• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2015 ವರ್ಷ ಭವಿಷ್ಯ : ವೃಷಭ ರಾಶಿಗೆ ಎಚ್ಚರಿಗೆ ಗಂಟೆ

By ನಾಗನೂರಮಠ ಎಸ್.ಎಸ್.
|

ಕೃತ್ತಿಕಾ 2, 3, 4ನೇ ಚರಣ, ರೋಹಿಣಿ ಮತ್ತು ಮೃಗಶಿರಾ ನಕ್ಷತ್ರದ 1, 2ನೇ ಚರಣದವರದು ವೃಷಭ ರಾಶಿ. ಇವರಿಗೆ ಜನ್ಮನಾಮ ಇ, ಉ, ಎ, ಒ, ವ, ವಿ, ವು, ವೆ, ವೊ ಎಂಬಕ್ಷರಗಳಲ್ಲಿ ಬರುತ್ತದೆ.

ಈ ರಾಶಿಯವರಿಗೆ 2015ನೇ ಹೊಸ ವರ್ಷವು ಅಷ್ಟೊಂದು ಚೆನ್ನಾಗಿಲ್ಲವೆಂದೇ ಹೇಳಬಹುದು. ಈ ಸಮಯದಲ್ಲಿ ಮುಖ್ಯವಾದ ಯೋಜನೆಗಳನ್ನು ಮುಂದೂಡಿ. ಈ ವರ್ಷದಲ್ಲಿ ಕೈಸುಟ್ಟುಕೊಳ್ಳುವುದೇ ಜಾಸ್ತಿಯಾಗುವುದರಿಂದ ಜಾಗೃತೆ ಜಾಸ್ತಿ ಇರಲಿ. ಹೊಸ ಕೆಲಸದ ಆಸೆ ಇಟ್ಟುಕೊಳ್ಳದೆ ಇದ್ದ ಕೆಲಸದಲ್ಲಿ ಶ್ರಮದಿಂದ ಕೆಲಸ ಮಾಡಿ ಕೆಲಸ ಉಳಿಸಿಕೊಳ್ಳಿ.

ಜುಲೈ ತಿಂಗಳ ನಂತರ ಜೀವನ ಸ್ವಲ್ಪ ಸಮಾಧಾನಕರವಾಗಲಾರಂಭಿಸುತ್ತದೆ. ಅಲ್ಲಿಯವರೆಗೂ ಅಂಥಾ ಏನೂ ಬದಲಾವಣೆ ಮತ್ತು ಜೀವನದಲ್ಲಿನ ಯಶಸ್ಸನ್ನು ನಿರೀಕ್ಷಿಸಲೇಬೇಡಿ.

ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ರೀತಿಯಲ್ಲಿ ಚರ್ಚೆ ಮಾಡದಿರುವುದೇ ಲೇಸು. ಏಕೆಂದರೆ ನಿಮ್ಮವರೇ ನಿಮಗೆ ಎದುರಾಡುವ ಸಂದರ್ಭಗಳು ಬರಬಹುದು. ಆದ್ದರಿಂದ ನಿಮಗೆಷ್ಟು ಅವಶ್ಯವೋ ಅಷ್ಟೇ ಸಂಬಂಧಿಕರೊಂದಿಗೆ ಮತ್ತು ಕುಟುಂಬ ಸದಸ್ಯರೊಂದಿಗೆ ವ್ಯವಹರಿಸಿ. [ಕೃತಕತೆ ಕಂಡರಾಗದ ಕೃತಿಕಾ ನಕ್ಷತ್ರದವರು]

ಮಕ್ಕಳಿದ್ದವರು ತಮ್ಮ ಮಕ್ಕಳ ಬಗ್ಗೆ ಅತೀವ ಕಾಳಜಿ ತೆಗೆದುಕೊಳ್ಳಬೇಕು. ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಕಾಳಜಿ ವಹಿಸಿಕೊಳ್ಳಬೇಕು. ಕೆಲಸದಲ್ಲಿ ಬದಲಾವಣೆ ಅಥವಾ ಬೇರೆ ಪ್ರದೇಶಕ್ಕೆ ವರ್ಗಾವಣೆ ನಿಮ್ಮ ಇಷ್ಟದ ವಿರುದ್ಧವಾಗಿದ್ದರೆ ವಿರೋಧಿಸದೇ ಒಪ್ಪಿಕೊಂಡು ಬುದ್ಧಿವಂತರಾಗಿ.

ಮಾನಸಿಕ ಸ್ಥಿರತೆಗೆ ಪ್ರತಿನಿತ್ಯ ಧ್ಯಾನ, ಯೋಗ, ಪ್ರಾಣಾಯಾಮ ಮತ್ತು ನಿತ್ಯ ಒಂದು ಗಂಟೆ ರಭಸದ ನಡಿಗೆಯನ್ನು ಆರಂಭಿಸಿ ಹೊಸ ವರ್ಷದಿಂದಲೇ. ವ್ಯವಹಾರಕ್ಕೇನಾದರೂ ಮನಸ್ಸು ವಾಲುತ್ತಿದ್ದರೆ ಅಥವಾ ವ್ಯವಹಾರದಿಂದಲೇ ಲಾಭ ಗಳಿಸಿಕೊಳ್ಳಬೇಕೆಂಬ ಆಸೆ ಇದ್ದರೆ ಅದನ್ನು ಮುಂದಿನ ದಿನಗಳಿಗೆ ಮುಂದೂಡಿ.

ಆಸ್ತಿಗೆ ಸಂಬಂಧಪಟ್ಟಂತಹ ಕಿರಿಕಿರಿಗಳನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಿ. ಅದನ್ನು ದೊಡ್ಡದು ಮಾಡಿದರೆ ತೊಂದರೆ ನಿಮಗೇನೆ. ಯಾರೊಂದಿಗೂ ಜಗಳಕ್ಕೆ ನಿಲ್ಲದೇ ಸಮಾಧಾನದಿಂದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬುದ್ಧಿವಂತರೆನ್ನಿಸಿಕೊಳ್ಳುವುದು ಒಳ್ಳೆಯದು. ಇಲ್ಲಾಂದ್ರೆ ನಿಮ್ಮ ಸಿಟ್ಟಿನಿಂದಾದ ಜಗಳ ವಿಪರೀತಕ್ಕೆ ಹೋಗಿ ಜೀವನವೇ ದುರ್ಭರವಾಗಬಹುದು. [ಈ ಗುಣ ಗಂಡು ಹೆಣ್ಣು ಅರ್ಥ ಮಾಡಿಕೊಂಡರೆ!]

ಸಂಬಂಧಿಕರ ಬಗ್ಗೆ ಎಚ್ಚರದಿಂದ ಮಾತನಾಡಿ, ಅವರಿವರ ವಿಷಯಗಳನ್ನು ಮತ್ತು ಕುಟುಂಬದ ಗುಟ್ಟುಗಳನ್ನು ರಟ್ಟು ಮಾಡದೇ ರಹಸ್ಯ ಕಾಪಾಡಿಕೊಂಡು ಹೋದರೆ ನಿಮಗೇ ಉತ್ತಮ. ಇಲ್ಲಾಂದ್ರೆ ವರ್ಷಾನುಗಟ್ಟಲೇ ಗಳಿಸಿಕೊಂಡು ಬಂದಿದ್ದ ನಂಬಿಕೆ, ವಿಶ್ವಾಸಕ್ಕೆ ನೀವೇ ಎಳ್ಳು ನೀರು ಬಿಟ್ಟಂಗಾಗುತ್ತದೆ. ಗುರುಬಲವಿಲ್ಲದ್ದರಿಂದ ಈ ರೀತಿಯ ತೊಂದರೆಗಳು ಜೀವನದಲ್ಲಿ ಬರಬಹುದು.

ಬಿಳಿ ಮತ್ತು ನೀಲಿ ಬಣ್ಣದ ವಸ್ತು ಮತ್ತು ವಸ್ತ್ರಗಳನ್ನೇ ಹೆಚ್ಚಾಗಿ ಬಳಸಿ. 6, 15, 24ನೇ ತಾರೀಖಿನಂದು ಮುಖ್ಯವಾದ ಕೆಲಸಗಳಿಗೆ ಶ್ರೀಕಾರ ಹಾಕಿ. ಶುಕ್ರವಾರ, ಶನಿವಾರಗಳಂದು ನಿಮಗೆ ಲಾಭವಾಗಬೇಕೆನ್ನುವ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಿ. ಸಂಖ್ಯೆಗಳ ಬಗ್ಗೆ ನಂಬಿಕೆ ಹೆಚ್ಚಿಸಿಕೊಂಡಿದ್ದರೆ 6, 8 ನಿಮಗೆ ಶುಭಕರವಾಗುತ್ತವೆ.

ಮಕರ, ಕುಂಭ ರಾಶಿಯವರೊಂದಿಗಿನ ಒಡನಾಟ ನಿಮಗೆ ಇಷ್ಟವಾಗುತ್ತದೆ ಮತ್ತು ಲಾಭವೂ ತರುತ್ತದೆ. ನಿಮ್ಮ ಹಿತವನ್ನೇ ಈ ರಾಶಿಯವರು ಬಯಸುತ್ತಾರೆ. ನಿಮಗೂ ಕೂಡ ಈ ರಾಶಿಯವರೆಂದರೆ ಇಷ್ಟಾನೇ. ಆದರೆ ಸಿಂಹ, ಧನಸ್ಸು, ಮೀನ ರಾಶಿಯವರು ನಿಮ್ಮನ್ನು ಕಂಡರೆ ಉರಿದು ಕೆಂಗಣ್ಣು ಬೀರುತ್ತಾರೆ. ನೀವೂ ಕೂಡ ಈ ರಾಶಿಯವರನ್ನು ವಿರೋಧಿಗಳಂತೆ ನೋಡುತ್ತೀರಿ. ಅವರು ಎಷ್ಟೇ ಒಳ್ಳೆಯವರು ಇರಲಿ, ನಿಮಗೆ ಮಾತ್ರ ಅವರಿಷ್ಟ ಆಗಲ್ಲ. ಹೀಗಾಗಿ ಅವರೊಂದಿಗೆ ಒಡನಾಟ ಇಟ್ಟುಕೊಂಡು ಕಡೆಗೊಮ್ಮೆ ಮನಸ್ಸು ನೋಯಿಸಿಕೊಳ್ಳುವ ಬದಲು ಅವರಿಂದ ದೂರ ಕಾಯ್ದುಕೊಳ್ಳುವುದೇ ನಿಮಗೆ ಇರುವ ಏಕೈಕ ಮಾರ್ಗ. ಇದರಿಂದ ನಿಮಗೇನೆ ನೆಮ್ಮದಿ.

ಶನಿದೇವನು ಸಪ್ತಮನಾಗಿ ಕುಟುಂಬಕ್ಕೆ ಸಂಬಂಧಪಟ್ಟಂತೆ ವೈಮನಸ್ಸುಗಳನ್ನು ತಂದೊಡುತ್ತಾನೆ. ಮೊದಲೇ ತನ್ನ ಶತ್ರುರಾಶಿ ವೃಶ್ಚಿಕದಲ್ಲಿದ್ದಾನೆ. ಸ್ವಲ್ಪ ಪ್ರಭಾವ ಹೆಚ್ಚಿಗೇನೇ ಇರುತ್ತದೆ. ಆದ್ದರಿಂದ ಕುಟುಂಬದವರೊಂದಿಗೆ ನೀವೇ ಹೊಂದಾಣಿಕೆ ಮಾಡಿಕೊಂಡು ಹೋಗಿ. ಗಂಡ-ಹೆಂಡತಿಯರು ಚಿಕ್ಕಪುಟ್ಟ ವಿಷಯಗಳಿಗೆ ಚಿಕ್ಕಮಕ್ಕಳಂತೆ ಕಚ್ಚಾಡದೇ ಬುದ್ಧಿವಂತಿಕೆಯಿಂದ ಜೀವನ ನಡೆಸಿಕೊಂಡು ಹೋಗುವುದು ಮುಖ್ಯ. ಏಕೆಂದರೆ ಶನಿದೃಷ್ಟಿ ಇರುವುದರಿಂದ ಅಮವಾಸ್ಯೆ, ಶನಿವಾರಗಳಂದು ಮನಸ್ಸು ವಿಕೃತಗೊಂಡು ಜಗಳಗಳಾಗಬಹುದು. ಆದ್ದರಿಂದ ಆ ದಿನಗಳಂದು ಹುಷಾರಾಗಿ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿರಬೇಕು.

ಅವಶ್ಯವಿದ್ದರೆ ಮಾತ್ರ ಸಂಬಂಧಿಕರ ಊರಿಗೆ ಮತ್ತು ಸಭೆ, ಸಮಾರಂಭಗಳಿಗೆ ತೆರಳಿ. ಅನವಶ್ಯಕವಾಗಿ ಸುತ್ತಾಡಿ ಆರೋಗ್ಯ ಕೆಡಿಸಿಕೊಂಡು ದುಡ್ಡು ಹಾಳು ಮಾಡಿಕೊಳ್ಳುವಂತೆ ಮಾಡಿಕೊಳ್ಳಬೇಡಿ. ಪರಿಚಿತರೊಂದಿಗೆ ಅನಗತ್ಯ ಸಮಸ್ಯೆ ತಂದುಕೊಂಡು ನಿಮ್ಮನ್ನೇ ಪೇಚಿಗೀಡಿಟ್ಟುಕೊಳ್ಳುವಂತಹ ಕೆಲಸ ಮಾಡಬೇಡಿ. ಅಪರಿಚಿತರೊಂದಿಗಂತೂ ಜಗಳಾನೂ ಬೇಡ ಸ್ನೇಹಾನೂ ಬೇಡ ಈ ವರ್ಷ.

ಮುಖ್ಯವಾದ ಕೆಲಸಗಳಿಗೆ ಪ್ರಯತ್ನಿಸುತ್ತಲೇ ಇದ್ದರೂ ಆಗುತ್ತಿಲ್ಲದಿದ್ದರೂ ಪದೇ ಪದೇ ಯತ್ನ ಮಾಡಿ ಯಶಸ್ಸು ಸಿಗುತ್ತದೆ. ಅರ್ಧಕ್ಕೆ ಕೈಬಿಡಬೇಡಿ. ಲಾಭವಾಗುವ ಮುನ್ಸೂಚನೆ ಸಿಕ್ಕರೆ ಮಾತ್ರ ಹಣ ಹೂಡಿಕೆ ಮಾಡುವುದು ಉತ್ತಮ. ಮನೆ ಬದಲಾವಣೆ ಅಥವಾ ಕೆಲಸದಲ್ಲಿ ಬದಲಾವಣೆಗೆ ಹೊಂದಿಕೊಳ್ಳಲೇಬೇಕು. ಹೆಂಗಸರೊಂದಿಗೆ ಅತೀವ ಸಲುಗೆ ಮಾಡುವುದರಿಂದ ಅವರಿಂದ ನಿಮ್ಮ ಜೀವನಕ್ಕೇ ಅಪಾಯ. ಹೆಂಗಸರಿಗೆ ಗೌರವ ಮತ್ತು ಮರ್ಯಾದೆ ಕೊಡಿ. ಹೆಂಗಸರ ಬಗ್ಗೆ ಕೀಳಾಗಿ ಮಾತನಾಡಬೇಡಿ ಏಕೆಂದರೆ ಹೆಂಗಸರಿಂದಲೇ ನಿಮಗೆ ಅಪಾಯ ಜಾಸ್ತಿ ಈ ವರ್ಷ.

ಮದುವೆಗೆ ತುದಿಗಾಲಲ್ಲಿ ನಿಂತಿರುವವರು ಸ್ವಲ್ಪ ಹೆಚ್ಚಿನ ಕಾಯುವಿಕೆ ರೂಢಿಸಿಕೊಳ್ಳಬೇಕು. ವಿಳಂಬವಾಗುತ್ತಿದೆ ಎಂದು ಚಿಂತೆ ಹಚ್ಚಿಕೊಳ್ಳದೇ ಇರುವುದು ಲೇಸು. ಗೊತ್ತಿದ್ದ ಮತ್ತು ಸಂಪೂರ್ಣ ಮಾಹಿತಿ ಪಡೆದುಕೊಂಡೇ ಒಳ್ಳೆಯ ಕುಟುಂಬದವರೊಂದಿಗೆ ಸಂಬಂಧ ಬೆಳೆಸಿ. ದುಷ್ಟರೊಂದಿಗೆ ಸಹವಾಸವಿದ್ದರೆ ಕೂಡಲೇ ತ್ಯಜಿಸಿ, ಏಕೆಂದರೆ ಅವರಿಂದಲೇ ಮುಂದೊಮ್ಮೆ ಅನಾಹುತ ಕಾದಿದೆ ಎಂಬ ಎಚ್ಚರಿಕೆ ಇರಲಿ ಮೈಮೇಲೆ.

ನಿಮ್ಮನ್ನು ವಿರೋಧಿಸುವವರು ನಿಮ್ಮನ್ನು ಈ ವರ್ಷ ಹೊಗಳಲಾರಂಭಿಸಿದರೂ ಅವರ ದ್ವೇಷ ಕಮ್ಮಿಯಾಗಿರುವುದಿಲ್ಲ ಎಂಬುದನ್ನು ತಿಳಿದುಕೊಂಡು ಅವರೊಂದಿಗೆ ವ್ಯವಹರಿಸಿ. ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿ ಬಂದರೂ ಅದನ್ನು ನಿಷ್ಠೆಯಿಂದ ನಿಭಾಯಿಸಿ ಶಹಬ್ಬಾಸ್ ಪಡೆದುಕೊಳ್ಳಿ. ಆದರೆ ಕಾಸು ಸಿಗುತ್ತದೆ ಎಂದು ಕೆಲಸ ಮಾಡಬೇಡಿ. ಹೊರಗಿನ ಕಾಸಿಗೆ ಆಸೆ ಪಟ್ಟರೆ ಸರಕಾರಿ ಆಭರಣ ಕಾಯುತ್ತಿದೆ ಎಂಬುದು ಅರಿವಿರಲಿ.

ಸೋಮಾರಿತನ, ಆಲಸ್ಯತನ ಬಿಟ್ಟು ಎತ್ತಿನಂತೆ ದುಡಿಯುವುದನ್ನು ರೂಢಿಸಿಕೊಳ್ಳಿ ಈ ವರ್ಷ. ಆದಷ್ಟು ಹೆಚ್ಚಿನ ಆಡಂಬರ ಮಾಡಬೇಡಿ. ಐಷಾರಾಮಿ ಜೀವನಕ್ಕಾಗಿ ಭಾರೀ ಪ್ರಮಾಣದಲ್ಲಿ ಹೊಸ ಹೊಸ ಬಟ್ಟೆ, ಬಂಗಾರ ಖರೀದಿ ಈ ವರ್ಷ ಬೇಡ. ಹೆಚ್ಚಿನ ಕರುಣಾಮಯಿಯಾದ ಮತ್ತು ನಯವಂತಿಕೆಯ ನೀವು ಈ ವರ್ಷ ಸ್ವಲ್ಪ ಕಷ್ಟಪಡಲೇಬೇಕಾಗುತ್ತದೆ. ಆದರೆ ಅನಿವಾರ್ಯ.

ಶನಿದೇವರಿಗೆ ಶನಿವಾರ ಸಾಧ್ಯವಾದರೆ ಎಳ್ಳೆಣ್ಣೆ ಅಭಿಷೇಕಕ್ಕೆಂದು ಕೊಡಿ. ಬಡವೃದ್ಧರಿಗೆ ಹೊಸ ಬಟ್ಟೆ ಕೊಡಿಸಿ. ನಿತ್ಯ ಶಿವಪಂಚಾಕ್ಷರಿ ಮಂತ್ರ ಪಠಿಸುವುದು ಸೂಕ್ತ. ಜುಲೈ ತಿಂಗಳವರೆಗೂ ಸ್ವಲ್ಪ ಸಮಧಾನದಿಂದ ಇರುವುದನ್ನು ರೂಢಿಸಿಕೊಳ್ಳಿ.

ಒಟ್ಟಿನಲ್ಲಿ ಹೊಸ ವರ್ಷವು ವೃಷಭ ರಾಶಿಯವರಿಗೆ ಶೇ.20ರಷ್ಟು ಒಳ್ಳೆಯದಿದೆ. ಆದರೂ ಧೃತಿಗೆಡದೆ ಹೊಸ ವರ್ಷಕ್ಕೆ ಕಾಲಿಡಿ. ಹೊಸ ವರ್ಷದ ಮೊದಲ ದಿನವೇ ವೈಕುಂಠ ಏಕಾದಶಿಯಾಗಿರುವುದರಿಂದ ಅಂದು ವೇಂಕಪ್ಪನ ದರ್ಶನ ಪಡೆಯಿರಿ ತಪ್ಪಿಸದೇ ವರ್ಷ ಪೂರ್ತಿ ಚೆನ್ನಾಗಿರಬೇಕೆಂದರೆ. ಹೊಸ ವರ್ಷದ ಶುಭಾಶಯಗಳೊಂದಿಗೆ ಶುಭವಾಗಲಿ ನಿಮಗೆ.

English summary
Yearly horoscope 2015 for Taurus zodiac sign. First half Taurus people have to be very careful and should not take any kind of risks. They should worship Lord Shani on every Saturday. But later part of the year is relatively good, says astrologer S.S. Naganurmath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more