• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೊತ್ತಾಗದಂತೆ ಸಿಡಿಯುವುದು ಬಾಂಬ್ ಹಾಗೂ ನಗೆಬಾಂಬ್

By Staff
|

(ಮುಂದುವರಿದಿದೆ)

ಬೆಂಗಳೂರಿಗೆ ಈಗಲೂ ಬೆಂದಕಾಳೂರು ಅಂತ ಕರೆದ್ರೆ ಚೆಂದ. ಯಾಕೆಂದರೆ ಈ ಊರು ಎಲ್ಲರನ್ನೂ ಈಗಲೂ ಒಂದರ್ಥದಲ್ಲಿ ಬೇಯಿಸುತ್ತಲೇ ಇರುತ್ತೆ ಅಲ್ವ, ಅದಕ್ಕೆ!

***

ಪಿ.ಎಂ.= ಪ್ರೈಮ್ ಮಿನಿಸ್ಟರ್ ಅನ್ನುವುದಾದರೆ ಸಿ.ಎಂ.= ಕ್ರೈಂ ಮಿನಿಸ್ಟರ್ ಅನ್ನಬೇಕಾ?

***

ನಗರದಲ್ಲಿ ಹೆಂಗಸರು ಮನೆಯಲ್ಲಿ ನಾಯಿ ಸಾಕಲು ಇಷ್ಟಪಡುವುದಿಲ್ಲ. ಹಳಸಿದ ತಿಂಡಿ ತಿನ್ನಲು ಹೇಗಿದ್ದರೂ ಗಂಡ ಇರುವುದರಿಂದ.

***

ಹೀಗೊಂದು ಜಾಹೀರಾತು: ನಮ್ಮ ಅಂಗಡಿಯ ಸೇಲ್ಸ್ ಕೌಂಟರ್‌ನಲ್ಲಿ ಕೆಲಸ ಮಾಡಲು ಜನ ಬೇಕಾಗಿದ್ದಾರೆ. ಸಕ್ಕರೆ ಕಾಯಿಲೆ ಇರುವವರಿಗೆ ಆದ್ಯತೆ ನೀಡಲಾಗುವುದು ಸಂಪರ್ಕಿಸಿ: ಮ್ಯಾನೇಜರ್, ರಾಘವೇಂದ್ರ ಸ್ವೀಟ್ ಮಾರ್ಟ್".

***

ಆ ಹೆಂಗಸು ಆಗಾಗ ನಿಮ್ಮ ಹೋಟೆಲ್‌ಗೆ ಬರುತ್ತಾಳಲ್ಲ, ಕಾರಣ' ಗಿರಾಕಿಯೊಬ್ಬ ಹೋಟೆಲ್ ಮ್ಯಾನೇಜರ್‌ನನ್ನು ಕೇಳಿದ. ಹೌದು ಸಾರ್, ಆಕೆ ಪ್ರತಿ ಹನಿಮೂನ್‌ಗೂ ನಮ್ಮ ಹೋಟೆಲ್‌ಗೇ ಬರುತ್ತಾಳೆ' ಎಂದ ಮ್ಯಾನೇಜರ್.

***

ಸದಾ ಒಂದಲ್ಲ ಒಂದು ವಾದದಲ್ಲಿ ತೊಡಗಿರುವ ಸಾಹಿತಿಗೆ ಸಂ' ವಾದ'ನಾ ಶೀಲ ಸಾಹಿತಿ ಅನ್ನಬಹುದು!

***

ದೇವರು ಮೊದಲು ಸಿಗರೇಟು ಕಂಡುಹಿಡಿದ. ನಂತರವಷ್ಟೇ ಅವುಗಳಿಗೆ ಒಂದು ಗತಿ ಕಾಣಿಸಲು ತುಟಿಗಳನ್ನು ಸೃಷ್ಟಿಸಿದ.

***

ಮೂರು ಜಡೆ ಹಾಕಲು ಸಾಧ್ಯವಿಲ್ಲ ನೋಡಿ, ಅದೊಂದೇ ಕಾರಣದಿಂದ ಹುಡುಗಿಯರು ಎರಡು ಜಡೆ ಹಾಕ್ಕೋತಾರೆ!

***

ಹೆಂಡತಿ ಇರುವ ಕಡೆಯೇ ಕೆಲಸ ಮಾಡಿದ್ರೆ ಬ್ಯಾಡಾ ಫಜೀತಿ. ಬಾಸ್‌ಗಿಂತ ಹೆಂಡ್ತಿ ಕೈಲೇ ವಿಪರೀತ ಬೈಸಿಕೊಳ್ಳಬೇಕಾಗುತ್ತೆ!

***

ಡಾ. ಏಕಾಂತ್ ಅವರ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿತ್ತು. ಒಂದು ದಿನ ಒಬ್ಬ ರೋಗಿ ಬಂದು ಹೊಟ್ಟೆನೋವು ಎಂದ. ಅದಕ್ಕೆ ಡಾಕ್ಟರ್‌ರು ಆಪರೇಷನ್ ಮಾಡಬೇಕಾಗುತ್ತದೆ, ಇಪ್ಪತ್ತು ಸಾವಿರ ರೂ. ಖರ್ಚಾಗುತ್ತದೆ ಎಂದರು. ರೋಗಿಗೆ ಗಾಬರಿಯಾಯಿತು. ಹೊಟ್ಟೆನೋವಿಗೆ ಇಪ್ಪತ್ತು ಸಾವಿರ ರೂ. ತೆರೋದುಂಟಾ ಎಂದು ರಾಗ ಎಳೆದ. ಅದಕ್ಕೆ ಡಾಕ್ಟರ್‌ರು ಹೇಳಿದರು- ಈಗ ಐದು ಸಾವಿರ ರೂ. ಕೊಡಿ. ಉಳಿದಿದ್ದನ್ನು ಪ್ರತಿ ತಿಂಗಳು ಸಾವಿರ ರೂ.ನಂತೆ ಕೊಡ್ತಾ ಹೋಗಿ."

ಏನ್ ಡಾಕ್ಟ್ರೇ, ಕಾರನ್ನು ಕಂತಿನಲ್ಲಿ ತೆಗೆದುಕೊಂಡ ಹಾಗೆ ಆಯ್ತಲ್ಲಾ" ಎಂದ ರೋಗಿ. ಡಾಕ್ಟರ್‌ರು ಹೇಳಿದರು- ನಾನು ಕಾರನ್ನು ಖರೀದಿಸಬೇಕೆಂದಿದ್ದೆ ಎಂಬುದು ನಿನಗೆ ಹೇಗೆ ತಿಳಿಯಿತು?"

***

ಮದುವೆಯಾಗಿ ಒಂದೆರಡು ತಿಂಗಳ ನಂತರ ಗಂಡ ಹೆಂಡತಿಗೆ ಹೇಳಿದ- ನಾನು ಮನೆಯ ಯಜಮಾನ ಎಂಬುದನ್ನು ಮರೆಯಬೇಡ. ನೀನು ಯಾವುದಕ್ಕೂ ನನ್ನನ್ನು ಪ್ರಶ್ನಿಸಬಾರದು. ನಾನು ಯಾವಾಗ ಬೇಕಾದರೂ ಬರುತ್ತೇನೆ, ಹೋಗುತ್ತೇನೆ. ಬಾರ್, ಕ್ಲಬ್, ಡಿಸ್ಕೋಗೆ ಹೋಗುತ್ತೇನೆ. ನೀನು ಇದಕ್ಕೆಲ್ಲ ಆಕ್ಷೇಪ ಮಾಡಬಾರದು."

ಗಂಡನ ಮಾತಿಗೆ ಹೆಂಡತಿ ಶಾಂತವಾಗಿ ನುಡಿದಳು- ಆಯಿತು. ನಾನು ಈ ವಿಷಯಗಳಿಗೆ ಜಗಳ ತೆಗೆಯುವುದಿಲ್ಲ. ಆದರೆ ಒಂದು ವಿಷಯ ಮರೆಯಬೇಡಿ. ಈ ಮನೆಯಲ್ಲಿ ರಾತ್ರಿ ಎಂಟಕ್ಕೆ ಊಟ. ಒಂಬತ್ತಕ್ಕೆ ಪ್ರೇಮ. ನೀವು ಬನ್ನಿ, ಬಿಡಿ."

***

ಈ ಜನ್ಮದಲ್ಲಿ ಸಂಬಂಧಿಕರನ್ನು ಪ್ರೀತಿಸುವುದು, ಖುಷಿ ಪಡಿಸುವುದು ಕಷ್ಟವೆಂದು ಅನಿಸಿಬಿಟ್ಟಿದೆ" ಎಂದು ಒಬ್ಬಾತ ಹೇಳಿದ.

ಕಷ್ಟವಲ್ಲ ಮಾರಾಯ. ಅದು ಅಸಾಧ್ಯ" ಎಂದ ಮತ್ತೊಬ್ಬ.

***

ತೊಂಬತ್ತು ವಯಸ್ಸಿನ ಇಬ್ಬರು ವೃದ್ಧರು ತಮ್ಮ ಜೀವನದಲ್ಲಾದ ಅತ್ಯಂತ ಮುಜುಗರದ ಸನ್ನಿವೇಶದ ಬಗ್ಗೆ ಮಾತಾಡುತ್ತಿದ್ದರು. ಒಬ್ಬಾತ ಹೇಳಿದ- ನನಗಾದ ಅತಿ ಮುಜುಗರದ ಸನ್ನಿವೇಶವೆಂದರೆ, ಯುವತಿಯೊಬ್ಬಳು ಸ್ನಾನ ಮಾಡುವಾಗ ಬಾಗಿಲ ಸಂದಿಯಲ್ಲಿ ನೋಡುವಾಗ ಸಿಕ್ಕಿಬಿದ್ದಿದ್ದು."

ಮತ್ತೊಬ್ಬಾತ ಹೇಳಿದ- ಅದರಲ್ಲೇನು ವಿಶೇಷ ಹೇಳು. ಎಲ್ಲರಿಗೂ ಅಂಥ ಅನುಭವವಾಗುತ್ತದೆ ಅವರವರ ಯೌವನದಲ್ಲಿ."

ಮೊದಲನೆಯವ ಹೇಳಿದ- ಈ ಪ್ರಸಂಗವಾದದ್ದು ನಿನ್ನೆ ಮಾರಾಯ."

***

ಪ್ರೇಯಸಿಯ ಮುಂದೆ ಪ್ರಿಯಕರ ಜೋರಾಗಿ ಹೇಳುತ್ತಿದ್ದ- ಪ್ರಿಯೆ, ನಿನಗಾಗಿ ನಾನು ಏನು ಬೇಕಾದರೂ ಮಾಡಬಲ್ಲೆ. ನಯಾಗಾರ ಜಲಪಾತದಿಂದ ಧುಮುಕಬಲ್ಲೆ. ಐಫಲ್ ಟವರ್‌ನಿಂದ ಜಿಗಿಯಬಲ್ಲೆ. ಹೇಳು ನಿನಗಾಗಿ ಏನು ಬೇಕಾದರೂ ಮಾಡುವೆ."

ಪ್ರೇಯಸಿ ಹೇಳಿದಳು- ಹಾಗೇನೂ ಮಾಡಬೇಡ. ನಾಳೆ ಸಾಯಂಕಾಲ ಆರಕ್ಕೆ ಬರ್ತೀಯಲ್ಲ?

ಪ್ರಿಯಕರ ಹೇಳಿದ- ನಾಳೆ ಸಾಯಂಕಾಲ ಮಳೆ ಬರದಿದ್ದರೆ ಖಂಡಿತ ಬರುತ್ತೇನೆ."

***

ರೈಲಿನಲ್ಲಿ ಕುಳಿತ ವ್ಯಕ್ತಿ ತನ್ನ ಎದುರಿಗಿದ್ದವನನ್ನುದ್ದೇಶಿಸಿ, ಸಾರ್ ಟೈಮ್ ಎಷ್ಟು?' ಎಂದು ಕೇಳಿದ. ಆತ ಏನೂ ಮಾತಾಡಲಿಲ್ಲ. ಪುನಃ ಕೇಳಿದ. ಆದರೂ ಉತ್ತರ ಬರಲಿಲ್ಲ. ನಾಲ್ಕೈದು ಸಲ ಕೇಳಿದ. ಆಗಲೂ ಮೌನವೇ ಉತ್ತರ. ಕೊನೆಗೆ ಮೈಮುಟ್ಟಿ ಕೇಳಿದಾಗ, ಟೈಮ್ ಹೇಳಿದ. ಟೈಮ್ ಕೇಳಿದ ವ್ಯಕ್ತಿಗೆ ಅಚ್ಚರಿಯಾಯಿತು.

ಅದ್ಸರಿ, ಯಾಕೆ ಇಷ್ಟು ಸಮಯ ತಗೊಂಡಿರಿ, ಟೈಮ್ ಹೇಳಲು" ಎಂದು ಕೇಳಿದ್ದಕ್ಕೆ ಸಹಪ್ರಯಾಣಿಕ ಹೇಳಿದ- ನಿನಗೆ ಟೈಮ್ ಹೇಳಿದರೆ ಮಾತು ಬೆಳೆಯುತ್ತದೆ. ನಾವಿಬ್ಬರೂ ಸ್ನೇಹಿತರಾಗುತ್ತೇವೆ. ನಾನು ನಿನ್ನನ್ನು ಮನೆಗೆ ಕರೆಯಬೇಕಾಗುತ್ತದೆ. ನೀನು ನನ್ನ ಮಗಳನ್ನು ನೋಡುತ್ತೀಯಾ. ನೀನು ಅವಳನ್ನು ಲವ್ ಮಾಡುತ್ತೀಯಾ. ಮದುವೆಯಾಗಲು ನಿರ್ಧರಿಸುತ್ತೀರಿ. ನಿಜ ಹೇಳಬೇಕೆಂದ್ರೆ ಒಂದು ಕೈಗಡಿಯಾರ ಕಟ್ಟಲು ಯೋಗ್ಯತೆ ಇಲ್ಲದವ ನನ್ನ ಅಳಿಯನಾಗುವುದು ನನಗೆ ಇಷ್ಟವಿಲ್ಲ."

(ಸ್ನೇಹ ಸೇತು : ವಿಜಯ ಕರ್ನಾಟಕ)

ನಗೆಬಾಂಬುಗಳ ಮೊದಲ ಪುಟ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more