• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದ ಪೂಜಾರೀನೂ ಯಾಮಾರ್ಸಿರೋ ಹಿಂದಿ ಭೂತ!

By Staff
|

Learn Kannada or Quit Karnatakaನಿಮ್ಗೆಲ್ಲಾ ಎಂಕಂದೊಂದು ನಮಸ್ಕಾರ. ಬೆಂಗಳೂರಿನ ಜಯನಗರ ಕಾಂಪ್ಲೆಕ್ಸ್ ಅಲ್ಲಿ ಒಂದು ಅಂಗಡಿ ಐತೆ, ಮೊನ್ ಮೊನ್ನೆ ಆ ಅಂಗ್ಡಿ ಕಡೆಗ್ ಓಗಿದ್ದೆ. ಅದ್ರ ಎಸ್ರು ಸವಿತಾ ಸ್ಟೋರ್ಸು ಅಂತಾ. ಈ ಅಂಗಡೀಲಿ ಹುರಿದ್ ಜ್ವಾಳ, ಐಸ್ ಕ್ರೀಮು ಎಲ್ಲಾ ಮಾರ್ತಾರೆ. ಇವರ ಅಂಗ್ಡೀಲಿ ಮಾರೋ ತಿನಿಸುಗಳಿಗೆ ಸುತ್ತಾ ಮುತ್ತಾ ಇರೋ ಎಲ್ಲಾ ಅಂಗಡಿಗಳ ತಿನಿಸಿಗಿಂತಾ ಎಚ್ಚು ರುಚಿ. ಅದ್ಯಾಕಪ್ಪಾ ಅಂತೀರಾ? ಈ ಅಂಗಡೀ ತುಂಬಾ ನಮ್ ಕಣ್ಣು ತಂಪಾಗೋ ಅಂತಾ ಸೀನುಗಳೇ ತುಂಬವೆ. ಏ, ರಮ್ಯಾ ರಕ್ಸಿತಾ ಅಂತ ಬಾಯ್ ಬುಡಬೇಡಿ. ಅಂಗಡಿ ತುಂಬಾ ಕನ್ನಡಕ್ಕೆ ಮಾರುಕಟ್ಟೆಲಿ ಇರಬೇಕಾದ ಮಅತ್ವದ ಬಗ್ಗೆ ಬೋಲ್ಡು ಬರ್ದು ನೇತ್ ಆಕ್ಕೊಂಡವ್ರೆ. ಅಚ್ಚರಿ ಪಡಬ್ಯಾಡ್ರಿ. ಯಾಕಂದ್ರೆ ಈ ಅಂಗಡಿ ಯಜಮಾನ್ರು ಕನ್ನಡದ ಬೋ ದೊಡ್ ಅಬಿಮಾನಿ. ಆ ಅಂಗಡಿ ಅತ್ರ ಓಯ್ತಿದ್ ಅಂಗೇ ಮೈಯೆಲ್ಲಾ ಜುಮ್ ಅಂದುಬುಡ್ತದೆ. ಅಂತಾ ಪಸಂದಾಗ್ ಐತೆ ಅಲ್ಲಿ ಕನ್ನಡದ ಸ್ತಾನಮಾನ.

ಕನ್ನಡ ಕಲೀರಿ ಅಂತ ಹೊರಗಿನವ್ರಿಗೆ ಸಂದೇಸ

ಕನ್ನಡದೋರಿಗೆ "ಅಣ್ಣದೀರಾ, ಇದು ನಿಮ್ಮೂರು ಕಣ್ರಲಾ, ಇಲ್ಲಿ ಯಾಪಾರ ಮಾಡೋಕೆ ಗ್ರಾಅಕರಾಗಿ ಬರೋ ನೀವುಗಳೇ ಯಜಮಾನ್ರುಗಳು. ಇಲ್ಲಿ ಎಲ್ಲಾ ಸೇವೇನ ಕನ್ನಡದಲ್ಲಿ ಪಡ್ಕಳೋಕೆ ನಿಮ್ಗೆ ಹಕ್ಕೈತೆ" ಅನ್ನೋ ಸಂದೇಶ ಕೊಡ್ತಾ ಔರೆ. ಜೊತೆಗೆ ಕನ್ನಡಾನ ಮಾರುಕಟ್ಟೇಲಿ ಬಳ್ಸಕ್ಕೆ ಕೀಳರಿಮೆ ಪಟ್ಕೋಬೇಡಿ ಅಂತಲೂ ಸಂದೇಸ ಕೊಡ್ತಾ ಔರೆ. ಇಲ್ಲಿ ಒರಗಿಂದ ಬರೋ ಕನ್ನಡ ಓದಕ್ಕೆ ಬರ್ಯಕ್ಕೆ ಬರ್ದೆ ಇರೋರ್ಗೆ ಇಂಗ್ಲಿಸಾಗೆ ಎಚ್ಚರಿಕೆ ಕೊಡ್ತವ್ರೆ. ಕನ್ನಡ ನಾಡಲ್ಲಿ ಎಲ್ಡು ವರ್ಸಕ್ಕಿಂತ ಎಚ್ಗೆ ಕಾಲ ಇರೋರಾದ್ರೆ ಕನ್ನಡ ಕಲ್ತುಕೊಳ್ಳಿ ಅನ್ನೋ ಬೋಲ್ಡು ಹಾಕಿರೋದ್ರು ಜೊತೇಲೆ "ಕನ್ನಡ ಕಲಿ: ಇಲ್ಲಾ ತೊಲಗು" ಅಂತಲೂ ಆಕ್ಕೊಂಡವ್ರೆ. ಇವೆಲ್ಲಾ ನೋಡುದ್ರೆ ಆ ಯಜಮಾನರ ಕನ್ನಡ ಪ್ರೇಮಕ್ಕೆ ಒಂದ್ಸಲ ನಮಸ್ಕಾರ ಕಣ್ರಣ್ಣೋ ಅನ್ನದೇ ಇರಕ್ಕೆ ಮನ್ಸಾಗಲ್ಲ. ಒಟ್ನಲ್ಲಿ ಇವ್ರು ಕನ್ನಡದ ಪೂಜಾರಿಗಳು ಅನ್ನಬೌದು.

Another board urging the customers to learn hindiಇಂಥಾ ಅಬಿಮಾನೀನೂ ಇಂಗ್ ಯಾಮಾರ್ಸವ್ರೆ!

ಈ ಪಾಟಿ ಕನ್ನಡ ಅಬಿಮಾನ ಮಡಿಕ್ಕಂಡಿರೋ ಸವಿತಾ ಸ್ಟೊರ್ಸ್ ಅಂಗಡಿ ಯಜಮಾನ್ರುಗೂ ಹಿಂದಿ ಬಾಸೆಯೋರು ಯಾಮಾರ್ಸಿರೊ ಬಗೆ ನೋಡ್ರಣಾ. ಹಿಂದಿ ಭಾರತದ ರಾಷ್ಟ್ರಬಾಶೆ ಅನ್ನೋ ಸುಳ್ಳುನ್ನ ಇವ್ರ್ ತಲೆಗೂ ತುಂಬವ್ರೆ. ಅದ್ಕೆಯಾ ಇವ್ರಂಗಡೀಲಿ "ಹಿಂದಿ ಕಲೀರಿ, ಇಲ್ಲಾ ಭಾರತ ಬಿಟ್ಟು ತೊಲಗಿ" ಅನ್ನೋ ಬೋಲ್ಡು ನೇತಾಕವ್ರೆ. ಅದ್ಯಾಕ್ ಯಜಮಾನ್ರೆ ಇಂಗ್ ಆಕ್ಕೊಂಡಿದೀರೀ? ಅಂದ್ರೆ ಹೂ ಇಡೀ ಬಾರತಾನ ಒಂದು ಮಾಡಕ್ಕೆ ಇಂದಿ ಬೇಕು, ಅದು ಬಾರತದ ಲಿಂಕು ಅಂತಾ ಅಂದ್ರು. ನಾನೂನೂವೆ, ಅಲ್ಲಾ ಯಜಮಾನ್ರೆ, ನಾನು ಆಗಾಗ ತಿರುಕ್ಕೋಯಿಲ್ ಕಡೆ ಓಯ್ತಿರ್ತೀನಿ, ನಾನು ತಮಿಳು ಕಲ್ತುಕೊಂಡು ಮಾತಾಡಬೇಕಾ ಅತ್ವಾ ನಾನೂ, ತಿರುಕ್ಕೋಯಿಲ್ ಅಯ್ಯರ್ ಅವ್ರೂ ಇಂದೀ ಕಲ್ತುಕೊಂಡು ಮಾತಾಡ್ಬೇಕಾ ಅಂದ್ರೆ ಏನೂ ಉತ್ರ ಕೊಡ್ದೆ ಮುಂದಿನ್ ಗಿರಾಕಿ ಕಡೆ ಕಣ್ ಹಾಯಿಸ್ಬುಡೋಡಾ ಗುರುಗಳೇ?

(ಸ್ನೇಹಸೇತು : ಏನ್‌ಗುರು?)

ಪೂರಕ ಓದಿಗೆ

ಕನ್ನಡ ಮಾಧ್ಯಮ ಬರೀ ಹಳ್ಳೀ ಹೈಕ್ಳಿಗಷ್ಟೇನಾ?

ಕನ್ನಡದ ಕುಂಬಾರರಿಗೆ ವರುಷ ನ್ಯಾಯಾಲಯಕ್ಕೆ ನಿಮಿಷ

ಅನುದಾನ ರಹಿತ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಇಲ್ಲ

ಕನ್ನಡ ಮಾಧ್ಯಮ ಉತ್ತಮವೋ? ಇಂಗ್ಲಿಷ್ ಮಾಧ್ಯಮವೋ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more