keyboard_backspace

ಸ್ಟೀಫನ್ ಹಾಕಿಂಗ್ ಭವಿಷ್ಯ ಸುಳ್ಳು? ಭೂಮಿ ಸಮೀಪ ಮಹತ್ವದ ಬೆಳವಣಿಗೆ!

Google Oneindia Kannada News

ಜಗತ್ತಿನ ಮೊಟ್ಟಮೊದಲ ಬ್ಲ್ಯಾಕ್ ಹೋಲ್ ಅಥವಾ ಕಪ್ಪು ಕುಳಿ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಸದ್ಯ ಈ ಹಿಂದೆ ತಿಳಿದಿದ್ದಕ್ಕಿಂತ ಹೆಚ್ಚು ದೊಡ್ಡದಾದ ಬ್ಲ್ಯಾಕ್ ಹೋಲ್ ಇದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅದು 1964ರ ಸಮಯ, ಆಗಿನ್ನೂ ಬಾಹ್ಯಾಕಾಶ ವಿಜ್ಞಾನಿಗಳಿಗೆ ಬ್ಲ್ಯಾಕ್ ಹೋಲ್‌ಗಳ ಬಗ್ಗೆ ಏನೆಂದರೆ ಏನೂ ತಿಳಿದಿರಲಿಲ್ಲ.

ಅಷ್ಟರಲ್ಲೇ ಪತ್ತೆಯಾಗಿದ್ದು ಸಿಗ್ನಸ್ ಎಕ್ಸ್-1 (Cygnus X-1). ಭೂಮಿಯಿಂದ 6,197 ಲೈಟ್ ಇಯರ್ಸ್ (ಜ್ಯೋತಿರ್ವರ್ಷ) ದೂರದಲ್ಲಿರುವ 'ಸಿಗ್ನಸ್ ಎಕ್ಸ್-1'ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ಆದರೆ ಈ ಬಗ್ಗೆ ಸಾಕಷ್ಟು ವಾದ ವಿವಾದಗಳು ಸೃಷ್ಟಿಯಾಗಿದ್ದವು. ಆದರೆ 1974ರಲ್ಲಿ ಬಾಹ್ಯಾಕಾಶ ಕ್ಷೇತ್ರದ ದಂತಕಥೆ ಸ್ಟೀಫನ್ ಹಾಕಿಂಗ್ 'ಸಿಗ್ನಸ್ ಎಕ್ಸ್-1' ಒಂದು ಕಪ್ಪು ಕುಳಿಯೇ ಅಲ್ಲ ಎಂದು ವಾದಿಸಿದ್ದರು.

ಮೊದಲ ಬಾರಿಗೆ ಕಪ್ಪು ಕುಳಿಯ ಚಿತ್ರ ಬಿಡುಗಡೆ, ಐನ್ ಸ್ಟೀನ್ ಲೆಕ್ಕಾಚಾರ ನಿಜ! ಮೊದಲ ಬಾರಿಗೆ ಕಪ್ಪು ಕುಳಿಯ ಚಿತ್ರ ಬಿಡುಗಡೆ, ಐನ್ ಸ್ಟೀನ್ ಲೆಕ್ಕಾಚಾರ ನಿಜ!

ಅಲ್ಲಿಂದ ಅನೇಕ ವಾದ, ಪ್ರತಿವಾದ ಹಾಗೇ ಚರ್ಚೆಗಳು ನಡೆದಿದ್ದವು. ಆದ್ರೆ ಈವರೆಗೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ವಿಜ್ಞಾನಿಗಳು ಒಟ್ಟಾಗಿ ನಡೆಸಿದ ಸಂಶೋಧನೆಯಲ್ಲಿ ಶಾಕಿಂಗ್ ಸಂಗತಿಗಳು ಹೊರಬಿದ್ದಿವೆ. 'ಸಿಗ್ನಸ್ ಎಕ್ಸ್-1' ಒಂದು ಕಪ್ಪು ಕುಳಿ ಎಂಬುದು ಸ್ಪಷ್ಟವಾಗುವ ಜೊತೆಗೆ, ನಾವು ಅಂದುಕೊಂಡಿದ್ದಕ್ಕಿಂತ 'ಸಿಗ್ನಸ್ ಎಕ್ಸ್-1' ದೊಡ್ಡದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರಭೂಮಿಯಲ್ಲಿ ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರ

ಸೂರ್ಯನಿಗಿಂತ 21 ಪಟ್ಟು ದೊಡ್ಡದು..!

ಸೂರ್ಯನಿಗಿಂತ 21 ಪಟ್ಟು ದೊಡ್ಡದು..!

ಸದ್ಯದ ಮಾಹಿತಿಗಳ ಪ್ರಕಾರ 'ಸಿಗ್ನಸ್ ಎಕ್ಸ್-1' ಸೂರ್ಯನಿಗಿಂತಲೂ ಸುಮಾರು 21 ಪಟ್ಟು ದೊಡ್ಡದಾಗಿದೆ. ಮಾನವ ಜಗತ್ತಿಗೆ ಕಪ್ಪು ಕುಳಿ ಬಗ್ಗೆ ತಿಳಿಸಿಕೊಟ್ಟ 'ಸಿಗ್ನಸ್ ಎಕ್ಸ್-1' ತಾಪಮಾನ ಸುಮಾರು 31,000 ಕೆಲ್ವಿನ್. ಅಂದರೆ ಸೂರ್ಯನಿಂತಲೂ ನೂರಾರು ಪಟ್ಟು ಹೆಚ್ಚು ಬಿಸಿಯಾಗಿದೆ ಈ ಕಪ್ಪು ಕುಳಿ. ಇನ್ನು ಗುರುತ್ವ ಬಲವನ್ನು ನೀವು ಊಹಿಸಲು ಕೂಡ ಸಾಧ್ಯವಿಲ್ಲ. ಸಾವಿರಾರು ಕೋಟಿ ಕಿಲೋ ಮೀಟರ್ ದೂರದಲ್ಲಿದ್ದರೂ ಅಲ್ಲಿಂದಲೇ ಸೆಳೆದು, ಕಥೆ ಮುಗಿಸಿಬಿಡುತ್ತದೆ ಈ ಕಪ್ಪು ಕುಳಿ. ಅಂತಾರಾಷ್ಟ್ರೀಯ ಸಂಶೋಧಕರು 'ಸಿಗ್ನಸ್ ಎಕ್ಸ್-1' ಬಗ್ಗೆ ಇನ್ನಷ್ಟು ಆಳವಾದ ಸಂಶೋಧನೆಗೆ ಮುಂದಾಗಿದ್ದು, ಮತ್ತಷ್ಟು ಕುತೂಹಲಕಾರಿ ಮಾಹಿತಿ ಹೊರಬೀಳಲಿದೆ.

ಭೂಮಿಗೆ ಸಮೀಪದಲ್ಲೇ ಇದೆ..!

ಭೂಮಿಗೆ ಸಮೀಪದಲ್ಲೇ ಇದೆ..!

'ಸಿಗ್ನಸ್ ಎಕ್ಸ್-1' ಕಪ್ಪು ಕುಳಿ ಅಥವಾ ಬ್ಲ್ಯಾಕ್ ಹೋಲ್ ಭೂಮಿಯಿಂದ ಲಕ್ಷಾಂತರ ಕಿಲೋ ಮೀಟರ್ ದೂರದಲ್ಲಿ ಇದ್ದರೂ, ಅಪಾಯ ತಪ್ಪಿದ್ದಲ್ಲ. ಏಕೆಂದರೆ ಕಪ್ಪು ಕುಳಿಗೆ ಇರುವ ಗುರುತ್ವ ಬಲದಿಂದ ಎಂತಹದ್ದೇ ಗ್ರಹ ಅಥವಾ ನಕ್ಷತ್ರಗಳನ್ನು ನುಂಗಿ ಹಾಕಿಬಿಡಬಹುದು. ಇಂತಹದ್ದೇ ಭಯ 1964ರ ಆರಂಭದಲ್ಲೂ ಇಡೀ ಜಗತ್ತನ್ನು ಕಾಡಿತ್ತು. ಅದೃಷ್ಟವಶಾತ್ ಅಹಿತಕರ ಘಟನೆಗಳು ನಡೆಯದೇ ಇದ್ದರೂ, ಭವಿಷ್ಯದ ದೃಷ್ಟಿಯಿಂದ ಈ ಕಪ್ಪು ಕುಳಿ ಅಧ್ಯಯನ ಅತ್ಯಗತ್ಯವಾಗಿದೆ. ಹೀಗಾಗಿಯೇ 'ಸಿಗ್ನಸ್ ಎಕ್ಸ್-1' ಮೇಲೆ ಕಣ್ಣಿಟ್ಟು ಕೂತಿದ್ದಾರೆ ಖಗೋಳ ವಿಜ್ಞಾನಿಗಳು.

 ‘ಬ್ಲ್ಯಾಕ್ ಹೋಲ್’ ಬಂದರೆ ಉಡೀಸ್

‘ಬ್ಲ್ಯಾಕ್ ಹೋಲ್’ ಬಂದರೆ ಉಡೀಸ್

ಈ ಬ್ರಹ್ಮಾಂಡದಲ್ಲಿ ಮನುಕುಲ ಅತಿಹೆಚ್ಚು ಭಯಪಟ್ಟ ವಿಚಾರವೆಂದರೆ 'ಕಪ್ಪು ಕುಳಿ'. 'ಬ್ಲ್ಯಾಕ್ ಹೋಲ್' ಬಗ್ಗೆ ಒಂದು ಕಾಲದಲ್ಲಿ ಇಡೀ ಬಾಹ್ಯಾಕಾಶ ವಿಜ್ಞಾನ ಲೋಕವೇ ತಲೆಕೆಡಿಸಿಕೊಂಡಿತ್ತು. ಮಾನವನ ವಿನಾಶ ಹೀಗೆ ಆಗುತ್ತದೆ ಎಂಬ ಸಿದ್ಧಾಂತಗಳೂ ಮಂಡನೆಯಾಗಿದ್ದವು. ಆದರೆ ನಮ್ಮ ಅದೃಷ್ಟ, ಭೂಮಿಗೆ ಸಮೀಪದಲ್ಲಿ ಅಷ್ಟು ಭಯಾನಕ 'ಬ್ಲ್ಯಾಕ್ ಹೋಲ್' ಎಲ್ಲೂ ಇಲ್ಲ. ಇದ್ದರೂ ಅದು ತುಂಬಾ ದೂರದಲ್ಲಿ ತನ್ನ ಪಾಡಿಗೆ ತಾನು ಸಿಕ್ಕ ಸಿಕ್ಕ ವಸ್ತುಗಳನ್ನ ನುಂಗಿ ಹಾಕುತ್ತಿದೆ. ಅಕಸ್ಮಾತ್ ರಾಕ್ಷಸ ಗಾತ್ರದ 'ಬ್ಲ್ಯಾಕ್ ಹೋಲ್' ಭೂಮಿಗೆ ಸಮೀಪವೇ ಬಂದರೆ ಕತೆ ಏನು ಎಂಬ ಪ್ರಶ್ನೆಗಳು ಮೂಡಿದಾಗ, ಅದಕ್ಕಿರುವ ಒಂದೇ ಪದದ ಉತ್ತರ ಸರ್ವನಾಶ..!

 ‘ನಾಸಾ’ ಕೂಡ ಕಷ್ಟಪಟ್ಟಿತ್ತು

‘ನಾಸಾ’ ಕೂಡ ಕಷ್ಟಪಟ್ಟಿತ್ತು

ಬೆಳಕಿನ ವಿಭಿನ್ನ ತರಂಗಾಂತರ ಬಳಸಿ ಕಪ್ಪು ರಂಧ್ರವನ್ನು ಅಧ್ಯಯನ ಮಾಡಲು ನಾಸಾದ ಅನೇಕ ಬಾಹ್ಯಾಕಾಶ ನೌಕೆಗಳು ಶ್ರಮವಹಿಸಿವೆ. ಅಲ್ಲದೆ ಶತಮಾನ ಕಂಡ ಮಹಾನ್ ವಿಜ್ಞಾನಿ ಐನ್‍ಸ್ಟೈನ್ ಸಿದ್ಧಾಂತ ಬಳಸಿಕೊಂಡು ಅನೇಕ ಪ್ರಯತ್ನಗಳನ್ನು ನಡೆಸಿದೆ. ಆದರೆ ಇದರಲ್ಲಿ ನಾಸಾ ಯಶಸ್ಸಿಗಿಂತ ಸಾಕಷ್ಟು ಸೋಲುಗಳನ್ನೇ ಕಂಡಿದೆ. ಈಗಾಗಲೇ ಸೌರ ಮಂಡಲದ ಗೆರೆಯನ್ನೂ ದಾಟಿರುವ ನಾಸಾ ನೌಕೆಗಳಿಗೆ ಕಪ್ಪು ಕುಳಿ ಬಗೆಗಿನ ಅಧ್ಯಯನವು ದೊಡ್ಡ ಸವಾಲಾಗಿದೆ. ಇಂತಹ ಹೊತ್ತಲ್ಲೇ ಇಟಲಿ ವಿಜ್ಞಾನಿಗಳು ಮತ್ತೊಂದು ಹಿಂಟ್ ಕೊಟ್ಟಿದ್ದು, ಅಮೆರಿಕದ ನಾಸಾ ಸಂಸ್ಥೆ ಇದರ ಜಾಡು ಹಿಡಿದು ಹೊರಟರೂ ಹೊರಡಬಹುದು.

ವಿಜ್ಞಾನ ಮಾಂತ್ರಿಕ ಸ್ಟೀಫನ್ ಹಾಕಿಂಗ್ ಬಗ್ಗೆ ಕುತೂಹಲದ 5 ಸಂಗತಿವಿಜ್ಞಾನ ಮಾಂತ್ರಿಕ ಸ್ಟೀಫನ್ ಹಾಕಿಂಗ್ ಬಗ್ಗೆ ಕುತೂಹಲದ 5 ಸಂಗತಿ

‘ಬ್ಲ್ಯಾಕ್ ಹೋಲ್’ ಫೋಟೋ ತೆಗೆದಿದ್ದರು

‘ಬ್ಲ್ಯಾಕ್ ಹೋಲ್’ ಫೋಟೋ ತೆಗೆದಿದ್ದರು

ಕಳೆದ ವರ್ಷ ವಿಸ್ಮಯವೊಂದು ನಡೆದಿತ್ತು. ಅಂತಾರಾಷ್ಟ್ರೀಯ ಟೆಲಿಸ್ಕೋಪ್ ಮಹತ್ತರದ ಸಾಧನೆ ಮಾಡಿತ್ತು. ಕಪ್ಪು ಕುಳಿ ಫೋಟೋ ಕ್ಲಿಕ್ಕಿಸುವಲ್ಲಿ ಖಗೋಳಶಾಸ್ತ್ರಜ್ಞರು ಯಶಸ್ವಿಯಾಗಿದ್ದರು. ಮೊದಲ ಬಾರಿಗೆ ಕಪ್ಪು ಕುಳಿ ಮತ್ತು ಅದರ ನೆರಳಿನ ಚಿತ್ರ ಸೆರೆಹಿಡಿಯಲಾಗಿತ್ತು. ಇವೆಂಟ್ ಹಾರಿಜಾನ್ ಟೆಲಿಸ್ಕೋಪ್ ಇದನ್ನು ಸಾಧಿಸಿತ್ತು. ಅರೆ ಫೋಟೋ ತೆಗೆಯುವುದರಲ್ಲಿ ಏನಿದೆ ಎಂದು ನೀವು ಪ್ರಶ್ನಿಸಬಹುದು. ಆದರೆ ಕಪ್ಪು ಕುಳಿ ಫೋಟೋ ಕ್ಲಿಕ್ ಮಾಡುವುದು ಸುಲಭವಲ್ಲ. ಕಪ್ಪು ಕುಳಿ ಅತ್ಯಂತ ಸಾಂದ್ರವಾದ ವಸ್ತು. ಎಷ್ಟು ಪ್ರಬಲ ಎಂದರೆ ಬೆಳಕು ಕೂಡ ಎಸ್ಕೇಪ್ ಆಗಲಾರದು. ಅದನ್ನು ಕಪ್ಪು ಕುಳಿಯೇ ನುಂಗಿಬಿಡುತ್ತದೆ ಹಾಗೂ ಪುನಃ ಕಾಣಿಸಿಕೊಳ್ಳುವುದೇ ಇಲ್ಲ. ಏಕೆಂದರೆ ಊಹಿಸಲೂ ಅಸಾಧ್ಯವಾದಷ್ಟು ಪ್ರಬಲ ಗುರುತ್ವ ಶಕ್ತಿಯನ್ನ ಕಪ್ಪು ಕುಳಿ ಹೊಂದಿರುತ್ತದೆ.

ಬ್ರಹ್ಮಾಂಡದ ವಿಸ್ಮಯ 'ಕಪ್ಪು ರಂಧ್ರ' ಎಂದರೇನು? ಅದರ ವಿಶೇಷತೆಯೇನು?ಬ್ರಹ್ಮಾಂಡದ ವಿಸ್ಮಯ 'ಕಪ್ಪು ರಂಧ್ರ' ಎಂದರೇನು? ಅದರ ವಿಶೇಷತೆಯೇನು?

English summary
Astrophysicists have revealed that, first ever found black hole ‘Cygnus X-1’ is larger than previous we thought.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X