• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರಪತಿ ಭವನದಲ್ಲಿ ಇಂಥವರು, ಎಂಥವರೆಲ್ಲ ಉಳಿದಿದ್ದಾರೆಂದ್ರೆ...!

By Staff
|


ನಮ್ಮ ಹಿಂದಿನ ರಾಷ್ಟ್ರಪತಿಗಳು ಹೇಗಿದ್ದರು? ಅವರ ಕಾರ್ಯ ಶೈಲಿ ಹೇಗಿತ್ತು? ರಾಷ್ಟ್ರಪತಿ ಹುದ್ದೆಗೆ ಅವರಿಂದ ಅವಮಾನವಾಯಿತೇ? ರಾಷ್ಟ್ರಪತಿ ಹುದ್ದೆಗೆ ಅಬ್ದುಲ್‌ ಕಲಾಂರಂಥ ಮತ್ತೊಬ್ಬ ಸಾಧಕ ಎಲ್ಲಿದ್ದಾರೆ?

Why Abdul Kalam stands apart from other Presidents of India?ನಮ್ಮ ಮುಂದಿನ ರಾಷ್ಟ್ರಪತಿ ಯಾರು? ಯಾರಾಗಬೇಕು? ಇವರಾದರೆ ಹೇಗೆ? ಇವರ್ಯಾಕೆ ಆಗಬಾರದು? ನನಗನಿಸುತ್ತದೆ ಆ ಹುದ್ದೆಗೆ ಅವರೇ ಲಾಯಕ್ಕಾದ ವ್ಯಕ್ತಿ... ಮುಂತಾದ ಚರ್ಚೆ, ಪ್ರಶ್ನೆಗಳು ಇಡೀ ದೇಶವಾಸಿಗಳ ಮುಂದಿದೆ. ಬರುವ ಜೂನ್‌ನಲ್ಲಿ ಈಗಿನ ರಾಷ್ಟ್ರಪತಿ ಡಾ.ಅಬ್ದುಲ್‌ ಕಲಾಂ ಅವರ ಅಧಿಕಾರ ಅವಧಿ ಮುಗಿಯುವುದರಿಂದ ಈಗಿನಿಂದಲೇ ಆ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.

ಹಾಗೆ ನೋಡಿದರೆ, ನಮ್ಮ ದೇಶದಲ್ಲಿ ರಾಷ್ಟ್ರಪತಿ ಹುದ್ದೆಗೆ ಅಂಥ ತುರುಸಿನ ಚುನಾವಣೆ ನಡೆಯುವುದಿಲ್ಲ. ಸಂಸದರು, ಶಾಸಕರು ಮತದಾರರಾಗಿರುವುದು ಮಹಾಜನತೆ ಮತದಾನ ಮಾಡುವಂತಿಲ್ಲದಿರುವುದು ಸಹಾ ಇದಕ್ಕೆ ಕಾರಣವಿರಬಹುದು. ಹಾಗೆಂದು ಯಾರು ರಾಷ್ಟ್ರಪತಿಯಾಗಬೇಕೆಂಬ ಬಗ್ಗೆ ಕುತೂಹಲ ಹಾಗೂ ಒಂದಷ್ಟು ನಿರೀಕ್ಷೆಗಳಂತೂ ಇದ್ದೇ ಇರುತ್ತದೆ.

ನ್ಯಾಯಸಮ್ಮತವಾಗಿ, ಯಾವುದೇ ಭ್ರಷ್ಟಾಚಾರವಿಲ್ಲದೇ, ಹಣ, ಹೆಂಡ ಹಂಚದೇ ಮತ ಕೇಳುವ ಹಾಗೂ ಮತ ಕೊಡುವ ಚುನಾವಣೆಯೆಂದರೆ ರಾಷ್ಟ್ರಪತಿ ಚುನಾವಣೆಯಾಂದೇ ಇರಬೇಕು. ಚುನಾವಣೆ ತುರುಸಾಗಿ ನಡೆಯದೇ ಇರುವುದಕ್ಕೆ ಇದೂ ಒಂದು ಕಾರಣವಿದ್ದಿರಲೂಬಹುದು. ಸಂವಿಧಾನದ ರಕ್ಷಕನಾಗಿರುವ ರಾಷ್ಟ್ರಪತಿಯನ್ನು ಆರಿಸುವಲ್ಲಿ ಶ್ರೀಸಾಮಾನ್ಯನಿಗೆ ಯಾವುದೇ ಪಾತ್ರ ಇಲ್ಲ.

ಪ್ರಾಮುಖ್ಯದಿಂದ ಅಲ್ಲವಾದರೂ ಪಾವಿತ್ರ್ಯದ ದೃಷ್ಟಿಯಿಂದ ರಾಷ್ಟ್ರಪತಿ ಹುದ್ದೆ ಮಹತ್ವದ್ದು. ರಾಷ್ಟ್ರಪತಿಗೆ ದೈನಂದಿನ ಎಕ್ಸಿಕ್ಯೂಟಿವ್‌ ಪವರ್‌ಇಲ್ಲದಿದ್ದರೂ ಫಿಗರ್‌ ಹೆಡ್‌ ಆಗಿ ಅವರು ಪ್ರಧಾನಿಗಿಂತ ಉನ್ನತ ಸ್ಥಾನದಲ್ಲಿರುವವರು. ಈ ದೇಶದ ಜ್ಯೇಷ್ಠರು ಹಾಗೂ ಮೂರು ಸೇನಾಬಲಗಳ ವರಿಷ್ಠರು ಸಹಾ ಹೌದು. ಪ್ರೊಟೊಕಾಲ್‌ನಲ್ಲಿ ಅವರಿಗೆ ಮೊದಲ ಮಣೆ. ಅದಕ್ಕಿಂತ ಎತ್ತರದ ಹುದ್ದೆ ನಮ್ಮ ದೇಶದಲ್ಲಿ ಮತ್ತೊಂದಿಲ್ಲ. ನಮ್ಮ ದೇಶದಲ್ಲಿ ಎಲ್ಲ ನೇಮಕ, ಆದೇಶಗಳೆಲ್ಲ ಅವರ ಹೆಸರಿನಿಂದಲೇ ಹೊರಬೀಳುತ್ತವೆ. ಪ್ರಧಾನಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆಲ್ಲ ಅವರೇ ಪ್ರಮಾಣವಚನ ಬೋಧಿಸುವವರು. ನಿರ್ಧಾರಗಳೆಲ್ಲವನ್ನೂ ಪ್ರಧಾನಿಯೇ ತೆಗೆದುಕೊಂಡರೂ, ಅಂತಿಮವಾಗಿ ರಾಷ್ಟ್ರಪತಿಯವರು ಅಂಕಿತ ಹಾಕಿದಾಗಲೇ ಅದು ಆದೇಶವಾಗಿ, ಮಸೂದೆಯಾಗಿ, ಕಾನೂನಾಗಿ ಹೊರಬಿದ್ದು ಜಾರಿಗೆ ಬರುತ್ತದೆ.

ಈ ಎಲ್ಲ ಕಾರಣಗಳಿಂದ ರಾಷ್ಟ್ರಪತಿ ಹುದ್ದೆ ಮಹತ್ವದ್ದೆನಿಸುತ್ತದೆ. ರಾಷ್ಟ್ರಪತಿ ಭವನದಲ್ಲಿ ಕುಳಿತುಕೊಳ್ಳುವವನನ್ನೂ ದೇಶ ಕುತೂಹಲದಿಂದ ಕಾಣುತ್ತದೆ. ನಿಜವಾದ ಅರ್ಥದಲ್ಲಿ ವಿಶ್ವದ ಕಣ್ಣಲ್ಲಿ ಹಾಗೂ ನಮ್ಮ ದೇಶವಾಸಿಗಳ ದೃಷ್ಟಿಯಲ್ಲಿ ರಾಷ್ಟ್ರಪತಿಯೇ ಮೊದಲಿಗೆ ಗಮನ ಸೆಳೆಯುತ್ತಾನೆ. ರಾಷ್ಟ್ರಪತಿ ನಮ್ಮ ಸಾರ್ವಭೌಮತ್ವ, ಪ್ರತಿಷ್ಠೆ, ಸ್ವಾಭಿಮಾನ, ಸ್ವಾತಂತ್ರ್ಯದ ಪ್ರತೀಕ. ಹೀಗಾಗಿ ಆ ಹುದ್ದೆಯನ್ನು ಅಲಂಕರಿಸುವವರು ಯೋಗ್ಯರೂ, ಅರ್ಹರೂ ಆಗಿರಬೇಕೆಂದು ಅಪೇಕ್ಷಿಸುವುದು ಸಹಜ.

ಆದರೆ ನಮ್ಮ ದೇಶದಲ್ಲಿ ರಾಷ್ಟ್ರಪತಿಯನ್ನು ಆರಿಸುವಾಗ ನಮ್ಮ ನಾಯಕರು, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ ನಾಯಕರು ಅಷ್ಟೊಂದು ತಲೆಕೆಡಿಸಿಕೊಳ್ಳಲಿಲ್ಲ. ಒಂದು ವೇಳೆ ತಲೆಕೆಡಿಸಿಕೊಂಡಿದ್ದರೆ, ವರಾಹಗಿರಿ ವೆಂಕಟಗಿರಿ, ಫಕ್ರುದ್ದೀನ್‌ ಆಲಿ ಆಹಮದ್‌, ನೀಲಂ ಸಂಜೀವರೆಡ್ಡಿ, ಗ್ಯಾನಿ ಜೈಲ್‌ಸಿಂಗ್‌ರಂಥವರು ಖಂಡಿತವಾಗಿಯೂ ರಾಷ್ಟ್ರಪತಿಗಳಾಗುತ್ತಿರಲಿಲ್ಲ. ಡಾ.ರಾಜೇಂದ್ರಪ್ರಸಾದ್‌, ಸರ್ವಪಳ್ಳಿ ರಾಧಾಕೃಷ್ಣನ್‌ ಹಾಗೂ ಜಕೀರ್‌ ಹುಸೇನ್‌ರ ನಂತರ ರಾಷ್ಟ್ರಪತಿ ಹುದ್ದೆ ತನ್ನ ಮಹತ್ವವನ್ನು ಕಳೆದುಕೊಂಡಿತು.

1969ರ ಮೇ 3ರಂದು ಭಾರತದ ಮೂರನೆ ರಾಷ್ಟ್ರಪತಿ ಜಕೀರ್‌ ಹುಸೇನ್‌ ಅಧಿಕಾರದಲ್ಲಿದ್ದಾಗಲೇ ನಿಧನರಾದಾಗ ಹಂಗಾಮಿಯಾಗಿ ಉಪರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿಯವರು ರಾಷ್ಟ್ರಾಧ್ಯಕ್ಷರಾದರು. ತಮ್ಮನ್ನೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿಸುವಂತೆ ವಿ.ವಿ.ಗಿರಿಯವರು ಅಂದಿನ ಪ್ರಧಾನಿಗೆ ಪತ್ರ ಬರೆದಿದ್ದರು. ಪ್ರಧಾನಿಯಿಂದ ಯಾವುದೇ ಉತ್ತರ ಬರದಿದ್ದಾಗ ತಮ್ಮ ಸ್ನೇಹಿತರನ್ನು ಕಳುಹಿಸಿ ತಮ್ಮ ಪರವಾಗಿ ಲಾಬಿ ಮಾಡುವಂತೆ ವಿನಂತಿಸಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more