• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಮ್ಲಜನಕ, ಸಾರಜನಕ ಇರಲಿ.. ಅವು ಕನ್ನಡದಲ್ಲಿರಲಿ..

By Staff
|

ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಕನ್ನಡದಲ್ಲಿ ತರಕ್ಕೆ ಮೊದಲ ಹೆಜ್ಜೆ ಏನು? ಅದೊಂದು ಹೆಜ್ಜೆ ಗುರುತು ಸಿಕ್ಕಿಬಿಟ್ಟರೆ ಸಾಕು. ದಾರಿ, ಊರು, ಕೇರಿ ಎಲ್ಲ ತಂತಾನೆ ಸಿಕ್ಕತ್ತೆ.

__________________________________________________________________

Science Writing in Kannada ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ ಉದ್ಘಾಟಿಸುತ್ತ ಉನ್ನತ ಶಿಕ್ಷಣ ಮಂತ್ರಿ ಡಿ.ಎಚ್. ಶಂಕರಮೂರ್ತಿಗಳು, "ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಪುಸ್ತಕಗಳು ಬೇಕು" ಅಂತ ಹೇಳಿರೋದ್ನ ಮಂಗಳವಾರ ಕನ್ನಡ ಪ್ರಭ ವರದಿ ಮಾಡಿದೆ.

ಇದೇ ಶಂಕರಮೂರ್ತಿಗಳಿಗೆ ಕರ್ನಾಟಕ ಅಂದ್ರೇನು, ಕನ್ನಡ ಅಂದ್ರೇನು, ಭಾರತ ಅಂದ್ರೇನು ಅಂತ ಗೊತ್ತಿರಲಿ ಗೊತ್ತಿಲ್ಲದೇ ಇರಲಿ, ಹೇಗೋ ಏನೋ ಈ ದೊಡ್ಡ ದೊಡ್ಡ ಮಾತುಗಳ್ನ ಹೇಳಿ ಇವತ್ತು ಹೊಗಳಿಕೆಗೆ ಪಾತ್ರ ಅಂತೂ ಆಗಿದ್ದಾರೆ.

*ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂದಪಟ್ಟ ಪುಸ್ತಕಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಪ್ರಕಟವಾಗಬೇಕು.

*ವಿಜ್ಞಾನ ಕಲಿಯಲು ಕನ್ನಡ ಭಾಷೆ ಸೂಕ್ತವಲ್ಲ ಎಂಬ ಭಾವನೆಯನ್ನು ಜನರಿಂದ ಹೋಗಲಾಡಿಸಲು ತಜ್ಞರು ಶ್ರಮಿಸಬೇಕು.

*ಮಾತೃಭಾಷೆಯಲ್ಲಿ ಪಡೆದ ಜ್ಞಾನ ಹೃದಯಕ್ಕೆ ಹತ್ತಿರವಾಗುತ್ತದೆ ಮತ್ತು ಅದನ್ನು ಮತ್ತೊಬ್ಬರಿಗೆ ಪ್ರಸಾರ ಮಾಡಲು ಸುಲಭವಾಗುತ್ತದೆ.

ಆದರೆ ಈ ಮೇಲಿನ ವಿಷಯಗಳ್ನ ಕುವೆಂಪುವಿಂದ ಹಿಡಿದು ಐನ್‍ಸ್ಟೈನ್ ಅಂತಹ ಹಿರಿಯರಿಂದ-ತಜ್ಞರಿಂದ-ಬಲ್ಲವರಿಂದ ನಾವು ಕೇಳದೆ ಏನಿಲ್ಲ! ಮೂರ್ತಿಗಳು ಹೇಳಿರೋದ್ರಲ್ಲಿ ವಿಶೇಷ ಏನಿಲ್ಲ. ವಿಶೇಷ ಇರೋದು ಇದನ್ನ ಕಾರ್ಯರೂಪಕ್ಕೆ ಹೇಗೆ ತರೋದು ಅನ್ನೋದ್ರಲ್ಲಿ. ಬರೀ 3ಮುತ್ತು ಉದುರಿಸಿದರೆ ಸಾಲದು, ನಿಜವಾಗಿ ಈ ನಿಟ್ಟಲ್ಲಿ ಕೆಲಸ ಮಾಡ್ಬೇಕು ಗುರು!

ಏನು ಕೆಲಸ ಮಾಡಬೇಕು? ಸರ್ಕಾರ ಮತ್ತು ಸಾರ್ವಜನಿಕರು ಹೇಗೆ ಇದನ್ನ ಕಾರ್ಯಗತ ಮಾಡ್ಬೋದು ಅಂತ ನೋಡೋಣ.

ಸರ್ಕಾರ ಮಾಡಬೇಕಾದ ಕೆಲಸ :

1. ಸರ್ಕಾರ ಮುಖ್ಯವಾಗಿ ಮೂಲಭೂತ ವ್ಯವಸ್ಥೆ ಕಲ್ಪಿಸಿ ಕೊಡೋ ಅಂಗ ತಾನೆ? ಇವತ್ತಿನ ದಿನ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳು ಬರಬೇಕಾದ್ರೆ ಕೆಲವು ಮೂಲಭೂತ ಕೆಲಸಗಳು ಆಗಬೇಕಿವೆ ಗುರು. ಉದಾಹರಣೆಗೆ: ಹೊಸದಾಗಿ ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಬರಿಯೋರ್ನ ಗುರುತಿಸಿ, ಅವರಿಗೆ ಪ್ರೋತ್ಸಾಹ ಕೊಡಬೇಕು.

2. ಪ್ರೌಢಶಾಲಾ ಹಂತದ ವರೆಗೆ ಕನ್ನಡದ ಪಠ್ಯಗಳನ್ನು ತಿಳಿಗನ್ನಡದಲ್ಲಿ ಸರಳವಾಗಿರುವಂತೆ ಮಾಡಿ, ಹೆಚ್ಚು ಆಕರ್ಷಕವಾಗಿರುವಂತೆ, ಮನಸ್ಸಿಗೆ ನಾಟುವಂತೆ ಹೊಸತುಮಾಡಿಸಬೇಕು.

3. ಕನ್ನಡದ ಪಠ್ಯಗಳ್ನ ಇಂಗ್ಲೀಷಿಂದ ಅನುವಾದ ಮಾಡಿ ರಚಿಸುವ ಪದ್ದತಿ ಕಿತ್ತೊಗೀಬೇಕು, ಬದಲಾಗಿ ಕನ್ನಡದಲ್ಲೇ ನೇರವಾಗಿ ಚಿಂತನೆ ಮಾಡಿ ಬರೆದ ಪಠ್ಯಗಳು ಹೊರಬರಬೇಕು. ಪಠ್ಯಗಳನ್ನು ರೂಪಿಸಲು ಸಾರ್ವಜನಿಕರಿಂದ ಸಲಹೆ ತೊಗೊಳೋ ವ್ಯವಸ್ಥೆ ಹುಟ್ಟಿಹಾಕಬೇಕು.

4. ಶಿಕ್ಷಕರಿಗೆ ಕನ್ನಡದ ಮಕ್ಕಳಿಗೆ ಪಾಠ ಹೇಳಿಕೊಡುವುದು ಹೇಗೆ ಅನ್ನೋ ಬಗ್ಗೆ ತರಬೇತಿ ಕೊಡಬೇಕು.

5. ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಿ ಪ್ರೋತ್ಸಾಹ ಕೊಡಬೇಕು.

6. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ/ಶಿಕ್ಷಕರಿಂದ ನಡೆಯೋ ಸಂಶೋಧನೆಯ ಸಾರಾಂಶವನ್ನ ಕನ್ನಡದಲ್ಲಿ ಕಡ್ಡಾಯವಾಗಿ ಬರೆಸಲು/ಮೂಡಿಸಲು ಇಂತಿಷ್ಟು ಅಂಕ ಅಂತ ಮೀಸಲಿಡಬೇಕು.

ನಾವು-ನೀವು ಮಾಡಬೇಕಾದ ಕೆಲಸ :

1. ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳ ಬಗ್ಗೆ ಆಸಕ್ತಿ ತಾಳಬೇಕು, ತೊಗೊಂಡು ಓದಬೇಕು.

2. ಅಂತಹ ಪುಸ್ತಕಗಳ್ನ ಬರೆಯಕ್ಕೆ ಇಷ್ಟ ಪಡೋರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು.

3. ಕನ್ನಡ ಮಾಧ್ಯಮದಲ್ಲಿ ಓದ್ತಿರೋರನ್ನು ನೋಡಿ ಪ್ರೋತ್ಸಾಹ ಕೊಡಬೇಕು, ಗೇಲಿ ಮಾಡುವ ನಾಡದ್ರೋಹದ ಕೆಲಸ ಮಾಡಬಾರದು. ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಹೆಚ್ಚು ಸೇರಿಸಬೇಕು.

4. ನಮ್ಮ ನಮ್ಮ ಕೆಲಸಗಳಲ್ಲಿ ಆದಷ್ಟೂ ಕನ್ನಡದಲ್ಲೇ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿಸಿದ ಚಿಂತನೆ-ಆಲೋಚನೆಗಳನ್ನು ಮಾಡಬೇಕು, ಇತರ ಕನ್ನಡಿಗರೊಡನೆ ಕನ್ನಡದಲ್ಲೇ ಈ ಸಂಬಂಧದ ಚರ್ಚೆಗಳಿಗೆ ಕೂರಬೇಕು.

5. ಈಗಾಗಲೇ ನಮಗೆ ಗೊತ್ತಿರೋ ಜ್ಞಾನ-ವಿಜ್ಞಾನದ ವಿಚಾರಗಳನ್ನು ಕನ್ನಡವನ್ನ ಮರೀದೆ ಸದಾ ಬಳಸುತ್ತಾ ಇರಬೇಕು, ಬೇರೆಯವರಿಗೆ ಹೇಳಿಕೊಡುತ್ತಲೂ ಇರಬೇಕು.

6. ನಮ್ಮ ಬಳಿ ಇರೋ ಜ್ಞಾನವನ್ನು ಕನ್ನಡದಲ್ಲಿ ಬರೆದು, ಕಿರಿಯರಿರಗೆ ತಲುಪಿಸಬೇಕು.

7. ವಿಶ್ವವಿದ್ಯಾನಿಲಯಗಳನ್ನು,ಸರ್ಕಾರವನ್ನು ಕನ್ನಡದಲ್ಲಿ ವಿಜ್ಞಾನ/ತಂತ್ರಜ್ಞಾನಕ್ಕೆ ಸಂಬಂಧ ಪಟ್ಟಂತೆ ಕಲಿಕೆಗೆ ಅನುವು ಮಾಡಲು ಆಗ್ರಹಿಸುವುದು.

ಇದ್ಯಾವುದೂ ಮಾಡಕ್ಕೆ ಕಷ್ಟ ಇಲ್ಲ ಗುರು! ಮಾಡಬೇಕು, ಅಷ್ಟೆ. ಈ ಪ್ರತಿಯೊಂದು ಹೆಜ್ಜೆಯಿಂದಾನೂ ನಮ್ಮ ಭವ್ಯಕರ್ನಾಟಕದ ಕನಸು ಒಂದು ಗೇಣು ಹತ್ತಿರ ಆಗತ್ತೆ ಗುರು!

(ಸ್ನೇಹಸೇತು : ಏನ್ಗುರು ಕಾಫಿ ಆಯ್ತಾ? )

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more