keyboard_backspace

ಮಾದಕ ಲೋಕದ ಮಹಾ ಅಸ್ತ್ರ ಬಿಟ್ ಕಾಯಿನ್ !

Google Oneindia Kannada News

ಬೆಂಗಳೂರು, ಫೆಬ್ರವರಿ 24 : ಬಿಟ್ ಕಾಯಿನ್ ಇದ್ದರೆ ಸಣ್ಣ ಸುಳಿವು ಸಿಗದೇ ಡಾರ್ಕ್ ವೆಬ್ ತಾಣದ ಮೂಲಕ ಬೇಕಾದ ಡ್ರಗ್ ತರಿಸಬಹುದು ! ಇನ್ನೊಬ್ಬರ ನೆರವಿಲ್ಲದೇ ಇಷ್ಟ ಬಂದವರಿಗೆ ಇ - ಮೇಲ್ ರವಾನಿಸುವ ಮೂಲಕ ಹವಾಲ ದಂಧೆ ನಡೆಸಬಹದು ! ಭೌತಿಕ ಸ್ವರೂಪ ವಿಲ್ಲದ ಡಿಜಿಟಲ್ ಕರೆನ್ಸಿ ಬಿಟ್ ಕಾಯಿನ್ ನ್ನು ಕಾನೂನು ಬದ್ಧಗೊಳಿಸಬೇಕೆಂಬ ಕೂಗು ಹಲವು ವರ್ಷದಿಂದ ಕೇಳಿ ಬರುತ್ತಿದೆ. ಒಂದು ವೇಳೆ ಬಿಟ್ ಕಾಯಿನ್ ವಹಿವಾಟನ್ನು ದೇಶದಲ್ಲಿ ಕಾನೂನು ಬದ್ಧಗೊಳಿಸಿದರೆ, ಇಡೀ ಭಾರತವೇ ಸೈಬರ್ ಅಪರಾಧ ಲೋಕದ ಕೇಂದ್ರವಾಗಿ ರೂಪಾಂತರಗೊಳ್ಳಲಿದೆ.

ಬಿಟ್ ಕಾಯಿನ್ ಲೀಗಲ್ ಸುತ್ತ ಗಂಭೀರ ಚರ್ಚೆ

ಬಿಟ್ ಕಾಯಿನ್ ಲೀಗಲ್ ಸುತ್ತ ಗಂಭೀರ ಚರ್ಚೆ

ಬಿಟ್ ಕಾಯಿನ್ ನ್ನು ದೇಶದಲ್ಲಿ ಲೀಗಲೈಸ್ ಮಾಡಿದ್ರೆ, ಭಾರತದ ಕಥೆ ಮುಗಿದಂತೆ. ಭಾರತ ಹಿಂದೆಂದು ನೋಡದ ಹಣ ದುಬ್ಬರದ ಸ್ಥಿತಿ ನೋಡಬೇಕಾಗುತ್ತದೆ. ಮಿಗಿಲಾಗಿ, ಕಪ್ಪು ಹಣ ಸಂಗ್ರಹಣೆ, ಹವಾಲ ದಂಧೆ, ಮಾದಕ ವಸ್ತುಗಳ ಅಕ್ರಮ ಸಾಗಣ, ಸೈಬರ್ ಅಪರಾಧಗಳು ಹೆಚ್ಚಾಗಲಿವೆ. ಬಿಟ್ ಕಾಯಿನ್ ನಿಷೇಧ ಬಗ್ಗೆ ಕೇಂದ್ರ ಸರ್ಕಾರ ತ್ವರಿತವಾಗಿ ನಿರ್ಧಾರ ಕೈಗೊಳ್ಳುತ್ತಿಲ್ಲ. ಇದರ ಫಲವಾಗಿ ಸದ್ದಿಲ್ಲದೇ ದೇಶದ ಅರ್ಥ ವ್ಯವಸ್ಥೆ ಮೇಲೆ ಬಿಟ್ ಕಾಯಿನ್ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಬೆಂಗಳೂರಿನ ಸೈಬರ್ ತಜ್ಞ ನಾ. ವಿಜಯಶಂಕರ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಬಿಟ್ ಕಾಯಿನ್ ನ ಕುರಿತು ಸಮಗ್ರ ಅಧ್ಯಯನ ನಡೆಸಿರುವ ವಿಜಯ್ ಶಂಕರ್ ಇತ್ತೀಚೆಗೆ ಕೇಂದ್ರ ಇಂಧನ ಸಚಿವರಿಗೆ ಪತ್ರ ಬರೆದ್ದರು. ದೇಶದಲ್ಲಿ ಬಿಟ್ ಕಾಯಿನ್ ಲೀಗಲ್ ಮಾಡಿದ್ರೆ, ಶೇ. 6 ರಷ್ಟು ವಿದ್ಯುತ್ ಬಿಟ್ ಕಾಯಿನ್ ಮೈನಿಂಗ್ ಉದ್ದೇಶಕ್ಕಾಗಿ ಬಳಸಿವ ಕಂಪ್ಯೂಟರ್ ಗಳಿಗೆ ಬೇಕಾಗುತ್ತವೆ. ದೇಶದ ಹಿತದೃಷ್ಟಿಯಿಂದ ಬಿಟ್ ಕಾಯಿನ್ ಮೇಲೆ ನಿಷೇಧ ಹೇರಿ ಎಂದು ಅವರು ಮನವಿ ಮಾಡಿದ್ದರು.

ಬಿಟ್ ಕಾಯಿನ್ ಲೀಗಲ್ ಸುತ್ತ ಗಂಭೀರ ಚರ್ಚೆ

ಬಿಟ್ ಕಾಯಿನ್ ಲೀಗಲ್ ಸುತ್ತ ಗಂಭೀರ ಚರ್ಚೆ

ಬಿಟ್ ಕಾಯಿನ್ ನನ್ನು ಭಾರತದಲ್ಲಿ ಕಾನೂನು ಬದ್ಧಗೊಳಿಸಲು ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಒನ್ ಇಂಡಿಯಾ ಕನ್ನಡ ಜತೆ ಮಾತನಾಡಿದ ನಾ. ವಿಜಯಶಂಕರ್, ಬಿಟ್ ಕಾಯಿನ್ ಲೀಗಲೈಸ್ ಮಾಡುವ ಬಗ್ಗೆ ದೇಶದಲ್ಲಿ ಸದ್ದಿಲ್ಲದೇ ಒಂದಷ್ಟು ಬೆಳವಣಿಗೆ ನಡೆಯುತ್ತಿವೆ. ಉದ್ಯಮ ಹೊಂದಿರುವ ಬಿಜೆಪಿ ನಾಯಕರೇ ಬಿಟ್ ಕಾಯಿನ್ ಪರ ಧ್ವನಿಯೆತ್ತಿದ್ದಾರೆ. ಬಿಟ್ ಕಾಯಿನ್ ನಿಷೇಧಿಸಿ ದೇಶದಲ್ಲಿ ಆರ್‌ಬಿಐ ಅಧೀನಕ್ಕೆ ಒಳಪಟ್ಟು ದೇಶದ ಡಿಜಿಟಲ್ ಕರೆನ್ಸಿ ಪರಚಿಯಿಸುವ ಬಿಲ್ ಸಂಸತ್ತಿನಲ್ಲಿ ಮಂಡನೆ ಮಾಡಿದರೂ ಪಾಸ್ ಆಗಿಲ್ಲ.

ಬಿಟ್ ಕಾಯಿನ್ ಲೀಗಲ್ ಸುತ್ತ ಗಂಭೀರ ಚರ್ಚೆ

ಬಿಟ್ ಕಾಯಿನ್ ಲೀಗಲ್ ಸುತ್ತ ಗಂಭೀರ ಚರ್ಚೆ

ಸುಗ್ರೀವಾಜ್ಞೆ ತರುವ ಮೂಲಕ ಬಿಟ್ ಕಾಯಿನ್ ಬಂದ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಟ್ ಕಾಯಿನ್ ಬ್ಯಾನ್ ಮಾಡದಿದ್ದರೆ ಭಾರತದ ಆರ್ಥಿಕತೆಯನ್ನು ಬಲಿ ಕೊಟ್ಟಂತಾಗುತ್ತದೆ. ವಿಶ್ವದ ಹಲವಾರು ರಾಷ್ಟ್ರಗಳು ಬಿಟ್ ಕಾಯಿನ್ ಲೀಗಲೈಸ್ ಮಾಡುವಂತೆ ಒತ್ತಡ ಹಾಕುತ್ತಿವೆ. ಅಂತಾರಾಷ್ಟ್ರೀಯ ಒತ್ತಡಕ್ಕೆ ಭಾರತ ಯಾವತ್ತಿಗೂ ಮಣಿಯಬಾರದು. ಆದರೆ ಕೇಂದ್ರ ಸರ್ಕಾರ ನಾಲ್ಕು ವರ್ಷದಿಂದ ಬಿಟ್ ಕಾಯಿನ್ ಬ್ಯಾನ್ ಬಗ್ಗೆ ಮೀನಾ ಮೇಷ ಎಣಿಸುತ್ತಿದೆ. ಕೇಂದ್ರ ಸರ್ಕಾರ ತ್ವರಿತವಾಗಿ ಬಿಟ್ ಕಾಯಿನ್ ಬ್ಯಾನ್ ಮಾಡದಿದ್ದರೆ, ದೇಶದ ಕೆಲವರ ಸಂಪತ್ತು ಬಿಟ್ ಕಾಯಿನ್ ರೂಪದಲ್ಲಿ ಬ್ಲಾಕ್ ಮನಿಯಾಗಿ ಪರಿವರ್ತನೆಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಟ್ ಕಾಯಿನ್ ಲೀಗಲ್ ಸುತ್ತ ಗಂಭೀರ ಚರ್ಚೆ

ಬಿಟ್ ಕಾಯಿನ್ ಲೀಗಲ್ ಸುತ್ತ ಗಂಭೀರ ಚರ್ಚೆ

ಮಾದಕ ಲೋಕ : ವಿದೇಶಗಳಿಂದ ಭಾರತಕ್ಕೆ ನಾನಾ ಮಾರ್ಗದಿಂದ ಮಾದಕ ವಸ್ತುಗಳು ಬರುತ್ತಿವೆ. ಎ ಲ್‌ಡಿಎಂಎ, ಎಂಡಿಎಮೆಎ ಕೊಕೇನ್ , ಹೈಡ್ರೋ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಇಂದು ಡಾರ್ಕ್ ವೆಬ್ ತಾಣದ ಮೂಲಕ ತರಿಸಲಾಗುತ್ತಿದೆ. ಈ ಡಾರ್ಕ್ ವೆಬ್ ನಲ್ಲಿ ಭಾರತೀಯ ರೂಪಾಯಿಂದ ವಹಿವಾಟು ನಡೆಸಲು ಸಾಧ್ಯವಿಲ್ಲ. ಅದಕ್ಕೆ ಬೇಕಿರುವುದು ಬಿಟ್ ಕಾಯಿನ್. ಬಿಟ್ ಕಾಯಿನ್ ವಹಿವಾಟಿನಿಂದ ಯಾರು ಯಾರಿಗೆ ಕೊಟ್ಟಿದ್ದಾರೆ ? ಎಷ್ಟು ಕೊಟ್ಟಿದ್ದಾರೆ ಎಂಬ ಸಣ್ಣ ಸುಳಿವು ಸಿಗಲ್ಲ. ಹೀಗಾಗಿ ಅಕ್ರಮ ವಹಿವಾಟು ಮಾಡುವರಿಗೆ ಶ್ರೀರಕ್ಷೆ ನೀಡುತ್ತದೆ. ಹೀಗಾಗಿ ವಿಶ್ವದ ನಶೆ ಲೋಕವನ್ನೇ ಬಿಟ್ ಕಾಯಿನ್ ಆಳ್ವಿಕೆ ಮಾಡುತ್ತಿದೆ. ಇದಕ್ಕೆ ಅವಕಾಶ ನೀಡಿದರೆ, ಸೈಬರ್ ಅಪರಾಧಗಳು ಮತ್ತಷ್ಟು ಹೆಚ್ಚಾಗಲಿವೆ. ದೇಶದಲ್ಲಿ ದಾಖಲಾಗುತ್ತಿರುವ ಸೈಬರ್ ಅಪರಾಧಗಳ ಪೈಕಿ ಕರ್ನಾಟಕ ಅಗ್ರಗಣ್ಯ ಸ್ಥಾನದಲ್ಲಿದೆ. ದೇಶದಲ್ಲಿ ಬಿಟ್ ಕಾಯಿನ್ ನಿಷೇಧ ಮಾಡದಿದ್ದಲ್ಲಿ, ಮಾದಕ ಲೋಕ ಹಾಗೂ ಸೈಬರ್ ಅಪರಾಧ ಕೃತ್ಯಗಳು ಪರಕಾಷ್ಠೆಗೆ ತಲುಪಲಿವೆ ಎಂದು ಇತ್ತೀಚೆಗೆ ಬಿಟ್ ಕಾಯಿನ್ ಪ್ರಕರಣ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

English summary
Here we talking about the future of trading of bitcoins in India, if it legalize may lead to rise in cyber crimes in India.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X