• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೂರ್ವವೋ ಪಶ್ಚಿಮವೋ ಆದರೆ ಬಾಳು ಮುಖ್ಯ

By Staff
|

M.R. Dattatri signs off to column Poorva-Paschimaಪ್ರಿಯ ಓದುಗ,

ಈ ಲೇಖನದೊಂದಿಗೆ ಪೂರ್ವ-ಪಶ್ಚಿಮ ಅಂಕಣ ಮುಕ್ತಾಯವಾಗುತ್ತಿದೆ. ಅಂಕಣ ಬರಹ ಚಿರಾಯು, ಅದನ್ನು ಎಷ್ಟು ದಿನ ತಿಂಗಳು ವರ್ಷಗಳಿಗೂ ವಿಸ್ತರಿಸಿಕೊಂಡು ಹೋಗಬಹುದು. ಬರೆಯಲು ವಿಷಯಗಳು ಒಂದೇ? ಎರಡೇ? ಬರೆಯುತ್ತ ಬರೆಯುತ್ತ ಬರಹಗಾರನಿಗೇ ಮತ್ತೇರಿಸುವ ಓದುತ್ತ ಓದುತ್ತ ಓದುಗನನ್ನೇ ಒಂದು ಲಯಕ್ಕೆ ಇಳಿಸುವ ಅಂಕಣ ಬರಹ ಒಬ್ಬ ಲೇಖಕನಾಗಿ ನನಗೆ ಬಹಳ ಸಂತೃಪ್ತಿಯನ್ನು ಕೊಟ್ಟಿದೆ. ಆದರೆ, ನಾನೀಗ ನನ್ನ ಲೇಖಕನ ಮಾರ್ಗವನ್ನು ಬದಲಿಸಬೇಕಾಗಿದೆ. ಅವನ ಬಗ್ಗೆ ಅವನು ಯೋಚಿಸಲು ಸ್ವಲ್ಪ ದಿನಗಳ ನಿಶ್ಯಬ್ದವನ್ನು ನೀಡಬೇಕಾಗಿದೆ. ಒಬ್ಬ ಲೇಖಕನಿಗೆ ನಿಯಮಿತವಾಗಿ ಬರೆಯುವ ದಿನಗಳು ಎಷ್ಟು ಮುಖ್ಯವೋ ನಿಯಮಿತವಾಗಿ ಬರೆಯದ ದಿನಗಳೂ ಅಷ್ಟೇ ಮುಖ್ಯ ಬೆಳವಣಿಗೆಗೆ.

ಸುಮಾರು ಒಂದೂವರೆ ವರ್ಷಗಳ ಹಿಂದೆ ಅಂಕಣ ಬರೆಯಿರಿ ಎಂದು ದಟ್ಸ್‌ಕನ್ನಡ.ಕಾಮ್‌ನ ಸಂಪಾದಕರಾದ ಶಾಮಸುಂದರ್‌ ಕೇಳಿದಾಗ ಅದೊಂದು ಹಾಸ್ಯವೆನ್ನುವಂತೆ ನಕ್ಕುಬಿಟ್ಟಿದ್ದೆ. ಅಮೆರಿಕಾದಲ್ಲಿ, ಅದರಲ್ಲೂ ವಿಶೇಷವಾಗಿ ಸಿಲಿಕಾನ್‌ ವ್ಯಾಲಿಯಲ್ಲಿ ಅರ್ಥವ್ಯವಸ್ಥೆ ಕುಸಿದು ಕಂಪನಿಗಳು ತಣ್ಣೀರಿನಲ್ಲಿ ನಿಂತ ಕಾಲ. ದಿನಕ್ಕೆ ಎರಡಂಕಿಯಲ್ಲಿ ಕಂಪನಿಗಳು ಮುಚ್ಚಿಕೊಳ್ಳುತ್ತ ಸಾವಿರ ಸಾವಿರ ಸಂಖ್ಯೆಗಳಲ್ಲಿ ಇಂಜಿನೆಯರ್‌ಗಳು ಕೆಲಸ ಕಳೆದುಕೊಂಡು ಮನೆ ಸೇರುತ್ತಿದ್ದ ಕಾಲ. ಇಂತಹ ಸನ್ನಿವೇಶದಲ್ಲಿ ಬರೆಯಲಾದರೂ ಪುರುಸೊತ್ತೆಲ್ಲಿದೆ? ಬರೆದದ್ದನ್ನು ಓದುವವರಾದರೂ ಯಾರು? ಆದರೆ, ನನ್ನೊಳಗಿನ ಬರಹಗಾರ ಮಾತ್ರ ಈ ಆಹ್ವಾನವನ್ನು ಬಹಳ ಉತ್ಸಾಹದಲ್ಲಿ ಒಪ್ಪಿದ. ಇಂದು, ಒಂದೂವರೆ ವರ್ಷಗಳ ನಂತರ ಈ ಅಂಕಣ ನನಗೆ ನನ್ನದೇ ಆದ ಓದುಗರನ್ನು ಕಟ್ಟಿಕೊಟ್ಟಿದೆ ಹಾಗು ನನ್ನ ಮತ್ತು ನಿಮ್ಮ ನಡುವೆ ಒಂದು ಬಾಂಧವ್ಯವನ್ನು ಹೆಣೆದಿದೆ ಎಂದು ನೆನಸಿಕೊಂಡರೆ ಬಹಳ ಹೆಮ್ಮೆ ಎನಿಸುತ್ತದೆ. ಸುಮಾರು ನಾನೂರಕ್ಕೂ ಹೆಚ್ಚು ಈ-ಮೈಲ್‌ಗಳು ಬರಹಗಳನ್ನು ಮೆಚ್ಚಿ, ಬೆನ್ನುತಟ್ಟಿ, ಸ್ವಂತ ಅಭಿಪ್ರಾಯಗಳನ್ನು ತಿಳಿಸಿ, ಓರೆ ಕೋರೆಗಳನ್ನು ತಿದ್ದಿ ನಿಮ್ಮಿಂದ ನನಗೆ ತಲುಪಿವೆ. ‘ನಿನ್ನ ಲೇಖನವನ್ನು ಓದಿದೆ’ ಎಂದು ಬರುವ ಅಮೃತವಾಕ್ಯಕ್ಕಿಂತಾ ಗಣನೀಯವಾದದ್ದು ಖುಷಿಕೊಡುವಂತದ್ದು ಒಬ್ಬ ಲೇಖಕನಿಗೆ ಮತ್ತೇನಿದೆ?

ಈ ಅಂಕಣ ಬರಹದ ಜೊತೆಜೊತೆಗೆ ನಾನು ಕಲಿತದ್ದು ಬಹಳ. ಯಾವುದೂ ತೀರಾ ಹೊಸದಲ್ಲ , ಆದರೆ ಯಾವುದೂ ಈ ಪರಿಯಲ್ಲಿ ಅಂತರಂಗವನ್ನು ಪ್ರವೇಶಿಸಿರಲಿಲ್ಲ. ಪೂರ್ವವೋ ಪಶ್ಚಿಮವೋ ಆದರೆ ಬಾಳು ಮುಖ್ಯವೆಂದಾಗ ನನಗೆ ಇವತ್ತಿನದು ಹಿಂದೆಂದಿಗಿಂತಲೂ ವಿಶೇಷವಾಗಿ ಕಾಣುತ್ತದೆ, ಅಂಗೈನ ಮೇಲಿಟ್ಟುಕೊಂಡ ಮುತ್ತಿನಂತೆ ಹೊಳೆಯುತ್ತದೆ.

ನಿಮ್ಮೊಂದಿಗೆ ಮುಖಾಮುಖಿಯಾಗುವ ಈ ಅವಕಾಶವನ್ನು ಒದಗಿಸಿಕೊಟ್ಟ ಶಾಮಸುಂದರ್‌ ಮತ್ತು ದಟ್ಸ್‌ಕನ್ನಡ ತಂಡಕ್ಕೆ ಕೃತಜ್ಞತೆಗಳನ್ನು ಸೂಚಿಸುತ್ತ ನಿಮಗೆಲ್ಲರಿಗೂ ಹೊಸವರ್ಷದ ಶುಭಗಳನ್ನು ಹಾರೈಸುತ್ತಾ ಈ ಅಂಕಣವನ್ನು ಮುಗಿಸುತ್ತಿದ್ದೇನೆ.

ಸ್ನೇಹದೊಂದಿಗೆ,

- ಎಂ.ಆರ್‌. ದತ್ತಾತ್ರಿ, ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more