keyboard_backspace

ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ನೀಲಿ ಆಧಾರ್ ಕಾರ್ಡ್; ಅರ್ಜಿ ಸಲ್ಲಿಸುವುದು ಹೇಗೆ?

Google Oneindia Kannada News

ನವದೆಹಲಿ, ಅಕ್ಟೋಬರ್ 9: ಭಾರತದಲ್ಲಿ ಪ್ರತಿಯೊಂದು ಸರ್ಕಾರಿ ಕೆಲಸಗಳಿಗೂ ಅಗತ್ಯ ಸೇವೆಗಳಿಗೆ ಅರ್ಜಿ ಸಲ್ಲಿಸುವುದಕ್ಕೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. 18 ವರ್ಷ ಮೇಲ್ಪಟ್ಟವರಿಗಷ್ಟೇ ಅಲ್ಲ ಆಗಷ್ಟೇ ಜನಿಸಿದ ಮಗುವಿಗೂ ಕೂಡ ಇನ್ಮುಂದೆ ಆಧಾರ್ ಕಾರ್ಡ್ ನೀಡಲಾಗುತ್ತದೆ.

ಪುಟ್ಟ ಮಕ್ಕಳಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹಾಗೂ ಹಲವು ದೂರದೃಷ್ಟಿಯೊಂದಿಗೆ ಪುಟ್ಟ ಮಕ್ಕಳಿಗೂ ವಿಭಿನ್ನ ಹಾಗೂ ವಿಶೇಷ ಆಧಾರ್ ಕಾರ್ಡ್ ಅನ್ನು ವಿತರಿಸುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಪುಟ್ಟ ಮಕ್ಕಳಿಗೆ 12 ಅಂಕಿಯ ನೀಲಿ ಆಧಾರ್ ಕಾರ್ಡ್ ಅನ್ನು ವಿತರಿಸುವುದಕ್ಕೆ ತೀರ್ಮಾನಿಸಿದೆ. ನೀಲಿ ಆಧಾರ್ ಕಾರ್ಡ್ ಎಂದರೇನು?, ನೀಲಿ ಆಧಾರ್ ಕಾರ್ಡ್ ಅನ್ನು ಪಡೆಯುವುದು ಹೇಗೆ?, ನೀಲಿ ಆಧಾರ್ ಕಾರ್ಡ್ ಪಡೆಯುವುದಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ದೇಶದಲ್ಲಿ ಮಹತ್ವದ ಗುರುತಿನ ದಾಖಲೆ ಆಧಾರ್

ದೇಶದಲ್ಲಿ ಮಹತ್ವದ ಗುರುತಿನ ದಾಖಲೆ ಆಧಾರ್

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ವು ನೀಡುವ 12 ಅಂಕಿಗಳ ಆಧಾರ್ ಕಾರ್ಡ್ ದೇಶದಲ್ಲಿ ಮಹತ್ವದ ಗುರುತಿನ ದಾಖಲೆಗಳಲ್ಲಿ ಪ್ರಮುಖವಾಗಿದೆ. ಈಗ ನಿಮ್ಮ ಜನಗಣತಿ ಹಾಗೂ ಬಯೋಮೆಟ್ರಿಕ್ ಡೇಟಾವನ್ನು ಒಳಗೊಂಡಿರುವ ಕಾರಣ ಈ ಗುರುತಿನ ದಾಖಲೆಯು ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಎಲ್ಲ ರೀತಿಯ ಸೇವೆಗಳನ್ನು ಪಡೆದುಕೊಳ್ಳಲು ಅಥವಾ ಸೇವೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಈ ಗುರುತಿನ ಚೀಟಿಯು ಬಹುಮುಖ್ಯವಾಗಿದೆ.

ನೀಲಿ ಆಧಾರ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರುತ್ತದೆ?

ನೀಲಿ ಆಧಾರ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರುತ್ತದೆ?

ಮಕ್ಕಳಿಗಾಗಿ ನೀಲಿ ಆಧಾರ್ ಕಾರ್ಡ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವ ವೈಖರಿ ವಿಭಿನ್ನವಾಗಿ ಇರುವುದಿಲ್ಲ. ವಯಸ್ಕರಿಗೆ ಯಾವ ರೀತಿಯಲ್ಲಿ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಲಾಗುತ್ತದೆಯೋ ಅದೇ ನಿಯಮವನ್ನು ಪಾಲನೆ ಮಾಡಬೇಕಾಗುತ್ತದೆ. ನೀವು ದಾಖಲಾತಿ ಕೇಂದ್ರದಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ನೀಲಿ ಆಧಾರ್ ಕಾರ್ಡ್ ಪಡೆಯಲು ಪೂರಕ ದಾಖಲೆಗಳು?

ನೀಲಿ ಆಧಾರ್ ಕಾರ್ಡ್ ಪಡೆಯಲು ಪೂರಕ ದಾಖಲೆಗಳು?

* ಗುರುತಿನ ಚೀಟಿ

* ವಿಳಾಸಕ್ಕೆ ಸಂಬಂಧಿಸಿದ ಪುರಾವೆ

* ಹುಟ್ಟಿದ ದಿನಾಂಕ ದಾಖಲೆ

ಬಾಲ ಆಧಾರ್ ಕಾರ್ಡ್ ಬಗ್ಗೆ ಆಸಕ್ತಿಯದಾಯಕ ವಿಷಯ

ಬಾಲ ಆಧಾರ್ ಕಾರ್ಡ್ ಬಗ್ಗೆ ಆಸಕ್ತಿಯದಾಯಕ ವಿಷಯ

* 5 ವರ್ಷದೊಳಗಿನ ಮಗು ನೀಲಿ ಬಣ್ಣದ ಬಾಲ ಆಧಾರ್ ಪಡೆಯಬಹುದು, ಮಗುವಿಗೆ 5 ವರ್ಷ ಪೂರ್ಣಗೊಂಡ ನಂತರ ಈ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ

* ನಿಮ್ಮ ಮಗುವಿನ ಶಾಲಾ ಗುರುತಿನ ಚೀಟಿಯನ್ನು (ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ನೀಡಲಾದ ಫೋಟೋ ಐಡಿ) ಮಗುವಿನ ಆಧಾರ್ ದಾಖಲಾತಿಗೆ ಬಳಸಬಹುದು

* ಮಗುವಿನ ಜನನ ಪ್ರಮಾಣಪತ್ರ ಅಥವಾ ನಿಮ್ಮ ಆಸ್ಪತ್ರೆಯಿಂದ ಪಡೆದ ಡಿಸ್ಚಾರ್ಜ್ ಸ್ಲಿಪ್ ಜೊತೆಗೆ ನಿಮ್ಮ ಆಧಾರ್ ನಿಮ್ಮ ಮಗುವನ್ನು ಆಧಾರ್ ಕಾರ್ಡ್ ದಾಖಲಿಸಲು ಬೇಕಾಗುತ್ತದೆ

* ಮಗುವಿನ ಆಧಾರ್ ಡೇಟಾವು ಬೆರಳಚ್ಚುಗಳು ಮತ್ತು ಐರಿಸ್ ಸ್ಕ್ಯಾನ್ ನಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡಿರುವುದಿಲ್ಲ. ಮಗು 5 ವರ್ಷ ದಾಟಿದ ನಂತರ ಬಯೋಮೆಟ್ರಿಕ್ ಅನ್ನು ನವೀಕರಿಸಬೇಕು

English summary
Blue Aadhaar card : What is the blue-coloured Aadhaar card and How to Apply in Kannada.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X