keyboard_backspace

ಓಮಿಕ್ರಾನ್ ಭೀತಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿ

Google Oneindia Kannada News

ನವದೆಹಲಿ, ನವೆಂಬರ್ 29: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹೊಸ ರೂಪಾಂತರ ವೈರಸ್ ಓಮಿಕ್ರಾನ್ ಜಗತ್ತಿನಾದ್ಯಂತ ಆತಂಕವನ್ನು ಸೃಷ್ಟಿಸುತ್ತಿದೆ. ಇದರ ನಡುವೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಭಾರತೀಯ ಸರ್ಕಾರವು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಭಾರತದಲ್ಲಿ ಓಮಿಕ್ರಾನ್ ರೂಪಾಂತರ ವೈರಸ್ ಪ್ರವೇಶಿಸದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ರೀತಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಡಿಸೆಂಬರ್ 1ರಿಂದ ಕೇಂದ್ರ ಸರ್ಕಾರದ ಪ್ರಮಾಣಿಕ ಕಾರ್ಯವಿಧಾನ ನಿಯಮಗಳು ಜಾರಿಗೆ ಬರಲಿವೆ.

ಓಮಿಕ್ರಾನ್: ಪರೀಕ್ಷೆ ಹೆಚ್ಚಿಸಿ, ಹಾಟ್‌ಸ್ಪಾಟ್‌ಗಳನ್ನು ಪರಿಶೀಲಿಸಿ- ರಾಜ್ಯಗಳಿಗೆ ಕೇಂದ್ರ ಸೂಚನೆಓಮಿಕ್ರಾನ್: ಪರೀಕ್ಷೆ ಹೆಚ್ಚಿಸಿ, ಹಾಟ್‌ಸ್ಪಾಟ್‌ಗಳನ್ನು ಪರಿಶೀಲಿಸಿ- ರಾಜ್ಯಗಳಿಗೆ ಕೇಂದ್ರ ಸೂಚನೆ

ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತೀವ್ರ ಪರೀಕ್ಷೆಗೆ ಒಳಪಡಿಸುವುದು, ಕೊವಿಡ್-19 ನೆಗೆಟಿವ್ ವರದಿ ಸಲ್ಲಿಸುವುದು, 14 ದಿನಗಳ ಪ್ರಯಾಣ ವಿವರವನ್ನು ಸಲ್ಲಿಸುವುದು, RT-PCR ಪರೀಕ್ಷೆ ನಂತರದ ನೆಗೆಟಿವ್ ವರದಿಯನ್ನು ಪ್ರಯಾಣ ಆರಂಭಕ್ಕೂ ಮೊದಲೇ ಏರ್ ಸುವಿಧ್ ಪೋರ್ಟಲ್ ನಲ್ಲಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಓಮಿಕ್ರಾನ್ ರೂಪಾಂತರ ವೈರಸ್ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುತ್ತದೆ. ಒಂದು ವೇಳೆ ಸೋಂಕು ಪತ್ತೆಯಾಗದಿದ್ದರೂ, 7 ದಿನಗಳವರೆಗೆ ಕ್ವಾರೆಂಟೈನ್ ನಲ್ಲಿ ಇರುವುದು ಕಡ್ಡಾಯವಾಗಿರುತ್ತದೆ. ಎಂಟನೇ ದಿನ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಕಂಡು ಬಂದರೆ, ತದನಂತರದ 7 ದಿನಗಳವರೆಗೆ ಸ್ವಯಂಪ್ರೇರಿತರಾಗಿ ಗೃಹ ದಿಗ್ಬಂಧನದಲ್ಲಿ ಇರಬೇಕು.

ಅಂತಾರಾಷ್ಟ್ರೀಯ ಪ್ರಯಾಣ ಆರಂಭ ಮತ್ತು ದೇಶಕ್ಕೆ ಆಗಮಿಸಿದ ವೇಳೆ ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎಂಬುದರ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಗಳನ್ನು ಮುಂದೆ ಓದಿ.

ಪ್ರಯಾಣ ಪ್ರಾರಂಭಿಸಲು ಯೋಜಿಸುತ್ತಿದ್ದೀರಾ?

ಪ್ರಯಾಣ ಪ್ರಾರಂಭಿಸಲು ಯೋಜಿಸುತ್ತಿದ್ದೀರಾ?

* ಎಲ್ಲಾ ಪ್ರಯಾಣಿಕರು ಆನ್‌ಲೈನ್ ಏರ್ ಸುವಿಧಾ ಪೋರ್ಟಲ್‌ನಲ್ಲಿ (https://www.newdelhiairport.in/airsuvidha/apho-registration) ಕಳೆದ 14 ದಿನಗಳ ಪ್ರಯಾಣದ ವಿವರಗಳನ್ನು ಒಳಗೊಂಡಂತೆ ನಿಗದಿತ ಪ್ರಯಾಣದ ಮೊದಲು ಸ್ವಯಂ ಘೋಷಣೆ ಅರ್ಜಿಯನ್ನು ಸಲ್ಲಿಸಬೇಕು.

* ಪ್ರಯಾಣ ಆರಂಭಿಸುವುದಕ್ಕೂ 72 ಗಂಟೆಗಳ ಮೊದಲು ನಡೆಸಿದ ವೈದ್ಯಕೀಯ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಅಪ್‌ಲೋಡ್ ಮಾಡಬೇಕು.

* ಪ್ರತಿ ಪ್ರಯಾಣಿಕರು ವರದಿಯ ದೃಢೀಕರಣಕ್ಕೆ ಸಂಬಂಧಿಸಿದಂತೆ ಘೋಷಣೆಯನ್ನು ಸಲ್ಲಿಸಬೇಕು, ಇಲ್ಲದಿದ್ದರೆ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ.

* ಪ್ರಯಾಣವನ್ನು ಕೈಗೊಳ್ಳಲು ಅನುಮತಿಸುವ ಮೊದಲು ಅವರು ಪೋರ್ಟಲ್‌ನಲ್ಲಿ ಅಥವಾ ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳ ಮೂಲಕ ಮನೆ ಅಥವಾ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಲು ಸೂಕ್ತ ಸರ್ಕಾರಿ ಪ್ರಾಧಿಕಾರದ ನಿರ್ಧಾರಕ್ಕೆ ಬದ್ಧರಾಗುತ್ತಾರೆ ಎಂದು ಭರವಸೆ ನೀಡಬೇಕು.

* ಹಿಂದಿನ ವಿಧಾನವನ್ನು ಮುಂದುವರಿಸುತ್ತಾ, ನಿರ್ದಿಷ್ಟ ದೇಶಗಳ ಪ್ರಯಾಣಿಕರನ್ನು (ಆ ದೇಶಗಳಲ್ಲಿನ COVID-19 ರ ಸಾಂಕ್ರಾಮಿಕ ರೋಗಶಾಸ್ತ್ರದ ಪರಿಸ್ಥಿತಿಯನ್ನು ಆಧರಿಸಿ) ಹೆಚ್ಚುವರಿ ನಿಯಮಗಳನ್ನು ಪಾಲಿಸುವುದಕ್ಕೆ ಸೂಚಿಸಲಾಗಿದೆ.

ಪ್ರಯಾಣ ಆರಂಭಕ್ಕೂ ಮೊದಲು ಈ ನಿಯಮ ಪಾಲಿಸಿ

ಪ್ರಯಾಣ ಆರಂಭಕ್ಕೂ ಮೊದಲು ಈ ನಿಯಮ ಪಾಲಿಸಿ

* ಓಮ್ರಿಕಾನ್ ಹೊಸ ರೂಪಾಂತರದ ಅಪಾಯದಲ್ಲಿರುವ ದೇಶಗಳಿಂದ ಪ್ರಯಾಣ ಆರಂಭಿಸುವ ಅಥವಾ ಆ ದೇಶಗಳ ಮಾರ್ಗದ ಮೂಲಕ ಸಾಗುವ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ಅವರು ದೇಶಕ್ಕೆ ಆಗಮಿಸಿದ ನಂತರ ಕೊವಿಡ್-19 ಪರೀಕ್ಷೆಗೆ ಒಳಗಾಗುತ್ತಾರೆ. ಪರೀಕ್ಷೆಯು ನೆಗೆಟಿವ್ ಬಂದರೆ ಕ್ವಾರಂಟೈನ್ ಮಾಡಲಾಗುತ್ತದೆ. ಪಾಸಿಟಿವ್ ಬಂದರೆ ಕಟ್ಟುನಿಟ್ಟಾಗಿ ಪ್ರತ್ಯೇಕತೆಯ ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸುತ್ತವೆ.

* ವಿಮಾನಯಾನ ಸಂಸ್ಥೆಗಳು/ಏಜೆನ್ಸಿಗಳು ಪ್ರಯಾಣಿಕರು ಏನು ಮಾಡಬೇಕು, ಏನು ಮಾಡಬಾರದು ಎಂಬ ನಿಯಮಗಳನ್ನು ಟಿಕೆಟ್ ಜೊತೆಗೆ ಒದಗಿಸಬೇಕು.

* ಏರ್‌ಲೈನ್ಸ್‌ಗಳು ಏರ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಫಾರ್ಮ್ ಅನ್ನು ಭರ್ತಿ ಮಾಡಿದ ಪ್ರಯಾಣಿಕರಿಗೆ ಮಾತ್ರ ಪ್ರಯಾಣ ಆರಂಭಿಸುವುದಕ್ಕೆ ಅನುಮತಿಸಲಾಗುತ್ತದೆ. ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಅಪ್‌ಲೋಡ್ ಮಾಡಿದ ಹಾಗೂ ಥರ್ಮಲ್ ಸ್ಕ್ರೀನಿಂಗ್ ವೇಳೆ ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ವಿಮಾನ ಏರುವುದಕ್ಕೆ ಅನುಮತಿ ನೀಡಲಾಗುತ್ತದೆ.

* ಎಲ್ಲಾ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ.

ಪ್ರಯಾಣ ಮಾಡುತ್ತಿರುವ ವೇಳೆಯಲ್ಲಿ ಈ ನಿಯಮ ಪಾಲನೆ

ಪ್ರಯಾಣ ಮಾಡುತ್ತಿರುವ ವೇಳೆಯಲ್ಲಿ ಈ ನಿಯಮ ಪಾಲನೆ

* ವಿಮಾನ ನಿಲ್ದಾಣಗಳಲ್ಲಿ, ವಿಮಾನಗಳಲ್ಲಿ ಮತ್ತು ಪ್ರಯಾಣದ ಸಂದರ್ಭದಲ್ಲಿ ಯಾವೆಲ್ಲ ಕೊವಿಡ್-19 ನಿಯಮಗಳನ್ನು ಪಾಲನೆ ಮಾಡಬೇಕು ಎಂಬುದರ ಬಗ್ಗೆ ವಿಮಾನ ನಿಲ್ದಾಮಗಳಲ್ಲಿ ಪ್ರಕಟಣೆ ಮಾಡಲಾಗುತ್ತದೆ.

* ವಿಮಾನದಲ್ಲಿ ಸಿಬ್ಬಂದಿ ಎಲ್ಲಾ ಸಮಯದಲ್ಲೂ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

* ವಿಮಾನ ಪ್ರಯಾಣದ ಸಮಯದಲ್ಲಿ ಯಾವುದೇ ಪ್ರಯಾಣಿಕರು COVID-19 ರೋಗಲಕ್ಷಣಗಳನ್ನು ವರದಿ ಮಾಡಿದರೆ, ಅಂಥವರನ್ನು ಶಿಷ್ಟಾಚಾರದ ಪ್ರಕಾರ ಪ್ರತ್ಯೇಕಿಸಲಾಗುತ್ತದೆ.

ಭಾರತಕ್ಕೆ ಆಗಮಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾರ್ಗಸೂಚಿ

ಭಾರತಕ್ಕೆ ಆಗಮಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾರ್ಗಸೂಚಿ

* ವಿಮಾನದಿಂದ ಇಳಿಯುವಾಗ ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ

* ಆನ್‌ಲೈನ್‌ನಲ್ಲಿ ತುಂಬಿದ ಸ್ವಯಂ ಘೋಷಣೆಯ ನಮೂನೆಯನ್ನು ವಿಮಾನ ನಿಲ್ದಾಣದ ಆರೋಗ್ಯ ಸಿಬ್ಬಂದಿಗೆ ತೋರಿಸಬೇಕು.

* ವಿಮಾನ ನಿಲ್ದಾಣದಲ್ಲಿರುವ ಆರೋಗ್ಯ ಅಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಅನ್ನು ನಡೆಸುತ್ತಾರೆ.

* ಸ್ಕ್ರೀನಿಂಗ್ ಸಮಯದಲ್ಲಿ ರೋಗದ ಲಕ್ಷಣಗಳು ಕಂಡುಬರುವ ಪ್ರಯಾಣಿಕರನ್ನು ತಕ್ಷಣವೇ ಪ್ರತ್ಯೇಕಿಸಲಾಗುವುದು. ಆರೋಗ್ಯ ಪ್ರೋಟೋಕಾಲ್ ಪ್ರಕಾರ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗುವುದು. ವೈದ್ಯಕೀಯ ಪರೀಕ್ಷೆ ವೇಳೆ ಸೋಂಕು ಪತ್ತೆಯಾದರೆ ಮಾರ್ಗಸೂಚಿಗಳಡಿ ಚಿಕಿತ್ಸೆ ಒದಗಿಸಲಾಗುವುದು

ಓಮ್ರಿಕಾನ್ ಭೀತಿ ಎದುರಿಸುತ್ತಿರುವ ದೇಶದ ಪ್ರಯಾಣಿಕರಿಗೆ ಈ ನಿಯಮ

ಓಮ್ರಿಕಾನ್ ಭೀತಿ ಎದುರಿಸುತ್ತಿರುವ ದೇಶದ ಪ್ರಯಾಣಿಕರಿಗೆ ಈ ನಿಯಮ

* ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಕೊವಿಡ್-19 ಪರೀಕ್ಷೆಗಾಗಿ ಮಾದರಿ ನೀಡುವುದು,(ಪರೀಕ್ಷೆ ಹಣವನ್ನು ಪ್ರಯಾಣಿಕರೇ ಪಾವತಿಸಬೇಕು) ಅಂತಹ ಪ್ರಯಾಣಿಕರು ಹೊರಡುವ ಮೊದಲು ವಿಮಾನ ನಿಲ್ದಾಣದಲ್ಲಿ ತಮ್ಮ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.

* ಕೊವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ, 7 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಲಾಗುವುದು. ಭಾರತಕ್ಕೆ ಆಗಮಿಸಿದ 8ನೇ ದಿನದಂದು ಮರು-ಪರೀಕ್ಷೆ ನಡೆಸಿದ ವೇಳೆ ನೆಗೆಟಿವ್ ವರದಿ ಬಂದರೆ, ಮುಂದಿನ 7 ದಿನಗಳವರೆಗೆ ಅವರ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆಗೆ ಒಳಪಡಿಸಿಕೊಳ್ಳಬೇಕು.

* ಆದಾಗ್ಯೂ, ಅಂತಹ ಪ್ರಯಾಣಿಕರು ಪಾಸಿಟಿವ್ ವರದಿ ಕಂಡು ಬಂದರೆ, ಅವರ ಮಾದರಿಗಳನ್ನು INSACOG ಪ್ರಯೋಗಾಲಯದಲ್ಲಿ ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗುವುದು.

* ಅವುಗಳನ್ನು ಪ್ರತ್ಯೇಕ ಪ್ರತ್ಯೇಕ ಸೌಲಭ್ಯದಲ್ಲಿ ನಿರ್ವಹಿಸಬೇಕು ಮತ್ತು ಸಂಪರ್ಕ ಪತ್ತೆಹಚ್ಚುವಿಕೆ ಸೇರಿದಂತೆ ನಿಗದಿತ ಪ್ರಮಾಣಿತ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು.

* ಅಂತಹ ಪಾಸಿಟಿವ್ ವರದಿ ಬಂದಿರುವ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಅಡಿಯಲ್ಲಿ ಇರಿಸಬೇಕು ಅಥವಾ ನಿಗದಿಪಡಿಸಿದ ಪ್ರೋಟೋಕಾಲ್ ಪ್ರಕಾರ ಹೋಮ್ ಕ್ವಾರಂಟೈನ್‌ನಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರವು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು.

English summary
Central Govt Revised Guidelines For International Arrivals Amid Omicron Threats. Know More About SOP Here.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X