• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಗ ಮದುವೆಯೂ ಗುತ್ತಿಗೆ, ಕುಟುಂಬ ವ್ಯವಸ್ಥೆ ಇಕ್ಕಟ್ಟಿಗೆ!

By Staff
|

‘ಮದುವೆ’ ಎಂಬುದು ಸುಂದರವಾದ ಮೂರಕ್ಷರಗಳ ಪವಿತ್ರ ಬಂಧ. ಪ್ರೇಮದ ಅನುಬಂಧ. ಆದರೆ ಇಂದೇನಾಗಿದೆ? ಏರಿದ ದನಿಯಲ್ಲಿ ಹೆಂಡತಿಯನ್ನು ಕರೆದರೂ ಸಾಕು, ಆಕೆ ನಿಮ್ಮನ್ನು ಕಂಬಿ ಎಣಿಸುವಂತೆ ಮಾಡಬಹುದು. ಎಲ್ಲಿಗೆ ಬಂತು ಮದುವೆ?

Marriage : Past, Present and Future!ಸುಖವಾಗಿರುವುದೊಂದೇ ಜೀವನದ ಉದ್ದೇಶವಲ್ಲ. ಅದಕ್ಕಾಗಿ ಎಲ್ಲರೂ ಮದುವೆ ಆಗಲೇಬೇಕು ಎಂದು ಹಿಂದೊಮ್ಮೆ ವಕ್ರತುಂಡೋಕ್ತಿ ಬರೆದ ನೆನಪು. ಜೀವನದಲ್ಲಿ ಎಲ್ಲರೂ ದಡ್ಡರಲ್ಲ, ಕೆಲವರು ಅವಿವಾಹಿತರು ಎಂಬುದು ಮತ್ತೊಂದು ವಕ್ರತುಂಡೋಕ್ತಿ. ಮದುವೆ ಬಗ್ಗೆ ಇಂಥ ಅನೇಕ ಉಕ್ತಿಗಳನ್ನು ಹೇಳಬಹುದು. ಜೀವನದಲ್ಲಿ ಮದುವೆಯೇ ಸರ್ವಸ್ವ ಅಲ್ಲ. ಆದರೆ ಅದೊಂದು ಸರಿಯಿಲ್ಲದಿದ್ದರೆ ಜೀವನವೇ ಸರ್ವನಾಶವೆಂಬುದು ವಕ್ರತುಂಡೋಕ್ತಿ ಅಲ್ಲ. ಹಕೀಕತ್‌ ಏನೆಂದ್ರೆ ಅದು ಖರೇಮಾತು.

ಇದೇನೇ ಇರಲಿ, ಮದುವೆ ಬಗ್ಗೆ ನಮ್ಮಲ್ಲೊಂದು ಒಳ್ಳೆಯ ಭಾವನೆಯಿದೆ. ಮದುವೆ ಎಲ್ಲರ ಜೀವನದಲ್ಲೂ ಪ್ರಮುಖ ಘಟ್ಟ. ಮಕ್ಕಳು ಮದುವೆ ವಯಸ್ಸಿಗೆ ಬಂದರೆ ಈಗಲೂ ತಂದೆ-ತಾಯಿ ಮಾತು ಕೇಳೋದು (ಹಾಗೂ ಕೇಳದಿರುವುದು) ಮದುವೆ ವಿಷಯದಲ್ಲೊಂದೇ. ತಂದೆ-ತಾಯಿಗಳಿಗೂ ಅಷ್ಟೆ, ‘ಮಗನಿಗೆ, ಮದುವೆ ಎಂಬ ಶಾಸ್ತ್ರ ಮುಗಿಸಿದರೆ ನಮ್ಮ ಕರ್ತವ್ಯ ಮುಗಿಯಿತು’ ಎಂದು ಹೇಳುವುದನ್ನು ಕೇಳುತ್ತೇವೆ. ಮಗಳಿಗೆ ಮದುವೆ ಆಗಿಲ್ಲ, ಮದುವೆ ಮಾಡಬೇಕೆಂಬುದು ಹೆಣ್ಣು ಹೆತ್ತವರ ನಿತ್ಯ ಸಂಕಟ. ಮಗನಿಗೆ ಎಂಥ ಹೆಂಡತಿ ಸಿಗ್ತಾಳೋ, ಎಂಥ ಸೊಸೆ ಬರಬಹುದು ಎಂಬುದು ಗಂಡು ಹೆತ್ತವರ ಒಡಲ ಬೇಗುದಿಯೂ ಹೌದು.

ಮದುವೆಯೆಂದರೆ ನಮ್ಮಲ್ಲೊಂದು ವಿಚಿತ್ರಗಳ ನಡುವೆಯೂ ಪವಿತ್ರ ಕಲ್ಪನೆಯಿದೆ. ಹುಡುಗಿಯನ್ನು ಮನೆ ತುಂಬಿಸಿಕೊಳ್ಳುವ ಮುನ್ನ ತಂದೆ, ತಾಯಿ, ಅಜ್ಜ, ಅಜ್ಜಿ ಕುಲಗೋತ್ರ ಅಲುಗಾಡಿಸಿ, ಅವರೆಲ್ಲರ ಹಿನ್ನೆಲೆ-ಮುನ್ನೆಲೆ ವಿಚಾರಿಸಿ ಸಾಕಷ್ಟು ಅಳೆದು ತೂಗಿತರುವ ಸಂಪ್ರದಾಯ ಈಗಲೂ ಇದೆ. ಈಗ ಹದಿನೈದು ಇಪ್ಪತ್ತು ವರ್ಷಗಳ ಹಿಂದಿನವರೆಗೆ ಹುಡುಗ-ಹುಡುಗಿ ಲವ್‌ ಮಾಡಿದ್ದಾರೆಂದ್ರೆ, ಅ ಮನೆಯವರು ಅಥವಾ ಇವಳ ಮನೆಯವರಿಂದ ವಿರೋಧ ಗ್ಯಾರಂಟಿ. ಒಂದು ಕಡೆಯವರು ಮದುವೆಗೆ ಬರದೇಯಿರುವುದು ಸಾಮಾನ್ಯವಾಗಿತ್ತು.

ವಿಚಿತ್ರವೆಂದರೆ ಈಗಲೂ ಮನಸ್ಥಿತಿ ಬದಲಾಗಿಲ್ಲ. ಅಂದರೆ ಮದುವೆ ಬಗ್ಗೆ ನಮ್ಮಲ್ಲೊಂದು ಕಲ್ಪನೆಯಿದೆ. ಮದುವೆ ಅಂದ್ರೆ ಹುಡುಗಾಟ ಅಲ್ಲ, ಅದು ಜನ ಜೀವನ ಸಂಬಂಧ ಎಂದು ಮನೆಯ ಹಿರಿಯರು ಹೇಳುತ್ತಾರಲ್ಲ ಅಂಥದು. ಮದುವೆಯೆಂದರೆ ಹೀಗೇ ನಡೆಯಬೇಕೆಂದು ಅಘೋಷಿತ ಕಾನೂನು ನಿರ್ಮಿಸಿಬಿಟ್ಟಿದ್ದಾರೆ. ಸ್ವಲ್ಪ ಹೆಚ್ಚುಕಮ್ಮಿಯಾದರೂ ನಾವು ಸಹಿಸುವುದಿಲ್ಲ. ಅದರಲ್ಲೂ ಅಂತರ್ಜಾತಿ ವಿವಾಹ, ವಿಧವಾ ವಿವಾಹವನ್ನು ಇಂದಿಗೂ ಒಪ್ಪಿಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಿಲ್ಲ. ಸಮಾಜ ಬಹಳ ಮುಂದುವರಿದಿದೆಯೆಂದು ಎಲ್ಲರು ಒಪ್ಪಿದರೂ ಮದುವೆ ವಿಷಯದಲ್ಲಿ ನಾವು ಇನ್ನೂ ಹತ್ತನೇ ಶತಮಾನದ ಮಾಡೆಲ್‌ಗಳೇ!

ಮದುವೆಯೆಂಬುದು ಹುಡುಗ-ಹುಡುಗಿಯ ತೀರಾ ವೈಯಕ್ತಿಕ ವಿಷಯಗಳಾದರೂ ಅದಕ್ಕೆ ತಂದೆ-ತಾಯಿ, ಗುರು-ಹಿರಿಯರು ಹಾಗೂ ವಿದ್ವಜ್ಜನ ಅನುಮತಿ, ಅಂಕಿತ ಬೇಕೇಬೇಕು. ಈ ಸರಪಣಿಯಲ್ಲಿ ಸ್ವಲ್ಪ ಲೋಪವಾದರೂ ಟೀಕೆ, ಕೊಂಕು ತಪ್ಪಿದ್ದಲ್ಲ. ಇದಕ್ಕೆ ಕಾರಣಗಳಿಲ್ಲದಿಲ್ಲ. ಮದುವೆಗೂ ಕುಟುಂಬ ವ್ಯವಸ್ಥೆಗೂ ನೇರ ಸಂಬಂಧವಿದೆ. ಕುಟುಂಬ ವ್ಯವಸ್ಥೆಗೂ, ಸಮಾಜ ಜೀವನಕ್ಕೂ ಅನ್ಯೋನ್ಯ ನಂಟಿದೆ. ಮದುವೆ ಮುರಿದು ಬಿತ್ತೆಂದರೆ ಮನೆಯೂ ಮುರಿದು ಹೋಯಿತೆಂದೇ ಅರ್ಥ. ಮುರಿದ ಮನಸ್ಸು, ಮನೆಗಳಿರುವ ಸಮಾಜ ಅದೇಗೆ ಸ್ವಸ್ಥವಾಗಿರಲು ಸಾಧ್ಯ?

ಇಂದಿಗೂ ನಮ್ಮ ಕುಟುಂಬ ಭದ್ರವಾಗಿದೆಯೆಂದರೆ ದಾಂಪತ್ಯ ಬಂಧ ಗಟ್ಟಿಯಾಗಿದೆಯೆಂದೇ ಅರ್ಥ. ಅದಕ್ಕಾಗಿ ಮದುವೆ ಕೇವಲ union ಅಲ್ಲ great institution ಅನ್ನೋದು ಅದಕ್ಕಾಗಿ. ಇಂದಿಗೂ ಮಗಳಿಗೆ ವರನನ್ನು, ಮಗನಿಗೆ ವಧುವನ್ನು ಹುಡುಕುವುದನ್ನು ತಂದೆ-ತಾಯಿಗಳು ತಮ್ಮ ಜವಾಬ್ದಾರಿ ಎಂದೇ ಭಾವಿಸಿದ್ದಾರೆ ಹಾಗೂ ಇದನ್ನು ತಾವೇ ಇಟ್ಟುಕೊಂಡಿದ್ದಾರೆ. ನಮ್ಮ ಕುಟುಂಬ ವ್ಯವಸ್ಥೆ ಭದ್ರಬುನಾದಿಗೆ ಈ ಚಿಂತೆ, ಚಿಂತನೆಯೇ ತಳಹದಿ. ಶಿವಾಜಿ ಪಕ್ಕದ ಮನೆಯಲ್ಲೇ ಹುಟ್ಟಲಿ, ನಮ್ಮ ಮನೆಯಲ್ಲಿ ಬೇಡ (ಯಾಕೆಂದ್ರೆ ದೇಶಕ್ಕಾಗಿ ಪ್ರಾಣ ಕೊಡಬೇಕಾಗುತ್ತಲ್ಲಾ) ಎಂದು ಯೋಚಿಸುವಂತೆ ಪ್ರೇಮ ವಿವಾಹ, ಅಂತರ್ಜಾತಿ ವಿವಾಹಗಳೆಲ್ಲ ಸಿನಿಮಾಗಳಲ್ಲೇ ನೋಡಲು ಚೆಂದ ಎಂದು ಭಾವಿಸುವವರು ನಾವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more