keyboard_backspace

ಬಿಹಾರದಲ್ಲಿ ಕಿಂಗ್ ಮೇಕರ್ ಆಗಲು ತೃತೀಯ ರಂಗದ ಉಪೇಂದ್ರ ಸಜ್ಜು!

Google Oneindia Kannada News

ಬಿಹಾರದಲ್ಲಿ ನಿತೀಶ್ ಕುಮಾರ್, ತೇಜಸ್ವಿ ಯಾದವ್, ಚಿರಾಗ್ ಪಾಸ್ವಾನ್ ಸಾಲಿನಲ್ಲಿ ಹೊಸದಾಗಿ ಸಿಎಂ ಅಭ್ಯರ್ಥಿಯಾಗಿ ಕಾಣಿಸಿಕೊಂಡ ಉಪೇಂದ್ರ ಕುಶ್ವಾಹ ಅವರು ಈ ಬಾರಿ ಕಿಂಗ್ ಆಗಲು ಸಾಧ್ಯವಾಗದಿದ್ದರೆ ಕಿಂಗ್ ಮೇಕರ್ ಆಗುವ ಅವಕಾಶ ಪಡೆದುಕೊಳ್ಳಬಹುದಾಗಿದೆ. 60 ವರ್ಷ ವಯಸ್ಸಿನ ಉಪೇಂದ್ರ ಕುಶ್ವಾಹ ನೇತೃತ್ವದ ತೃತೀಯ ರಂಗವು ಬಿಹಾರ ವಿಧಾನಸಭೆ ಚುನಾವಣೆ 2020ರಲ್ಲಿ ಯಾವ ರೀತಿ ಪಾತ್ರವಹಿಸಲಿದೆ ಎಂಬುದು ನವೆಂಬರ್ 10ರಂದು ನಿರ್ಧಾರವಾಗಲಿದೆ.

ಒಂದು ಕಾಲದಲ್ಲಿ ನಿತೀಶ್ ಕುಮಾರ್ ಅವರ ನೀಲಿ ಕಂಗಳ ನೇತಾರ ಎನಿಸಿಕೊಂಡಿದ್ದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖ್ಯಸ್ಥ ಉಪೇಂದ್ರ ಅವರನ್ನು ಎನ್ಡಿಎ ಮೈತ್ರಿಕೂಟ ಹಾಗೂ ಮಹಾಘಟಬಂಧನ್ ಮೈತ್ರಿಕೂಟ ಎರಡು ಹತ್ತಿರ ಸೇರಿಸಿಕೊಳ್ಳಲಿಲ್ಲ.

ಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿ ಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿ

ರಾಷ್ಟ್ರೀಯ ಲೋಕ ಸಮರ್ಥ ಪಾರ್ಟಿ, ಹೈದರಾಬಾದಿನ ಸಂಸದ ಎಐಎಂಐಎಂ ಪಕ್ಷದ ಅಸಾಸುದ್ದೀನ್ ಒವೈಸಿ ಅವರು 6 ಪಕ್ಷಗಳ ಹೊಸ ಒಕ್ಕೂಟವನ್ನು ಘೋಷಿಸಿದರು. Grand Democratic Secular Front ಎಂದು ಹೆಸರಿಡಲಾಗಿದ್ದು, ಈ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಉಪೇಂದ್ರ ಕುಶ್ವಾಹ ಆಯ್ಕೆಯಾದರು.

GDSF 62 ಕ್ಷೇತ್ರಗಳಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿದೆ

GDSF 62 ಕ್ಷೇತ್ರಗಳಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿದೆ

ಆರ್ ಎಲ್ ಎಸ್ ಪಿ, ಎಐಎಂಐಎಂ, ಮಾಯಾವತಿ ಅವರ ಬಿ ಎಸ್ ಪಿ, ಸುಹಲ್ ದೇವ್ ಭಾರತೀಯ ಸಮಾಜ್ ಪಾರ್ಟಿ, ಸಾಮಾಜಿಕ್ ಜನತಾ ದಳ(ಪ್ರಜಾಪ್ರಭುತ್ವ) ಹಾಗೂ ಜನತಾಂತ್ರಿಕ್ ಪಾರ್ಟಿ(ಸಮಾಜವಾದಿ) ಪಕ್ಷಗಳು ಸೇರಿ ಹೊಸ ರಾಜಕೀಯ ಕೂಟವನ್ನು ರಚಿಸಿವೆ. ವಿಶೇಷವೆಂದರೆ ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲೀಮೀನ್(ಎಐಎಂಐಎಂ) ಮಾತ್ರ ಹಾಲಿ ಶಾಸಕರೊಬ್ಬರನ್ನು ಹೊಂದಿದೆ. ಮಿಕ್ಕ ಪಕ್ಷಗಳು ಕಳೆದ ಬಾರಿ ಖಾತೆ ತೆರೆದಿರಲಿಲ್ಲ.

ಮೊದಲ ಹಂತದಲ್ಲಿ 71 ಸ್ಥಾನಕ್ಕೆ ಮತದಾನ ಮುಕ್ತಾಯವಾಗಿದ್ದು, ಇನ್ನೆರಡು ಹಂತದಲ್ಲಿ ಮತದಾನ ನಡೆಯಬೇಕಿದೆ. 6 ಪಕ್ಷಗಳ ಹೊಸ ಒಕ್ಕೂಟ Grand Democratic Secular Front (GDSF) 62 ಕ್ಷೇತ್ರಗಳಲ್ಲಿ ಹೆಚ್ಚಿನ ಆಸೆ ಇರಿಸಿಕೊಂಡಿದೆ.

ಟೈಮ್ಸ್ ನೌ ಸಮೀಕ್ಷೆ: ಬಿಹಾರದಲ್ಲಿ ನಿತೀಶ್ ನೇತೃತ್ವದ ಎನ್ಡಿಎ ಅಧಿಕಾರಕ್ಕೆಟೈಮ್ಸ್ ನೌ ಸಮೀಕ್ಷೆ: ಬಿಹಾರದಲ್ಲಿ ನಿತೀಶ್ ನೇತೃತ್ವದ ಎನ್ಡಿಎ ಅಧಿಕಾರಕ್ಕೆ

ಮೊದಲ ಹಂತದಲ್ಲೇ 10% ಮತ ಗಳಿಸಿದರೆ ಸಾಕು

ಮೊದಲ ಹಂತದಲ್ಲೇ 10% ಮತ ಗಳಿಸಿದರೆ ಸಾಕು

ಒಟ್ಟಾರೆ ಮೊದಲ ಹಂತದಲ್ಲೇ 10% ಮತ ಗಳಿಸಿದರೆ ಸಾಕು ಬಿಹಾರದಲ್ಲಿ ಈ ಬಾರಿ ಕಿಂಗ್ ಮೇಕರ್ ಆಗಬಹುದು ಎಂಬ ಎಣಿಕೆಯಲ್ಲಿದ್ದಾರೆ. 2015ರ ವಿಧಾನಸಭೆ ಚುನಾವಣೆಯಲ್ಲಿ ಆರ್ ಎಲ್ ಎಸ್ ಪಿ 3.6% ಮತ ಗಳಿಸಿ 2 ಸ್ಥಾನ ಪಡೆದಿತ್ತು. ಎಐಎಂಐಎಂ 1 ಸ್ಥಾನಗಳಿಸಿತ್ತು. ಬಿಎಸ್ಪಿ ಗೆಲುವು ಸಾಧಿಸದೆ 2% ಮತ ಗಳಿಸಿತ್ತು.

243 ಕ್ಷೇತ್ರಗಳ ಪೈಕಿ ಆರ್ ಎಲ್ ಎಸ್ಪಿ 104, ಬಿಎಸ್ಪಿ 80, ಎಐಎಂಐಎಂ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಆರ್ ಎಲ್ ಎಸ್ಪಿ ಔರಂಗಾಬಾದ್, ಕೈಮೂರ್, ರೊಹ್ತಾಸ್, ಪೂರ್ವ ಚಂಪಾರಣ್, ಬಕ್ಸಾರ್, ಶೇಖ್ಪುರ್, ಜಮೂಯಿ ಹಾಗೂ ಮಂಗಾರ್ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ.ಸೀಮಾಂಚಲದಲ್ಲಿ ಎಐಎಂಐಎಂ ಹೆಚ್ಚಿನ ಸ್ಥಾನ ಗಳಿಸುವ ನಿರೀಕ್ಷೆ ಹೊಂದಿದೆ. ಬಿಎಸ್ಪಿ ರೋಹ್ತಾಸ್, ಕೈಮೂರ್ ಹಾಗೂ ಗೋಪಾಲ್ ಗಂಜ್ ನಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಹೊಂದಿದೆ.

18ಕ್ಕೂ ಅಧಿಕ ಚುನಾವಣಾ ಸಮಾವೇಶ

18ಕ್ಕೂ ಅಧಿಕ ಚುನಾವಣಾ ಸಮಾವೇಶ

ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಕುಶ್ವಾಹ ಅವರು ಕರಾಹ್ ಗರ್, ಭಾಭುವಾದಲ್ಲಿ ಪ್ರಚಾರ ಆರಂಭಿಸಿದರು. ಕುಶ್ವಾಹ ಹಾಗೂ ಓವೈಸಿ ಅವರು ಜಂಟಿಯಾಗಿ 18 ಚುನಾವಣಾ ಸಮಾವೇಶ ನಡೆಸಿದರು. ಎಲ್ಲೆಡೆ ಹೆಚ್ಚಾಗಿ ನಿರುದ್ಯೋಗ ಸಮಸ್ಯೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗಿದೆ, ಎನ್ಡಿಎ ಹಾಗೂ ಆರ್ ಜೆಡಿ ಧೋರಣೆಯಿಂದ ಜನತೆ ಬೇಸತ್ತಿದ್ದಾರೆ ಎಂದು RLSP ಪ್ರಚಾರ ಸಮಿತಿ ಮುಖ್ಯಸ್ಥ ಜಿತೇಂದ್ರ ನಾಥ್ ಹೇಳಿದ್ದಾರೆ.

ಕೊರಿ-ಕುರ್ಮಿ-ಧಾನುಕ್ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸಲಾಗಿದ್ದು, 40 ರಿಂದ 45 ಸ್ಥಾನ ಗಳಿಸುವ ನಿರೀಕ್ಷೆಯಿದೆ ಎಂದು RLSP ಪ್ರಧಾನ ಕಾರ್ಯದರ್ಶಿ ರಾಹುಲ್ ಕುಮಾರ್ ಹೇಳಿದ್ದಾರೆ.

ಬಿಹಾರದಲ್ಲಿ ಗಮನ ಸೆಳೆದ ಟಾಪ್-5 ವಿಧಾನಸಭಾ ಕ್ಷೇತ್ರಗಳು!ಬಿಹಾರದಲ್ಲಿ ಗಮನ ಸೆಳೆದ ಟಾಪ್-5 ವಿಧಾನಸಭಾ ಕ್ಷೇತ್ರಗಳು!

ಎಐಎಂಐಎಂ ಹೆಚ್ಚಿನ ಗಮನ ಹರಿಸಿದ 3 ಜಿಲ್ಲೆಗಳು

ಎಐಎಂಐಎಂ ಹೆಚ್ಚಿನ ಗಮನ ಹರಿಸಿದ 3 ಜಿಲ್ಲೆಗಳು

ಮುಸ್ಲಿಂ ಪ್ರಾಬಲ್ಯ ಹೊಂದಿರುವ ಕಿಶನ್ ಗಂಜ್, ಪೂರ್ನಿಯಾ, ಅರಾರಿಯಾ ಹಾಗೂ ಕತಿಯಾರ್ ಜಿಲ್ಲೆಗಳ ಮೇಲೆ ಎಐಎಂಐಎಂ ಹೆಚ್ಚಿನ ಗಮನ ಹರಿಸಿದೆ. ಕಳೆದ ವರ್ಷ ಕಿಶಾನ್ ಗಂಜ್ ವಿಧಾನಸಭೆ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಎಐಎಂಐಎಂ ಗೆಲುವು ದಾಖಲಿಸಿತ್ತು.ಎಐಎಂಐಎಂ ಬಿಹಾರ ಮುಖ್ಯಸ್ಥ ಅಖ್ರಾತ್ ಉಲ್ ಇಮಾನ್ ಅವರು ಅಮೌರ್ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಕೊಚಾಧಾಮಾನ್ ಹಾಗೂ ಬಹದೂರ್ ಗಂಜ್ ನಲ್ಲೂ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ.

2005ರಿಂದಲೂ ಇರುವ ಬಿಎಸ್ಪಿ ಹಾಗೂ ಯುಪಿ ನಾಯಕರು

2005ರಿಂದಲೂ ಇರುವ ಬಿಎಸ್ಪಿ ಹಾಗೂ ಯುಪಿ ನಾಯಕರು

ಬಿಹಾರ ಚುನಾವಣಾ ಕಣದಲ್ಲಿ 2005ರಿಂದಲೂ ಇರುವ ಬಿಎಸ್ಪಿ ಆಗ 6 ಸ್ಥಾನ ಗಳಿಸಿತ್ತು. 2015ರಲ್ಲಿ 228 ಕ್ಷೇತ್ರಗಳಲ್ಲಿ ಅಭ್ಯರ್ಥಗಳನ್ನು ನಿಲ್ಲಿಸಿದ್ದರೂ ಒಂದು ಸ್ಥಾನ ಗೆಲ್ಲಲಿಲ್ಲ. ಉತ್ತರಪ್ರದೇಶ ಮೂಲದ ಅನೇಕ ನಾಯಕರು ಬಿಹಾರದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಲೇ ಇದ್ದಾರೆ. ಜನ ತಾಂತ್ರಿಕ್ ಪಾರ್ಟಿ (ಸಮಾಜವಾದಿ) ಪಕ್ಷ ಸಂಜಯ್ ಸಿಂಗ್ ಚೌಹಾಣ್ ಅವರು ಉತ್ತರಪ್ರದೇಶ ಮೂಲದ ನಾಯಕರಾಗಿದ್ದು, ಘೋಸಿ ಕ್ಷೇತ್ರದಲ್ಲಿ ಪ್ರಭಾವ ಹೊಂದಿದ್ದಾರೆ. ಎಸ್ ಬಿ ಎಸ್ಪಿಯ ಓಂಪ್ರಕಾಶ್ ರಾಜ್ ಭರ್, ಎಸ್ ಜೆಡಿಡಿಯ ದೇವೇಂದ್ರ ಯಾದವ್ ಮುಂತಾದವರನ್ನು ಹೆಸರಿಸಬಹುದು.

ಎಬಿಪಿ-ಸಿವೋಟರ್ ಸಮೀಕ್ಷೆ: ಬಿಹಾರದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆಎಬಿಪಿ-ಸಿವೋಟರ್ ಸಮೀಕ್ಷೆ: ಬಿಹಾರದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆ

ಕೇಂದ್ರ ಬಿಂದು ಉಪೇಂದ್ರ ಕುಶ್ವಾಹ

ಕೇಂದ್ರ ಬಿಂದು ಉಪೇಂದ್ರ ಕುಶ್ವಾಹ

ಆದರೆ, ಎಲ್ಲರ ಕೇಂದ್ರ ಬಿಂದು ಉಪೇಂದ್ರ ಕುಶ್ವಾಹ ಅವರೇ ಆಗಿದ್ದು, ಜಯಪ್ರಕಾಶ್ ನಾರಾಯಣ್, ಕರ್ಪೂರಿ ಠಾಕೂರ್ ಚಳವಳಿಯ ಫಲವಾಗಿ ರೂಪುಗೊಂಡ ಕುಶ್ವಾಹ ಸಮುದಾಯದ ಉಪೇಂದ್ರ ಅವರು ನಿತೀಶ್ ನೆರಳಂತೆ ಬೆಳೆದವರು. ನಿತೀಶ್ ಸಲಹೆಯಂತೆ ತಮ್ಮ ಹೆಸರಿಗೆ ಜಾತಿಸೂಚಕ ಕುಶ್ವಾಹ ಸೇರಿಸಿಕೊಂಡವರು. ಬಿಹಾರದಲ್ಲಿ ಕುಶ್ವಾಹಗಳು ಶೇ 7ರಷ್ಟು ಮತ ಹೊಂದಿದ್ದಾರೆ. ಮೋದಿ ಸರ್ಕಾರ್ 1.0ರಲ್ಲಿ ಸಚಿವರಾಗಿದ್ದ ಉಪೇಂದ್ರ ಅವರು ಈ ಬಾರಿ ಮತ ಗಳಿಕೆ ಲೆಕ್ಕಾಚಾರದಲ್ಲಿ ಕಿಂಗ್ ಆಗುವರೋ ಕಿಂಗ್ ಮೇಕರ್ ಆಗುವರೋ ಕಾದು ನೋಡಬೇಕಿದೆ.

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

ಬಿಹಾರ ಚುನಾವಣೆ: ಮಾಯವಾದರೇ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್?ಬಿಹಾರ ಚುನಾವಣೆ: ಮಾಯವಾದರೇ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್?

English summary
Bihar Assembly elections 2020: Rashtriya Lok Samata Party (RLSP) chief Upendra Kushwaha can become kingmaker if Third front secures more than 10% of vote share.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X