• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎರಡು ರೂ. ಬಾಚಣಿಕೆ ಬೇಡವೆಂದವ ಎರಡು ಕೋಟಿ ‘ಬಾಚಿ’ ಕೊಂಡಾನೇ?

By Staff
|


ಅಂದು ಇಂದಿರಾಗಾಂಧಿ ಜಾರ್ಜ್‌ರನ್ನು ಮುಗಿಸಲು ಏನೆಲ್ಲ ತಂತ್ರಗಳನ್ನು ಹೂಡಿದರೋ, ಅದನ್ನು ಈಗ ಅವರ ಸೊಸೆ ಸೋನಿಯಾ ಗಾಂಧಿ ಮುಂದುವರೆಸುತ್ತಿದ್ದಾರೆ.

  • ವಿಶ್ವೇಶ್ವರ ಭಟ್‌
ಜಾರ್ಜ್‌ ಫರ್ನಾಂಡಿಸ್‌ ಎರಡು ಕೋಟಿ ರೂ. ಲಂಚ ತಿಂದ್ರಂತೆ ಹೌದಾ?

ಈ ಪ್ರಶ್ನೆ ಬಹಳ ಹೊತ್ತಿನವರೆಗೆ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಿದ್ದಾಗ, ಎರಡು ವರ್ಷಗಳ ಹಿಂದೆ ಬೆಂಗಳೂರಿನ ಬಾಲಬ್ರೂಯಿ ಗೆಸ್ಟ್‌ಹೌಸಿನ ಹುಲ್ಲುಹಾಸಿನ ಮೇಲೆ ಜಾರ್ಜ್‌ ಜತೆ ಮಾತನಾಡುವಾಗ ಅವರು ಹೇಳಿದ ಮಾತುಗಳು ನೆನಪಾದವು

-‘ಬೆಂಗಳೂರಿನಲ್ಲಿ ಪಿತ್ರಾರ್ಜಿತವಾಗಿ ಒಂದು ಮನೆಯಿದೆಯೆಂಬುದನ್ನು ಬಿಟ್ಟರೆ ನನ್ನದೆನ್ನುವ ಒಂದು ಮನೆ ಸಹ ಇಲ್ಲ. ಆ ಮನೆಯೂ ನನ್ನದಾಗಿಲ್ಲ. ನಲವತ್ತು ವರ್ಷಗಳ ಹಿಂದೆ ಮುಂಬೈ ಟ್ಯಾಕ್ಸಿ ಚಾಲಕರೆಲ್ಲ ಸೇರಿ ನಾನು ಮೊದಲ ಬಾರಿಗೆ ಸಂಸತ್ಸದಸ್ಯನಾದಾಗ ನನಗೊಂದು ಫಿಯೆಟ್‌ ಕಾರನ್ನು ಕೊಡಿಸಿದ್ದರು. 1995ರಲ್ಲಿ ಅದನ್ನು ವಾಪಸ್‌ ಪಡೆದು ಹೊಸ ಫಿಯೆಟ್‌ ಕಾರು(MH-03-HS8799) ಕೊಟ್ಟರು. ಅದನ್ನು ಬಿಟ್ಟರೆ ನನ್ನಲ್ಲಿ ಬೇರೆ ವಾಹನಗಳಿಲ್ಲ. ದೇಶದಲ್ಲೆಲ್ಲೂ ನನಗೆ ಸೈಟುಗಳಿಲ್ಲ. ಬ್ಯಾಂಕ್‌ ಬ್ಯಾಲೆನ್ಸ್‌ ಇಲ್ಲ, ಷೇರುಪತ್ರಗಳಿಲ್ಲ. ನಲವತ್ತು ವರ್ಷಗಳ ಹಿಂದೆ ‘ದೋ ಬೀಘಾ ಜಮೀನ್‌’ ನೋಡಿದ ಬಳಿಕ ಸಿನಿಮಾ ನೋಡಿಲ್ಲ. ಟಿವಿ ನೋಡುವುದಿಲ್ಲ. ಹೀಗಾಗಿ ಮನೆಯಲ್ಲಿ ಟಿವಿ ಇಲ್ಲ. ಐದು ಜತೆ ಪೈಜಾಮ, ಜುಬ್ಬಾಗಳನ್ನು ಬಿಟ್ಟರೆ ಬೇರೆ ಬಟ್ಟೆಬರೆಗಳಿಲ್ಲ. ಅವುಗಳನ್ನು ನಾನೇ ತೊಳೆದುಕೊಳ್ಳುವುದರಿಂದ ಮನೆಯಲ್ಲಿ ವಾರ್ಷಿಗ್‌ ಮಶೀನ್‌ ಇಲ್ಲ. ಇಸ್ತ್ರಿ ಮಾಡಲು ಸಮಯ ಇಲ್ಲದ್ದರಿಂದ ಒಣಗಿದ ಬಟ್ಟೆಗಳನ್ನೇ ಹಾಕಿಕೊಳ್ಳುತ್ತೇನೆ. ಕೂದಲು ಉದುರುತ್ತಿರುವುದರಿಂದ ಬಾಚುವುದಿಲ್ಲ. ಹೀಗಾಗಿ ಬಾಚಣಿಗೆ ಅಗತ್ಯವೂ ಇಲ್ಲ. ಕೂದಲು ಇದ್ದಾಗಲೂ ಅಗತ್ಯವಿರಲಿಲ್ಲ. ಮೊಬೈಲು ಬೇಕೆಂದು ಅನಿಸಿಲ್ಲ. ಹೀಗಾಗಿ ಅದನ್ನೂ ಇಟ್ಟುಕೊಂಡಿಲ್ಲ. ಸಮಯ ನೋಡಿತಕೊಳ್ಳಲು ಹಳೆವಾಚು, ಓದಲು ಕನ್ನಡಕ ಮತ್ತು ಮೆಟ್ಟಲು ಒಂದು ಜೊತೆ ಚಪ್ಪಲಿ ಇದೆ. ಆದರೆ ಬೇಕೋ ಬೇಡವೋ ಮೈತುಂಬಾ ವಿವಾದಗಳಂತೂ ಇದ್ದೇ ಇವೆ. ’ ಎಂದು ಜಾರ್ಜ್‌ ಬಾಯ್ತುಂಬಾ ನಕ್ಕಿದ್ದರು.

ಜಾರ್ಜ್‌ ಎಲ್ಲಿಗೇ ಹೋಗಲಿ, ಬರಲಿ ಪುಟ್ಟ ಸೂಟ್‌ಕೇಸ್‌ ಬಿಟ್ಟರೆ ಮತ್ತೇನೂ ಇರುವುದಿಲ್ಲ. ಅದರ ತುಂಬಾ ಪುಸ್ತಕ, ಕಾಗದಪತ್ರ, ಪತ್ರಿಕೆಗಳನ್ನು ಬಿಟ್ಟರೆ ಎರಡು ಜತೆ ಬಟ್ಟೆ. ಪುಟಾಣಿ ಮಕ್ಕಳಿಗೆ ಕೊಡಲೆಂದು ಜುಬ್ಬಾದಲ್ಲಿ ನಾಲ್ಕೈದು ಚಾಕಲೇಟು. ಮಂತ್ರಿಯಾಗಿದ್ದಾಗ ಸರ್ಕಾರಿ ಕಾರು ಇತ್ತು. ವಿಮಾನದಲ್ಲಿ ಹೋಗುವಾಗ ಎಕಾನಮಿ ಕ್ಲಾಸಿನಲ್ಲಿ ಪಯಣ. ಆಗಲೂ ಈಗಲೂ. ಅನೇಕ ಸಲ ದಿಲ್ಲಿಯ ಮನೆಯಿಂದ ಸಂಸತ್ತಿಗೆ ಕಾಲ್ನಡಿಗೆಯಲ್ಲೇ ಪಯಣ. ಊಟ ಹೇಗಿದ್ದರೂ ಪರವಾಗಿಲ್ಲ. ರಾತ್ರಿ ಊಟ ಮಾಡಲೇಬೇಕೆಂದಿಲ್ಲ. ಎರಡು ಸೇಬು ಒಂದು ಲೋಟ ಹಾಲು ಸಿಕ್ಕರೆ ಸಾಕು ಸಾಕು. ಮಲಗಲು ಪಲ್ಲಂಗ ಬೇಕಿಲ್ಲ. ಹಾಸಿಗೆ ಇರಲೇಬೇಕೆಂದಿಲ್ಲ. ಚಾಪೆ ಸಿಕ್ಕರೆ ಕಣ್ತುಂಬಾ ನಿದ್ದೆ. ಫ್ಯಾನು, ಎ.ಸಿ ಇಲ್ಲದಿದ್ದರೇ ಒಳ್ಳೆಯದು. ಹೇಗೆ ಬೇಕೋ ಹಾಗೆ ಜೀವಿಸುವುದು ರೂಢಿಯಾಗಿದ್ದರಿಂದ ಕೈಗೊಬ್ಬ ಕಾಲಿಗೊಬ್ಬ ಆಳುಕಾಳು ಬೇಕಿಲ್ಲ.

ದಿಲ್ಲಿಯ 3, ಕೃಷ್ಣ ಮೆನನ್‌ ಮಾರ್ಗ್‌ನಲ್ಲಿರುವ ಜಾರ್ಜ್‌ ಮನೆಗೆ(ಸರಕಾರಿ ಮನೆ) ಗೇಟೂ ಇಲ್ಲ. ಬಾಗಿಲುಗಳೂ ಇಲ್ಲ. ದೇಶದ ರಕ್ಷಣಾ ಮಂತ್ರಿಯಾದಾಗಲೂ ಅಷ್ಟೆ. ಮಂತ್ರಿಯಾದಾಗಲೂ ಮನೆ ಸುಣ್ಣಬಣ್ಣ ಕಾಲಲಿಲ್ಲ. ರಕ್ಷಣಾ ಮಂತ್ರಿಯಾದಗಲೂ ಮನೆಗೆ ಕಾವಲುಗಾರರು, ಭದ್ರತೆ, ಸೆಕ್ಯೂರಿಟಿ, ಹಾಳುಮೂಳು ಯಾವವೂ ಇರಲಿಲ್ಲ. ಅವರು ರಕ್ಷಣಾ ಮಂತ್ರಿಯಾಗಿದ್ದಾಗ ಸಚಿವ ಅನಂತಕುಮಾರ್‌ರ ದಿಲ್ಲಿ ಮನೆಯಲ್ಲಿ ರಾತ್ರಿ ಊಟ ಮಾಡಿ ಅನಂತರ ಮೂರ್ನಾಲ್ಕು ಗಂಟೆ ಹರಟೆ ಹೊಡೆದು ಮಧ್ಯರಾತ್ರಿ ಎರಡು ಗಂಟೆ ಹೊತ್ತಿಗೆ ಆ ನೀರವ, ನಿರ್ಜನ ದಾರಿಯಲ್ಲಿ ಒಬ್ಬರೇ ಸುಮಾರು ಎರಡು ಕಿ.ಮೀ ನಡೆದು ಮನೆ ಸೇರಿದ್ದರು.

ಕಳೆದ ನಲವತ್ತು ವರ್ಷಗಳಿಂದ ಸಂಸತ್ಸದಸ್ಯ ಅಥವಾ ಮಂತ್ರಿ. ಹೀಗೆ ಒಂದಿಲ್ಲೊಂದು ಜವಾಬ್ದಾರಿ ನಿರ್ವಹಿಸುತ್ತಾ ರಾಜಕೀಯ ಸಂತನಂತಿರುವ ಜಾರ್ಜ್‌ ಎರಡು ಕೋಟಿ ರೂ.ಲಂಚ ತಿಂದ್ರಂತೆ ಅಂದರೆ ಹೇಗೆ ನಂಬುವುದು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more