ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮತನ ಅನ್ನೋದು ಯಾರೂ ಕದಲಿಸದ, ಕದಿಯಲಾರದ ಆಸ್ತಿ

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಯಾರಿಗೂ ಏನೂ ಮಾಡಲಿಕ್ಕಾಗುವುದಿಲ್ಲ. ಆದರೆ ನಮ್ಮೊಳಗೆ ನಮ್ಮತನ ಎಂಬ ಮೂಲಸೆರೆ ಇದ್ದರೆ ಯಾರೂ ಏನೂ ಮಾಡಲಾರರು. ಈ ನಮ್ಮತನವೆಂಬುದು ಯಾರೂ ಕದಲಿಸದ, ಕದಿಯಲಾಗದ ನಮ್ಮೊಳಗೇ ಇರುವ, ಕಣ್ಣಿಗೆ ಕಾಣದ ಆದರೆ ಕರೆದಾಗ ಬರುವ ಸಂಗತಿ. ನಮ್ಮತನವೆಂಬುದು ನಮ್ಮ ವ್ಯಕ್ತಿತ್ವದ ಭಾಗ ಅಥವಾ ಅದೇ. ಅದು ನಮ್ಮನ್ನು ರೂಪಿಸುವ, ನಿರೂಪಿಸುವ ಅಂಶವೂ ಹೌದು. ಈ ನಮ್ಮತನವೆಂಬುದೊಂದು ಇದ್ದರೆ ನಾವು ಎಲ್ಲಿದ್ದರೂ ಸುರಕ್ಷಿತ. ನಮ್ಮನ್ನು ಎಲ್ಲಿಗೆ ಒಯ್ದು ಬಿಟ್ಟರೂ ನಾವು ಅಲ್ಲೊಂದು ಅಚ್ಚರಿ ಹುಟ್ಟಿಸಬಲ್ಲೆವು. ಒಬ್ಬ ಉತ್ತಮ ಬಡಗಿಯನ್ನು ಒಂದು ಕೋಣೆಯಾಳಗೆ ಕೂಡಿಹಾಕಿ, ಆತನಿಗೊಂದು ಕಟ್ಟಿಗೆ ಹಾಗೂ ಹತ್ಯಾರಗಳನ್ನು ಕೊಡಿ. ಆತ ಅದ್ಭುತವೆನಿಸುವ ಕಲಾಕೃತಿಯನ್ನು ರಚಿಸಬಲ್ಲ. ಮೊಗಲರ ಕಾಲದಲ್ಲಿ ಸೇತುವಾಹನ ಸಿದ್ಧಿ ಎಂಬ ಶಿಲ್ಪಿಯಿದ್ದ. ಆತನ ಜತೆಗೆ ಸುಮಾರು ಇನ್ನೂರು ಶಿಷ್ಯಂದಿರಿದ್ದರು. ಸೇತುವಾಹನ ಸಿದ್ಧಿ ಹಾಗೂ ಆತನ ಶಿಷ್ಯಂದಿರಿಗೆ ಕಡೆಯುವುದು, ಕುಸುರಿ ಕೆಲಸ ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ಜೈಲಿನಲ್ಲಿ ಇವರಿಗೆ ಕೊಡಬಾರದ ಕಷ್ಟ ಕೊಡಲಾಯಿತು. ಕೆಲವರ ಬೆರಳುಗಳನ್ನು ಕತ್ತರಿಸಲಾಯಿತು. ಸೇತುವಾಹನ ಸಿದ್ದಿ ದೊರೆಯ ಮುಂದೆ ಅಂಗಲಾಚಿದ. ನಮಗೆ ಶಿಲ್ಪ ಕುಸುರಿಯೇ ಕಸುಬು. ಅದೇ ಜೀವನಾಧಾರ. ದಯವಿಟ್ಟು ಬೆರಳ ಹೊರತಾಗಿ ಮತ್ತೇನನ್ನು ಬೇಕಾದರೂ ಕತ್ತರಿಸಿ. ಆ ನೋವನ್ನು ಸಹಿಸಿಕೊಳ್ಳುತ್ತೇವೆ. ಆದರೆ ಅವರ ಕಣ್ಣೀರಿಗೆ ದೊರೆಯ ಮನ ಮಿಡಿಯಲಿಲ್ಲ. ಎಲ್ಲರ ಬೆರಳುಗಳನ್ನು ಕತ್ತರಿಸಲಾಯಿತು! ಹಾಗೆಂದು ಜೈಲಿನಿಂದ ಬಿಡುಗಡೆಗೊಳಿಸಲಿಲ್ಲ. ಸೇತುವಾಹನ ಸಿದ್ಧಿ ಜೈಲಿನಲ್ಲಿ ತನ್ನ ಶಿಷ್ಯಂದಿರಿಗೆ ಹೇಳಿದ -‘ನೋಡಿ, ಬೆರಳುಗಳಿಲ್ಲವೆಂದು ದುಃಖಿಸುತ್ತಾ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ನಮಗೆ ಗೊತ್ತಿರುವುದೆಂದರೆ ಅದೊಂದೇ ಕಸುಬು. ನಮ್ಮತನವಿರುವುದು ಕೂಡ ಇದೇ ಕಸುಬಿನಲ್ಲಿ. ಅದಿಲ್ಲದೇ ನಾವಿಲ್ಲ. ಆದ್ದರಿಂದ ನಾವೆಲ್ಲ ನಾಳೆಯಿಂದ ಕಾಲಿನಿಂದ ಕೆತ್ತುವುದನ್ನು ಅಭ್ಯಾಸ ಮಾಡೋಣ’. ಶಿಷ್ಯಂದಿರು ಮೂಕವಿಸ್ಮಿತರಾದರು. ಕಾಲಿನಿಂದ ಕೆತ್ತುವುದಾದರೂ ಹೇಗೆ?‘ಚಿಂತೆ ಬೇಡ ನಾನು ಕಲಿಸುತ್ತೇನೆ. ನಮ್ಮತನ ಎಂಬುದು ಬೆರಳುಗಳಲ್ಲಿ ಇಲ್ಲ. ಹೀಗಿರುವಾಗ ಬೆರಳುಗಳಿಲ್ಲದಿದ್ದರೂ ಕೆತ್ತುವುದು ಕಷ್ಟವಲ್ಲ’ ಎಂದ ಗುರು ಸೇತುವಾಹನ ಸಿದ್ಧಿ. ಸುಮಾರು ಐದು ವರ್ಷಗಳ ಕಾಲ ಜೈಲಿನಲ್ಲಿಯೇ ಅವರೆಲ್ಲ ಕಾಲಿನಿಂದ ಕೆತ್ತುವುದನ್ನು ಅಭ್ಯಾಸ ಮಾಡಿದರು. ನಮ್ಮತನವೆಂಬುದು ಇತ್ತಲ್ಲ ಅದು ಅವರಲ್ಲಿ ಹಿಂದೆಂದಿಗಿಂತಲೂ ಜಾಗೃತವಾಗಿ ಸೆಟೆದು ನಿಂತಿತ್ತು. ನೋಡ ನೋಡುತ್ತಿದ್ದಂತೆ ಅವರೆಲ್ಲ ಮೊದಲಿನಂತೆ ಉತ್ತಮ ಶಿಲ್ಪಿಗಳಾದರು. ಮೊಂಡು ಕೈಗಳಲ್ಲಿ ಹತ್ಯಾರ ಹಿಡಿದು ಕಾಲಿನಿಂದ ಕೆತ್ತಲಾರಂಭಿಸಿದರೆಂದರೆ ಶಿಲ್ಪದಲ್ಲಿ ಮೋಹಕ ಆಕೃತಿಗಳು ಹೊರಹೊಮ್ಮುತ್ತಿದ್ದವು. ಈ ಶಿಲ್ಪಿಗಳ ಕಲೆಗಾರಿಕೆ, ಛಲ ಕಂಡು ಬೆರಗಾದ ಷಹಜಹಾನ್‌, ಇವರ ಕಲಾಕೃತಿಗಳನ್ನು ನೋಡಿ ದಂಗಾದ ಷಹಜಹಾನ್‌, ತಾಜ್‌ಮಹಲ್‌ ಕಟ್ಟುವಾಗ ಕೆಲ ಕುಸುರಿ ಕಸುಬುಗಳನ್ನು ನೀಡಿದ. ಷಹಜಾನ್‌ಇವರ ಕಲಾಕೃತಿಗಳನ್ನು ನೋಡಿ ದಂಗಾದ. ಷಹಾಜಹಾನ್‌ ಅವರ ಬೆರಳುಗಳನ್ನು ಕತ್ತರಿಸಿರಬಹುದು.ಆದರೆ ಅವರೊಳಗಿದ್ದ ‘ತಮ್ಮತನ’ ವನ್ನು ಕತ್ತರಿಸಲು ಅವನಿಂದ ಆಗಲಿಲ್ಲ!

ಜೆಫ್ರಿ ಆರ್ಚರ್‌ ಎಂಬ ಸೊಗಸಾದ ಇಂಗ್ಲಿಷ್‌ ಕಾದಂಬರಿಕಾರನ ಕತೆಯೂ ಹೀಗೇ. ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜೆಫ್ರಿ ಜೈಲು ಸೇರಿದ. ಜೆಫ್ರಿಗೆ ಬರೆಯುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಒಂದಕ್ಕಿಂತ ಮೊತ್ತೊಂದು ಭಲೇ ಕಾದಂಬರಿ ಕೊಟ್ಟವನೀತ. ವಿಚಿತ್ರ ಕೇಸಿನಲ್ಲಿ ಸಿಕ್ಕಿಕೊಂಡ. ಜೈಲಿನಲ್ಲಿ ಜೆಫ್ರಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಜೈಲಿನಿಂದ ಹೊರಬರುವ ಹೊತ್ತಿಗೆ ಎರಡು ಕಾದಂಬರಿಗಳನ್ನು ಬರೆದು ಮುಗಿಸಿದ್ದ. ಪ್ರತಿದಿನ ಜೈಲಿನಲ್ಲಿ ತಾನೇನು ಮಾಡಿದೆ, ಜೈಲಿನ ಪರಿಸರ, ಮಾನಸಿಕ ಸ್ಥಿತಿ, ಕೈದಿಗಳ ಜತೆಗಿನ ಒಡನಾಟ, ಜೈಲು ನಿಯಮ, ಕೈದಿಗಳ ವಿಚಿತ್ರ ಗೋಳು... ಇವನ್ನೆಲ್ಲ ಸೇರಿಸಿ ಅದಕ್ಕೊಂದು ಕಥನರೂಪ ಕೊಟ್ಟ. ಜೆಫ್ರಿಯ ಪುಸ್ತಕಕ್ಕೆ ಜನ ಕಾದು ಕುಳಿತಿದ್ದರು. ಪುಸ್ತಕ ಕಳ್ಳೇಪುರಿಯಂತೆ ಮಾರಾಟವಾಯಿತು. ಆತನ ಕಾದಂಬರಿ ಓದಿದವರು,‘ಜೆಫ್ರಿಗೆ ವರ್ಷಕ್ಕೊಮ್ಮೆಯಾದರೂ ಕಡ್ಡಾಯ ಜೈಲು ಶಿಕ್ಷೆ ವಿಧಿಸಬೇಕು. ಒಳ್ಳೊಳ್ಳೆ ಕಾದಂಬರಿಯನ್ನಾದರೂ ಬರೆಯುತ್ತಾನೆ’ಎಂದರು. ಆತನೊಳಗಿನ ತನ್ನತನವೆಂಬುದು ಜಾಗೃತವಾಗಿದ್ದರಿಂದ ಅದೆಲ್ಲ ಸಾಧ್ಯವಾಯಿತು.

ನಿಮಗೆ ಸುನೀಲ್‌ ಗವಾಸ್ಕರ್‌ ಬಗ್ಗೆ ಗೊತ್ತು. ಕೆಲ ತಿಂಗಳ ಹಿಂದೆ ಗವಾಸ್ಕರ್‌ ಹೇಳುತ್ತಿದ್ದರು. ಸೆಂಚುರಿಯಲ್ಲಿ ವಿಶ್ವದಾಖಲೆ ಸೃಷ್ಟಿಸಿ ಗವಾಸ್ಕರ್‌ ಹೇಳುತ್ತಿದ್ದರು. ಸೆಂಚುರಿಯಲ್ಲಿ ವಿಶ್ವದಾಖಲೆ ಸೃಷ್ಟಿಸಿದವ. ಮೋಹಕ ಹೊಡೆತಗಳ ಅದ್ಭುತ ಬ್ಯಾಟ್ಸ್‌ಮನ್‌. ಗವಾಸ್ಕರ್‌ಬ್ಯಾಟಿಂಗ್‌ಗೆ ನಿಂತಿರೆ ಎಂಥ ಬೌಲರ್‌ಗಾದರೂ ಚಲ್ಲಣದಲ್ಲಿ ತಲ್ಲಣ. ಗವಾಸ್ಕರ್‌ ಯಾರನ್ನೂ ಬಿಟ್ಟಿವನಲ್ಲ. ಯಾವುದೇ ಸ್ಟೇಡಿಯಮ್‌ನಲ್ಲಿ ಶತಕ ಹೊಡೆಯದೇ ಬಿಟ್ಟವನಲ್ಲ. ಕ್ರಿಕೆಟ್‌ ಪುಟಗಳಲ್ಲಿ ಗವಾಸ್ಕರ್‌ಗೆ ಅಗ್ರಪಂಕ್ತಿ. ಬದುಕಿದ್ದಾಗಲೇ ದಂತಕತೆಯಾದವ.

Sunil Gavaskarಈ ಗವಾಸ್ಕರ್‌ ಮುಂಬೈನ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದಾಗ ಒಂದು ವಿಚಿತ್ರ ನಡೆಯಿತು. ಗವಾಸ್ಕರ್‌ನ ತಾಯಿ ಹಾಗೂ ಮೀನುಗಾರನ ಹೆಂಡತಿ ಒಂದೇ ದಿನ ಗಂಡು ಮಗುವಿಗೆ ಜನ್ಮ ನೀಡಿದರು. ಇಬ್ಬರೂ ಒಂದೇ ದಿನ ಗಂಡು ಮಗುವಿಗೆ ಜನ್ಮ ನೀಡಿದರು. ನರ್ಸ್ಗ್‌ಳು ಸ್ನಾನ ಮಾಡಿಸುವಾಗ ಆಕಸ್ಮಾತ್‌ ಶಿಶುಗಳು ಅದಲುಬದಲಾದವು. ಅಂದರೆ ಗವಾಸ್ಕರ್‌ ತಾಯಿ ಪಕ್ಕದಲ್ಲಿದ್ದ ತೊಟ್ಟಿಲಿನಲ್ಲಿ ಮೀನುಗಾರನ ಮಗು ಹಾಗೂ ಮೀನುಗಾರನ ಹೆಂಡತಿಯಾಗಲಿ ಗಮನಿಸಲಿಲ್ಲ. ಮರುದಿನ ಮೀನುಗಾರನ ಹೆಂಡತಿ ಆಸ್ಪತ್ರೆಯಿಂದ ಡಿಸ್‌ಜಾರ್ಜ್‌ ಮಾಡಿಸಿಕೊಂಡು ಹೊರಟು ಹೋದಳು. ಈ ಮಧ್ಯೆ ಮಗುವಿಗೆ ಹಾಲು ಕುಡಿಸುವಾಗ ಗವಾಸ್ಕರ್‌ನ ತಾಯಿಗೆ ಏನೋ ಕಸಿವಿಸಿ, ಗೊಂದಲ. ಈ ಮಗು ತನ್ನದಾಗಿರಲಿಕ್ಕಿಲ್ಲವೆಂಬ ಅನುಮಾನ. ಆದರೂ ಸುಮ್ಮನಿದ್ದಳು. ಯಾವಾಗ ಮೀನುಗಾರನ ಮೀನುಗಾರನ ಹೆಂಡತಿ ಡಿಸ್‌ಚಾರ್ಜ್‌ ಆಗಿ ಆಸ್ಪತ್ರೆಯಿಂದ ಹೊರಬಿದ್ದಳೋ ಗವಾಸ್ಕರ್‌ ತಾಯಿಗೆ ತಳಮಳ ಹೆಚ್ಚಾಯಿತು. ತನ್ನ ಪಕ್ಕದಲ್ಲಿ ಮಲಗಿದ ಮಗು ತನ್ನದಲ್ಲವೆಂದು ಅನಿಸಲಾರಂಭಿಸಿತು. ಕ್ಷಣಕ್ಷಣಕ್ಕೆ ಈ ಗುಮಾನಿ ಜಾಸ್ತಿಯಾಗುತ್ತಾ ಹೋಯಿತು. ಕೊನೆಗೆ ತಡೆಯಲಾರದೇ ನರ್ಸ್‌ ಹಾಗೂ ಡಾಕ್ಟರ್‌ ಮುಂದೆ ತನ್ನ ಸಂದೇಹ ವ್ಯಕ್ತಪಡಿಸುತ್ತಾ ತನ್ನ ಮಗುವನ್ನು ತನಗೆ ಕೊಡಬೇಕೆಂದು ಜೋರಾಗಿ ಅಳುತ್ತಾ ಬೊಬ್ಬೆ ಹೊಡೆಯಲಾರಂಭಿಸಿದಳು. ವೈದ್ಯರು ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ ಅವಳ ಅಳು ನಿಲ್ಲುತ್ತಿಲ್ಲ.

ಕೊನೆಗೆ ಮೀನುಗಾರನ ವಿಳಾಸ ಪತ್ತೆಹಚ್ಚಲಾಯಿತು. ಆತನ ಹೆಂಡತಿಗೆ ಶಿಶು ಅದಲುಬದಲಾದ ಸಂಗತಿಯನ್ನು ವೈದ್ಯರು ಮನವರಿಕೆ ಮಾಡಿಕೊಟ್ಟರು. ಪುಟ್ಟ ಕಂದ ಗವಾಸ್ಕರ್‌ಮೀನುಗಾರನ ಮನೆಯ ತೊಟ್ಟಿನಲ್ಲಿ ನಗುನುಗುತ್ತಾ ಮಲಗಿದ್ದ. ಆತನನ್ನು ಅಲ್ಲಿಂದ ಎತ್ತಿ ತಂದು ಗವಾಸ್ಕರ್‌ತಾಯಿ ಪಕ್ಕದಲ್ಲಿ ಮಲಗಿಸಿದಾಗಲೇ ಆಕೆಗೆ ಹೋದ ಜೀವ ಮರಳಿ ಬಂದಂತಾಯಿತು.

‘ಒಂದು ವೇಳೆ ಸುನೀಲ್‌ ಗವಾಸ್ಕರ್‌ ಮೀನುಗಾರನ ಗುಡಿಸಲಲ್ಲಿ ಬೆಳೆದು ದೊಡ್ಡವನಾಗಿದ್ದರೆ?’

ಹಾಗೆಂದು ಸುನೀಲ್‌ ಗವಾಸ್ಕರ್‌ ಮುಂದೆ ಸಹಜ ಕುತೂಹಲದ ಪ್ರಶ್ನೆಯ ಬೌಲಿಂಗ್‌ ಎಸೆದಿದ್ದಾಯಿತು. ಆತ ನೀಡಿದ ಉತ್ತರ ಆಶ್ಚರ್ಯ ಹುಟ್ಟಿಸಿತ್ತು. ಸುನೀಲ್‌ ಗವಾಸ್ಕರ್‌ ಯಾಕೆ ಸುನೀಲ್‌ ಗವಾಸ್ಕರ್‌ ಎಂಬುದು ಆ ಕ್ಷಣಕ್ಕೆ ತಿಳಿಯಿತು. ನಮ್ಮತನ ಎಂಬುದು ಎಷ್ಟೊಂದು ಮುಖ್ಯ ಎಂಬುದು ಸಹ. ನಮ್ಮಲ್ಲಿ ಗಟ್ಟಿತನ, ಸಾಮರ್ಥ್ಯ, ಧಮ್‌,ತಾಕತ್ತಿದ್ದರೆ ಹಾಗೂ ಇವೆಲ್ಲ ಸೇರಿ ಅವು ನಮ್ಮತನವಾದರೆ ಯಾರೂ ಸಹ ನಮ್ಮನ್ನು ಕದಲಿಸುವುದಿಲ್ಲ. ಬೆಕ್ಕನ್ನು ಹೇಗೆ ಬೇಕಾದರೂ ಎಸೆಯಿರಿ, ಬೇಕಾದರೆ ಎಷ್ಟೇ ರಭಸದಿಂದ ಎಸೆಯಿರಿ ಅದು ನಾಲ್ಕೂ ಪಾದವನ್ನು ನೆಲಕ್ಕೆ ಊರಿಯೇ ಬೀಳುತ್ತದೆ. ಈ ನಮ್ಮತನವೆಂಬ ಗಟ್ಟಿತನವನ್ನು ಹೊಂದಿರುವವರನ್ನು ಎಲ್ಲಿಗೇ ಅಟ್ಟಿ ಅವರು ಅಲ್ಲಿ ಖುಷಿಖುಷಿಯಿಂದ ಹಸನಾದ ಬದುಕು ಕಟ್ಟಿಕೊಂಡಿರುತ್ತಾರೆ. ತಮಗೆ ಒದಗಿ ಬಂದ ಕಷ್ಟದ ಕುರಿತು ಅವರು ಕೊರಕೊರ ಎಂದು ಕೊರಗುವುದಿಲ್ಲ. ತಮ್ಮ ಸಾಮರ್ಥ್ಯವನ್ನು ಪ್ರಕಟಿಸಿರುತ್ತಾರೆ.

‘ಜರ್‌ಕಡ್ತಾ, ನೀವು ಮೀನುಗಾರನ ಮನೆಯಲ್ಲಿಯೇ ಬೆಳೆಯುವಂತಾಗಿದ್ದರೆ ಏನಾಗುತ್ತಿತ್ತು? ಆಗ ನೀವೇನಾಗುತ್ತಿದ್ದಿರಿ?’ ಪ್ರಶ್ನೆಯ ಬೌಲಿಂಗ್‌ ಪುಟಿಯಿತು. ಗವಾಸ್ಕರ್‌ ನಗುತ್ತಾ ನುಡಿದರು-‘ಅಲ್ಲೂ ಸೆಂಚುರಿ ಹೊಡೆಯುತ್ತಿದ್ದೆ. ಪ್ರತಿದಿನ ನೂರಾರು ಮೀನುಗಳನ್ನು ಹಿಡಿಯುತ್ತಿದ್ದೆ. ಎಲ್ಲರಿಗಿಂತ ಹೆಚ್ಚು ಮೀನುಗಳನ್ನು ಹಿಡಿದು ದಾಖಲೆ ಹಿಡಿಯುತ್ತಿದ್ದೆ.’ ಎಲ್ಲರಿಗಿಂತ ಹೆಚ್ಚು ಮೀನುಗಳನ್ನು ಹಿಡಿದು ದಾಖಲೆ ಸೃಷ್ಟಿಸುತ್ತಿದ್ದೆ. ಬಾಳೆಂಬ ಸಾಗರದಲ್ಲಿ ನಮ್ಮತನವೆಂಬ ಹಾಯಿದೋಣಿ ನಮ್ಮನ್ನು ಸುರಕ್ಷಿತವಾಗಿ ದಡ ತಲುಪಿಸುವುದು ಹೀಗೆ.

ಕೆಲವರನ್ನು ನೋಡಿ ಅವರು ಓದಿದ್ದಕ್ಕೂ ಮಾಡುತ್ತಿರುವುದಕ್ಕೂ ಸಂಬಂಧವೇ ಇರುವುದಿಲ್ಲ. ಆದರೆ ಕೈಯಾಡಿಸಿದ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿರುತ್ತಾರೆ. ಅವರು ಶೇಂಗಾ ವ್ಯಾಪಾರವನ್ನೇ ಮಾಡಲಿ, ಷೇರು ವ್ಯಾಪರವನ್ನೇ ಮಾಡಲಿ ಅಚ್ಚುಕಟ್ಟಾಗಿ ಮಾಡಿರುತ್ತಾರೆ. ಅವರೊಳಗಿನ ತನ್ನತನ ವೆಂಬುದು ಅವರನ್ನು ಮುನ್ನಡೆಸಿಕೊಂಡು ಹೋಗುತ್ತಿರುತ್ತದೆ. ಆ ಅಂತಃಸತ್ವ ಎಂಥ ಪರಿಸ್ಥಿತಿಯನ್ನಾದರೂ ಎದುರಿಸುವುದಕ್ಕೆ ಬೇಕಾದ ಸಲಕರಣೆಗಳನ್ನು ಒದಗಿಸುತ್ತಿರುತ್ತದೆ.

ಇದೇ ಸಂದರ್ಭದಲ್ಲಿ ನೆನಪಾಗುವವನು ಕ್ರಿಕೆಟ್‌ಗೆ ಸಂಬಂಧಿಸಿದ ಮತ್ತೊಬ್ಬ ವ್ಯಕ್ತಿ ಡಿಕಿ ರತ್ನಾಗರ್‌. ಈತನನ್ನು ಮೂಲ ನಾಮಧೇಯವಾದ ದತ್ತಾತ್ರೇಯ ರತ್ನಾಕರ ಎಂದು ಕರೆದರೆ ಆತನೇ ಓ ಎನ್ನಲಿಕ್ಕಿಲ್ಲ. ಆ ಪರಿ ಆತ ಡಿಕಿ ರತ್ನಾಗರ್‌ ಎಂದೇ ಪರಿಚಿತ. ಈ ದೇಶ ಕಂಡ ಮಹಾನ್‌ ಕ್ರಿಕೆಟ್‌ ಪತ್ರಕರ್ತ. ಹಾಗೆಂದರೆ ಆತನ ಬಗ್ಗೆ ಏನೂ ಮಹಾನ್‌ಹೇಳಿದಂತಾಗಲಿಲ್ಲ. ತಂದೆಯ ಕಬ್ಬಿಣದ ಅಂಗಡಿಯಲ್ಲಿ ಕೆಲಸ ಮಾಡಿ ಹೇಳಿದಂತಾಗಲಿಲ್ಲ. ತಂದೆಯ ಕಬ್ಬಿಣದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲ ಸಮಯ ಅಲ್ಲಿಯೇ ಲೆಕ್ಕ ಬರೆಯುತ್ತಿದ್ದ. ಡಿಕಿಯ ಮಾವ ಒಂದು ದಿನ ಕ್ರಿಕೆಟ್‌ ಪತ್ರಕರ್ತ. ಹಾಗೆಂದರೆ ಆತನ ಬಗ್ಗೆ ಏನೂ ಹೇಳಿದಂತಾಗಲಿಲ್ಲ. ತಂದೆಯ ಕಬ್ಬಿಣದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲ ಸಮಯ ಅಲ್ಲಿಯೇ ಲೆಕ್ಕ ಬರೆಯುತ್ತಿದ್ದ. ಡಿಕಿಯ ಮಾವ ಒಂದು ದಿನ ಕ್ರಿಕೆಟ್‌ ಪಂದ್ಯಕ್ಕೆ ಕರೆದುಕೊಂಡು ಹೋದ. ಅಂದು ಸ್ಕೋರರ್‌ ಬಂದಿರಲಿಲ್ಲ. ಡಿಕಿಗೆ ಸ್ಕೋರ್‌ ಬರೆಯುವ ಕೆಲಸ ಕೊಟ್ಟ. ಆತ ಅದನ್ನು ಸಮರ್ಪಕವಾಗಿ ನೆರವೇರಿಸಿದ. ಈ ಮಧ್ಯೆ ತಂದೆ ತನ್ನ ಅಂಗಡಿಯನ್ನು ಮಾರಿದಾಗ ಡಿಕಿ ಕೆಲಸವೂ ಹೋಯಿತು. ಕಬ್ಬಿಣದ ಅಂಗಡಿಯಲ್ಲಿ ಕೆಲಸ ಮಾಡಿದವನಿಗೆ ಎಂಥ ಕೆಲಸ ಸಿಕ್ಕೀತು ? ಅದರಲ್ಲೂ ಪತ್ರಿಕಾ ಸಂಪಾದಕರಿಗೆ ಹೇಳಿದ- ಒಮ್ಮೆ ಕೊಟ್ಟು ನೋಡಿ. ಇಷ್ಟವಾಗದಿದ್ದರೆ ತೆಗೆದುಹಾಕಿ. ಕ್ರಿಕೆಟ್‌ ಸ್ಕೋರು ಬರೆಯುವುದು ಹಾಗೂ ಕ್ರಿಕೆಟ್‌ ವರದಿ ಓದುವುದನ್ನು ಬಿಟ್ಟರೆ ಆತನಿಗೆ ಪತ್ರಿಕೋದ್ಯಮ ಅಷ್ಟಕ್ಕಷ್ಟೆ. ಸಂಪಾದಕರು ಕೆಲಸ ಮಾಡುತ್ತಲೇ ಮುಂಬೈನ ಸೇಂಟ್‌ ಕ್ಸೇವಿಯರ್‌ನಲ್ಲಿ ಕಾಲೇಜು ಮುಗಿಸಿದ. ಮಾಜಿ ಕ್ರಿಕೆಟ್‌ ಆಟಗಾರ ರುಸಿ ಮೋದಿಯ ಕೃಪೆಯಿಂದ ಇಂಗ್ಲೆಂಡ್‌ಗೆ ಹೋದ. ಅಲ್ಲಿನ ಪತ್ರಿಕೆಗಳಿಗೆ ಕ್ರಿಕೆಟ್‌ ಬಗ್ಗೆ ಬರೆಯ ತೊಡಗಿದ. ಡಿಕಿಯ ನೆನಪಿನಶಕ್ತಿ ಎಷ್ಟು ಅಗಾಧವಾಗಿತ್ತೆಂದರೆ ಯಾವುದೇ ದಾಖಲೆ ಪುಸ್ತಕಗಳನ್ನು ನೋಡದೇ ಕ್ರಿಕೆಟ್‌ನ ಎಲ್ಲ ಆಗಿ ಕೆಲಸ ಮಾಡಿದ ಪ್ರಭಾವವೋ ಏನೋ ಆಟಗಾರರ ಪ್ರವರವನ್ನೆಲ್ಲ ತಟ್ಟನೆ ಒಪ್ಪಿಸುತ್ತಿದ್ದ. ಒಂದು ವರದಿ ಬರೆದರೆ ಅದು ಸಮಗ್ರ ವಾಗಿರುತ್ತಿತ್ತು. ಯಾವ ವರದಿಗಾರನಿಗೂ ದಕ್ಕದ ಒಳನೋಟ ಆತನ ವರದಿಯಲ್ಲಿರುತ್ತಿತ್ತು. ಕ್ರಿಕೆಟ್‌ ಪತ್ರಿಕೋದ್ಯಮದಲ್ಲಿ ಇಂದಿಗೂ ಡಿಕಿ, ಮುನ್ನೂರು ಟೆಸ್ಟ್‌ ಪಂದ್ಯಗಳನ್ನು ವರದಿ ಮಾಡಿದ ಅಗ್ಗಳಿಕೆ. ಯಾವ ವರದಿಗಾರನೂ ಇಂಥ ಸಾಧನೆ ಮಾಡಿರಲಿಕ್ಕಿಲ್ಲ. ಈ ಮುನ್ನೂರು ಪಂದ್ಯಗಳ ವಿವರ ಕೇಳಿದರೆ ರನ್ನಿಂಗ್‌ ಕಾಮೆಂಟರಿ ಒಪ್ಪಿಸುತ್ತಾನೆ. ಅಜರ್‌, ಗಂಗೂಲಿ, ಗವಾಸ್ಕರ್‌, ವೆಂಗ್‌ಸರ್ಕಾರ್‌ ಮುಂತಾದವರನ್ನು ಕೇಳಿ, ‘ಡಿಕಿ ರತ್ನಾಗರ್‌ ನಮ್ಮ ಗುರು. ನಮ್ಮ ಮಾರ್ಗದರ್ಶಕ’ಅಂತಾರೆ. ನಮ್ಮ ಸಾಧನೆಯಲ್ಲಿ ಅವರ ಪಾಲೂ ಇದೆ ಎಂದು ವಿನಮ್ರವಾಗಿ ಗದ್ಗದಿತರಾಗಿ ನುಡಿಯುತ್ತಾರೆ. ಕಬ್ಬಿಣದ ಅಂಗಡಿಯಲ್ಲಿನ ಕಾರಕೂನ ಕ್ರಿಕೆಟ್‌ ಪತ್ರಿಕೋದ್ಯಮದ ಅತ್ಯುನ್ನತ ಸಾಧನೆಗೈದಿದ್ದು ಸಣ್ಣ ಮಾತೇನಲ್ಲ.

ಅದೇ ನಮ್ಮತನವೆಂಬ ಗಟ್ಟಿತನ. ಅದಿದ್ದರೆ ಎಲ್ಲವೂ ಸಲೀಸು. ನಮ್ಮತನವೇ ನಮ್ಮ ಬದುಕಿನ ತನನವೆಂಬ ಸಾಧನೆಯ ನಾದಸ್ವರ. ಅಲ್ಲವಾ?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X