ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊತ್ತಾಗದಂತೆ ಸಿಡಿಯುವುದು ಬಾಂಬ್ ಹಾಗೂ ನಗೆಬಾಂಬ್

By Staff
|
Google Oneindia Kannada News

ನನ್ನ ಸ್ನೇಹಿತ ಇದ್ದಕ್ಕಿದ್ದಂತೆ ಜೋರಾಗಿ ನಗಲು ಶುರು ಮಾಡಿದ. "ಪ್ರೇರಣೆಯಿಲ್ಲದೆ ಯಾಕೋ ನಗ್ತಾಯಿರೋದು?" ಅಂತ ಕೇಳಿದೆ. ಅವ, "ನಿನ್ನೆ ಜೋಕ್ ಹೇಳಿದ್ಯಲ್ಲ, ಅದನ್ನ ನೆನೆಸಿಕೊಂಡು ನಗು ಬಂತು" ಅಂದ. ಹೋಗ್ಲಿ ನಗೋದಕ್ಕೂ (ಅಷ್ಟೊಂದು) ಟೈಮ್ ಬೇಕಾ? ಏಪ್ರಿಲ್ 1ರ ನೆಪದಲ್ಲಿ ನೂರೆಂಟು ನಗೆಬಾಂಬುಗಳು. ನಗೋದಕ್ಕೆ ಏಪ್ರಿಲ್ ಒಂದೇ ಆಗಬೇಕೆಂದಿಲ್ಲ. ಈಗಲೇ ನಗಿ. ಗುಳಗುಳನೇ ಒಳಒಳಗೇ ನಗಬೇಡಿ, ಮನಬಿಚ್ಚಿ ನಗಿ. ನಿಮ್ಮಲ್ಲೂ ಬಾಂಬ್‌ಗಳಿದ್ದರೆ ನಮಗೆ ಕಳಿಸಿ, ಕ್ಷಮಿಸಿ ನಗೆಬಾಂಬುಗಳು!

ವಿಶ್ವೇಶ್ವರ ಭಟ್

ಇನ್ನು ನಾಲ್ಕು ದಿನ ಆಚೆ ಬಿದ್ದರೆ ಏಪ್ರಿಲ್ ಒಂದು. ಅದು ನಮ್ಮೆಲ್ಲರ ದಿನ. ಒಂದಲ್ಲ ಒಂದು ರೀತಿಯಲ್ಲಿ ಮೂರ್ಖರಾಗುವ ನಾವು, ಒಂದು ದಿನವಾದರೂ ಅದಕ್ಕೆಂದೇ ಮೀಸಲಿಡದಿದ್ದರೆ ಹೇಗೆ? ಮೂರ್ಖರಾಗುವುದು ತಪ್ಪಲ್ಲ. ಮೂರ್ಖರಾಗುವುದರಿಂದ ತಪ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಆದರೆ ಕೆಲವರು ಅದನ್ನೇ ಅಭ್ಯಾಸ ಅಥವಾ ಹವ್ಯಾಸ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಅದೇ ನಮ್ಮ ಕಾಪಿರೈಟ್ ಹಾಗೂ ಬರ್ಥ್‌ರೈಟ್ ಎಂಬಂತೆ ವರ್ತಿಸುತ್ತಾರೆ.

ಒಬ್ಬನ ಮೂರ್ಖತನ ಮತ್ತೊಬ್ಬನಿಗೆ ಹಾಸ್ಯ ಎಂಬ ಮಾತಿದೆ. ಅದಕ್ಕಾಗಿ ಏಪ್ರಿಲ್ ಒಂದನ್ನು ಹಾಸ್ಯದಿನ'ವಾಗಿಯೂ ಆಚರಿಸುವುದುಂಟು. ನಮ್ಮ ಸುತ್ತಮುತ್ತ ಎಷ್ಟೊಂದು ಹಾಸ್ಯ ಪ್ರಸಂಗಗಳು ನಿತ್ಯ ನಡೆಯುತ್ತಿರುತ್ತವೆ. ಆದರೆ ಅನೇಕರು ಅವನ್ನು ಗಮನಿಸದೇ ಮೂರ್ಖರಾಗುವುದುಂಟು. ಜೀವನದಲ್ಲಿ ಹಾಸ್ಯವನ್ನು ಸೃಷ್ಟಿಸಿಕೊಳ್ಳದವರು ಮೂರ್ಖರೇ. ಹಾಗೇ ಹಾಸ್ಯವನ್ನು ಗುರುತಿಸದವರೂ. ನಮಗೆ ಗೊತ್ತಾಗದಂತೆ ಸಿಡಿಯುವುದೆಂದರೆ ಬಾಂಬ್ ಒಂದೇ ಅಲ್ಲ. ಅದು ನಗೆ ಬಾಂಬ್ ಕೂಡ ಆಗಿರಬಹುದು.

ಒಮ್ಮೆ ಮಾಸ್ಕೋದ ಉದ್ಯಾನದಲ್ಲಿ ಹೀಬ್ರೂ ವ್ಯಾಕರಣ ಪುಸ್ತಕವನ್ನು ಯಹೂದಿ ಓದುತ್ತಿದ್ದ. ಅದನ್ನು ಕಂಡ ಕೆಜಿಬಿ ಏಜೆಂಟ್ ಹೀಬ್ರೂವನ್ನು ಯಾಕೆ ಕಲಿಯುತ್ತಿದ್ದೀಯಾ? ನಿನಗೆ ಇಸ್ರೇಲ್‌ಗೆ ಹೋಗಲು ಬಿಡೊಲ್ಲ. ಗೊತ್ತಿರಲಿ" ಎಂದು ಗದರಿದ. ಅದಕ್ಕೆ ಯಹೂದಿ ಹೇಳಿದ- ಸ್ವರ್ಗದಲ್ಲಿ ಹೀಬ್ರೂ ಭಾಷೆ ಮಾತಾಡಬಹುದೆಂದು ಕಲಿಯುತ್ತಿದ್ದೇನೆ." ಅದ್ಸರಿ. ನೀನು ಹೋಗೋದು ನರಕಕ್ಕೇ ಗೊತ್ತಿರಲಿ" ಎಂ ಕೆಜಿಬಿ ಏಜೆಂಟ್. ಅದನ್ನು ಕೇಳಿ ಯಹೂದಿ ಹೇಳಿದ- ನಾನು ಈಗಾಗಲೇ ರಷ್ಯನ್ ಭಾಷೆ ಕಲಿತಿದ್ದೇನೆ."

ಇನ್ನೇನು ಚುನಾವಣೆ ಬರಲಿದೆ. ಮೂರ್ಖತನಕ್ಕೆ, ಹಾಸ್ಯಕ್ಕೆ ಬರವಿಲ್ಲ. ಅದಕ್ಕೂ ಮುಂಚೆ ಮೂರ್ಖರ ದಿನದ ಪ್ರಯುಕ್ತ ನಿಮಗಾಗಿ ಕೆಲ ವಕ್ರತುಂಡೋಕ್ತಿ ಹಾಗೂ ಜೋಕುಗಳು.

ದೇವರ ಲೀಲೆ- ತೆಂಗಿನ ಕಾಯಲ್ಲಿ ನೀರು.
ವ್ಯಾಪಾರಿಯ ಲೀಲೆ- ಹಾಲಿನಲ್ಲಿ ನೀರು!

***

ಪ್ರಾಣಿಗಳಿಗೆ ಅತ್ಯಂತ ಶಕ್ತಿಯುತ ಕಣ್ಣುಗಳಿವೆ ಅಂತ ಧಾರಾಳವಾಗಿ ಹೇಳಬಹುದು. ಹೇಗೆಂದರೆ, ಪ್ರಾಣಿಗಳು ಕನ್ನಡಕ ಹಾಕ್ಕೊಂಡಿರೋದನ್ನು ಯಾರಾದ್ರೂ, ಯಾವತ್ತಾದ್ರೂ ನೋಡಿದ್ದೀರಾ?

***

ಈಗ ಕಾಲ ಬದಲಾಗಿದೆ- ಜನರೆಲ್ಲಾ ಹೆಚ್ಚು ಅನುಕೂಲವಾಗಿದ್ದಾರೆ. ಕಳ್ಳರೂ ಅಷ್ಟೆ. ಈಗ ಸೈಕಲ್ ಕಳ್ಳರಿಲ್ಲ. ಇರುವವರೆಲ್ಲ ಕಾರ್ ಕಳ್ಳರೇ.

***

ಕಿಲಾಡಿ ಡಾಕ್ಟರನೊಬ್ಬ ತನ್ನ ಕ್ಲಿನಿಕ್‌ಮುಂದೆ ಹೀಗೆ ಬರೆಸಿಕೊಂಡಿದ್ದ:
ಮಹಿಳೆ ಮತ್ತು ಇತರ ರೋಗಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ!

***

ಒಂದು ಕೆಲಸವನ್ನು ಒಬ್ಬಳೇ ಹೆಂಗಸು ಒಂದು ಗಂಟೆಯಲ್ಲಿ ಮಾಡಿ ಮುಗಿಸುತ್ತಾಳೆ. ಅದೇ ಕೆಲಸ ಬೇಗ ಆಗಲಿ ಎಂದುಕೊಂಡೇ ನೀವು ನಾಲ್ಕು ಹೆಂಗಸರನ್ನು ನೇಮಿಸಿದರೆ- ಆ ಕೆಲಸ ಮುಗಿಯಲು ನಾಲ್ಕು ಗಂಟೆ ಬೇಕಾಗುತ್ತದೆ!

***

ಮನೆಯ ಗೇಟ್‌ಗಳ ಮುಂದೆ ನಾಯಿಗಳಿವೆ ಎಚ್ಚರಿಕೆ ಅಂತ ಬೋರ್ಡ್ ಹಾಕಿರ್‍ತಾರೆ ಅಲ್ವ? ಅದನ್ನು ನೋಡಿದಾಗಲೆಲ್ಲ ಆ ಮನೇಲಿ ವಾಸ ಮಾಡೋರು ಮನುಷ್ಯರೋ ಅಥವಾ ನಾಯಿಗಳೋ ಅನ್ನೋ ಪ್ರಶ್ನೆ ಎದ್ದುನಿಲ್ಲುತ್ತೆ.

***

ಹೆಂಡತಿಗೂ, ಹೆಂಡಕ್ಕೂ ಇರುವ ವ್ಯತ್ಯಾಸ ಏನೆಂದರೆ-
ಹೆಂಡ ಕುಡಿದರೆ ಅಮಲು ತಲೆಗೇರುತ್ತೆ. ಹೆಂಡತಿ ಕುಡಿದರೆ-ತಲೆಗೇರಿದ ಅಮಲು ಇಳಿಯುತ್ತೆ!

***

ಬೀಟ್‌ರೂಟ್ ತಿಂದ್ರೆ ರಕ್ತ ಜಾಸ್ತಿಯಾಗುತ್ತೆ ಅಂತಾರಲ್ಲ, ಅದೇ ನಿಜವಾದರೆ-
ಬೀಟ್‌ರೂಟ್‌ನೇ ದಾನ ಮಾಡಬಹುದು. ರಕ್ತದಾನದ ಅಗತ್ಯ ಏನಿದೆ?

***

ಬಿಳಿ ಸೀರೆ ಉಟ್ಕೊಂಡವರನ್ನು ಮೋಹಿನಿ ಅನ್ನೋದಾದರೆ-
ಬಿಳಿ ಟೀಶರ್ಟ್-ಪ್ಯಾಂಟ್ ಹಾಕ್ಕೊಂಡವರನ್ನು ಮೋಹನ' ಅನ್ನಬೇಕಾ?

***

ಒಂದು ಬಡಾವಣೆಯಲ್ಲಿ ಬ್ಯಾಂಕ್‌ನ ಹೊಸ ಬ್ರ್ಯಾಂಚ್ ಶುರುವಾಯ್ತು. ಒಂದು ತಿಂಗಳು ಕಳೆದ್ರೂ ಒಬ್ಬರೂ ಅಕೌಂಟ್ ಶುರು ಮಾಡಲಿಲ್ಲ. ಯಾಕಪ್ಪಾ ಹೀಗೆ ಅಂತ ಮ್ಯಾನೇಜರ್ ಬಂದು ನೋಡಿದರೆ ಸತ್ಯ ಗೊತ್ತಾಯ್ತು. ಬೋರ್ಡ್ ಬರೆದ ಭೂಪ- Locker facility available ಅಂತ ಬರೆಯುವ ಬದಲು Lockup facility available ಎಂದು ಬರೆದಿದ್ದ!

ನಗೆಬಾಂಬುಗಳು ಇನ್ನೂ ಇವೆ. ಮುಂದೆ ಓದಿ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X