• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂರ್ಖತನ ಅನ್ನೋದು ಎಲ್ರಿಗೂ ಸಿಗುವ ಮುಕ್ತ ಸ್ವಾತಂತ್ರ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಏಪ್ರಿಲ್‌ 1 ಮೂರ್ಖರ ದಿನ. ಇದು ಎಲ್ಲರ ದಿನವೂ ಹೌದು. ಹಾಗೆಂದು ನಾವ್ಯಾರೂ ಈ ದಿನವನ್ನು ನಮ್ಮದಿನ ಎಂದು ಒಪ್ಪಿಕೊಳ್ಳುವುದಿಲ್ಲ. ಖರೆ ಅಂದ್ರೆ ಮೂರ್ಖರಾಗದಂತೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ನಾನು ಮೂರ್ಖ ಎಂದು ಯಾರೂ ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ ನಾನು ಮೂರ್ಖನಲ್ಲ ಎಂದು ಯಾರೂ ಎದೆ ತಟ್ಟಿಕೊಂಡು ಹೇಳುವುದಿಲ್ಲ. ನಾನು ಮೂರ್ಖ ಅಲ್ಲ ಎಂದು ಹೇಳುವವರು ಮುಠ್ಠಾಳ ಎಂದು ಬೀಚಿ ಅವರು ಮೂರ್ಖರ ಪರ ವಕಾಲತ್ತು ವಹಿಸಿದ್ದಾರೆ. ಎಲ್ಲರೂ ಮೂರ್ಖರಾಗಿರುತ್ತಾರೆ ಆದರೆ ಗೊತ್ತಿರುವುದಿಲ್ಲ. ಈ ವಿಷಯದಲ್ಲಿ ಅವರು ತಮ್ಮ ಅಜ್ಞಾನದೊಂದಿಗೆ ಪೈಪೋಟಿ ನಡೆಸುತ್ತಿರುತ್ತಾರೆ.‘ನಾನೊಬ್ಬ ಮೂರ್ಖನಷ್ಟೇ ಅಲ್ಲ, ಶತಮೂರ್ಖ’ ಎಂದು ಪತ್ರಕರ್ತ, ಸಾಹಿತಿ ಖುಶವಂತ್‌ಸಿಂಗ್‌ ಹಿಂದೊಮ್ಮೆ ಹೇಳಿದ್ದರು. ನಮ್ಮ ಕುರಿತು ನಾವು ಹೀಗೆ ಹೇಳುವುದು ಸುರಕ್ಷಿತ. ಬೇರೆಯವರು ನಮ್ಮ ಬಗ್ಗೆ ಈ ಆರೋಪ ಮಾಡುವುದಿಲ್ಲ. ಮತ್ತೂ ಸುರಕ್ಷಿತವೆಂದರೆ ನಮ್ಮ ಬಗ್ಗೆ ನಾವೇ ಹೇಳಿಕೊಂಡರೆ ಅದನ್ನು ಆರೋಪ ಎಂದು ಪರಿಗಣಿಸುವುದಿಲ್ಲ. ಆದ್ದರಿಂದ ನಮ್ಮನ್ನು ಮೂರ್ಖ ಎಂದು ಭಾವಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಈ ವಿಷಯದಲ್ಲಿ ಸರ್ದಾರ್ಜಿಗಳ ಹೃದಯ ವೈಶಾಲ್ಯವನ್ನು ಮೆಚ್ಚಿಕೊಳ್ಳಲೇ ಬೇಕು. ಸರ್ದಾರ್ಜಿಗಳ ಬಗ್ಗೆ ಇರುವಷ್ಟು ಜೋಕು ಜಗತ್ತಿನಲ್ಲಿ ಮತ್ತ್ಯಾರ ಬಗೆಗೂ ಇರಲಿಕ್ಕಿಲ್ಲ. ಅವರು ನಿಜವಾದ ಜೋಕುಮಾರರು! ಜೋಕಿಗೆ ಸಿಟ್ಟಾಗಿ ಅವರು ಬೆಂಕಿಹಚ್ಚಿದ್ದು, ರಂಪ ಮಾಡಿದ್ದು ಕಡಿಮೆ. ಸಣ್ಣ ಮುನಿಸನ್ನು ಸಹ ಪ್ರಕಟಪಡಿಸಿದ್ದು ಇಲ್ಲವೇ ಇಲ್ಲ. ಸರ್ದಾರ್ಜಿ ಜೋಕುಗಳಿಗೆ ಚಾಲನೆ ಕೊಟ್ಟವರು ಮತ್ತ್ಯಾರೂ ಅಲ್ಲ- ಮಹಾನ್‌ ಸರ್ದಾರ್ಜಿ ಖುಶವಂತ್‌ ಸಿಂಗ್‌. ತಮ್ಮನ್ನು ಎಲ್ಲರೂ ನಗುನಗುತ್ತಾ ಹೊಗಳುತ್ತಾರೆಂದು ಸರ್ದಾರ್ಜಿಗಳು ಭಾವಿಸಿರುವುದರಿಂದ ಅವರ ಬಗ್ಗೆ ಜೋಕ್‌ ಮಾಡಿ ನಗುವುದು ಸಾಧ್ಯವಾಗಿದೆಯೆಂದು ಖುಶವಂತ್‌ಸಿಂಗ್‌ ಹೇಳುತ್ತಾರೆ.

ಅದೇನೇ ಇರಲಿ, ಮೂರ್ಖರಾಗಲು ಸರ್ದಾರ್ಜಿಗಳೇ ಬೇಕಾಗಿಲ್ಲ. ಯಾರು ಬೇಕಾದರೂ ಆಗಬಹುದು. ರಕ್ಷಣೆಗೆ ದಷ್ಟಪುಷ್ಟರಾದವರು ಇರಲೆಂದು ಸರ್ದಾರ್ಜಿಗಳನ್ನು ಇಟ್ಟುಕೊಂಡಿದ್ದೇವೆ ಅಷ್ಟೆ . ಮೂರ್ಖತನ ಯಾರೊಬ್ಬರ ಸ್ವತ್ತೂ ಅಲ್ಲ. ಅದು ಎಲ್ಲರಿಗೆ ದೊರಕುವ ಮುಕ್ತ ಸ್ವಾತಂತ್ರ್ಯ.

ನಮ್ಮೆಲ್ಲರ ದಿನವಾದ ಏಪ್ರಿಲ್‌ 1ರ ಆಸುಪಾಸಿನಲ್ಲಿ, ಮೂರ್ಖತನದ ಬಗ್ಗೆ ಕೆಲವು ಕ್ಷಣಗಳನ್ನು ಮೆಲುಕು ಹಾಕೋಣ. ಅವು ಜೋಕು, ಪ್ರಶ್ನೋತ್ತರ, ವಕ್ರತುಂಡೋಕ್ತಿ ಮಾದರಿಯಲ್ಲಿದ್ದರೆ ಹೇಗಿದ್ದೀತು?

ಹೇಗಾದರೂ ಇರಲಿ. ಅಲ್ಲಿ ಮೂರ್ಖತನ ಇರಲಿ, ನಗೆಯೂ ಇರಲಿ, ಕಾರಣ ಕೊನೆ ತನಕ ಇರಬೇಕಾಗಿದ್ದು ಅದೊಂದೇ.

 • ನಾಲ್ಕು ಜನ ಗಾಂಪರು ಸೇರಿ ಬೆಂಗಳೂರಿನಲ್ಲೊಂದು ಬ್ಯುಸಿನೆಸ್‌ ಶುರು ಮಾಡಬೇಕೆಂದುಕೊಂಡರು. ಚೆನ್ನಾಗಿ ಯೋಚನೆ ಮಾಡಿ ಒಳ್ಳೇ ಜಾಗದಲ್ಲಿ ಒಂದು ಹೊಟೇಲ್‌ ತೆರೆದರು. ಒಂದು ವಾರವಾದರೂ ಯಾರು ಗಿರಾಕಿಗಳೇ ಬರಲಿಲ್ಲ. ಯಾಕೆಂದರೆ ಹೊರಗಡೆ ಒಂದು ಬೋರ್ಡು ಹಾಕಿದ್ದರು. ‘ವಿಸಿಟರ್ಸ್‌ ನಾಟ್‌ ಅಲೋಡ್‌!’
 • Foolishness Freedom and Sardarji Jokes!ಅದು ಹೋಗಲಿ ಎಂದು ನಾಕೂ ಜನ ಸೇರಿ ಒಂದು ಗ್ಯಾರೇಜ್‌ ಶುರು ಮಾಡಿದರು. ಒಂದು ವಾರ ಕಳೆದರೂ ಯಾರೂ ಬರಲಿಲ್ಲ. ಯಾಕೆಂದರೆ ಅದು ಫಸ್ಟ್‌ ಫ್ಲೋರಿನಲ್ಲಿತ್ತು !

  ಅದೂ ಹೋಗಲಿ ಎಂದು ಒಂದು ಟ್ಯಾಕ್ಸಿ ತಗೊಂಡು ಜನಸಂದಣಿಯ ಪೇಟೆಯಲ್ಲಿ ದಿನಗಟ್ಟಲೆ ಕಾದರು. ಒಬ್ಬರೂ ಬಾಡಿಗೆಗೆ ಬರಲಿಲ್ಲ. ಯಾಕೆಂದರೆ ನಾಲ್ಕೂ ಜನ ಟ್ಯಾಕ್ಸಿಯ ಒಳಗೆ ಕೂತಿದ್ದರು!

   ‘ಛೇ ಈ ಕಾರನ್ನು ಸಮುದ್ರಕ್ಕೆ ತಳ್ಳಿಬಿಡೋಣ’ ಎಂದು ನೋಡಿದರು. ಊಹೂಂ, ಕಾರು ಒಂದಿಂಚೂ ಚಲಿಸಲಿಲ್ಲ. ಯಾಕೆಂದರೆ ಇಬ್ಬರು ಮುಂದಕ್ಕೆ ಎಳೆಯುತ್ತಿದ್ದರು; ಇನ್ನಿಬ್ಬರು ಹಿಂದಕ್ಕೆ ಎಳೆಯುತ್ತಿದ್ದರು!
  • ಸರ್ದಾರ್ಜಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಪಕ್ಕದಲ್ಲಿ ಕೂತಿದ್ದ ವ್ಯಕ್ತಿಯನ್ನು ‘ಮುಂಜಾನೆ ನಾಲ್ಕರ ವೇಳೆಗೆ ಏಳಿಸು’ ಅಂತ 20 ರೂ. ಕೊಟ್ಟು ಮಲಗಿದ. ಪಕ್ಕದಲ್ಲಿದ್ದವನೊಬ್ಬ ಕ್ಷೌರಿಕ. ಬರಿ ಎಬ್ಬಿಸುವುದಕ್ಕಾಗಿ 20 ರೂಪಾಯಿ ತೆಗೆದುಕೊಳ್ಳುವುದು ಸರಿಯಲ್ಲ ಅಂತ ಮಲಗಿದ್ದ ಸರ್ದಾರ್ಜಿಯ ಗಡ್ಡ ಮೀಸೆಯನ್ನು ಶೇವ್‌ ಮಾಡಿದ. ಮತ್ತು ಸರಿ ನಾಲ್ಕು ಗಂಟೆಗೆ ಸರ್ದಾರ್ಜಿಯನ್ನು ಎಬ್ಬಿಸಿದ ಸರ್ದಾರ್ಜಿ ಟಾಯ್‌ಲೆಟ್‌ಗೆ ಹೋಗಿ ಕನ್ನಡಿಯಲ್ಲಿ ಮುಖ ನೋಡಿಕೊಂಡು ಕೂಗಿದ. ‘ಛೇ! ಇವನಜ್ಜಿ ! ನನ್ನ ಹತ್ರ 20 ರೂಪಾಯಿ ಇಸ್ಕೊಂಡು ಬೇರೆ ಯಾರನ್ನೋ ಏಳಿಸಿದ್ದಾನೆ!’
 • ಒಬ್ಬಾತ ಟೂರ್‌ ಮೇಲೆ ಕಾಶ್ಮೀರ್‌ಗೆ ಹೋಗಿದ್ದ. ಅಲ್ಲಿಂದ ಮನೆಗೆ ಫೋನ್‌ ಮಾಡಿದ. ಸೇವಕ ಎತ್ತಿಕೊಂಡ.
 • ಈತ: ಯಾರ್‌ ಮಾತಾಡೋದು?

  ಆಳು: ನಾನು ಆಳು ಸಾರ್‌.

  ಈತ: ಸ್ವಲ್ಪ ಮೇಂಸಾಬ್‌ಗೆ ಫೋನ್‌ ಕೊಡು.

  ಆಳು: ಅವರು ಅವರ ಯಜಮಾನ್ರ ಜತೆ ಮಲಗಿದ್ದಾರೆ ಸಾರ್‌.

  ಈತ: ಏನ್‌ ಹೇಳ್ತಿದ್ದಿ ? ನಾನು ಅವಳ ಗಂಡ ಇಲ್ಲಿದ್ದೀನಿ.

  ಆಳು: ಈಗೇನ್‌ ಮಾಡ್ಲಿ ಸಾರ್‌.

  ಈತ: ಕಪಾಟಲ್ಲಿ ಕೆಳಗಡೆ ಗನ್‌ ಇದೆ. ತಗೊಂಡು ಇಬ್ರನ್ನೂ ಶೂಟ್‌ ಮಾಡಿ ಬಂದು ನಂಗೆ ಹೇಳು. ನಾನು ಲೈನಲ್ಲೇ ಇರ್ತೀನಿ.

  (ನಂತರ ಎರಡು ಗುಂಡು ಹಾರಿದ ಶಬ್ದ ಕೇಳಿಸುತ್ತದೆ)

  ಆಳು: ಆಯ್ತು ಸಾರ್‌. ಮುಂದೇನ್‌ ಮಾಡ್ಲಿ ?

  ಈತ: ಯಾರಿಗೂ ಗೊತ್ತಾಗ್ದಂತೆ ಎರಡೂ ಹೆಣಾನೂ ಮನೆ ಹಿಂದಿರೋ ಸ್ವಿಮ್ಮಿಂಗ್‌ ಫೂಲೊಳಗೆ ಹಾಕಿಬಿಡು.

  ಆಳು: ನಮ್ಮನೆ ಹಿಂದೆ ಸ್ವಿಮ್ಮಿಂಗ್‌ ಫೂಲ್‌ ಇಲ್ವಲ್ಲಾ ಸಾರ್‌?

   ಈತ: ಇಲ್ವೇ, ಸಾರಿ, ರಾಂಗ್‌ ನಂಬರ್‌.
 • ಸರ್ದಾರ್ಜಿಗೆ ಹುಡುಗಿಯಾಬ್ಬಳು ಪ್ರಪೋಸ್‌ ಮಾಡಿದಳು.
  • ಸರ್ದಾರ್ಜಿ ಆಗೊಲ್ಲ ಎಂದು ಕಾರಣ ವಿವರಿಸಿದ. ‘ನಮ್ಮ ಫ್ಯಾಮಿಲಿಯಲ್ಲಿ ಎಲ್ಲ ಸಂಬಂಧದೊಳಗೆ ಮದ್ವೆ ಮಾಡೋದು. ನಮ್ಮಪ್ಪ ನಮ್ಮಮ್ಮನನ್ನ ಮದ್ವೆ ಆಗಿದ್ದಾರೆ, ನಮ್ಮ ಅಣ್ಣ ನಮ್ಮತ್ತಿಗೇನಾ ಮದ್ವೆ ಆಗಿದಾನೆ, ನನ್ನ ಅಂಕಲ್‌ ನನ್ನ ಆಂಟೀನಾ... ’
 • ಸರ್ದಾರ್ಜಿಗೆ ಓದೋಕೆ, ಬರೆಯೋಕೆ ಬರ್ತಿರಲಿಲ್ಲ. ಅಂಥ ವೇಳೆಯಲ್ಲಿ ಅವನ ಗರ್ಲ್‌ ಫ್ರೆಂಡಿಂದ ಒಂದು ಪ್ರೇಮ ಪತ್ರ ಬಂದು ಫಜೀತಿಯಾಯ್ತು. ಇನ್ನೇನು ಮಾಡೋದು ಅಂತ ಓದು ಬರಹ ಬಲ್ಲ ಗೆಳೆಯನ ಮನೆಗೆ ಹೋದ. ಆದರೆ ಪ್ರೇಮ ಪತ್ರದಲ್ಲಿರುವ ವಿಷಯ ಗೆಳೆಯನಿಗೆ ತಿಳಿದರೆ ಹೇಗೆ? ಅದಕ್ಕೆ ಸರ್ದಾರ್ಜಿ ಒಂದು ಐಡಿಯಾ ಮಾಡಿದ.
  • ಪತ್ರ ಓದುತ್ತಿರುವಾಗ ಆ ಗೆಳೆಯನ ಎರಡೂ ಕಿವಿಗಳನ್ನು ಬಿಗಿಯಾಗಿ ಮುಚ್ಚಿಬಿಟ್ಟಿದ್ದ- ಓದಿದ್ದು ಅವನಿಗೆ ಕೇಳದಿರಲಿ ಅಂತ!
 • ಸರ್ದಾರ್ಜಿ ಖಾಲಿ ಬಾಟಲಿಗಳನ್ನು ಫ್ರಿಜ್ನಲ್ಲಿ ಇಡುವುದೇಕೆ?
  • - ಕುಡಿಯದವರಿಗಾಗಿ ಕೊಡಲು!
 • ಸರ್ದಾರ್ಜಿಗೆ ‘11’ ಎಂಬ ಅಂಕಿಯನ್ನು ಏಕೆ ಬರೆಯಲಾಗುವುದಿಲ್ಲ ?
  • -ಯಾವ ‘1’ ಮೊದಲು ಬರೆಯಬೇಕು ಎಂಬ ಗೊಂದಲದಿಂದ.
 • ಸರ್ದಾರ್ಜಿ ತಲೆಗೇಕೆ ಮೇಕಪ್‌ ಮಾಡಿಕೊಳ್ಳುತ್ತಾನೆ?
  • - ಯಾಕೆಂದ್ರೆ He can make up his mind.
 • ಸರ್ದಾರ್ಜಿ ಇರಿತಕ್ಕೊಳಗಾಗುವುದು ಯಾವಾಗ?
  • -ಗುಂಡಿನ ಕಾಳಗ ನಡೆಯುವಾಗ!
 • ಫರ್ನಿಚರ್‌ ಅಂಗಡಿಯಲ್ಲಿ ರಾತ್ರಿಯಿಡಿ ಸದಾರ್ಜಿಯನ್ನು ಬಾಗಿಲು ಹಾಕಿ ಕೂಡಿಟ್ಟರೆ ಏನು ಮಾಡುತ್ತಾನೆ?
  • -ನೆಲದ ಮೇಲೆ ಮಲಗುತ್ತಾನೆ.
 • ಸರ್ದಾರ್ಜಿ ದಿನವಿಡಿ ಛಾವಣಿಯನ್ನೇ ನೋಡುತ್ತಿರುವಂತೆ ಮಾಡಲು ಏನು ಮಾಡಬೇಕು?
  • - ಮೇಲಿರುವ ‘ಹಿಡನ್‌ ಕ್ಯಾಮರಾ’ ಹುಡುಕು ಎಂದು ಹೇಳಬೇಕು.
 • ಪೋಸ್ಟ್‌ಮನ್‌ ಸರ್ದಾರ್ಜಿ ಐದು ಕಿ.ಮಿ. ನಡೆದು ಪತ್ರವನ್ನು ವಿತರಿಸುವ ಪ್ರಸಂಗ ಬಂದರೆ ಏನು ಮಾಡುತ್ತಾನೆ?
  • - ಪೋಸ್ಟ್‌ ಮಾಡುತ್ತಾನೆ.
 • ಸರ್ದಾರ್ಜಿ ಇತ್ತೀಚೆಗೆ ಆವಿಷ್ಕರಿಸಿದ ಹೊಸ ವಸ್ತುಗಳು:
 • - ವಾಟರ್‌ ಫ್ರೂಫ್‌ ಟವೆಲ್‌

  - ಸೋಲಾರ್‌ ಶಕ್ತಿಯಿಂದ ಕಾರ್ಯ ನಿರ್ವಹಿಸುವ ಫ್ಲಾಶ್‌ ಲೈಟ್‌

  - ವಾಟರ್‌ ಫ್ರೂಫ್‌ ಟೀ ಬ್ಯಾಗ್‌

  - ಇಂಡೆಕ್ಸ್‌ ಡಿಕ್ಷನರಿ

   - ಮಿಲ್ಕ್‌ ಪೌಡರ್‌ ಇದ್ದಂತೆ ವಾಟರ್‌ ಪೌಡರ್‌
  ಈ ಸಂದರ್ಭದಲ್ಲಿ ಕೆಲವು ವಕ್ತತುಂಡೋಕ್ತಿಗಳನ್ನು ನೆನೆಯುವುದಾದರೆ-
 • No kidding ಎನ್ನುವುದಕ್ಕೂ ಕುಟುಂಬ ನಿಯಂತ್ರಣ ವಿಧಾನಗಳಿಗೂ ಯಾವ ಸಂಬಂಧಗಳೂ ಇಲ್ಲ.
 • ತುಂಬಿ ತುಳುಕುವ ಲಿಫ್ಟುಗಳಲ್ಲಿ ಕುಳ್ಳರಿಗೆ ಬೇರೆಯದೇ ಆದ ವಾಸನೆ ಹೊಡೆಯುತ್ತದೆ!
 • ಮೂರ್ಖತನದ ಪರಮಾವಧಿ ಏನು?
  • ರಿಟರ್ನ್‌ ಟಿಕೆಟ್‌ ಕೊಡಿ ಎಂದಾಗ ಎಲ್ಲಿಗೆ ಎಂದು ಕೇಳುವುದು1
 • ಆಫ್ರಿಕಾದ 10 ಪ್ರಾಣಿಗಳನ್ನು ಹೆಸರಿಸಿ?
  • ಆರು ಜಿರಾಫೆ, ನಾಲ್ಕು ಆನೆ!
  • ಮಿಂಚಿನ ವೇಗ ಇನ್ನೂ ಜಾಸ್ತಿ ಇರುತ್ತಿತ್ತೇನೋ-ಅದು ಜಿಗ್‌ಜಾಗ್‌ ಆಗಿ ಇರದಿದ್ದರೆ...!
  • ಲೇಟಾಗೋದೇ ಇದ್ದಲ್ಲಿ ಎರಡು ನಿಮಿಷದ ತಡಬೇಡ- ಒಂದು ಗಂಟೆ ಆರಾಮಾಗಿ ತಿಂಡಿ ಮುಗಿಸಿ ಬನ್ನಿ !
  • ನಿಮ್ಮ ಮಿತಿಗಳನ್ನು ಮೊದಲು ಅರಿಯಿರಿ ಮತ್ತು ತೃಪ್ತರಾಗಿರಿ. ಅತಿಯಾಸೆಪಟ್ಟರೆ ನಿಮ್ಮ ಕೈಲಾಗದ ಕೆಲಸಕ್ಕೆ ಪ್ರಮೋಶನ್‌ ಸಿಕ್ಕಿಬಿಟ್ಟೀತು!
  • ಅಂಕಿ-ಅಂಶಗಳು ಕುಡುಕನಿಗೆ ಬೀದಿ ದೀಪ ಇದ್ದಂತೆ, ಬೆಳಕಿಗಿಂತ ಒರಗಿಕೊಳ್ಳುವುದಕ್ಕೆ ಹೆಚ್ಚು ಉಪಯೋಗವಾಗುತ್ತವೆ.
  • ದುರದೃಷ್ಟವಂತರನ್ನು ಕೆಲಸಕ್ಕೆ ತಗೋಬಾರದು-ಅರ್ಧದಷ್ಟು ಬಯೋಡಾಟಗಳನ್ನು ಓದದೇ ಕಸದ ಬುಟ್ಟಿಗೆಸೆಯಬೇಕಾಗುತ್ತದೆ!
  ಅದಿರಲಿ, ಮೂರ್ಖತನ ಎಲ್ರಿಗೂ ಸಿಗುವ ಸ್ವಾತಂತ್ರ್ಯವೇನೋ ಹೌದು. ಹಾಗೆಂದು ಆ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಬೇಡ. ಅದು ನಮ್ಮೊಳಗಿದ್ದರೆ ಮುಚ್ಚಿಡಲಂತೂ ಸಾಧ್ಯವಿಲ್ಲ.

  ಅದಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯ ಅಂದ್ರೆ ಇಷ್ಟ !

  (ಸ್ನೇಹ ಸೇತು: ವಿಜಯ ಕರ್ನಾಟಕ)

  ಮುಖಪುಟ / ಅಂಕಣಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more