keyboard_backspace

Explained: ಕೊವಿಡ್-19 ಲಸಿಕೆ ತುರ್ತು ಬಳಕೆಗೆ WHO ಅನುಮೋದನೆ ಪ್ರಕ್ರಿಯೆ ಹೇಗೆ ನಡೆಯುತ್ತೆ?

Google Oneindia Kannada News

ನವದೆಹಲಿ, ಅಕ್ಟೋಬರ್ 29: ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸ್ಸು ಮಾಡಲು ತಾಂತ್ರಿಕ ಸಲಹಾ ಸಮಿತಿಗೆ ಭಾರತ್ ಬಯೋಟೆಕ್ ಸಂಸ್ಥೆಯು ನಿರಂತರ ಹಾಗೂ ಕ್ಷಿಪ್ರಗತಿಯಲ್ಲಿ ಅಗತ್ಯ ದತ್ತಾಂಶವನ್ನು ಸಲ್ಲಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಉತ್ತಮ ಗುಣಮಟ್ಟದ ಲಸಿಕೆಯನ್ನು ಉತ್ಪಾದಿಸುವ ಭಾರತೀಯ ಉದ್ಯಮದ ಮೇಲೆ ವಿಶ್ವಾಸವಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡುವ ತಾಂತ್ರಿಕ ಸಲಹಾ ಸಮಿತಿಯು ಮುಂದಿನ ವಾರದಲ್ಲಿ ಅಂತಿಮ ಸುತ್ತಿನ ಸಭೆ ನಡೆಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಎಚ್ಚರ: ಎಚ್ಚರ: "ಭಾರತದಲ್ಲಿ ಈಗಲೇ ಮಕ್ಕಳಿಗೆ ಕೊವಿಡ್-19 ಲಸಿಕೆ ನೀಡುವ ತುರ್ತು ಅಗತ್ಯವಿಲ್ಲ"

ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಕೊರೊನಾವೈರಸ್ ಸೋಂಕಿನ ವಿರುದ್ಧ ತುರ್ತು ಬಳಕೆಯ ಲಸಿಕೆಗಳ ಪಟ್ಟಿಗೆ ಸೇರಿಸಲು ಆಸಕ್ತಿ ತೋರಿತ್ತು. ಈ ಸಂಬಂಧ ಕಂಪನಿಯು 2021ರ ಏಪ್ರಿಲ್ 19ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದು, ಅಗತ್ಯ ದಾಖಲೆಗಳೊಂದಿಗೆ ಅನುಮೋದನೆ ಶಿಫಾರಸ್ಸು ಮಾಡುವಂತೆ ಅರ್ಜಿಯಲ್ಲಿ ಸಲ್ಲಿಸಲಾಗಿತ್ತು.

ಅಪಾಯ ಮತ್ತು ಪ್ರಯೋಜನದ ಕುರಿತು ಅಂತಿಮ ಚರ್ಚೆ

ಅಪಾಯ ಮತ್ತು ಪ್ರಯೋಜನದ ಕುರಿತು ಅಂತಿಮ ಚರ್ಚೆ

ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅಂತಿಮ ಅನುಮೋದನೆಗೆ ಶಿಫಾರಸ್ಸು ಮಾಡುವುದಕ್ಕೂ ಮೊದಲು ಲಸಿಕೆ ಬಳಸುವುದರಿಂದ ಆಗುವ ಅಪಾಯ ಮತ್ತು ಪ್ರಯೋಜನದ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ತಾಂತ್ರಿಕ ಸಲಹಾ ಸಮಿತಿಯು ಕಂಪನಿಗೆ ಸೂಚಿಸಿತ್ತು. ನವೆಂಬರ್ 3ರಂದು ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಅಂತಿಮ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಿದೆ. ತದನಂತರದಲ್ಲಿ ಲಸಿಕೆಯ ತುರ್ತು ಬಳಕೆ ಕುರಿತು ಅನುಮೋದನೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಅಧಿಕೃತವಾಗಿ ತಿಳಿಸಲಿದೆ ಎಂದು ಸಮಿತಿ ಹೇಳಿತ್ತು.

ಸಿಹಿಸುದ್ದಿ: ಡಿಸೆಂಬರ್ ಹೊತ್ತಿಗೆ ಮಕ್ಕಳಿಗಾಗಿ ಬಯೋಲಾಜಿಕಲ್-ಇ ಕಂಪನಿಯ ಕೊವಿಡ್-19 ಲಸಿಕೆಸಿಹಿಸುದ್ದಿ: ಡಿಸೆಂಬರ್ ಹೊತ್ತಿಗೆ ಮಕ್ಕಳಿಗಾಗಿ ಬಯೋಲಾಜಿಕಲ್-ಇ ಕಂಪನಿಯ ಕೊವಿಡ್-19 ಲಸಿಕೆ

ಅಕ್ಟೋಬರ್ 18ರಂದು ದತ್ತಾಂಶ ಸಹಿತ ವರದಿ ಸಲ್ಲಿಕೆ

ಅಕ್ಟೋಬರ್ 18ರಂದು ದತ್ತಾಂಶ ಸಹಿತ ವರದಿ ಸಲ್ಲಿಕೆ

"ಭಾರತ್ ಬಯೋಟೆಕ್ ಸಂಸ್ಥೆಯು ಕೊವ್ಯಾಕ್ಸಿನ್ ಲಸಿಕೆಗೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ಕೋರಿದ ಅಗತ್ಯ ಮಾಹಿತಿ ಜೊತೆಗೆ ದತ್ತಾಂಶವನ್ನು ನಿರಂತರ ಹಾಗೂ ಕ್ಷಿಪ್ರಗತಿಯಲ್ಲಿ ಸಲ್ಲಿಸುತ್ತಾ ಬಂದಿದೆ. ಆದರೆ ಇತ್ತೀಚಿಗೆ ಅಂತಿಮವಾಗಿ ಅಕ್ಟೋಬರ್ 18ರಂದು ದತ್ತಾಂಶವನ್ನು ಸಲ್ಲಿಸಿದೆ," ಎಂದು ಡಬ್ಲ್ಯುಎಚ್‌ಒನಲ್ಲಿ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳ ಪ್ರವೇಶದ ಸಹಾಯಕ ಮಹಾನಿರ್ದೇಶಕ ಡಾ ಮರಿಯಾಂಗೆಲಾ ಸಿಮಾವೊ ಹೇಳಿದ್ದಾರೆ. ಜಿನೀವಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊವಾಕ್ಸಿನ್‌ಗೆ ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಸುವಲ್ಲಿನ ವಿಳಂಬದ ಕುರಿತಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು, ಆದರೆ ಚೀನೀ ಲಸಿಕೆಗಳಾದ ಸಿನೋಫಾರ್ಮ್ ಮತ್ತು ಸಿನೋವಾಕ್‌ಗಳಿಗೆ "ಡೇಟಾದ ಕೊರತೆಯಿದ್ದರೂ" ಅನುಮೋದನೆ ನೀಡಲಾಯಿತು.

ಕೊವ್ಯಾಕಿನ್ ಬಗ್ಗೆ ಅಗತ್ಯ ದತ್ತಾಂಶಗಳ ಸಂಗ್ರಹ

ಕೊವ್ಯಾಕಿನ್ ಬಗ್ಗೆ ಅಗತ್ಯ ದತ್ತಾಂಶಗಳ ಸಂಗ್ರಹ

ಭಾರತ್ ಬಯೋಟೆಕ್ ಕಂಪನಿಯೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯು ನಿರಂತರ ಸಂಪರ್ಕದಲ್ಲಿದೆ. ದೂರವಾಣಿ ಮತ್ತು ಸಭೆಗಳ ಮೂಲಕ ತಾಂತ್ರಿಕ ಸಲಹಾ ಸಮಿತಿಗೆ ಅಗತ್ಯವಿರುವ ಸ್ಪಷ್ಟನೆ ಜೊತೆ ಹೆಚ್ಚುವರಿ ದತ್ತಾಂಶಗಳೊಂದಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗುತ್ತಿದೆ. ಯಾವುದೇ ನಿರ್ದಿಷ್ಟ ತಯಾರಕರನ್ನು ಉಲ್ಲೇಖಿಸಲು ಬಯಸದೆ, ನಾವು ವರ್ಷದ ಆರಂಭದಲ್ಲಿ ಭಾರತದ ಲಸಿಕೆ ತಯಾರಕರನ್ನು ಮೌಲ್ಯಮಾಪನ ಮಾಡಿದ್ದೇವೆ. ಇದು 30 ದಿನಗಳನ್ನು ತೆಗೆದುಕೊಂಡಿರುವ ಬಗ್ಗೆ ಸ್ಪಷ್ಟೀಕರಿಸುತ್ತೇನೆ, ಎಂದು ಡಬ್ಲ್ಯುಎಚ್‌ಒನಲ್ಲಿ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳ ಪ್ರವೇಶದ ಸಹಾಯಕ ಮಹಾನಿರ್ದೇಶಕ ಡಾ ಮರಿಯಾಂಗೆಲಾ ಸಿಮಾವೊ ತಿಳಿಸಿದರು.

ಲಸಿಕೆ ಅನುಮೋದನೆಗೆ ಪೈಪೋಟಿ ಬೀಳುವ ಅಗತ್ಯವಿಲ್ಲ

ಲಸಿಕೆ ಅನುಮೋದನೆಗೆ ಪೈಪೋಟಿ ಬೀಳುವ ಅಗತ್ಯವಿಲ್ಲ

"ಒಂದು ಲಸಿಕೆಯಿಂದ ಮತ್ತೊಂದು ಲಸಿಕೆ ಅನುಮೋದನೆ ವೇಗವನ್ನು ಹೆಚ್ಚಿಸುವುದು ಇಲ್ಲಿ ಮುಖ್ಯ ಎನಿಸುವುದಿಲ್ಲ, ನಾವು ನಿಜವಾಗಿಯೂ ಭಾರತೀಯ ಉದ್ಯಮಗಳ ಮೇಲೆ ವಿಶ್ವಾಸವಿರಿಸಿದ್ದೇವೆ. ಭಾರತವು ಜಗತ್ತಿನಲ್ಲೇ ವಿವಿಧ ಮಾದರಿಯ ಉತ್ತಮ ಗುಣಮಟ್ಟದ ಲಸಿಕೆಗಳನ್ನು ಉತ್ಪಾದಿಸುತ್ತದೆ. ನಾವೀಗ ತಾಂತ್ರಿಕ ಸಲಹಾ ಸಮಿತಿ ಮೌಲ್ಯಮಾಪನದ ಕೊನೆಯ ಹಂತದಲ್ಲಿದ್ದೇವೆ. ಮುಂದಿನ ವಾರ ವಿಶ್ವ ಆರೋಗ್ಯ ಸಂಸ್ಥೆಗೆ ಅಂತಿಮ ಶಿಫಾರಸ್ಸು ಬರಲಿದೆ ಎಂದು ನಾವು ಭಾವಿಸುತ್ತೇವೆ," ಎಂದಿದ್ದಾರೆ.

ತುರ್ತು ಬಳಕೆಯ ಪಟ್ಟಿಗೆ ಲಸಿಕೆಯನ್ನು ಸೇರಿಸಲು WHO ಬಳಸುವ ಪ್ರಕ್ರಿಯೆಯು ಅತ್ಯಂತ ಪಾರದರ್ಶಕ ಪ್ರಕ್ರಿಯೆಯಾಗಿದೆ. ಗೌಪ್ಯ ಮಾಹಿತಿ ಹೊರತುಪಡಿಸಿ "ಯಾವುದೇ ರಹಸ್ಯಗಳನ್ನು" ಒಳಗೊಂಡಿಲ್ಲ ಎಂಬುದನ್ನು ಗುರುತಿಸುವುದು ಇಲ್ಲಿ ಅತ್ಯಂತ ಮುಖ್ಯವಾಗಿರುತ್ತದೆ. "ಬೇರೆ ಎಲ್ಲವೂ, WHO ಬಳಸುವ ಕಾರ್ಯವಿಧಾನಗಳು, ಯಾವ ದೇಶವು ಲಸಿಕೆಯನ್ನು ತಯಾರಿಸುತ್ತಿದೆ ಎಂಬುದರ ಮೇಲೆ ಸ್ವತಂತ್ರವಾಗಿರುತ್ತದೆ" ಎಂದು ಅವರು ಹೇಳಿದರು. ಲಭ್ಯವಿರುವ ಅತ್ಯುತ್ತಮ ಅಂತರರಾಷ್ಟ್ರೀಯ ಮಾನದಂಡಗಳನ್ನು ಆಧರಿಸಿ ಈ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದು ಕೇವಲ ಭಾರತಕ್ಕೆ ಸಂಬಂಧಿಸಿದ ವಿಷಯವಲ್ಲ

ಇದು ಕೇವಲ ಭಾರತಕ್ಕೆ ಸಂಬಂಧಿಸಿದ ವಿಷಯವಲ್ಲ

"ಇದು ಕೇವಲ ಭಾರತಕ್ಕೆ ಸಂಬಂಧಿಸಿದ ವಿಷಯವಲ್ಲ. ನಾವು ಭಾರತವನ್ನು ಪರೀಕ್ಷಿಸುವ ಅಗತ್ಯವಿಲ್ಲ. ಒಂದು ಬಾರಿ ಉತ್ಪಾದಕರು WHO ಗೆ ಎಲ್ಲ ರೀತಿ ದತ್ತಾಂಶವನ್ನು ಸಲ್ಲಿಸಿದರ ನಂತರ ಬಾಹ್ಯ ತಾಂತ್ರಿಕ ಸಲಹಾ ಸಮಿತಿಯು ಪ್ರಕ್ರಿಯೆಯನ್ನು ಶುರು ಮಾಡುತ್ತದೆ. ಆರು ವಿವಿಧ ರಾಷ್ಟ್ರಗಳ ತಜ್ಞರನ್ನು ಒಳಗೊಂಡ ಸಮಿತಿಯು ಲಸಿಕೆಯನ್ನು ತುರ್ತು ಬಳಕೆಗೆ ಶಿಫಾರಸ್ಸು ಮಾಡುವಂತೆ ಉತ್ಪಾದಕ ಕಂಪನಿಯು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದ ಎಲ್ಲ ಅಂಕಿ-ಅಂಶಗಳ ಮೌಲ್ಯಮಾಪನ ಮಾಡುತ್ತದೆ.

ಚೀನಾದ ಲಸಿಕೆಗಳ ಕುರಿತು ಉಲ್ಲೇಖಿಸಿದ ಸಿಮಾವೋ

ಚೀನಾದ ಲಸಿಕೆಗಳ ಕುರಿತು ಉಲ್ಲೇಖಿಸಿದ ಸಿಮಾವೋ

"ಚೀನಾದ ಎರಡು ಕಂಪನಿಯ ಲಸಿಕೆಗಳನ್ನು ತುರ್ತು ಬಳಕೆ ಪಟ್ಟಿಯಲ್ಲಿ ಸೇರಿಸುವಂತೆ ಶಿಫಾರಸ್ಸು ಮಾಡುವುದಕ್ಕೂ ಅಗತ್ಯ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಮೌಲ್ಯಮಾಪನ ಸಂದರ್ಭ ಹಲವು ದತ್ತಾಂಶಗಳ ಬಗ್ಗೆ ಸ್ಪಷ್ಟನೆ ಕೋರಲಾಗಿತ್ತು. ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿದ 30 ದಿನಗಳ ನಂತರದಲ್ಲಿ ಚೀನಾದ ಒಂದು ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗಿತ್ತು, ಇನ್ನೊಂದು ಲಸಿಕೆಗೆ ಆರು ವಾರಗಳ ನಂತರ ಶಿಫಾರಸ್ಸು ನೀಡಲಾಗಿತ್ತು," ಎಂದು ಡಾ. ಸಿಮಾವೋ ಹೇಳಿದ್ದಾರೆ.

ಒಟ್ಟು ಎಂಟು ಲಸಿಕೆಗಳ ಮೌಲ್ಯಮಾಪನ

ಒಟ್ಟು ಎಂಟು ಲಸಿಕೆಗಳ ಮೌಲ್ಯಮಾಪನ

"ಸದ್ಯದ ಸಮಯದಲ್ಲಿ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಎಂಟು ಲಸಿಕೆ ಮಾದರಿಗಳ ಮೌಲ್ಯಮಾಪನ ಮಾಡುತ್ತಿದೆ. ಭಾರತ್ ಬಯೋಟೆಕ್ ಸಂಸ್ಥೆಯು ಜುಲೈ 6ರಿಂದಲೇ ದತ್ತಾಂಶಗಳನ್ನು ಸಲ್ಲಿಸುವ ಪ್ರಕ್ರಿಯೆ ಆರಂಸಿದೆ. ನಾವು ಇದನ್ನು ಅತ್ಯಂತ ತುರ್ತು ಅಗತ್ಯ ವಿಷಯ ಎಂದುಕೊಂಡಿದ್ದೇವೆ. ಆದ್ದರಿಂದಲೇ ಏಳು ವಿಷಯಗಳ ಮೇಲೆ ಮೌಲ್ಯಮಾಪನಕ್ಕೆ ಏಳು ಬೇರೆ ಬೇರೆ ತಂಡಗಳು ಕೆಲಸ ಮಾಡುತ್ತಿದೆ. ಮಹಾನಿರ್ದೇಶಕರ ಅಡಿಯಲ್ಲಿ ಸಂಸ್ಥೆಯು ಈ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ವೇಗವಾಗಿ ಮುಗಿಸಲು ಬದ್ಧವಾಗಿದೆ. ಆದರೆ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸುವ ಶಿಫಾರಸು ಪ್ರಕ್ರಿಯೆಯು ಉತ್ಪಾದಕರ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಇಲ್ಲಿ ಸ್ಪಷ್ಟವಾಗಿರಬೇಕು. ವಿಶ್ವ ಆರೋಗ್ಯ ಸಂಸ್ಥೆಯಿಂದ ಸ್ವತಂತ್ರವಾಗಿರುವ ತಾಂತ್ರಿಕ ಸಲಹಾ ಸಮಿತಿಗೆ ಉತ್ಪಾದಕ ಕಂಪನಿಯು ಎಷ್ಟು ಕ್ಷಿಪ್ರಗತಿಯಲ್ಲಿ ಅಗತ್ಯ ಮಾಹಿತಿಯನ್ನು ಸಲ್ಲಿಸುತ್ತದೆಯೋ ಅಷ್ಟು ವೇಗವಾಗಿ ಶಿಫಾರಸ್ಸು ಸಿಗಲಿದೆ. ಈ ಅಂಶವನ್ನು ನಾವು ಇಲ್ಲಿ ತುಂಬಾ ಸ್ಪಷ್ಟವಾಗಿ ಹೇಳುವುದಕ್ಕೆ ಬಯಸುತ್ತೇವೆ," ಎಂದು ಡಬ್ಲ್ಯುಎಚ್‌ಒನಲ್ಲಿ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳ ಪ್ರವೇಶದ ಸಹಾಯಕ ಮಹಾನಿರ್ದೇಶಕ ಡಾ ಮರಿಯಾಂಗೆಲಾ ಸಿಮಾವೊ ತಿಳಿಸಿದ್ದಾರೆ.

ನವೆಂಬರ್ 3ರಂದು ತಾಂತ್ರಿಕ ಸಲಹಾ ಸಮಿತಿ ಅಂತಿಮ ಸಭೆ

ನವೆಂಬರ್ 3ರಂದು ತಾಂತ್ರಿಕ ಸಲಹಾ ಸಮಿತಿ ಅಂತಿಮ ಸಭೆ

"ಈ ವಾರದ ಅಂತ್ಯದ ವೇಳೆಗೆ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಕ ಕಂಪನಿಯಿಂದ ಸ್ಪಷ್ಟೀಕರಣಗಳನ್ನು ಸ್ವೀಕರಿಸಲು ತಾಂತ್ರಿಕ ಸಲಹಾ ಸಮಿತಿ ನಿರೀಕ್ಷಿಸುತ್ತದೆ. ನವೆಂಬರ್ 3ರ ಬುಧವಾರ ಅಂತಿಮವಾಗಿ ಅಪಾಯ ಮತ್ತು ಪ್ರಯೋಜನಗಳ ಬಗ್ಗೆ ಮೌಲ್ಯಮಾಪನಕ್ಕಾಗಿ ಮರುಸಂಗ್ರಹಿಸುವ ಗುರಿಯನ್ನು ಹೊಂದಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇತ್ತೀಚಿಗಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ WHO ವಕ್ತಾರ ಡಾ ಮಾರ್ಗರೇಟ್ ಹ್ಯಾರಿಸ್, ಕೊವ್ಯಾಕ್ಸಿನ್ ಅನ್ನು ಸಂಭಾವ್ಯ ತುರ್ತು ಬಳಕೆಯ ಪಟ್ಟಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ದತ್ತಾಂಶವನ್ನು ತಾಂತ್ರಿಕ ಸಲಹಾ ಸಮಿತಿಯು ಪರಿಶೀಲಿಸುತ್ತಿದೆ ಎಂದು ಹೇಳಿದ್ದರು.

ಲಸಿಕೆ ತುರ್ತು ಬಳಕೆಗೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು

ಲಸಿಕೆ ತುರ್ತು ಬಳಕೆಗೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಯಾವ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದಿಸಬೇಕು ಎಂಬುದನ್ನು ನಿರ್ಧರಿಸುವ ತಾಂತ್ರಿಕ ಸಲಹಾ ಸಮಿತಿಯು ಒಂದು ಸ್ವತಂತ್ರ ಸಲಹಾ ಸಮಿತಿ ಆಗಿದೆ. ತುರ್ತು ಬಳಕೆ ಪಟ್ಟಿಯಲ್ಲಿ ಸೇರಿಸುವುದಕ್ಕೆ ಸಂಬಂಧಿಸಿದಂತೆ ಇರುವ ಕಾರ್ಯ ವಿಧಾನದ ಅಡಿಯಲ್ಲಿ ಸಮಿತಿಯು ಕೆಲಸ ಮಾಡುತ್ತದೆ. ಯಾವ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರ್ಪಡೆ ಮಾಡುವುದು ಸೂಕ್ತ ಎಂಬ ಬಗ್ಗೆ ಈ ತಾಂತ್ರಿಕ ಸಲಹಾ ಸಮಿತಿಯು ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸ್ಸು ಮಾಡಲಿದೆ.

ಕೊವ್ಯಾಕ್ಸಿನ್ ಲಸಿಕೆ ಪರಿಣಾಮ ಎಷ್ಟು?

ಕೊವ್ಯಾಕ್ಸಿನ್ ಲಸಿಕೆ ಪರಿಣಾಮ ಎಷ್ಟು?

ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾವೈರಸ್ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿಯಾಗಿದೆ. ಅಲ್ಲದೇ ಕೊವಿಡ್-19 ರೂಪಾಂತರ ಡೆಲ್ಟಾ ವೈರಸ್ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿಯಾಗಿದೆ. ಜೂನ್ ತಿಂಗಳಿನಲ್ಲಿ 3ನೇ ಹಂತದ ವೈದ್ಯಕೀಯ ಪ್ರಯೋಗಗಳಿಗೆ ಸಂಬಂಧಿಸಿದಂತೆ ಅಂತಿಮ ವಿಶ್ಲೇಷಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಹೇಳಿದೆ.

ಜನರ ನಿರೀಕ್ಷೆಗಾಗಿ WHO ಅವಸರ ಮಾಡುವಂತಿಲ್ಲ

ಜನರ ನಿರೀಕ್ಷೆಗಾಗಿ WHO ಅವಸರ ಮಾಡುವಂತಿಲ್ಲ

"ಕೊರೊನಾವೈರಸ್ ವಿರುದ್ಧ ತುರ್ತು ಬಳಕೆಯ ಲಸಿಕೆಗಳ ಪಟ್ಟಿಯಲ್ಲಿ ಕೋವಾಕ್ಸಿನ್‌ಗೆ ಅನುಮೋದನೆ ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿಗಾಗಿ ಅನೇಕ ಜನರು ಕಾಯುತ್ತಿದ್ದಾರೆ ಎಂದು ನಮಗೆ ತಿಳಿದಿದೆ, ಆದರೆ ನಾವು ಯಾವುದೇ ಕಾರಣಕ್ಕೂ ಅವಸರ ಮಾಡುವಂತಿಲ್ಲ. ತುರ್ತು ಬಳಕೆಗಾಗಿ ಉತ್ಪನ್ನವನ್ನು ಶಿಫಾರಸು ಮಾಡುವ ಮೊದಲು, ಅದರ ಪರಿಣಾಮಕಾರಿತ್ವ ಹಾಗೂ ಸುರಕ್ಷಿತೆಯನ್ನು ಖಚಿತಪಡಿಸಿಕೊಳ್ಳಲು ನಾವು ಅದನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಬೇಕಿದೆ," ಎಂದು ಕಳೆದ ಅಕ್ಟೋಬರ್ 19ರಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

"ವಿಶ್ವ ಆರೋಗ್ಯ ಸಂಸ್ಥೆಯು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಕಂಪನಿಯು ಒದಗಿಸಿದ ಉತ್ತರಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. WHO ಮತ್ತು ತಾಂತ್ರಿಕ ಸಲಹಾ ಸಮಿತಿಯು ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರದಲ್ಲಿ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಗೆ ಸೇರಿಸಬೇಕೇ ಬೇಡವೇ ಎಂಬ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು.

English summary
Bharat Biotech Company Submitting Covaxin Related Data "Regularly, Very Quickly," Says World Health Organisation.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X