ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗೆಗಿಂತ ಮಿಗಿಲಾದ ಧರ್ಮ, ಸಂಭ್ರಮ ಯಾವುದಿದೆ ಹೇಳಿ?

By Staff
|
Google Oneindia Kannada News


2006 ಕಾಲಗರ್ಭದಲ್ಲಿ ಲೀನಾವಾಗುತ್ತಿದೆ. 2007 ಕೈಬೀಸಿ ಕರೆಯುತ್ತಿದೆ. ನೀವಂತೂ ಹೊಸ ವರ್ಷವನ್ನು ನಗುವಿನಿಂದಲೇ ಆರಂಭಿಸಿ... ನಿಮ್ಮ ನಗುವಿಗಾಗಿ ಒಂದಿಷ್ಟು ನಗೆ ಚಟಾಕಿಗಳು.

  • ವಿಶ್ವೇಶ್ವರ ಭಟ್‌
  • Smile costs nothing... Keep Smiling!ಹೊಸ ವರ್ಷ ಕುಕ್ಕರಗಾಲಿನಲ್ಲಿ ಕುಳಿತಿದೆ. ಎಲ್ಲೆಡೆ ಸಂಭ್ರಮ, ಸಡಗರ. ಹೊಸ ವರ್ಷದ ಸ್ವಾಗತಕ್ಕೆ ಮನಸ್ಸಿನಲ್ಲಿ ಏನೇನೋ ಸಿದ್ಧತೆ, ಸ್ಕೀಮು. ಇವುಗಳ ಸಾಕಾರಕ್ಕೆ ರಜೆಗಳ ಹಿಂಡು. ಮನೆಸೆಲ್ಲ ನಿರಾಳ. ಏನೇ ಹೊಸ ಕೆಲಸವಿರಲಿ, ಹೊಸವರ್ಷದಲ್ಲಿ ಮಾಡೋಣ ಬಿಡಿ ಎಂಬ ಮೂಡು. ಎರಡು ಸಾವಿರದ ಆರನ್ನು ಕಳಿಸಿಕೊಡುವ ಈ ಹೊತ್ತಿನಲ್ಲಿ, ಮುಂದಿನದನ್ನು ಎದುರುಗೊಳ್ಳು ಈ ಸಂದರ್ಭದಲ್ಲಿ ಉಳಿದೆಲ್ಲ ವಿಷಯ ಬದಿಗಿಟ್ಟು ಕೆಲವು ತಮಾಷೆಗಳನ್ನು ನಿಮಗಾಗಿ ಕೊಡುತ್ತಿದ್ದೇನೆ. ನಿಮಗೆ ಇಷ್ಟವಾದೀತು ಅಂತ.

    ನಗೆಗಿಂತ ದೊಡ್ಡದೇನಿದೆ ಹೇಳಿ?

    *

    ಮೂವರು ಹೆಂಗಸರು ತಮ್ಮತಮ್ಮ ಗಂಡು ಮಕ್ಕಳ ಬಗ್ಗೆ ಅಭಿಮಾನದಿಂದ ಮಾತಾಡುತ್ತಿದ್ದರು. ಮೊದಲನೆಯವಳು ಹೇಳಿದಳು -ಆತ ಸನ್ಯಾಸಿಯಾಗಲು ಒಪ್ಪಿರುವುದು ನನಗೆ ಖುಷಿಯಾಗಿದೆ. ಎಲ್ಲರೂ ಆತನನ್ನು ಗೌರವದಿಂದ, ಪೂಜ್ಯಭಾವದಿಂದ ಕಾಣುವಾಗ ನನಗೆ ಅಷ್ಟೇ ಸಮಾಧಾನ.

    ಎರಡನೆಯವಳು ಹೇಳಿದಳು- ನನ್ನ ಮಗ ಈಗ ಮಠಾಧೀಶನಾಗಲು ಒಪ್ಪಿರುವುದು ಅತೀವ ಸಂತಸದ ವಿಚಾರ. ಈಗ ಎಲ್ಲರೂ ಆತನ ಮುಂದೆ ತಲೆಬಾಗುತ್ತಾರೆ. ಪಾದಮುಟ್ಟಿ ನಮಸ್ಕಿರಿಸುತ್ತಾರೆ. ಅದನ್ನು ನೋಡಿದರೆ ನನಗೆ ಮನಸ್ಸಿಗೆ ಸಮಾಧಾನವಾಗುತ್ತದೆ.

    ಮೂರನೆಯವಳು ಹೇಳಿದಳು -ನನ್ನ ಮಗ ಆರೂವರೆ ಅಡಿ ಎತ್ತರವಾಗಿದ್ದಾನೆ. ಆತ ಎಲ್ಲಿಗೆ ಹೋಗಲಿ, ಬರಲಿ, ಆತನನ್ನು ನೋಡಿದ ಕೂಡಲೇ ಜನ ತಮ್ಮಷ್ಟಕ್ಕೇ ಹೇಳಿಕೊಳ್ಳುತ್ತಾರೆ, ‘ಓ ಮೈ ಗಾಡ್‌!!!’.

    *

    ಇಬ್ಬರ ಮಧ್ಯೆ ಮಾತುಕತೆ ಸಾಗಿತ್ತು.

    ‘ಒಬ್ಬನ ಅಂತ್ಯಸಂಸ್ಕಾರವನ್ನು ಸಕಲ ರಾಜ ಮರ್ಯಾದೆಯಿಂದ ಮಾಡಬೇಕೆಂದರೆ ಆತ ಕನಿಷ್ಠ ಏನಾಗಿರಬೇಕು’ ಎಂದು ಕೇಳಿದ. ಅದಕ್ಕೆ ಮತ್ತೊಬ್ಬ ಹೇಳಿದ ‘ಆತ ಅಧಿಕಾರದಲ್ಲಿದ್ದಿರಬೇಕು. ಮುಖ್ಯಮಂತ್ರಿಯೋ, ಪ್ರಧಾನಿಯೋ, ರಾಜ್ಯಪಾಲನೋ, ರಾಷ್ಟ್ರಪತಿಯೋ ಆಗಿರಬೇಕು’. ಮೊದಲನೆಯವನು ಹೇಳಿದ -‘ಹೌದಾ, ಕನಿಷ್ಠಪಕ್ಷ ಆತ ಸತ್ತಿರಬೇಕೆಂದು ನಾನು ಭಾವಿಸಿದ್ದೆ’.

    *

    ಕೆಟ್ಟ ಮೇಲೆ ಬಂತು ಅಂತ ಎಲ್ಲರೂ ಹೇಳುತ್ತಾರೆ. ಅದಕ್ಕಿಂತ ಮುಂಚೆ ಬುದ್ಧಿ ಬರಬೇಕಾದರೆ ಏನು ಮಾಡಬೇಕು? ಮುಂಚಿತವಾಗಿ ಕೆಡಬೇಕು.

    *

    ಕಿಲೂ ರಾತ್ರಿ ಮನೆಗೆ ಬಂದ. ಕರೆಂಟ್‌ ಇರಲಿಲ್ಲ. ಮೊಂಬತ್ತಿ ಹಚ್ಚಿದ. ವಿಪರೀತ ಹಸಿವಾಗಿತ್ತು. ಮನೆಯಲ್ಲಿ ಊಟವಿರಲಿಲ್ಲ. ಮಾವಿನಹಣ್ಣು ಕತ್ತರಿಸಿದ. ಅದರಲ್ಲಿ ಹುಳವಿತ್ತು. ಎರಡನೆಯ ಹಣ್ಣು ಕತ್ತರಿಸಿದ. ಅದರಲ್ಲೂ ಹುಳವಿತ್ತು. ಮೂರನೆಯದನ್ನು ಕತ್ತರಿಸಿದ ಅದರಲ್ಲೂ ಹುಳವಿತ್ತು. ಮೊಂಬತ್ತಿ ಆರಿಸಿ ನಾಲ್ಕನೆಯ ಹಣ್ಣನ್ನು ಕತ್ತರಿಸಿ ತಿಂದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X