ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಾವರಿ ಯೋಜನೆಗಳು ನೀರು ಪಾಲಾದವು, ಹಣ ಇನ್ಯಾರದ್ದೋ ಪಾಲಾಯಿತು!

By Staff
|
Google Oneindia Kannada News


ರಾಜ್ಯದ ನೀರಾವರಿ ಯೋಜನೆಗಳು, ರೈತರ ಕಷ್ಟಗಳು, ಹಿಂದಿನ ಸರ್ಕಾರ ಮತ್ತು ನೀರಾವರಿ ಮಂತ್ರಿಗಳ ಕಾರ್ಯವೈಖರಿ ಕುರಿತು ನೂರೆಂಟು ಮಾತು. ಕಾವೇರಿ, ನ್ಯಾಯಾಧೀಕರಣ, ತೀರ್ಪು ಇನ್ನಾದರೂ ನಮಗೆ ಪಾಠವಾಗಲಿ ಎಂಬ ಎಚ್ಚರಿಕೆಯ ಹೆಚ್ಚುವರಿ ಮಾತು!

  • ವಿಶ್ವೇಶ್ವರ ಭಟ್‌
  • Irrigation projects hit the rock bottom in Karnatakaಈಗ ಅಂತ ಅಲ್ಲ. ಮೊದಲಿನಿಂದಲೂ ನಾವು ನೀರಾವರಿಗೆ ಕೊಟ್ಟ ಪ್ರಾಮುಖ್ಯತೆ ಅಷ್ಟಕಷ್ಟೆ. ನೀರಾವರಿಯನ್ನು ಗಂಭೀರವಾಗಿ ನಾವೆಂದೂಪರಿಗಣಿಸಿದವರಲ್ಲ. ನಮಗೆ ನೀರಿನ ನಿರ್ವಹಣೆ(water management) ಅಂದ್ರೆ ಏನೂಂತಾ ಗೊತ್ತಿಲ್ಲ. ಬೆಂಕಿ ಬಿದ್ದಾಗಲೇ ಬಾವಿ ತೋಡುವ ಜಾಯಮಾನ ನಮ್ಮದು.

    ಟಿ. ಮರಿಯಪ್ಪ, ಎಚ್‌. ಎಂ. ಚನ್ನಬಸಪ್ಪನವರಿಂದ ಹಿಡಿದು ಈಗಿನ ಈಶ್ವರಪ್ಪನವರವರೆಗೆ ನಮ್ಮ ರಾಜ್ಯದ ನೀರಾವರಿ ಸಚಿವರು ಮಾಡಿದ ‘ಸಾಧನೆ’ ನೋಡಿದವರಿಗೆ ಗೊತ್ತಾಗುತ್ತದೆ. ನಾವು ನೀರಾವರಿ ಯೋಜನೆಗಳಿಗೆ ಅದೆಷ್ಟು ಅದ್ಯತೆ, ಮಹತ್ವ ಕೊಟ್ಟಿದ್ದೇವೆಂದು. ನಮ್ಮ ರಾಜ್ಯದ ನೀರಾವರಿ ಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ, ಎಸ್‌.ಎಂ. ಕೃಷ್ಣ ಹಾಗೂ ದೇವೇಗೌಡರು ಮುಂದೆ ಮುಖ್ಯಮಂತ್ರಿಗಳಾದರು. ಈ ಪೈಕಿ ಒಬ್ಬರು ದೇಶದ ಪ್ರಧಾನಿಯೂ ಅದರು. ಅದರೆ ನೀರಾವರಿಗೆ ಸಿಗಬೇಕಾದ ಮಹತ್ವ ಮಾತ್ರ ಸಿಗಲಿಲ್ಲ.

    ಅಂದು ಅ ಪುಣ್ಯಾತ್ಮ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸದಿದ್ದರೆ, ಈ ರಾಜ್ಯದ ಸಮಗ್ರ ನೀರಾವರಿ ನೀಲನಕ್ಷೆ ರೂಪಿಸದಿದ್ದರೆ ಇಂದು ಅದೂ ಸಹ ನಮ್ಮಿಂದ ಅಗುತ್ತಿರಲಿಲ್ಲ.

    ಈ ರಾಜ್ಯವನ್ನು ಅಳಿದ ಮುಖ್ಯಮಂತ್ರಿಗಳ ಸಾಧನೆಯ ಖಾತೆಕಿರ್ದಿ ತೆಗೆದು ನೋಡಿ. ಯಾರಿಗೂ ನೀರಾವರಿ ಅದ್ಯತೆ ಅಗಿರಲೇ ಇಲ್ಲ. ಹಾಗಂತ ನಾವು ನೀರಾವರಿಗೆ ಹಣ ಖರ್ಚು ಮಾಡಲೇ ಇಲ್ಲ ಅಂತಲ್ಲ. ಎಲ್ಲಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ. ಅದರೆ ಅದು ಎಲ್ಲಿ ಸೇರಬೇಕೋ ಅಲ್ಲಿ ಸೇರಲಿಲ್ಲ ಹಾಗೂ ಯಾರನ್ನು ಸೇರಬೇಕೋ ಅವರನ್ನು ಸೇರಿದೆ! ಒಮ್ಮೆ ಹೀಗಾಗಿರದಿದ್ದರೆ ಒಂದು ಯೋಜನೆ ಮುಗಿಸಲು ಇಪ್ಪತ್ತೆೈದು, ಮೂವತ್ತು, ನಲವತ್ತು ವರ್ಷ ತೆಗೆದುಕೊಳ್ಳುತ್ತಿರಲಿಲ್ಲ. ಪ್ರಾಯಶಃ ಜಗತ್ತಿನ ಯಾವ ದೇಶದಲ್ಲೂ ಒಂದು ನೀರಾವರಿ ಯೋಜನೆ ಪೂರ್ಣಗೊಳಿಸಲು ನಾಲ್ಕೂವರೆ ದಶಕ ತೆಗೆದುಕೊಂಡ ನಿದರ್ಶನ ಸಿಗುವುದಿಲ್ಲ. ನೀರಾವರಿ ವಿಷಯದಲ್ಲಿ ನಾವು ಅಷ್ಟೊಂದು ಉದಾಸೀನ, ಉಡಾಫೆ ಮಾಡಿದ್ದೇವೆ, ಬೇಜಾವಾಬ್ದಾರಿಯಿಂದ ವರ್ತಿಸಿದ್ದೇವೆ. ಅಯಾ ಕಾಲಕ್ಕೆ ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳೂ ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ.

    ಕಾರಣ ಇಷ್ಟೆ. ಇವರಿಗೆ ನೀರಾವರಿ ಎಂದೂ ಗಂಭೀರ ವಿಷಯವಾಗಿರಲಿಲ್ಲ. ಕಾವೇರಿ ನಮ್ಮ ಜೀವನದಿ, ಉಸಿರು, ತಾಯಿ ಎಂದೆಲ್ಲ ಹೇಳುವ ರಾಜಕಾರಣಿಗಳು ಸಾಮಾನ್ಯ ರೈತನ ಭಾವನೆಗಳೊಂದಿಗೆ ಅಟವಾಡಿದರೇ ಹೊರತು ರಾಜ್ಯದ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುವ ಕರ್ತೃತ್ವಶಕ್ತಿಯನ್ನು ಮೆರೆಯಲೇ ಇಲ್ಲ.

    ಈ ಕುಮಾರಸ್ವಾಮಿಯವರ ಸರಕಾರಕ್ಕೇನಾಗಿದೆ ನೋಡಿ, ಕಾವೇರಿ ಜಲವಿವಾದ ನ್ಯಾಯಾಧಿಕರಣದ ತೀರ್ಪು ಬಂದು ಮೂರು ದಿನಗಳಾದವು. ಇಲ್ಲಿಯ ತನಕ ಸರಕಾರದ ನಿಲುವು, ಪ್ರತಿಕ್ರಿಯೆಯೇನೆಂಬುದೇ ಗೊತ್ತಾಗಿಲ್ಲ. ‘ನಾವು ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧ, ರೈತರ ಹಿತ ಬಲಿಕೊಡುವುದಿಲ್ಲ’ ಎಂಬ ಸವಕಲು, ಶುಷ್ಕ ಹೇಳಿಕೆ ನೀಡಿದ್ದು ಬಿಟ್ಟರೆ, ನ್ಯಾಯಾಧಿಕರಣ ತೀರ್ಪಿನ ಬಗ್ಗೆ ಮತ್ತೇನೂ ಹೇಳಲು ಸಾಧ್ಯವಾಗಿಲ್ಲ. ತೀರ್ಪು ರಾಜ್ಯಕ್ಕೆ ಪೂರಕವಾಗಿದೆಯಾ, ಮಾರಕವಾಗಿದೆಯಾ ಎಂಬುದು ಸಹ ತಿಳಿಯುತ್ತಿಲ್ಲ ಅಂದ್ರೆ ಏನು?

    ಮೊದಲಿನಿಂದಲೂ ನೀರಾವರಿ ನಮ್ಮ ಅದ್ಯತೆ ಅಗಿರಲೇ ಇಲ್ಲ. ಅದ್ಯತೆಯಾಗಿದ್ದರೆ ಒಂದೊಂದು ಯೋಜನೆ ಪೂರ್ಣಗೊಳಿಸಲು ನಲವತ್ತು- ಐವತ್ತು ವರ್ಷ ತೆಗೆದುಕೊಳ್ಳುತ್ತಿರಲಿಲ್ಲ. ಉಗುರಿನಿಂದ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಳ್ಳುವ ಪ್ರಸಂಗ ಬರುತ್ತಿರಲಿಲ್ಲ. ಬಂದ ನೀರಾವರಿ ಮಂತ್ರಿಗಳೆಲ್ಲ ದುಡ್ಡನ್ನು ನೀರು ಎಂದು ಭಾವಿಸಿದ್ದರಿಂದ, ಯಥೇಚ್ಛ ಕುಡಿದು ಹೊರಟು ಹೋದರು. ನೀರಾವರಿ ಮಂತ್ರಿಯಾಗುವ ಒಂದು ಲಾಭವೆಂದರೆ, ನೀರಿಗೆ ಹಾಕಿದ ಹಣ ಕಣ್ಣಿಗೆ ಕಾಣುವುದಿಲ್ಲ. ಲೆಕ್ಕಕ್ಕೆ ಸಿಗುವುದಿಲ್ಲ. ಅದರೆ ಅದು ಹರಿದು ಹೋಗುತ್ತದೆ ಹಾಗೂ ಸೇರಬೇಕಾದವರನ್ನು ಸೇರುತ್ತದೆ. ಎಂಜಿನಿಯರ್‌ಗಳು, ಗುತ್ತಿಗೆದಾರರು ಎಲ್ಲರೂ ಷಾಮೀಲು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X