keyboard_backspace

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

Google Oneindia Kannada News

ನವದೆಹಲಿ, ಆಗಸ್ಟ್ 29: ಯುದ್ಧದಾಹಿ ಚೀನಾ, ಭಾರತದೊಂದಿಗಿನ ಗಡಿ ವಿವಾದದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ತಯಾರಿ ಮುಂದುವರಿಸಿದೆ. ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮಾತುಕತೆ ನಡೆಯುತ್ತಿದೆ ಎನ್ನುವಾಗಲೇ ಅತ್ತ ಗಡಿಯಲ್ಲಿ ತನ್ನ ಸಾಮರ್ಥ್ಯ ವೃದ್ಧಿಸಿಕಳ್ಳುವ ಚಟುವಟಿಕೆಗಳನ್ನು ಹೆಚ್ಚಿಸಿದೆ. ಲಡಾಕ್‌ನ ವಾಸ್ತವ ಗಡಿ ರೇಖೆ ಸಮೀಪ 5ಜಿ ನೆಟ್‌ವರ್ಕ್ ಸ್ಥಾಪನೆ ಮಾಡುತ್ತಿರುವ ಅದು, ಲಡಾಕ್ ಗಡಿಯ ಪ್ರದೇಶಗಳಿಗೆ ಹಾಲಿ ಇರುವ ರಸ್ತೆಗಳಲ್ಲದೆ ಪರ್ಯಾಯ ರಸ್ತೆಗಳನ್ನು ನಿರ್ಮಿಸುತ್ತಿದೆ.

ತನ್ನ ಸೇನಾ ಚಟುವಟಿಕೆಗಳಿಗೆ ಅನುಕೂಲಕರವಾಗುವಂತೆ ಚೀನಾ ಮೊದಲು ಮಾಡುವುದು ಉತ್ತಮ ರಸ್ತೆ ಮಾರ್ಗಗಳನ್ನು. ಟಿಬೆಟ್‌ನಲ್ಲಿ ಅಂತಹ ರಸ್ತೆ ಸಂಪರ್ಕವನ್ನು ಅದು ಹೊಂದಿದೆ. ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಪಡೆಗಳು ಲಡಾಖ್ ಗಡಿಭಾಗದಲ್ಲಿ ಕಡಿಕೆ ಅವಧಿಯಲ್ಲಿ ಜಮಾವಣೆಗೊಳ್ಳಲು ನೆರವಾಗುವಂತೆ ಅದು ಹೊಸ ಮಾರ್ಗಗಳನ್ನು ನಿರ್ಮಿಸುತ್ತಿದೆ.

ಕಳೆದ ಒಂದು ದಶಕದಿಂದ ಪಿಎಲ್ಎ ಪೂರ್ವ ಲಡಾಖ್‌ನ ಈಶಾನ್ಯ ಭಾಗದಲ್ಲಿ ಹೊಸ ಮಾರ್ಗಗಳನ್ನು ಮಾಡಲು ಸಿದ್ಧತೆ ನಡೆಸುತ್ತಿವೆ ಎಂಬುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ. ಇದರಲ್ಲಿ ಲ್ಹಾಸಾದಿಂದ ಕಾಶ್ಗಾರ್ ವರೆಗಿನ ರಾಷ್ಟ್ರೀಯ ಹೆದ್ದಾರಿ 219ಕ್ಕೆ ಸಂಪರ್ಕಿಸುವ ಮಾರ್ಗವೂ ಸೇರಿದೆ. ಪೂರ್ವ ಲಡಾಖ್ ಮೂಲಕ ಹಾದುಹೋಗುವ ಈ ರಸ್ತೆಯನ್ನು 1950ರ ದಶಕದಲ್ಲಿ ಗುರುತಿಸಲಾಗಿತ್ತು. 1957ರಲ್ಲಿ ಇದು ಪೂರ್ಣಗೊಂಡಿತ್ತು. ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿ 1962ರ ಯುದ್ಧಕ್ಕೆ ಎಡೆಮಾಡಿಕೊಟ್ಟಿದ್ದು ಇದೇ ರಸ್ತೆಯ ನಿರ್ಮಾಣ. ಮುಂದೆ ಓದಿ.

ಎರಡೂ ದೇಶಗಳ ಚಟುವಟಿಕೆ

ಎರಡೂ ದೇಶಗಳ ಚಟುವಟಿಕೆ

ಹೊಸ ರಸ್ತೆ ಜಿ219ರ ಪಶ್ಚಿಮ ಭಾಗವನ್ನು ಯುದ್ಧದ ಬಳಿಕ ಚೀನಾ ಆಕ್ರಮಿಸಿಕೊಂಡಿತು. ಈ ಪ್ರದೇಶದಲ್ಲಿ ಭಾರತೀಯ ಪಡೆಗಳು ಎಷ್ಟು ವೀರೋಚಿತವಾಗಿ ಕಾದಾಟ ನಡೆಸಿದ್ದವು ಎನ್ನುವುದಕ್ಕೆ ಜಿ2019ರಲ್ಲಿರುವ ಚೀನಾ ಯುದ್ಧ ಸ್ಮಾರಕ ಉದಾಹರಣೆ.

ಅಂದಿನಿಂದ ವಾಸ್ತವ ಗಡಿ ರೇಖೆಗೆ ಹೊಂದಿಕೊಂಡಂತೆ ಎರಡೂ ದೇಶಗಳು ರಸ್ತೆ ನಿರ್ಮಾಣ ಮತ್ತು ಮೂಲಸೌಕರ್ಯ ಚಟುವಟಿಕೆಗಳನ್ನು ನಡೆಸುತ್ತಲೇ ಇವೆ. ಇದನ್ನು ಎರಡೂ ದೇಶಗಳು ಅನುಮಾನದಿಂದಲೇ ನೋಡುತ್ತಿವೆ. ಇತ್ತೀಚಿನ ಭಾರತ-ಚೀನಾ ನಡುವೆ ಜಗಳ ಶುರುವಾಗಲು ಕಾರಣಗಳಲ್ಲಿ ಭಾರತದ ರಸ್ತೆ ನಿರ್ಮಾಣವೂ ಒಂದು.

ಪಡೆಗಳ ರವಾನೆ ಕಷ್ಟ

ಪಡೆಗಳ ರವಾನೆ ಕಷ್ಟ

ಅತ್ಯಂತ ಕಡಿದಾದ ಪ್ರದೇಶದಲ್ಲಿ ಇರುವ ಜಿ219 ರಸ್ತೆಯೊಂದರಿಂದಲೇ ಪೂರ್ವ ಲಡಾಖ್‌ಗೆ ಯುದ್ಧದ ಸಂದರ್ಭದಲ್ಲಿ ಪಡೆಗಳನ್ನು ರವಾನಿಸುವುದು ಕಷ್ಟವಾಗುತ್ತದೆ. ಅದರಲ್ಲಿಯೂ ಭಾರತ ವೈಮಾನಿಕ ಬಲ ಬಳಸಿಕೊಂಡರೆ ಚೀನೀ ಪಡೆಗಳಿಗೆ ಹಿನ್ನಡೆಯಾಗುತ್ತದೆ. ಈ ಕಾರಣದಿಂದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ರಸ್ತೆಗಳ ಅಗತ್ಯವನ್ನು ಅರಿತುಕೊಂಡಿರುವ ಪಿಎಲ್‌ಎ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿದೆ. ಈ ರಸ್ತೆಗಳು ಭೂ ಕುಸಿತ, ಹಠಾತ್ ಪ್ರವಾಹಗಳಿಂದ ಹಾನಿಗೊಳಗಾಗಬಹುದು ಅಥವಾ ಬಾಂಬ್ ಮತ್ತು ಷೆಲ್‌ಗಳಂತಹ ವೈಮಾನಿಕ ದಾಳಿಗೂ ಗುರಿಯಾಗಬಹುದು.

ಹಲವು ಸಮಾರಾಭ್ಯಾಸ

ಹಲವು ಸಮಾರಾಭ್ಯಾಸ

ಯಾವುದೇ ತುರ್ತು ಸಂದರ್ಭಗಳಲ್ಲಿ ಪೂರ್ವ ಲಡಾಖ್‌ನ ಪ್ರದೇಶಗಳಿಗೆ ಕೂಡಲೇ ಪಡೆಗಳನ್ನು ಕಳುಹಿಸುವಂತೆ ಅನುಕೂಲ ಮಾಡುವುದು ಚೀನಾದ ಲೆಕ್ಕಾಚಾರ. ಜತೆಗೆ ಈ ಪ್ರದೇಶಗಳಲ್ಲಿ ಅಗತ್ಯ ಉಪಕರಣಗಳ ರವಾನೆಗೂ ರಸ್ತೆಗಳು ನೆರವಾಗಲಿದ್ದು, ಭಾರತದ ವಿರುದ್ಧ ತನ್ನ ಸೇನಾ ಚಟುವಟಿಕೆಗಳ ಯೋಜನೆಯನ್ನು ಸಂಪೂರ್ಣವಾಗಿ ಬದಲಿಸುವ ನಿಟ್ಟಿನಲ್ಲಿ ಅದು ಸಾಗಿದೆ ಎನ್ನಲಾಗಿದೆ.

ಈ ಮಾರ್ಗಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿಯಲ್ಲಿ ಚೀನೀ ಪಡೆಗಳು ಕಳೆದ ಎರಡು ವರ್ಷಗಳಲ್ಲಿ ಹಲವು ಸಮರಾಭ್ಯಾಸಗಳನ್ನು ನಡೆಸಿವೆ. ಹೊಟಾನ್ ಮತ್ತು ಕಾಂಗ್ಸಿವಾ ನಡುವೆ ಜಿ580 ಪ್ರಾಂತ್ಯ ಹೆದ್ದಾರಿಯನ್ನು ಚೀನಾ ಪೂರ್ಣಗೊಳಿಸಿದೆ.

ಎತ್ತರ ಪ್ರದೇಶಕ್ಕೆ ರಸ್ತೆ

ಎತ್ತರ ಪ್ರದೇಶಕ್ಕೆ ರಸ್ತೆ

10 ಮೀಟರ್ ಅಗಲ ಮತ್ತು 190 ಕಿ.ಮೀ. ಉದ್ದವನ್ನು ಈ ರಸ್ತೆ ಹೊಂದಿದೆ. 5,200 ಮೀಟರ್ ಎತ್ತರದ ಪರ್ವತ ಪ್ರದೇಶವನ್ನೂ ಕ್ರಮಿಸುವ ರಸ್ತೆಯುಳ್ಳ ಏಕೈಕ ಸ್ಥಳ ಇದು. ಈ ರಸ್ತೆ ಹೋಟಾನ್ ಮತ್ತು ಪೂರ್ವ ಲಡಾಖ್ ಪ್ರವೇಶ ಭಾಗ ಹಾಜಿ ಲ್ಯಾಂಗರ್ ನಡುವಿನ ಅಂತರವನ್ನು 400 ಕಿ.ಮೀ.ಗಳಷ್ಟು ತಗ್ಗಿಸಿದೆ. ಎರಡನೆಯ ಮಾರ್ಗವು ಹೋಟಾನ್‌ನ 100 ಕಿಮೀ ಪೂರ್ವದಿಂದ ಮತ್ತು ಅಕ್ಷೈ ಚಿನ್ ಸರೋವರದವರೆಗೆ ಇದ್ದು, 345 ಕಿ.ಮೀ ಉದ್ದವಿದೆ. ಈ ರಸ್ತೆ ನಿರ್ಮಾಣ ಕಾರ್ಯ ಇನ್ನೂ ಮುಗಿದಿಲ್ಲ. ಆದರೆ ಈ ಮಾರ್ಗದ ಹಲವೆಡೆ ಭಾರಿ ಮಟ್ಟದಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಈ ರಸ್ತೆ 5,500 ಮೀಟರ್ ಮತ್ತು 6,030 ಮೀಟರ್‌ಗಳಲ್ಲಿ ಎರಡು ಬೆಟ್ಟಗಳನ್ನು ದಾಟಿ ಸಾಗುತ್ತದೆ.

ಚೀನೀ ಪಡೆಗಳನ್ನು ಗುರುತಿಸಿದ್ದ ವಿಜ್ಞಾನಿಗಳು

ಚೀನೀ ಪಡೆಗಳನ್ನು ಗುರುತಿಸಿದ್ದ ವಿಜ್ಞಾನಿಗಳು

ಟಿಬೆಟ್‌ನ ಪೂರ್ವ ಟರ್ಕಿಸ್ತಾನ್‌ದಿಂದ ರಸ್ತೆ ನಿರ್ಮಾಣ ಮಾಡಲು ಬಯಸಿದ್ದಾಗ 1950ರಲ್ಲಿ ಪೂರ್ವ ಲಡಾಖ್‌ನ ಭಾಗಗಳನ್ನು ಚೀನಾ ಆಕ್ರಮಿಸಿಕೊಂಡಿತ್ತು. ಅಕ್ಷೈ ಸಿನ್ ಸರೋವರದಲ್ಲಿ ವಿವಿಧ ಬಗೆಯ ಉಪ್ಪುಗಳು ಮತ್ತು ಎಂದಿಗೂ ಒಣಗದ ನೀರಿನ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ವಿಜ್ಞಾನಿಗಳ ತಂಡವು ರಸ್ತೆ ನಿರ್ಮಾಣದ ಚಟುವಟಿಕೆಗಳನ್ನು ಮೊದಲ ಬಾರಿಗೆ ಗಮನಿಸಿತ್ತು. ಚೀನಾದ ಪಡೆಗಳ ಹಾಜರಾತಿಯನ್ನು ಕಂಡು ಸರ್ಕಾರಕ್ಕೆ ಮಾಹಿತಿ ನೀಡಿದ್ದರು.

ಆದರೆ ಇದು ಗಗನಯಾನಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಮಾಡುತ್ತಿದ್ದು, ಭಾರತ ಅದರ ಬಗ್ಗೆ ಚಿಂತೆ ಪಡಬೇಕಿಲ್ಲ ಎಂದು ಭಾರತವನ್ನು ತಣ್ಣಗಾಗಿಸಿತ್ತು. ಇದು ಅತ್ಯಂತ ಒಳಗಿನ ಭಾಗವಾಗಿದ್ದು, ಇಲ್ಲಿ ಭಾರತೀಯ ಪಡೆಗಳ ಕಾಯಂ ಗಸ್ತು ಇರುವುದಿಲ್ಲ. ಈಗ ಚೀನಾ ಗಡಿ ಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ.

English summary
China has constructed a new road link to the areas of Eastern Ladakh to face India.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X