ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಾವರಿ ಯೋಜನೆಗಳು ನೀರು ಪಾಲಾದವು, ಹಣ ಇನ್ಯಾರದ್ದೋ ಪಾಲಾಯಿತು!

By Staff
|
Google Oneindia Kannada News


ಕಬಿನಿ ನೀರಾವರಿ ಯೋಜನೆಯಾಂದನ್ನು ನೋಡಿದರೆ ಸಾಕು. ನಾವು ನೀರಾವರಿಗೆ ಅದೆಂಥ ಪ್ರಾಮುಖ್ಯ ಕೊಟ್ಟಿದ್ದೇವೆಂಬುದು ಗೊತ್ತಾಗುತ್ತದೆ. ಈ ಯೋಜನೆ ಅರಂಭವಾಗಿದ್ದು1959ರಲ್ಲಿ. ಅಂದರೆ ಸುಮಾರು ನಲವತ್ತೆಂಟು ವರ್ಷಗಳ ಹಿಂದೆ. ಇದಕ್ಕೆ ಕೇವಲ 3.20 ಕೋಟಿ ರೂ. ಖರ್ಚಾಗಬಹುದೆಂದು ಅಗ ಲೆಕ್ಕ ಹಾಕಲಾಗಿತ್ತು. ಆರರಿಂದ ಎಂಟು ವರ್ಷಗಳೊಳಗೆ ಈ ಯೋಜನೆ ಮುಗಿಯಬೇಕಿತ್ತು. ಏನಾಯ್ತು ಕತೆ? ಪ್ರತಿವರ್ಷದ ಬಜೆಟ್‌ನಲ್ಲಿ ಈ ಯೋಜನೆಗೆ ಹಣ ತೆಗೆದಿಡುತ್ತಾ ಬರಲಾಯಿತು. ವರ್ಷ ವರ್ಷ ಹಣ ಖರ್ಚಾಗುತ್ತಿತ್ತೇ ಹೊರತು ಕೆಲಸ ಮುಂದುವರಿಯಲಿಲ್ಲ. ಇಲ್ಲಿಯ ತನಕ 480 ಕೋಟಿ ರೂ . ಸುರಿಯಲಾಗಿದೆ. ಅದರೂ ಮುಗಿದಿಲ್ಲ.

ಕೆಲಸ ಪೂರ್ತಿಯಾಗಲು ಇನ್ನೂ 25-30 ಕೋಟಿ ರೂ. ಬೇಕಂತೆ. ಹಾಗೇ ಇನ್ನೂ ಎರಡು ವರ್ಷ ಸಹ ಬೇಕಂತೆ. ಬರೋಬ್ಬರಿ ಐವತ್ತು ವರ್ಷ ತೆಗೆದುಕೊಂಡಂತಾಗುತ್ತದೆ. ವಿಶ್ವದ ಬೇರೆ ರಾಷ್ಟ್ರಗಳಲ್ಲಿ ಇಂಥ ‘ಸಾಧನೆ’ ಕಾಣಲು ಸಾಧ್ಯವೆ? ಯೋಜನೆ ಲಾಗಾಯ್ತಿನಿಂದ ಕಡತ ತೆರೆದು ನೋಡಬೇಕು. ‘ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ವರದಿ ಕಾಣಿಸುತ್ತದೆ. ಇಂಥ ಸಾಮಾನ್ಯ ನೀರಾವರಿ ಯೋಜನೆಯನ್ನೇ ಪೂರ್ಣಗೊಳಿಸಲು ಇಷ್ಟು ವರ್ಷ ಬೇಕಾದರೆ? ಅಂದರೆ ಈ ಯೋಜನೆಯಲ್ಲಿ ಅದ್ಯಾವ ಭ್ರಷ್ಟಾಚಾರ ನಡೆದಿರಬಹುದು? ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದ ನೀರಾವರಿ ಮಂತ್ರಿಗಳು ಹೇಗೆ ಕೆಲಸ ಮಾಡಿರಬಹುದು? ಎಷ್ಟು ಹಣ ನೀರುಪಾಲು ಅಗಿರಬಹುದು? ಯೋಜನೆಯ ಅಂದಾಜು ವೆಚ್ಚಕ್ಕಿಂತ ಶೇ. 173 ರಷ್ಟು ಖರ್ಚಾಗಿದ್ದರೂ ಯೋಜನೆ ಮುಗಿದಿಲ್ಲವೆಂದರೆ ಏನರ್ಥ?

ಮಲಪ್ರಭಾ ನೀರಾವರಿ ಯೋಜನೆಯದೂ ಇದೇ ಕಣ್ಣೀರ ಕತೆ, ಕಳೆದ ನಲವತ್ತೇಳು ವರ್ಷಗಳ ಹಿಂದೆ ಅರಂಭವಾದ ಯೋಜನೆ ಅದ್ಯಾವಾಗ ಮುಗಿಯುವುದೋ, ಅ ಭಗವಂತನಿಗೂ ಗೊತ್ತಿರಲಿಕ್ಕಿಲ್ಲ. ನರಗುಂದ, ನವಲಗುಂದಕ್ಕೆ ನೀರುಣಿಸುವ ಈ ಯೋಜನೆಗೆ 162 ಕೋಟಿ ರೂ. ಖರ್ಚಾಗಿದೆ. ಅದರೆ ಕೆಲಸ ಮಾತ್ರ ಪೂರ್ಣವಾಗಿಲ್ಲ. ಯೋಜನೆ ಪೂರ್ಣಗೊಳ್ಳಲು ಏನಿಲ್ಲವೆಂದರೂ ಇನ್ನೂ 110 ಕೋಟಿ ರೂ. ಬೇಕಂತೆ . ಅಷ್ಟು ಖರ್ಚು ಮಾಡಿದ ಮೇಲೆ ಇಷ್ಟು ಖರ್ಚು ಮಾಡದೇ ಇರಲು ಸಾಧ್ಯವಾ? ಕೊಡಲೇಬೇಕು. ಅಷ್ಟಕ್ಕೆ ಮುಗಿದರೆ ಸಮಾಧಾನ. ಅದರೆ ಇನ್ನೆಷ್ಟು ಬೇಕೋ ಗೊತ್ತಿಲ್ಲ. ಕಳೆದ ಇಪ್ಪತ್ತೆಂಟು ವರ್ಷಗಳ ಕಡತ ತೆಗೆದು ನೋಡಿದರೆ ‘ಕಾಮಗಾರಿ ಪ್ರಗತಿಯಲ್ಲಿದೆ, ಕೆಲಸ ತೃಪ್ತಿಕರ’ ಎಂಬ ಷರಾ ಕಾಣಿಸುತ್ತದೆ. ಇಡೀ ಯೋಜನೆಗೆ ಅದೆಷ್ಟು ಹೆಗ್ಗಣಗಳು, ಗೆದ್ದಲುಗಳು ಅಮರಿಕೊಂಡು ಹಿಚುಕಾಡಿಸುತ್ತಿರಬಹುದು? ಅವೆಷ್ಟು ಕಂಟ್ರಾಕ್ಟರುಗಳು, ಎಂಜಿನಿಯರ್‌ಗಳು, ರಾಜಕಾರಣಿಗಳು, ಮಂತ್ರಿಗಳು ಉದ್ಧಾರವಾಗಿ ಹೋಗಿರಬಹುದು?

ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಮಂಚನಬೆಲೆ, ಉಡುತೊರೆಹಳ್ಳಿ, ಅರ್ಕಾವತಿ, ಕಬಿನಿ, ವಾಟೆಹೊಳೆ, ಇಗ್ಗಲೂರು, ಹುಚ್ಚನಕೊಪ್ಪಲು ಏತ ನೀರಾವರಿ, ಕಾಮಸಮುದ್ರ ಮೊದಲ ಹಾಗೂ ಎರಡನೆ ಹಂತ, ನಂಜಾಪುರ ಏತ ನೀರಾವರಿ ಯೋಜನೆಗಳ ಪೈಕಿ ಒಂದೇ ಒಂದು ಸಹ ಪೂರ್ಣಗೊಂಡಿಲ್ಲ. ಅಚ್ಚರಿಯೆಂದರೆ ಹುಚ್ಚನಕೊಪ್ಪಲು ಹಾಗೂ ನಂಜಾಪುರ ಏತ ನೀರಾವರಿ ಯೋಜನೆಗಳನ್ನು ಬಿಟ್ಟರೆ ಉಳಿದವು ಸುಮಾರು 30-35 ವರ್ಷಗಳ ಹಿಂದೆಯೇ ಅರಂಭವಾದವು. ಈ ಎಲ್ಲ ಯೋಜನೆಗಳಿಗೆ ಅಂದಾಜು ವೆಚ್ಚಕ್ಕಿಂತ ಐವತ್ತು-ಅರವತ್ತು ಪಟ್ಟು ಹೆಚ್ಚು ಹಣ ಸುರಿಯಲಾಗಿದೆ. ಅದರೆ, ಕಾಮಗಾರಿ ಪೂರ್ಣಗೊಂಡಿಲ್ಲ. ಉಡುತೊರೆ ಹಳ್ಳದಂಥ ಯೋಜನೆಯನ್ನು 1978ರಲ್ಲಿ ಏಳೂವರೆ ಕೋಟಿ ರೂ. ವೆಚ್ಚದಲ್ಲಿ ಮುಗಿಸಬಹುದಿತ್ತು. ಅದರೆ ಈ ಯೋಜನೆಗೆ ಹಣ ಸುರಿದಿದ್ದೊಂದೇ ಅಯಿತು.

176ಕೋಟಿ ರೂ. ಖರ್ಚು ಮಾಡಿದರೂ ಯೋಜನೆ ಪೂರ್ಣಗೊಳ್ಳಲಿಲ್ಲ. ಇನ್ನೂ 35ಕೋಟಿ ರೂ. ಬೇಕಂತೆ. ಹೇಗಿದೆ ಅಪರಾ-ತಪರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X