• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಗ ಮದುವೆಯೂ ಗುತ್ತಿಗೆ, ಕುಟುಂಬ ವ್ಯವಸ್ಥೆ ಇಕ್ಕಟ್ಟಿಗೆ!

By Staff
|


KSN and Venkamma - Where will you such a wonderful couple?ಈ ಸಂದರ್ಭದಲ್ಲಿ ನನಗೆ ದಾಂಪತ್ಯ ಕವಿ ಕೆ.ಎಸ್‌. ನರಸಿಂಹ ಸ್ವಾಮಿ ಬರೆದ ಪಲ್ಲವಿ ನೆನಪಾಗುತ್ತದೆ.

ಒಂದು ಗಂಡಿಗೊಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದು ಕನಸು ಕಂಡು ಮಾತಿಗೊಲಿಯದಮೃತ ಉಂಡು
ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ...

ದಾಂಪತ್ಯದ ಸಾರ ಇದೇ ಅಲ್ಲವೇ? ಆದರೆ ಇಂದು ಮದುವೆಯೆಂಬ institution ಏನಾಗಿದೆ ನೋಡಿ. ಮದುವೆಗೇ ವಿಚ್ಛೇದನ ಹಿಡಿದುಬಿಟ್ಟಿದೆ. ಮದುವೆ ದಿನಕ್ಕೊಂದು ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಪತ್ರಿಕೆಗಳಲ್ಲಿ ನೀವೆಷ್ಟು ಮಂದಿ ವರ್ಗೀಕೃತ ಜಾಹೀರಾತನ್ನು ನೋಡುತ್ತೀರೊ ಗೊತ್ತಿಲ್ಲ. ಪಾರ್ಟನರ್‌ ಬೇಕಾಗಿದ್ದಾರೆ/ಳೆ ಎಂಬ ಶೀರ್ಷಿಕೆಯ ಜಾಹೀರಾತನು ಗಮನಿಸಬೇಕು.

‘ನನ್ನ ಸಿಂಗಲ್‌ ಬೆಡ್‌ರೂಮ್‌ ಅಪಾರ್ಟ್‌ಮೆಂಟ್‌ ಖಾಲಿಯಿದೆ. ಜತೆಗಿರಬಹುದು’ ಎಂಬುದು ಸಾಮಾನ್ಯ ಒಕ್ಕಣಿಕೆ. ಒಡಂಬಡಿಕೆಯೇನೆಂದರೆ ಆ ಅಪಾರ್ಟ್‌ಮೆಂಟ್‌ ಅಥವಾ ಮನೆಯಲ್ಲಿ ಗಂಡ-ಹೆಂಡತಿಯಂತೆ ಒಟ್ಟಿಗೇ ಇರುವುದು. ಆದರೆ ಗಂಡ-ಹೆಂಡತಿಯರಲ್ಲ. ಕೇವಲ ಸಂಗಾತಿಗಳು. ಪರಸ್ಪರ ಇಷ್ಟಪಡುವ ತನಕ ಒಟ್ಟಿಗೆ ಇರಬಹುದು. ಮನಸ್ತಾಪ ಬಂದಾಗ ಜಾಗ ಖಾಲಿ ಮಾಡಬೇಕು. ಬೇಡವೆನಿಸಿದಾಗ ಹೊರಟು ಹೋಗಬಹುದು. ಯಾವುದೇ liability ಇಲ್ಲ. ಬೆಂಗಳೂರಿನಂಥ ನಗರದಲ್ಲಿ ಏನಿಲ್ಲವೆಂದರೂ ಐದು ಸಾವಿರ ಇಂಥ ಅಲ್ಪಕಾಲದ ಸಂಗಾತಿಗಳಿದ್ದಾರಂತೆ. ಆತನೂ ಕೆಲಸಕ್ಕೆ ಹೋಗುತ್ತಾನೆ, ಆಕೆಯೂ ಹೋಗುತ್ತಾಳೆ. ಸಾಯಂಕಾಲ ಇಬ್ಬರೂ ಒಟ್ಟಿಗೆ ಇರುತ್ತಾರೆ. ಅಮೆರಿಕಾದಂಥ ದೇಶದಲ್ಲಿ ಇಂಥ ಜೀವನ ಪದ್ಧತಿಯಿದೆ ಎಂದು ಕೇಳಿದವರಿಗೆ ಈಗ ನಮ್ಮೂರಿನಲ್ಲೇ ಇದು ರಾಜಾರೋಷವಾಗಿ ನಡೆಯುತ್ತಿರುವುದು ಗೊತ್ತಿರಲಿಕ್ಕಿಲ್ಲ. ಅನುಕೂಲಕ್ಕೊಬ್ಬ ಗಂಡ ಅಥವಾ ಹೆಂಡತಿ. ಎರಡು-ಮೂರು ವರ್ಷಗಳ ನಂತರ ನೀನ್ಯಾರೋ, ನಾನ್ಯಾರೋ.

ಮತ್ತೊಂದು ರೀತಿಯ ಮದುವೆ ನಿಧಾನವಾಗಿ ಜನಪ್ರಿಯವಾಗುತ್ತಿದೆ. ಇಲ್ಲಿ ಹುಡುಗ-ಹುಡುಗಿ ಮದುವೆಯಾಗಿ ಗಂಡ-ಹೆಂಡತಿಯರಾಗುತ್ತಾರೆ. ಆದರೆ ಆಗುವಾಗಲೇ ಕರಾರುಪತ್ರ ಮಾಡಿಕೊಂಡಿರುತ್ತಾರೆ. ಪರಸ್ಪರರ ಗುಣಸ್ವಭಾವ ಹೊಂದಿಕೆಯಾಗದೇ ಒಟ್ಟಿಗಿರುವುದು ದುಸ್ತರವಾದರೆ, ಕೋರ್ಟು ಕಟ್ಲೆ ಇಲ್ಲದೇ ಅವರವರ ದಾರಿ ಅವರಿಗೆ. ಬರುವಾಗ ತಂದ ಸಾಮಾನು, ಒಡವೆ, ಅವರವರು ತೆಗೆದುಕೊಂಡು ಹೋಗಬಹುದು. ಕರಾರಿನಂತೆ ನಡೆದುಕೊಳ್ಳಬೇಕು. ಇದೊಂದು ರೀತಿಯಲ್ಲಿ ಷರತ್ತಿನ ಮದುವೆ. ಈ ಕಾಂಟ್ರ್ಯಾಕ್ಟ್‌ ಮ್ಯಾರೇಜ್‌ ಮುಂದುವರಿದ ದೇಶಗಳಲ್ಲಿ ಜನಪ್ರಿಯವಾಗುತ್ತಿದೆ ಹಾಗೂ ಬೆಂಗಳೂರಿಗೂ ಕಾಲಿಟ್ಟಿದೆ.

ಒಬ್ಬಳೇ ಹೆಂಗಸಿನ, ಗಂಡಸಿನ ಜತೆ ಜೀವನಪೂರ್ತಿ ಇರಬೇಕೆಂಬ ನಿಯಮವಿಲ್ಲ. ಇವರು ಒಂಥರ ಗುತ್ತಿಗೆ ಗಂಡ ಅಥವಾ ಹೆಂಡತಿಯರು! ಗುತ್ತಿಗೆ ಅವಧಿ ಮುಗಿದ ನಂತರ ನೀನ್ಯಾರೋ, ನಾನ್ಯಾರೋ ಮದುವೆಯೂ ಒಂಥರ ಗುತ್ತಿಗೆಯೇ, ಅದು ಪ್ರತಿದಿನ renewal ಗೊಳ್ಳುತ್ತದೆ. ಆದರೆ ಹೇಳಿಕೊಳ್ಳುವುದಿಲ್ಲ ಅಷ್ಟೆ. ಇವರು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಇದು ಗುತ್ತಿಗೆ ಗಂಡ-ಹೆಂಡತಿಯರ ವಾದ. ಗುತ್ತಿಗೆಗೆ ಸಂಗಾತಿಗಳು ಬೇಕಾಗಿದ್ದಾರೆ ಎಂಬ ಜಾಹೀರಾತಿನಲ್ಲಿ ವಿವರ ಲಭ್ಯ.

ಇನ್ನೊಂದು ರೀತಿಯ ಮದುವೆಯೂ ನಿಧಾನವಾಗಿ acceptance ಪಡೆಯುತ್ತಿದೆ. ನಾವು ಮದುವೆಯಾಗೋಣ, ಆದರೆ ನಮಗೆ ಮಕ್ಕಳು ಬೇಡವೇ ಬೇಡ. children by choice ಅಂತಾರಲ್ಲ ಹಾಗೆ. ಮದುವೆಗೆ ಮೊದಲೇ ಮಕ್ಕಳು ಬೇಡವೆಂದು ನಿರ್ಧರಿಸುತ್ತಾರೆ. ಮಕ್ಕಳೆಂದರೆ ಕಿರಿಕಿರಿ, ಮಕ್ಕಳಾದರೆ ಫಿಗರ್‌ ಹೊರಟುಹೋಗುತ್ತದೆ. ಮಕ್ಕಳಾದರೆ ಜೀವನ ಎಂಜಾಯ್‌ ಮಾಡಲಿಕ್ಕಾಗೊಲ್ಲ, ನಾವಿಬ್ಬರೇ ಸುಖಿಸೋಣ ಎಂಬುದು ಈ ವರ್ಗಕ್ಕೆ ಸೇರುವ ಹುಡುಗ-ಹುಡುಗಿ ಸಿದ್ಧಾಂತ. ಸಾಮಾನ್ಯವಾಗಿ ಇವರಿಬ್ಬರೂ ಉದ್ಯೋಗಿಗಳೇ ಆಗಿರುತ್ತಾರೆ. ಇವರನ್ನು ಡಿಂಕ್ಸ್‌(DINKS- Double Income No Kids) ಅಂತಾರೆ. ಇವರಿಗೇನೂ ಕೊರತೆಯಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more