• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಗ್ಲಿಷ್ ಬರದೇ ಇದ್ದವರು ಜಗದೀಶ್ ಚಂದ್ರ ಬೋಸ್ ಆಗಕ್ಕೆ ಆಗಲ್ವಾ?

By Staff
|

ಗಾಂಧಿ ತಾತನ ಮಾತುಗಳನ್ನು ಕೇಳಿಸಿಕೊಳ್ಲಿ.. ಅದು ನಿಮ್ಮ ಜವಾಬ್ದಾರಿ...ಗಾಂಧಿ ಜಯಂತಿ ದಿನ "The Selected Works of Gandhi, Vol 6, The Voice of Truth" ಅನ್ನೋ ಹೊತ್ತಗೆಯಿಂದ ಮೋಹನದಾಸ ಕರಮಚಂದ ಗಾಂಧಿಯವರು ತಾಯ್ನುಡಿಯಲ್ಲಿ ಶಿಕ್ಷಣದ ಬಗ್ಗೆ ಹೇಳಿರೋದನ್ನ ಮತ್ತೊಮ್ಮೆ ನೆನೆಸಿಕೊಂಡು ಅವರ ತತ್ವಗಳ್ನ ಕಾರ್ಯರೂಪಕ್ಕೆ ತರೋದಕ್ಕೆ ಕೈಹಾಕೋದೇ ಆ ಮಹಾನುಭಾವನಿಗೆ ತೋರಿಸಬೇಕಾದ ಗೌರವ. ಸುಮ್ನೆ "ರಘುಪತಿರಾಘವ ರಾಜಾ ರಾಂ" ಅಂತ ಹಾಡು ಹೇಳಿ ಚಪ್ಪಾಳೆ ತಟ್ಟಿ ಚಾಕ್ಲೇಟ್ ತಿಂದು ಮನೇಗೆ ಹೋಗಿ ಎಲ್ಲಾ ಮರ್ತುಬಿಡೋದಲ್ಲ!

ಮೇಲೆ ಹೇಳಿದ ಹೊತ್ತಗೆಯಿಂದ ಗಾಂಧಿಯವರ ಮಾತುಗಳನ್ನು ನಾವು ಸಂಗ್ರಹಿಸಿ, ಕನ್ನಡೀಕರಿಸಿದ್ದೇವೆ. ಓದುವ ಜವಾಬ್ದಾರಿ ನಿಮ್ಮ ಮೇಲಿದೆ...

ವಿದೇಶೀಯರಿಗೆ ಇಲ್ಲದಿರೋ ಕೀಳರಿಮೆ ನಮಗ್ಯಾಕೆ?

"ಇಂಗ್ಲೀಷ್ ಬಾರದ ಯಾರಿಗೂ ಒಬ್ಬ ಜಗದೀಶ್ ಚಂದ್ರ ಬೋಸ್ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದು ನಾವು ಅಂದುಕೊಂಡುಬಿಟ್ಟಿದ್ದೇವೆ. ಇದಕ್ಕಿಂತ ಹೆಚ್ಚಿನ ಮೂಢನಂಬಿಕೆ ಇರಲು ಸಾಧ್ಯವೆ ಎಂದು ನನಗನಿಸುತ್ತದೆ! ಈ ನಮ್ಮ ಅಸಹಾಯಕತೆಯ ಅನುಭವ ಯಾವ ಜಪಾನಿನವನಿಗೂ ಇಲ್ಲ..."

ಪ್ರತಿದಿನ ಹಿಡೀತಿರೋ ಗೆದ್ದಲಿಗಿಂತ ತಾತ್ಕಾಲಿಕ ಗೊಂದಲವೇ ವಾಸಿ

"ತಕ್ಷಣವೇ ಕಲಿಕೆ ಮಾಧ್ಯಮದ ವಿಷಯದಲ್ಲಿ ಎಚ್ಚರ ವಹಿಸಿ ಪ್ರಾದೇಶಿಕ ಭಾಷೆಗಳಿಗೆ ಕೊಡಬೇಕಾದ ಸ್ಥಾನವನ್ನು ಕೊಡಬೇಕು. ಪ್ರತಿದಿನವೂ ಅನ್ಯಾಯವಾಗಿ ಹಿಡಿಯುತ್ತಿರುವ ಗೆದ್ದಲನ್ನು ಹೋಗಲಾಡಿಸುವಲ್ಲಿ ತಾತ್ಕಾಲಿಕವಾಗಿ ಉನ್ನತಶಿಕ್ಷಣದಲ್ಲಿ ಗೊಂದಲದ ವಾತಾವರಣ ಹುಟ್ಟಿದರೂ ಅದೇ ನನಗೆ ಪ್ರಿಯವು."

ವಿದೇಶೀ ಭಾಷೆಯಲ್ಲಿ ಕಲಿಕೆ ಕೊಡೋದ್ರಿಂದ ಆಗೋ ಕೆಟ್ಟ ಪರಿಣಾಮಗಳು

"ಶಾಲೆಯೆನ್ನುವುದು ಎರಡನೆಯ ಮನೆಯಿದ್ದಂತಿರಬೇಕು. ಮಗು ಮನೆಯಲ್ಲಿ ಪಡೆಯುವ ಸಂಸ್ಕಾರಗಳಿಗೆ ಶಾಲಾ ಶಿಕ್ಷಣ ಪೂರಕವಾಗಿದ್ದರೇ ಉತ್ತಮ ಪರಿಣಾಮ ಸಾಧ್ಯ. ಕಲಿಕೆ ಬೇರೊಂದು ಭಾಷೆಯಲ್ಲಿದ್ದರೆ ಈ ಪೂರಕ ವಾತಾವರಣ ಇರುವುದಿಲ್ಲ. ಎಷ್ಟೇ ಒಳ್ಳೆಯ ಉದ್ದೇಶವಿದ್ದರೂ ಈ ಪೂರಕ ವಾತಾವರಣಕ್ಕೆ ಹುಳಿ ಹಿಂಡುವವರು ಜನರಿಗೆ ವೈರಿಗಳೇ. ಇಂತಹ ಶಿಕ್ಷಣ ವ್ಯವಸ್ಥೆಗೆ ಸ್ವೇಚ್ಛೆಯಿಂದ ತಲೆಬಾಗಿಸುವುದು ನಮ್ಮ ತಾಯಂದಿರಿಗೆ ತೋರಿಸಿದ ಅಗೌರವಕ್ಕೆ ಸಮಾನ. ಈ ಬೇರೆಭಾಷೆಯ ಕಲಿಕೆಯ ಕೆಟ್ಟ ಪರಿಣಾಮಗಳು ಇಷ್ಟೇ ಅಲ್ಲ, ಇನ್ನೂ ವ್ಯಾಪಕವಾಗಿವೆ. ಇದರಿಂದ ಜನಸಾಮಾನ್ಯರಿಗೂ ಕಲಿತವರಿಗೂ ನಡುವೆ ಒಂದು ದೊಡ್ಡ ಕಂದರವೇ ಹುಟ್ಟಿಕೊಂಡಿದೆ. ಜನರು ನಮ್ಮನ್ನು ಪರಕೀಯರೆಂದು ಭಾವಿಸುತ್ತಿದ್ದಾರೆ."

ಕೂಡಲೇ ಪರಿಹಾರ ಕೊಡಬೇಕು

"ವಿದೇಶೀ ಮಾಧ್ಯಮದಲ್ಲಿ ಕಲಿಕೆ ಎನ್ನುವುದು ನಮ್ಮ ಮಿದುಳುಗಳಿಗೆ ಆಯಾಸ ತರಿಸಿ, ನಮ್ಮ ಯುವಕರ ನರಗಳ ಮೇಲೆ ಬೇಡದ ಒತ್ತಡ ತಂದು, ಅವರನ್ನು ಕೇವಲ ಅನುಕರಣೆ ಮತ್ತು ಉರು-ಹೊಡೆಯುವಿಕೆಗಳಲ್ಲಿ ಪಳಗಿಸಿ, ನಿಜವಾದ ಚಿಂತನೆ ಮತ್ತು ಕೆಲಸಗಳಿಗೆ ಅಯೋಗ್ಯರನ್ನಾಗಿಸಿ, ತಮ್ಮ ಕಲಿಕೆಯನ್ನು ತಮ್ಮ ಮನೆಯವರ ಇಲ್ಲವೇ ಸಮಾಜದ ಉಪಯೋಗಕ್ಕಾಗಿ ಬಳಸುವ ಯೋಗ್ಯತೆಯನ್ನೇ ಕಿತ್ತುಕೊಂಡಿದೆ. ವಿದೇಶೀ ಮಾಧ್ಯಮವು ನಮ್ಮ ಯುವಕರನ್ನು ತಮ್ಮ ನಾಡಿನಲ್ಲೇ ವಿದೇಶೀಯರನ್ನಾಗಿಸಿದೆ. ಇವತ್ತಿನ ವ್ಯವಸ್ಥೆಯಲ್ಲಿರುವ ದೊಡ್ಡ ದುರಂತವಿದು. ನನ್ನ ಕೈಯಲ್ಲಿ ಅಧಿಕಾರವಿದ್ದಿದ್ದರೆ ಇವತ್ತೇ ನಮ್ಮ ಯುವಕ-ಯುವಕಿಯರ ಮೆಲೆ ಹೇರಲಾಗುತ್ತಿರುವ ವಿದೇಶೀ ಮಾಧ್ಯಮದ ಕಲಿಕೆಯನ್ನು ನಿಲ್ಲಿಸಿ ಎಲ್ಲಾ ಶಿಕ್ಷಕರು ಮತ್ತು ಪ್ರೊಫೆಸರುಗಳೂ ತಾಯ್ನುಡಿಯಲ್ಲಿ ಕಲಿಕೆಯನ್ನು ಕೊಡುವ ಹಾಗೆ ಮಾಡುತ್ತಿದ್ದೆ (ಅವರು ಕೆಲಸ ಕಳೆದುಕೊಳ್ಳುವ ಸಂದರ್ಭ ಬಂದರೂ ಸರಿ!). ಪಠ್ಯಪುಸ್ತಕಗಳಿಲ್ಲ ಎಂದು ಕೈಕಟ್ಟಿ ಕೂರುತ್ತಿರಲಿಲ್ಲ; ಅವುಗಳು ಈ ಬದಲಾವಣೆಯ ಹಿಂದೆಯೇ ಬಂದಾವು. ಈ ಅನಿಷ್ಟಕ್ಕೆ ಕೂಡಲೇ ಪರಿಹಾರವನ್ನು ಕೊಡಬೇಕಿದೆ."

ಓದಿದ್ದಾಯಿತು, ಇನ್ನು ಕಾರ್ಯರೂಪಕ್ಕೆ ತರೋ ಬಗ್ಗೆ ಯೋಚ್ನೆ ಮಾಡೋಣ ಗುರು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more