ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗರೇಟನ್ನು ನೀವು ಸುಟ್ಟರೆ ಸಿಗರೇಟು ನಿಮ್ಮನ್ನು ಸುಡುತ್ತದೆ

By ಶಂಕರ್ ಕಾರ್ಟೂನಿಸ್ಟ್‌
|
Google Oneindia Kannada News

ಬೆಂಗಳೂರು, ಮೇ 31: ತನ್ನ ಗ್ರಾಹಕನನ್ನೇ ಕೊಲ್ಲುವ ವಿಶ್ವದ ಏಕೈಕ ಕೆಲವೇ ವಸ್ತುಗಳಲ್ಲಿ ಸಿಗರೇಟಿಗೆ ಮೊದಲ ಸ್ಥಾನ. ಸಿಗರೇಟನ್ನು ಸುಟ್ಟವನನ್ನು ಸಿಗರೇಟು ಸುಡದೇ ಬಿಡದು.

ಸಿಗರೇಟಿನಿಂದ ಜೀವ ಕಳೆದುಕೊಂಡು ಪರದಾಡುವ ಬದಲು ಅದರ ಚಟದಿಂದ ಹೊರ ತರಬೇಕೆಂದು ಮೇ 31ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.

World no Tobacco day cartoon from Shankar cartoonist

ಸಿಗರೇಟು ಹಚ್ಚಿ ಕಣ್ಣು ಮುಚ್ಚಿ ಹೊಗೆ ಬಿಡುವ ವ್ಯಕ್ತಿ ತಾನು ಸಿಗರೇಟನ್ನು ಸುಡುತ್ತಿದ್ದೇನೆ ಎಂದೇ ಭಾವಿಸುತ್ತಾನೆ ಆದರೆ ಅಸಲಿಗೆ ಸಿಗರೇಟೆ ಆತನನ್ನು ಸುಡುತ್ತಿರುತ್ತದೆ. ಇದನ್ನು ಚಿತ್ರರೂಪವಾಗಿ ಪರಿಣಾಮಕಾರಿಯಾಗಿ ವ್ಯಂಗ್ಯಚಿತ್ರಕಾರ ಶಂಕರ್‌ ಹೇಳಿದ್ದಾರೆ.

ಈ ಕಾರ್ಟೂನ್‌ನಲ್ಲಿ ಸಿಗರೇಟು ತನ್ನದೇ ಬೆಂಕಿಯನ್ನು ಮನುಷ್ಯನ ಶ್ವಾಸಕೋಶಗಳನ್ನು ಸುಡುತ್ತಿದೆ. ಸಿಗರೇಟು ಸೇದುವವನ ಸ್ಥಿತಿಯೂ ಇದೆ. ಸಿಗರೇಟು ಮಾನವನ ಶ್ವಾಸಕೋಶಗಳಿಗೆ ಬೆಂಕಿ ಇಡುತ್ತದೆ ಎಂಬುದನ್ನು ಇದಕ್ಕಿಂತಲೂ ಪರಿಣಾಮಕಾರಿಯಾಗಿ ಹೇಳಲು ಸಾಧ್ಯವೇ ಹೇಳಿ.

ಸಿಗರೇಟು ಸೇದಿ ನಿಮ್ಮ ಎದೆ ಗೂಡಲ್ಲಿ ಟಾರು ಉತ್ಪಾದಿಸುವ ಪ್ರಯತ್ನಕ್ಕೆ ಕೈ ಹಾಕಬೇಡಿ ಪಾಪಾ ಆ ಮುಖೇಶನ ಸ್ಥಿತಿ ನಿಮಗೆ ಬಾರದಿರಲಿ. ಸಿಗರೇಟು ಬಿಡಿ, ಸ್ವಚ್ಛವಾಗಿ ಉಸಿರಾಡಿ.

English summary
Shankar Cartoonist writes a cartoon about World no Tobacco day he is telling that Cigarate will burn his smoker through his cartoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X