ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಡಗಿ : ಕೆಂಪು ಮೆಣಸಿನಕಾಯಿಗೆ ರತ್ನಗಂಬಳಿ

By Super
|
Google Oneindia Kannada News

Red Chillies
ಉತ್ತರ ಕರ್ನಾಟಕದಲ್ಲಿ ನಮ್ಮ ರೈತರು ಬೆಳೆಯೋ ಮಸಾಲೆಗಳ ಬೆಳೆ ದೇಶದೋರ ಬಾಯಲ್ಲೆಲ್ಲಾ ನೀರೂಡಿಸ್ತಿದೆ! ಇವ್ಗಳ ಮಧ್ಯೆ ಬ್ಯಾಡಗಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬೆಳ್ಯೋ ಬ್ಯಾಡ್ಗಿ-ಮೆಣಸಿನಕಾಯಿಯ ಗುಣಮಟ್ಟ ಮತ್ತು ರಫ್ತಾಗ್ತಿರೋ ಪ್ರಮಾಣ ನೋಡಿ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದಲ್ಲಿ 10 ಕೋಟಿಯ ಮಸಾಲೆಗಳ-ಪಾರ್ಕ್ (spices-park) ಶುರು ಮಾಡಲು ಯೋಜನೆ ಹಾಕಿದೆ . ಇದು ನಮ್ಮ ನಾಡಿನ ರೈತರಿಗೆ ಸಕ್ಕತ್ ಸಂತೋಷದ ಸುದ್ಧಿ ಮತ್ತು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ವಿಷಯ ಗುರು! ಇದರ ಪೂರ್ತಿ ಲಾಭ ನಮ್ಮ ರೈತರಿಗೇ ಸಿಗ್ಬೇಕು ಗುರು!

ಅಂಕಿ-ಅಂಶಗಳು:
ಜಗತ್ತಿನ ಮೆಣಸಿನಕಾಯಿ ಬೆಳೆಯ ಶೇಕಡ 25ರಷ್ಟು ಬೆಳೆ ಭಾರತದಲ್ಲೇ ಬೆಳ್ಯತ್ತೆ, ಮತ್ತೆ ಇದ್ರಷ್ಟು ಇನ್ಯಾವ ದೇಶದಲ್ಲೂ ಬೆಳ್ಯೋಲ್ಲ. ಭಾರತದ ಒಟ್ಟು ಮೆಣಸಿನಕಾಯಿಯ ಕೊಯ್ಲಿನ ಶೇ.14ರಷ್ಟು ಭಾಗ ಕರ್ನಾಟಕದಲ್ಲೇ ಆಗ್ತಿದ್ದು ನಮ್ಮ ರಾಜ್ಯ ದೇಶದಲ್ಲೇ ಎರಡನೆಯ ಸ್ಥಾನದಲ್ಲಿದೆ. ಆದ್ರೆ ಬ್ಯಾಡಗಿ ಮೆಣಸಿಗೆ ಜಗತ್ತಿನಲ್ಲೇ ಅತಿ-ವಿಶಿಷ್ಟ ಬೇಡಿಕೆಯಿದ್ದು ಅದರ ಮಾರುಕಟ್ಟೆ ಅತಿ ಹೆಚ್ಚು ಲಾಭದಾಯಕ ಆಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಮೆಣಸುಗಳ ಪಟ್ಟಿಯಲ್ಲಿ ಬ್ಯಾಡಗಿ ದೊಡ್ಡ ಜಾಗ ಪಡೆದಿದೆ. ಯೂರೋಪಿನ ದೇಶಗಳಲ್ಲಿ ಖಾರ ತಿನ್ನುವುದು ಕಡಿಮೆಯಾದ್ರಿಂದ ಬ್ಯಾಡ್ಗಿ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಈ ಕಾರಣದಿಂದ ಬ್ಯಾಡ್ಗಿಗೆ ತುಂಬ ದೊಡ್ಡ ಮಾರುಕಟ್ಟೆ ಇದೆ. ಬ್ಯಾಡ್ಗಿಗೆ ಇದ್ರಲ್ಲಿರೋ ಲಾಭ ಅಪಾರ ಗುರು! ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಬ್ಯಾಡ್ಗಿ ಮೆಣಸಿಕಾಯಿ ವಿಶಿಷ್ಟ ಜಾಗ ಪಡೆದಿದೆ.

"ಪಾರ್ಕ್" ಸಂಸ್ಥೆಯಿಂದ ಅಪೇಕ್ಷೆ ಏನು?
ಈ ಮಸಾಲೆ-ಪಾರ್ಕ್ ಯೋಜನೆ ಕನ್ನಡ ನಾಡಿನ ಮೆಣ್ಸಿನ್ಕಾಯಿ ಬೆಳ್ಯೋ ರೈತರಿಗೇ ಲಾಭ ತರಬೇಕು. ಇಂತಹ ಕಾರ್ಯಕ್ರಮದಲ್ಲಿ ತಂತ್ರಜ್ಞಾನದ ದೃಷ್ಟಿಯಿಂದ ಕೆಲವು ಮುಖ್ಯ ಯೋಜನೆಗಳಾದ:

*ಮೆಣ್ಸಿನ್ಕಾಯಿ ಬೀಜದ ಸಂಸ್ಕರಣೆ
*ಮೆಣ್ಸಿನ್ಕಾಯಿಯ ಸಂಸ್ಕರಣೆ ಮತ್ತು ಬೇಗನೆ ಒಣಗಿಸುವಿಕೆ
*ಮೆಣ್ಸಿನ್ಕಾಯಿ ಬೆಳೆಗೆ ರೋಗ ನಿಯಂತ್ರಣಾ ವಿಧಾನಗಳು
*ಮೆಣ್ಸಿನ್ಕಾಯಿಯ ಗುಣಮಟ್ಟ ತಪಾಸಣೆ ಮತ್ತು ಹೆಚ್ಚಳ
*ಮೆಣ್ಸಿನ್ಕಾಯಿಯ ಹೆಚ್ಚು ಫಸ್ಲಿರೋ ಹೊಸ ತಳಿಗಳ ಕಂಡುಹಿಡಿಯುವಿಕೆ
*ಮೇಣ್ಸಿನ್ಕಾಯಿಯ ರಫ್ತು ಹೆಚ್ಚಳಕ್ಕೆ ಹೆಜ್ಜೆ
*ಮೆಣ್ಸಿನ್ಕಾಯಿಯ ಆಧುನಿಕ ಮಾರಾಟ-ಕವಚ ವಿನ್ಯಾಸ (packaging)
*ಮೆಣ್ಸಿನ್ಕಾಯಿಯ ಮಾರುಕಟ್ಟೆ ಹೆಚ್ಚಳಕ್ಕೆ ಬೇಕಾದ ಮಾರುಕಟ್ಟೆ ವಿಶ್ಲೇಷಣೆ ಗಳನ್ನು ಕೈಗೆತ್ತಿಕೊಂಡು ಈ ಸಂಸ್ಥೆ ಕನ್ನಡದ ರೈತರಿಗೆ ತಮ್ಮ ಫಸಲು ಮತ್ತು ಗಳಿಕೆಗಳನ್ನು ಉತ್ತಮಗೊಳಿಸಲು ನೆರವಾಗ್ಬೇಕು ಗುರು! ಜೊತೆಗೆ ಈ ಮೆಣ್ಸಿನ್ಕಾಯಿ ಬ್ಯಾಡ್ಗಿ ಪ್ರದೇಶಗಳಿಗೇ ಪ್ರತ್ಯೇಕವಾದ ಬೆಳೆ ಆಗಿದ್ದು, ಇಂತಹ ತಳಿ ಇನ್ನೆಲ್ಲೂ ಬೇರೆಡೆ ಬೆಳ್ಯೋಕ್ಕೆ ಸಾಧ್ಯವಲ್ಲದ ಕಾರಣ ಇದಕ್ಕೆ (ಪ್ರಾದೇಶಿಕ-ಸೂಚಕ) GI ಪಟ್ಟ ಕೊಡ್ಸಕ್ಕೆ ಈ ಸಂಸ್ಥೆ ಮುಂದಾಗ್ಬೇಕು. ಇದಕ್ಕೆ ಕೂಡಲೆ ಬೇಕಾದ ಹಜ್ಜೆ ತೊಗೊಳ್ಬೇಕು.

ಬೆಳೆಗಾರ್ರು ಏನ್ ಮಾಡ್ಬೇಕು?
ಭಾರತದಲ್ಲಿ ಬೆಳ್ಯೋ ಹಲವಾರು ಬಗೆಯ ಮೆಣ್ಸಿನ್ಕಾಯಿಗಳ ನಡುವೆ ನಮ್ಮ ಬ್ಯಾಡ್ಗಿ ಮೆಣ್ಸಿನ್ಕಾಯ್ಗೆ ಇಷ್ಟು ಬೆಲೆ ದೊರಕಿ ಅದರ ಮಾರುಕಟ್ಟೆ ಹೆಚ್ಚಿಸಲು ಒಂದು ಸಂಸ್ಥೆಯು ನಿರ್ಮಾಣ ಆಗ್ತಿರುವಾಗ ಕನ್ನಡದ ರೈತರು ಇದರ ಲಾಭ ತೊಗೊಳಕ್ಕೆ ಮುಂದಾಗ್ಬೇಕು ಗುರು. ಪ್ರತಿಯೊಬ್ಬ ರೈತನೂ ತನ್ನ ಬೆಳೆಯ ವಿಚಾರ ಈ ಸಂಸ್ಥೆಯವರೊಡನೆ ಹಂಚಿಕೊಂಡು ಅವರಿಂದ ಹೇಗೆ ಲಾಭ ಪಡೀಬೋದು ಅಂತ ತಿಳ್ಕೊಳ್ಬೇಕು. ಅವರು ಮಾಡುವ ಸಂಶೋಧನೆಗಳಿಗೆ ಸ್ಪಂದಿಸಿ ತಮ್ಮ ಲಾಭವನ್ನ ತಾವೇ ರೂಪಿಸಿಕೊಳ್ಬೇಕು ಗುರು!

ಒಟ್ಟಿನಲ್ಲಿ ಇಂದು ಜಗತ್ತಿನೆಲ್ಲೆಡೆ ಈ ಮೆಣ್ಸಿನ್ಕಾಯಿಗೆ ತುಂಬಾ ಬೇಡಿಕೆ ಇದೆ. ಭಾರತದಲ್ಲಿ ಇನ್ನೂ ಕರ್ನಾಟಕ ರಾಜ್ಯ ಎರಡನೇ ಜಾಗದಲ್ಲಿರೋದ್ರಿಂದ ಈ ಯೋಜನೆಯಿಂದ ನಾವು ಮೊದಲನೆ ಜಾಗ ಗಳಿಸುವಂತಾಗ್ಬೇಕು. ಜಗತ್ತಿನಲ್ಲಿ ನಮ್ಮ ಮೆಣ್ಸಿನ್ಕಾಯಿಗೆ ಅತಿ ಹೆಚ್ಚಿನ ಬೇಡಿಕೆ ಹುಟ್ಟಿಸಿ ಜಗತ್ತಿಗೇ ಬ್ಯಾಡ್ಗಿಯ ಹುಚ್ಚೆಬ್ಬಿಸ್ಬೇಕು ಗುರು! ಏನಂತೀರ?

(ಸ್ನೇಹ ಸೇತು: ಏನ್ಗುರು)

English summary
Hot and spicy news for our farmers as Central Government approved spice park in Northern karnataka with 10. crores estimated cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X