ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣೆ: ಕಾರ್ಟೂನ್ ನಲ್ಲಿ ಮತದಾನದ ಜಾಗೃತಿ

By ಶಂಕರ್
|
Google Oneindia Kannada News

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು(ಮೇ 12) ಮತದಾನ ನಡೆಯುತ್ತಿದೆ. ಮತದಾನದ ಮಹತ್ವವನ್ನು ವ್ಯಕ್ತಪಡಿಸುವ ಸಂದೇಶಗಳನ್ನು ಕಾರ್ಟೂನ್ ಮೂಲಕ ನೀಡಿದ್ದಾರೆ ಕಾರ್ಟೂನಿಸ್ಟ್ ಶಂಕರ್.

ಆಲಸ್ಯ ಮರೆತು, ಎಲ್ಲ ಕೆಲಸಗಳನ್ನೂ ಕೆಲ ಹೊತ್ತು ಪಕ್ಕಕ್ಕಿಟ್ಟು ಮತಚಲಾಯಿಸುವಂತೆ ಪ್ರತಿಯೊಬ್ಬರಿಗೂ ಕರೆ ನೀಡಿದ್ದಾರೆ. ಚುನಾವಣೆಯ ದಿನಾಂಕ ನಿಗದಿಯಾದಾಗಿನಿಂದಲೂ ಹಲವು ಕಾರ್ಟೂನ್ ಗಳ ಮೂಲಕ ಶಂಕರ್ ಅವರು ಓದುಗರಿಗೆ ಕಚಗುಳ ನೀಡಿದ್ದಾರೆ. ಇದೀಗ ಮತದಾನ ಮಹತ್ವವನ್ನು ಅರಿಯಲು ವ್ಯಂಗ್ಯಚಿತ್ರದ ಮೂಲಕ ಕರೆ ನೀಡಿದ್ದಾರೆ.

LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು

ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಅವರ ಅರ್ಥಗರ್ಭಿತ ಕಾರ್ಟೂನ್ ಗಳು ಇಲ್ಲಿವೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಕಡ್ಡಾಯವಾಗಿ ಮತಚಲಾಯಿಸಿ...

ಕಡ್ಡಾಯವಾಗಿ ಮತಚಲಾಯಿಸಿ...

ಕಾಲಹರಣ ಮಾಡದೆ, ಆಲಸ್ಯ ತೋರದೆ ಕಡ್ಡಾಯವಾಗಿ ಮತಚಲಾಯಿಸಿ ಎಂದು ಶ್ರೀಸಾಮಾನ್ಯನೊಬ್ಬ ಎಲ್ಲರಲ್ಲೂ ವಿನಂತಿ ಮಾಡಿಕೊಳ್ಳುತ್ತಿದ್ದಾನೆ. ರಾಜ್ಯದ ಭವಿಷ್ಯವನ್ನಿ ನಿರ್ಧರಿಸುವ ಮತದಾನ ಪ್ರತಿಯೊಬ್ಬ ಪ್ರಜೆಯ ಆದ್ಯ ಹಕ್ಕು ಎಂಬ ಸಂದೇಶವನ್ನು ಈ ಮೂಲಕ ಶಂಕರ್ ನೀಡಿದ್ದಾರೆ.

ಮಹಿಳೆಯರಲ್ಲೂ ರಾಜಕೀಯ ಪ್ರಜ್ಞೆ

ಮಹಿಳೆಯರಲ್ಲೂ ರಾಜಕೀಯ ಪ್ರಜ್ಞೆ

ಮತದಾನ ಮಾಡದೆ ಮನೆಯಲ್ಲಿ ಕೂರುವುದಿಲ್ಲ. ಅದು ಪ್ರಜೆಯಾಗಿ ನನ್ನ ಕರ್ತವ್ಯ ಎಂದು ಮಹಿಳೆಯೊಬ್ಬರು ಮತಗಟ್ಟೆಯ ಕಡೆಗೆ ಹೊರಟಿರುವ ಚಿತ್ರ ಮಹಿಳೆಯರಿಗೂ ಇರುವ ರಾಜಕೀಯ ಪ್ರಜ್ಞೆಯನ್ನು ಪ್ರಚುರಪಡಿಸುತ್ತದೆ.

ಬೀಸುಮಾತಿಗೆ ಮರುಳಾಗದಿರಿ

ಬೀಸುಮಾತಿಗೆ ಮರುಳಾಗದಿರಿ

ಬೀಸುಮಾತಿಗೆ ಮರುಳಾಗದೆ ಬಿಡುವು ಮಾಡಿಕೊಂಡು ಮತದಾನ ಮಾಡಿ. ಮತದಾನ ನಿಮ್ಮ ಹಕ್ಕು ಮರೆಯದಿರಿ ಎಂದು ಸಾಮಾನ್ಯ ಮಹಿಳೆಯೊಬ್ಬರು ಮತದಾರನನ್ನು ವಿನಂತಿಸಿಕೊಳ್ಳುತ್ತಿರುವ ಚಿತ್ರ ನೈಜ ಕಾಳಜಿಯನ್ನು ತೋರಿಸುತ್ತದೆ.

ಮತದಾನ ಒಂದು ವರದಾನ

ಮತದಾನ ಒಂದು ವರದಾನ

ಮತದಾನ ಸಾಮಾನ್ಯ ಜನರಿಗೆ ಒಂದು ವರದಾನ. ತನಗೆ ಸಮರ್ಥ ಎಂದೆನ್ನಿಸಿದ ವ್ಯಕ್ತಿಗೆ ಅಧಿಕಾರ ನೀಡಲು ಜನತಾ ಜನಾರ್ದನನಿಗೆ ಸಿಕ್ಕ ಅತ್ಯತ್ತಮ ಅವಕಾಶ ಇದು. ಆದ್ದರಿದ ಮತದಾನವನ್ನು ನಿರ್ಲಕ್ಷ್ಯಿಸದೆ, ವರದಾನ ಎಂದುಕೊಂದು ಮತಚಲಾಯಿಸಿ ಎಂದಿದ್ದಾರೆ ಶಂಕರ್ ಕಾರ್ಟೂನಿಸ್ಟ್

ಪ್ರಜಾಪ್ರಭುತ್ವ ಬಲಗೊಳಿಸಿ

ಪ್ರಜಾಪ್ರಭುತ್ವ ಬಲಗೊಳಿಸಿ

ಹೆಚ್ಚು ಜನ ಓಟು ಮಾಡಿದಷ್ಟೂ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ಆದ್ದರಿಂದ ಪ್ರಜಾಪ್ರಭುತ್ವವನ್ನು ಬಲಗೊಳಿಸುವುದಕ್ಕಾಗಿ ಓಟು ಹಾಕಿ ಎಂದು ಕಳಕಳಿಯಲ್ಲಿ ಕೇಳಿದ್ದಾರೆ ಕಾರ್ಟೂನಿಸ್ಟ್ ಶಂಕರ್.

ನಾನು ಸಿದ್ಧ ನೀವು?

ನಾನು ಸಿದ್ಧ ನೀವು?

ಅಂಕವಿಕಲನೊಬ್ಬ ನಾನು ಮತಗಹಾಕಲು ಸಿದ್ಧ. ನೀವು? ಎಂದು ಕೇಳುತ್ತಿರುವ ಈ ಚಿತ್ರ ಪರಿಣಾಮಕಾರಿಯಾಗಿದೆ. ದೈಹಿಕ ನ್ಯೂನತೆಯನ್ನೆಲ್ಲ ಪಕ್ಕಕ್ಕಿಟ್ಟು ಸಂವಿಧಾನ ನೀಡಿದ ಅತ್ಯಮೂಲ್ಯ ಹಕ್ಕನ್ನು ಚಲಾಯಿಸಲು ಮುಮದಾಗಿರುವ ವಿಶಿಷ್ಟಚೇತನ ವ್ಯಕ್ತಿಯ ಈ ಚಿತ್ರ ಮತದಾನದ ಮಹತ್ವವನ್ನು ಸಾರಿಹೇಳುತ್ತದೆ.

ನಮ್ಮ್ ಹಕ್ಕು, ನಮ್ಮ ಆಯ್ಕೆ

ನಮ್ಮ್ ಹಕ್ಕು, ನಮ್ಮ ಆಯ್ಕೆ

ಸಂವಿಧಾನವು ನಮಗೆ ನೀಡಿರುವ ಅತ್ಯಮೂಲ್ಯ ಹಕ್ಕು ಮತದಾನ. ಅದನ್ನು ಕಡ್ಡಾಯವಾಗಿ ಚಲಾಯಿಸಿ ಎಂಬುದು ಇಲ್ಲಿನ ಚಿತ್ರದಲ್ಲಿ ಮಹಿಳೆಯ ಕಳಕಳಿಯ ಮನವಿ.

English summary
Karnataka assembly elections 2018: Here are some cartoons by cartoonist Shankar in which he is trying to create awarness among people about importance of casting vote. Karnataka assembly elections is taking place today(May 12) and results will be on 15th Many
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X