿ ನೀಡುವ ತನ್ನ ಸಾವಿರಾರು ಶಾಖೆಗಳಲ್ಲೂ ಕಾಣಬೇಕು. ಬ್ಯಾಂಕಿನೊಳ್ಗೆ ಹಾಕೋ ಸೂಚನೆಗಳಿರ್ಬೋದು, ಗ್ರಾಹಕರು ತುಂಬುವ ಚಲನ್-ಚೀಟಿಗಳಿರ್ಬೋದು, ಅರ್ಜಿಗಳಿರ್ಬೋದು, ತೊಂದ್ರೆಯಾದಲ್ಲಿ ಯಾರನ್ನ ಕಾಣ್ಬೇಕು ಅನ್ನೋದಿರ್ಬೋದು, ಬ್ಯಾಂಕಿನ ಎ.ಟಿ.ಎಮ್ ಅಲ್ಲಿನ ಸೇವೆ ಇರ್ಬೋದು, ಬ್ಯಾಂಕಿನ ಕಾಲ್ ಸೆಂಟರ್ ಇಂದ ಬರುವ ಕರೆಗಳಿರ್ಬೋದು - ಇವುಗಳಲ್ಲೆಲ್ಲಾ ವ್ಯವಹಾರದ ಭಾಷೆಯಾಗಿ ಕನ್ನಡವೇ ಬಳಕೆಯಾಗೋದು ಶುರುವಾಗ್ಬೇಕು. ಇದ್ರಿಂದ ಬ್ಯಾಂಕು ತನ್ನ ಖಾತೆದಾರರೊಡನೆ ಒಳ್ಳೆಯ ಸಂಬಂಧ ಬೆಳೆಸಲೂ ಸಾಧ್ಯವೆಂಬ ನಿಜ ತಿಳ್ಕೊಳೋ ಸಮಯ ಬಂದಿದೆ ಗುರು. ಮೈಸೂರು ಬ್ಯಾಂಕಿನ ಹಾಗೆಯೇ ಕರ್ನಾಟಕವಿಡೀ ಹರಡಿಕೊಂಡಿರೋ ಇನ್ನೂ ಹಲವಾರು ಬ್ಯಾಂಕುಗಳಿವೆ. ಇವುಗಳೂ ಇದೇ ರೀತಿ ತಮ್ಮ ಬ್ಯಾಂಕುಗಳಲ್ಲಿ ಸೇವೆಗೆ ಮುಖ್ಯ ಮಾಧ್ಯಮವಾಗಿ ಕನ್ನಡವನ್ನು ಬಳಸೊಕ್ಕೆ ಮುಂದಾಗಬೇಕು. ಇದರಿಂದ್ಲೇ ಮುಂದೆ ಹೋಗುತ್ತಾ ತಮಗೆ ಹೆಚ್ಚಿನ ಲಾಭ ಇದೆ ಎಂಬುದನ್ನ ಅವರು ತಿಳ್ಕೊಬೇಕು ಗುರು. ಹಾಗಾಗಿ ಕನ್ನಡ ನಾಡಲ್ಲಿ ಬ್ಯಾಂಕುಗಳ ಈ ದಿಕ್ಕಿನ ಹೆಜ್ಜೆ ನಿಜಕ್ಕೂ ಪ್ರಶಂಸಾರ್ಹ. ಈ ರೀತಿಯಾಗಿ ಕನ್ನಡ ನಾಡಿನೆಲ್ಲೆಡೆ ಗ್ರಾಹಕರಿಗೆ ಸಿಗುವ ಸೇವೆಯೆಲ್ಲಾ ಕನ್ನಡದಲ್ಲೇ ದೊರಕಿಸೋ ಮೂಲಕ ಕರ್ನಾಟಕದಲ್ಲಿ ಕನ್ನಡದಲ್ಲಿ ವ್ಯಾಪಾರ ಲಾಭಾದಾಯಕ ಎಂಬ ಸತ್ಯ ಹೊರಬರ್ಲಿ ಗುರು!

(ಸ್ನೇಹಸೇತು : ಏನ್‌ಗುರು?)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X