• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರಾವರಿ ಯೋಜನೆಗಳು ನೀರು ಪಾಲಾದವು, ಹಣ ಇನ್ಯಾರದ್ದೋ ಪಾಲಾಯಿತು!

By Staff
|

ಕರ್ನಾಟಕ ನಿಗಮದಡಿಯಲ್ಲಿನ ಮಾರ್ಕಂಡೇಯ, ಗಂಡೋರಿ ನಾಲಾ, ಮುಲ್ಲಾಮಾರಿ ಕೆಳದಂಡೆ, ಇಟಗಿ-ಸಾಸಲ್‌ವಾಡ, ಬಸಾಪುರ, ಕೃಷ್ಣಾಭಾಗ್ಯ ಜಲ ನಿಗಮದಡಿಯಲ್ಲಿ ಬರುವ ಜೇವರ್ಗಿ ಶಾಖಾ ಕಾಲುವೆ, ಮುಳವಾಡ ಏತನೀರಾವರಿ, ನಾರಾಯಣಪುರ ಬಲದಂಡೆ ಕಾಲುವೆ ಮತ್ತು ತುಂಗಾ ಮೇಲ್ಡಂಡೆ ಯೋಜನೆಯ ಅಂಬ್ಲಿಗೊಳ, ಅಂಜನಾಪುರ, ಮುನಿರಾಬಾದ್‌ ನೀರಾವರಿ ಕೇಂದ್ರ ವಲಯದಡಿಯಲ್ಲಿನ ಹಿರೇಹಳ್ಳ, ಮಸ್ಕಿನಾಲ, ರಾರಾವಿ, ಕಾತರ್ಕಿ ಯೋಜನೆಗಳು ಯಾವಾಗ ಮುಗಿಯುತ್ತವೆಯೋ? ಈ ಯೋಜನೆಗಳನ್ನು ಮುಗಿಸಲು ಯಾವ ದೊಣ್ಣೆ ನಾಯಕನನ್ನೂ ಕೇಳಬೇಕಾಗಿಲ್ಲ. ನ್ಯಾಯಾಧಿಕರಣದ ಮೊರೆಹೋಗಬೇಕಾಗಿಲ್ಲ. ನೆರೆ ರಾಜ್ಯಕ್ಕೆ ಅಂಜಬೇಕಾಗಿಲ್ಲ. ಆಜಕೂ ನಮಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಏಕೆ? ಏಕೆ? ಏಕೆ?

ಕಳೆದ 55ವರ್ಷಗಳಲ್ಲಿ ನೀರಾವರಿ ಯೋಜನೆಗಾಗಿ 24.275 ಕೋಟಿ.ರೂ.ಗಳನ್ನು ಖರ್ಚು ಮಾಡಲಾಗಿದೆ. ಕಳೆದ ಮೂರ್ನಾಲ್ಕು ದಶಕಗಳಿಂದ ಅಪೂರ್ಣವಾಗಿರುವ 39 ಯೋಜನೆಗಳನ್ನು ದಡಮುಟ್ಟಿಸಲು ಎರಡು ಸಾವಿರ ಕೋಟಿ ರೂ.ಗಳಾದರೂ ಬೇಕು. ಅಂದರೆ ಈ ಎಲ್ಲ ಯೋಜನೆ ಇನ್ನು ಐದು ವರ್ಷವಾದರೂ ಮುಗಿಯುವುದಿಲ್ಲವೆನ್ನುವುದು ಗ್ಯಾರಂಟಿ. ಹೇಳೋರೆ ಕೇಳೋರು ಯಾರು ಇಲ್ಲದಂಥ ಸ್ಥಿತಿ. ಇವನ್ನೆಲ್ಲ ಯಾರ ಮುಂದೆ ಹೇಳಿದರೂ ಅಷ್ಟೆ. ದಮಡಿ ಪ್ರಯೋಜನವಿಲ್ಲ.

ಒಟ್ಟಾರೆ ನಮ್ಮ ರಾಜಕಾರಣಿಗಳು ನೀರಿನ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆಂದೇ ಹೇಳಬೇಕು. ಒಂದೆಡೆ, ಬೇರೆ ರಾಜ್ಯಗಳ ಜತೆ ನದಿ ನೀರನ್ನು ಹಂಚಿಕೊಳ್ಳುವ ಸಂದರ್ಭ ಬಂದಾಗ ನಮಗೆ ನ್ಯಾಯಯುತವಾಗಿ ಸಿಗಬೇಕಾದ ನೀರನ್ನು ಸದುಪಯೋಗಪಡಿಸಿಕೊಳ್ಳದಿರುವುದು. ಇನ್ನೊಂದೆಡೆ ನಮ್ಮದೇ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳದಿರುವುದು. ಮತ್ತೊಂದೆಡೆ, ಯಾರ ತಕರಾರು ಇಲ್ಲದ ನೀರಾವರಿ ಯೋಜನೆಗಳನ್ನು ಆರಂಭಿಸದಿರುವುದು. ಮಗದೊಂಡೆಡೆ, ಆರಂಭಿಸಿದ ಯೋಜನೆಗಳನ್ನು ಪೂರ್ಣಗೊಳಿಸದಿರುವುದು.

ಹಾಗೆ ನೋಡಿದರೆ, ನಮ್ಮ ನೀರಾವರಿ ಬೇಡಿಕೆಗಳಿಗೆ ಬೃಹತ್‌ ನೀರಾವರಿ ಯೋಜನೆಗಳನ್ನೇ ನೆಚ್ಚಿಕೊಳ್ಳಬೇಕೆಂದಿಲ್ಲ. ಮೊದಲಿನಿಂದಲೂ ನಮ್ಮ ರೈತರು ನಂಬಿದ್ದು ಬಾವಿ, ಕೆರೆ, ಏತ, ಕೊಳ್ಳ, ಝರಿ, ಹೊಂಡ, ಸರೋವರವನ್ನು. ಈಗಲೂ ಬಯಲುಸೀಮೆಯಲ್ಲಿ ಇವೇ ನೀರಿನ ಮೂಲಗಳು. ಇವುಗಳನ್ನು ಅಭಿವೃದ್ಧಿಪಡಿಸಲು ಯಾವ ಸರಕಾರ ಉತ್ಸಾಹ ತೋರಿದೆ? ಇದ್ದ ಕೆರೆಗಳ ಹೂಳನ್ನು ತೆಗೆದು ಹೆಚ್ಚಿನ ನೀರು ಸಂಗ್ರಹಕ್ಕೆ ಅನುವು ಮಾಡಿಕೊಡುವ ಪ್ರಯತ್ನ ಆಗಿಯೇ ಇಲ್ಲ. ಹೊಸ ಕೆರೆಗಳ ನಿರ್ಮಾಣಕ್ಕೂ ಒತ್ತು ಕೊಟ್ಟಿದ್ದು ಅಷ್ಟಕ್ಕಷ್ಟೆ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ‘ ರೈತ ಕಾಯಕ ಕೆರೆ’ಯೋಜನೆಯೇನೋ ಜಾರಿಗೆ ಬಂತು. ಆದರೆ ಕೆರೆಗಳು ಹೇಗಿವೆಯೋ ಹಾಗೇ ಉಳಿದವು.

ಇಂದು ಎಲ್ಲ ಊರುಗಳಲ್ಲಿರುವ ಕೆರೆಗಳನ್ನು ಸೈಟುಗಳು ನುಂಗಿ ಹಾಕುತ್ತಿವೆ. ಬೆಂಗಳೂರಿನಲ್ಲಿ ಕೆರೆಗಳಂತೂ ರಾತ್ರೋರಾತ್ರಿ ಲೇಔಟ್‌ಗಳಾಗಿಬಿಡುತ್ತವೆ. ಇಂದಿನ ಬಹುತೇಕ ಲೇಔಟ್‌ಗಳು ಒಂದು ಕಾಲಕ್ಕೆ ಕೆರೆಗಳಾಗಿದ್ದವು. ಹೊಸ ಕೆರೆಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆಯುತ್ತಲೇ ಇಲ್ಲ. ಮಳೆ ನೀರಿನ ಕೊಯ್ಲಿನ ಮಹತ್ವ ವಿಧಾನಸೌಧದಲ್ಲಿ ಕುಳಿದವರಿಗೆ ಆಗುತ್ತಲೇ ಇಲ್ಲ. ನೀರಿನ ಹೊಸ ಮೂಲಗಳನ್ನು ಅಭಿವೃದ್ಧಿಪಡಿಸುವ, ಸಾಂಪ್ರದಾಯಿಕ ಮೂಲಗಳನ್ನು ಬಲಪಡಿಸುವ ಪ್ರಯತ್ನಗಳೂ ನಡೆಯುತ್ತಿಲ್ಲ. ಬಹುತೇಕ ಎಲ್ಲ ನಗರಗಳೂ ನೀರಿನ ಸಮಸ್ಯೆ ಅನುಭವಿಸುತ್ತಿವೆ. ಹುಬ್ಬಳ್ಳಿ-ಧಾರವಾಡದಂಥ ನಗರಕ್ಕೆ ಪ್ರತಿನಿತ್ಯ ನೀರು ಪೂರೈಕೆಯಾಗುವುದೆಂದರೆ ಕಮರಿಪೇಟೆಯಲ್ಲಿ ಕಾಮನಬಿಲ್ಲು ಮೂಡಿದಂತೆ. ಎಲ್ಲೆಡೆ ನೀರು ಹಾಗೂ ನೀರಿನ ಮೂಲಗಳ ಮೇಲೆ ಇನ್ನಿಲ್ಲದ ಹೊರೆ, ಒತ್ತಡ ಬೀಳುತ್ತಿದೆ.

ಖ್ಯಾತ ನೀರಿನ ತಜ್ಞ ರಾಜೇಂದ್ರ ಸಿಂಗ್‌ ಹೇಳಿದಂತೆ, ಭಾರತದ ಎಲ್ಲ ರಾಜ್ಯಗಳೂ ಒಂದಿಲ್ಲೊಂದು ರೀತಿಯಲ್ಲಿ ಜಲಕ್ಷಾಮ ಎದುರಿಸುತ್ತಿವೆ. ರಾಜ್ಯ-ರಾಜ್ಯಗಳು ನೀರಿಗಾಗಿ ರಕ್ತಹರಿಸುವ ದಿನಗಳು ದೂರವಿಲ್ಲ. ಬಾಟಲಿ ನೀರನ್ನು ಅನುಸರಿಸಿದಂತೆ ಸ್ನಾನಕ್ಕೆ ಕೂಡ ನೀರನ್ನು ಆಶ್ರಯಿಸುವ ದಿನ ದೂರವಿಲ್ಲ. ನೀರಿನ ನಿರ್ವಹಣೆ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಆಧುನಿಕ ನರಕವನ್ನು ಸೃಷ್ಠಿಸಿದಂತಾಗುತ್ತದೆ.

ಕಾವೇರಿ, ನ್ಯಾಯಾಧೀಕರಣ, ತೀರ್ಪು ಇನ್ನಾದರೂ ನಮಗೆ ಪಾಠವಾಗಲಿ.

(ಸ್ನೇಹ ಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X