keyboard_backspace

ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಕಾರ್ಯಕಾರಣಿಯಿಂದ ರವಾನೆಯಾದ ಮಹತ್ವದ ಸಂದೇಶ!

Google Oneindia Kannada News

ಬೆಂಗಳೂರು, ಸೆ. 20: ನಾಯಕತ್ವ ಬದಲಾವಣೆ ಬಳಿಕ ರಾಜ್ಯ ಬಿಜೆಪಿ ಮೊದಲ ಕಾರ್ಯಕಾರಣಿ ದಾವಣಗೆರೆಯಲ್ಲಿ ನಡೆದಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೂ ಮುನ್ನ ಪಕ್ಷದಲ್ಲಿನ ಅಂತರಿಕ ಸಂಘರ್ಷ ಹಾಗೂ ಸರ್ಕಾರದ ಬಗ್ಗೆೆ ಕೇಳಿ ಬರುತ್ತಿದ್ದ ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳಿಂದ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರದ ಕನಸು ಕೈ ಬಿಟ್ಟಿದ್ದ ಬಿಜೆಪಿ ನಾಯಕರು, ಇದೀಗ ನಾಯಕತ್ವ ಬದಲಾವಣೆಯ ನಂತರವೂ ಮುಂದಿನ ಬಾರಿ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಮತ್ತೆೆ ಅಧಿಕಾರಕ್ಕೇರುವ ಗುರಿ ಇಟ್ಟುಕೊಂಡಿದ್ದು, ಈಗಿನಿಂದಲೇ ಸ್ಪಷ್ಟ ಬಹುಮತದ ಸಂದೇಶ ಸಾರಲು ಮುಂದಾಗಿರುವುದು ತಿಳಿದು ಬಂದಿದೆ.

2023 ರ ವಿಧಾನಸಭೆ ಚುನಾವಣೆಯನ್ನು ಸ್ಪಷ್ಟ ಬಹುಮತದಿಂದ ಗೆದ್ದು ಅಧಿಕಾರಕ್ಕೇರಲು ರಾಜ್ಯ ಬಿಜೆಪಿ ನಾಯಕರು ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಲು ಅಣಿಯಾಗಿದ್ದು, ರಾಜ್ಯದ ಜನರನ್ನು ಬಿಜೆಪಿ ಪರವಾದ ಭಾವನೆಯೊಂದಿಗೆ ಚುನಾವಣೆ ಕಣಕ್ಕೆೆ ತೆಗೆದುಕೊಂಡು ಹೋಗಲು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಲು ರಾಜ್ಯ ಬಿಜೆಪಿ ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಎರಡನೇ ಬಾರಿ ಅಧಿಕಾರಕ್ಕೆ ತಂದಿದ್ದು ಬಿ.ಎಸ್. ಯಡಿಯೂರಪ್ಪ ಎಂಬುದರಲ್ಲಿ ಎರಡು ಮಾತಿಲ್ಲ. ಎರಡನೇ ಬಾರಿಯೂ ಸ್ಪಷ್ಟ ಬಹುಮತವಿಲ್ಲದಿದ್ದರೂ ಮತ್ತೆ ಯಶಸ್ವಿಯಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಬಿ.ಎಸ್. ಯಡಿಯೂರಪ್ಪ ಸಫಲರಾಗಿದ್ದರು. ಆದರೆ ಬಿಜೆಪಿ ಆಂತರಿಕ ನಿಯಮದಂತೆ ಅವರನ್ನು ಬದಲಾವಣೆ ಮಾಡಲಾಗಿದೆ. ಈ ಬದಲಾವಣೆ ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ತೀರ್ಮಾನಿಸಿದ್ದರು. ಆದರೆ ಇದೀಗ ಅದು ಬದಲಾಗಿದೆ ಎನ್ನಲಾಗಿದೆ. ಅದಕ್ಕೆ ಕಾರಣವೂ ಇದೆ.

ಮತ್ತೆ ಬಹುಮತ ಪಡೆಯಲು ಬಿಜೆಪಿ ನಿರ್ಧಾರ!

ಮತ್ತೆ ಬಹುಮತ ಪಡೆಯಲು ಬಿಜೆಪಿ ನಿರ್ಧಾರ!

ನಾಯಕತ್ವ ಬದಲಾವಣೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷ ಮತ್ತು ಸರ್ಕಾರದ ನಡುವಿನ ಆಂತರಿಕ ಸಂಘರ್ಷಕ್ಕೆೆ ತೇಪೆ ಹಚ್ಚಿದ್ದು, ಆಡಳಿತದ ಬಗ್ಗೆೆ ಸಾರ್ವಜನಿಕರಲ್ಲಿದ್ದ ಭಾವನೆಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬಂದಿವೆ.

ರಾಜ್ಯ ಬಿಜೆಪಿ ಕುರಿತು ಸಾರ್ವಜನಿಕರಿಗೆ ಇದ್ದ ಭಾವನೆ ಕ್ರಮೇಣ ಕಡಿಮೆಯಾಗಿ ಬಿಜೆಪಿಯ ಬಗ್ಗೆೆ ಒಲವು ಮೂಡುತ್ತಿದೆ ಎಂಬ ಅಭಿಪ್ರಾಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಮೂಡಿದೆ. ಹೀಗಾಗಿ ಈಗಿನಿಂದಲೇ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಜನರನ್ನು ಬಿಜೆಪಿಯಲ್ಲಿ ಕಡೆ ಹಿಡಿದಿಡುವ ಪ್ರಯತ್ನ ಮಾಡಿದರೆ ಮತ್ತೆೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆೆ ಬರುವುದು ಸುಲಭ ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ವಿಧಾನ ಪರಿಷತ್ ಚುನಾವಣೆ

ವಿಧಾನ ಪರಿಷತ್ ಚುನಾವಣೆ

ಸಂಪೂರ್ಣವಾಗಿ ಗ್ರಾಮೀಣ ಮತದಾರರನ್ನು ಪ್ರತಿನಿಧಿಸುವ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳನ್ನೊಳಗೊಂಡ 25 ಸ್ಥಳೀಯ ಸಂಸ್ಥೆೆಗಳ ಚುನಾವಣೆ 2022 ರ ಜನವರಿಯಲ್ಲಿ ನಡೆಯಲಿವೆ. ಅದಕ್ಕೆೆ ಪೂರಕವಾಗಿ ಈಗಿನಿಂದಲೇ ಚುನಾವಣೆ ಸಿದ್ದತೆ ಮಾಡಿಕೊಳ್ಳಲು ದಾವಣಗೆರೆಯಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಹಾಗೂ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಸಲಾಗಿದೆ. ಅಲ್ಲದೇ ಬೂತ್ ಮಟ್ಟದಿಂದ ತಂಡ ರಚನೆ ಮಾಡಿ, ಚುನಾವಣೆ ಸಿದ್ದತೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿಯಿದೆ.

ಅದರ ಜೊತೆಗೆ ಮುಂದಿನ ವರ್ಷ ಜುಲೈನಲ್ಲಿ ವಿಧಾನ ಪರಿಷತ್‌ನ ನಾಲ್ಕು ಪದವೀಧರ ಕ್ಷೇತ್ರಗಳ ಚುನಾವಣೆ ಎದುರಾಗಲಿದೆ. ಆ ಚುನಾವಣೆಗೂ ಈಗಿನಿಂದಲೇ ಮತದಾರರ ನೋಂದಣಿ ಮಾಡಿಸುವ ಮೂಲಕ ಪರಿಷತ್ ಚುನಾವಣೆಗಳನ್ನೂ ಸಂಪೂರ್ಣ ಗೆಲುವು ಪಡೆಯಲು ಅಗತ್ಯ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.

ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆ!

ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆ!

ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರಗಳ ಉಪ ಚುನಾವಣೆಯನ್ನೂ ಮುಂಬರುವ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎನ್ನುವಂತೆ ಬಿಂಬಿಸುವ ನಿಟ್ಟಿನಲ್ಲಿ ಎರಡೂ ಉಪ ಚುನಾವಣೆ ಗೆಲ್ಲಲು ಬಿಜೆಪಿ ಈಗಿನಿಂದಲೇ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದೆ. ಎರಡೂ ಕ್ಷೇತ್ರಗಳಿಗೂ ತಕ್ಷಣವೇ ಉಸ್ತುವಾರಿಗಳನ್ನು ನೇಮಿಸಿ, ಚುನಾವಣೆಯ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿಂಧಗಿ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಹಾನಗಲ್ ಕ್ಷೇತ್ರಕ್ಕೂ ಶೀಘ್ರವೇ ಚುನಾವಣಾ ಉಸ್ತುವಾರಿ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಧಾನಸಭೆ ಚುನಾವಣೆಗೆ ದಿಕ್ಸೂಚಿ!

ವಿಧಾನಸಭೆ ಚುನಾವಣೆಗೆ ದಿಕ್ಸೂಚಿ!

2023 ರ ರಾಜ್ಯ ವಿಧಾನಸಭಾ ಚುನಾವಣೆಗೆ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳೇ ದಿಕ್ಸೂಚಿ ಎನ್ನುವಂತೆ ಬಿಂಬಿಸಲು ಮುಂದಾಗಿರುವ ಬಿಜೆಪಿ ಅದಕ್ಕಾಗಿಯೇ ಕ್ಷೇತ್ರ ಪುನರ್ ವಿಂಗಡನೆಯ ಕಸರತ್ತಿಗೆ ಕೈ ಹಾಕಿದೆ. ಕ್ಷೇತ್ರ ಪುನರ್ ವಿಂಗಡನೆಗೆ ಕನಿಷ್ಠ ಅರು ತಿಂಗಳು ಸಮಯ ಬೇಕಾಗುವುದರದಿಂದ ಆ ನಂತರ ಚುನಾವಣೆಗಳನ್ನು ಎದುರಿಸಿ, ಆ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಕಾರ್ಯತಂತ್ರ ರೂಪಿಸುತ್ತಿದೆ. ಆ ಚುನಾವಣೆಯ ಫಲಿತಾಂಶ ಮುಂದಿನ ಆರು ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನ ಸಭೆ ಚುನಾವಣೆಗೆ ಪೂರಕವಾಗಿರುವಂತೆ ನೋಡಿಕೊಳ್ಳಲು ಕಾರ್ಯತಂತ್ರ ರೂಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆ 2023ರ ವಿಧಾನಸಭೆ ಚುನಾವಣೆಯವರೆಗೆ ಹಂತ ಹಂತವಾಗಿ ನಡೆಯುವ ಚುನಾವಣೆಗಳನ್ನು ಗೆಲ್ಲುವ ಮೂಲಕ ಮತ್ತೆೆ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆೆ ಬರುತ್ತದೆ ಎನ್ನುವ ಭಾವನೆ ಜನರಲ್ಲಿ ಮೂಡುವಂತೆ ನೋಡಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಗೊಂದಲ ಪರಿಹಾರವಾಗಿವೆ: ಗಣೇಶ್ ಕಾರ್ಣಿಕ್!

ಗೊಂದಲ ಪರಿಹಾರವಾಗಿವೆ: ಗಣೇಶ್ ಕಾರ್ಣಿಕ್!

ಬಿಜೆಪಿ ಮುಂದಿನ ನಡೆಯ ಬಗ್ಗೆ ರಾಜ್ಯ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಮಾತನಾಡಿದ್ದಾರೆ. "ನಾಯಕತ್ವ ಬದಲಾವಣೆಯ ನಂತರ ಪಕ್ಷದಲ್ಲಿನ ಸಣ್ಣಪುಟ್ಟ ಗೊಂದಲಗಳ ಬಗ್ಗೆೆ ಕಾರ್ಯಕರ್ತರಲ್ಲಿದ್ದ ಬೇಸರ ಕಡಿಮೆಯಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಳ ಮತ್ತು ಸ್ವಚ್ಛ ಆಡಳಿತದ ಬಗ್ಗೆೆ ಆತ್ಮವಿಶ್ವಾಸ ಮೂಡಿದೆ. ಮತ್ತೆೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆೆ ಬರುತ್ತೇವೆ ಎನ್ನುವ ವಿಶ್ವಾಸ ಕಾರ್ಯಕರ್ತರಲ್ಲಿ ಹೆಚ್ಚಾಗಿದೆ" ಎಂದು ಅವರು ಹೇಳಿದ್ದಾರೆ.

English summary
State BJP executive meeting sent message to party workers that BJP will get clear majority in the next assembly election. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X