ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2014ರ ವರ್ಷ ಭವಿಷ್ಯಕ್ಕೆ ಜ್ಯೋತಿಷಿಗಳ ಮುನ್ನುಡಿ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಹೊಸ ವರ್ಷ ಈಗಾಗಲೆ ಏಳು ಹೆಜ್ಜೆಗಳನ್ನು ಇಟ್ಟು ಮುಂದೆ ಸಾಗಿದೆ. ಆದರೆ ನಮ್ಮವರು ಯುಗಾದಿಯನ್ನೇ ಹೊಸ ವರ್ಷವೆಂದು ಆಚರಿಸುತ್ತಾರೆ. ಆಗ ಹೊಸ ವರ್ಷವೆನ್ನಲು ಪ್ರಕೃತಿಯೂ ಕೂಡ ಬದಲಾಗುತ್ತಿರುತ್ತದೆ. ಆದರೆ ಈಗ ಹಾಗೇನಿಲ್ಲ. ಎಂದಿನಂತೆಯೆ ದಿನಗಳಿವೆ ಹಾಗೂ ಪ್ರಕೃತಿಯಿದೆ. ಇದರಿಂದ ಮಕ್ಕಳಿಗೆ ಒಂಥರಾ ವಿಸ್ಮಯವೆನಿಸುತ್ತಿದೆ. ಏನಿದು, ಹೊಸ ವರ್ಷ ಎಂದು ಎಲ್ಲರೂ ಶುಭಾಶಯ ಹೇಳುತ್ತಾರೆ, ಕೆಲವರು ಕುಣಿದಾಡುತ್ತಾರೆ ಆದರೆ ಈ ದಿನವೂ ಎಂದಿನಂತೆಯೇ ಇದೆಯಲ್ಲಾ ಎಂದುಕೊಳ್ಳುತ್ತಾರೆ.

ಇನ್ನು, ನಮ್ಮ ಹಬ್ಬ-ಹರಿದಿನಗಳು ಕೂಡ ಯುಗಾದಿ ನಂತರವೇ ಶುರುವಾಗುತ್ತವೆ. ಆದರೆ ನಾವು ನಮ್ಮದೇ ಜಗತ್ತಿನಲ್ಲಿಲ್ಲವಲ್ಲ! ಎಲ್ಲರಿರುವ ಜಗತ್ತಿನಲ್ಲಿದ್ದೇವೆ. ಹೀಗಾಗಿ ಪ್ರಪಂಚ ಏನು ಆಚರಿಸುತ್ತದೆಯೋ ಅದನ್ನು ಅನಿವಾರ್ಯವಾಗಿ ನಾವೂ ಆಚರಿಸಿ ಒಲ್ಲದ ಮನಸ್ಸಿನಿಂದ ಸಂಭ್ರಮಿಸಬೇಕಾಗುತ್ತದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಮನೆಯಲ್ಲಿಯೇ ಸಿಹಿ ತಿನಿಸು ಮಾಡಿ ಹೊಸ ವರ್ಷವನ್ನು ಸ್ವಾಗತಿಸಬಹುದು. ಆದರೆ ಈ ಹೊಸ ವರ್ಷದ ದಿನದಂದು ಅಂಗಡಿಯಿಂದ ಸಿಹಿ ತಿನಿಸು ತರಬೇಕಾಗಿರುವುದು ಮಾತ್ರ ಜೇಬಿಗೆ ಭಾರವೆನಿಸುತ್ತದೆ. ಕ್ಯಾಲೆಂಡರ್‌ನಲ್ಲಿ ಕೇವಲ ಸಂಖ್ಯೆಯಷ್ಟೇ ಬದಲಾದರೂ ಕಳೆದ ವರ್ಷದ ದಿನಗಳು ನಮಗೆ ಕೇವಲ ನೆನಪುಗಳಾಗುತ್ತವೆ.

ಇರಲಿ, ಹೊಸವರ್ಷ ಬಂತೆಂದರೆ ಎಲ್ಲರಿಗೂ ಬರುವ ವರ್ಷದಲ್ಲಿ ನಮ್ಮ ದಿನಗಳು ಹೇಗಿರಬಹುದು? ಎಂಬ ಪ್ರಶ್ನೆಗಳು ಮನದಲ್ಲಿ ಸಹಜವಾಗಿಯೇ ಮೂಡಿ ಬರುತ್ತವೆ. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ನಾವೆಷ್ಟೇ ಮುಂದುವರೆದಿದ್ದರೂ ನಾಳಿನ ನಮ್ಮ ದಿನದಲ್ಲೇನಾಗಬಹುದು ಎಂದು ನಮಗೆ ಯಾರೂ ತಿಳಿಸಿಕೊಡುವುದಿಲ್ಲ. ಅವರೆಷ್ಟೇ ಡಿಗ್ರಿಗಳನ್ನೂ ಪಡೆದುಕೊಂಡಿದ್ದರೂ ಮುಂಬರುವ ನಮ್ಮ ಸಮಯದಲ್ಲಾಗುವ ಬದಲಾವಣೆಗಳು ತಿಳಿಸಿಕೊಡುವ ತಾಕತ್ತು ಯಾರಲ್ಲಿಯೂ ಇಲ್ಲ. [ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ]

Yearly horoscope predictions for all zodiac signs

ಆದರೆ ದೇವರಾಟವೆನೋ? ನಮ್ಮ ಮುಂದಿನ ದಿನಗಳಲ್ಲಿನ ಆಗುಹೋಗುಗಳನ್ನು ಜ್ಯೋತಿಷ್ಯದ ಲೆಕ್ಕಾಚಾರದ ಮೂಲಕ ತಿಳಿದುಕೊಳ್ಳಬಹುದು. ಇದು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಮುಂದೆಯೂ ನಡೆಯುತ್ತಲೇ ಇರುತ್ತದೆ. ಆದರೂ ವರ್ಷ ಭವಿಷ್ಯವೆಂಬುದು ಕೇವಲ ನಮ್ಮ ಮುಂಜಾಗೃತೆಗಾಗಿ ಎಂಬುದು ಎಲ್ಲರೂ ತಿಳಿದುಕೊಳ್ಳಬೇಕು. ಯಾಕೆಂದರೆ ಅಪಾಯವಿದೆಯೆಂದು ಜೀವನದಿಂದ ಕೈ ತೊಳೆಯಲಾಗುವುದಿಲ್ಲ. ತುಂಬಾ ಸುಖದ ದಿನಗಳಿವೆ ಎಂದುಕೊಂಡು ದುಡಿಯುವುದನ್ನು ಬಿಟ್ಟರೆ ಸಹಜವಾಗಿಯೇ ಭವಿಷ್ಯ ಸುಳ್ಳಾಗುತ್ತದೆ. ಆದ್ದರಿಂದ ನಮ್ಮ ಭವಿಷ್ಯ ರೂಪಿಸಿಕೊಳ್ಳುವುದೂ ನಮ್ಮ ಕೈಲಿರುವುದರಿಂದ ಮುಂಬರುವ ನಮ್ಮ ಸಮಯ ಹೇಗಿರುತ್ತದೆ ಎಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ಜೀವನವನ್ನು ಬಾಳುತ್ತಾ ಬದುಕನ್ನು ಸುಖಮಯವಾಗಿಸಿಕೊಳ್ಳಬೇಕು. ಆವಾಗ ಭವಿಷ್ಯದಲ್ಲಿದ್ದುದ್ದು ಕೂಡ ಸತ್ಯವೆನಿಸುತ್ತದೆ.

ಎಷ್ಟೋ ಜನ ತಮ್ಮ ಸಮಯ ಹೇಗಿದೆ ಎಂಬುದನ್ನು ಅರಿಯದೆ ಹೆಂಗೆಂಗೋ ಜೀವನ ಮಾಡಿ ಎಲ್ಲಿಯ ಭವಿಷ್ಯ ಎಲ್ಲಾ ಬೊಗಳೆ ಎಂದುಕೊಂಡು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಂಡು ಜ್ಯೋತಿಷ್ಯದ ಮೇಲೆ ವೃಥಾಪವಾದ ಹೊರಿಸುತ್ತಾರೆ. ಆದ್ದರಿಂದ ಜನ್ಮಜಾತಕ ಪರಿಶೀಲಿಸಿಕೊಂಡು ತಮ್ಮ ಬಾಳು ಹೇಗಿರಬೇಕಾಗಿತ್ತು ಈಗ ಹೇಗಿದೆ ಎಂದು ಪರಿಶೀಲಿಸಿಕೊಂಡು ಉತ್ತಮ ಜೀವನ ಸಾಗಿಸುವವರು ಪ್ರತಿ ಹೊಸ ವರ್ಷವೂ ಸಂತಸದಿಂದಲೇ ಇರುತ್ತಾರೆ ಎನ್ನಬಹುದು.

ಈಗಾಗಲೇ ಎಲ್ಲ ರಾಶಿಗಳವರ ಮೇಲೆ ಶನಿ ಗೋಚಾರದ ಫಲ ಹೇಗಿದೆ ಎಂಬುದನ್ನು ಈಗಾಗಲೇ ಸಾಡೇಸಾತಿಯ ಸರಣಿ ಲೇಖನಗಳಲ್ಲಿ ತಾವು ಓದಿದ್ದೀರಿ. ಶನಿ ಗೋಚಾರದ ಫಲವು 2014ರ ನವೆಂಬರ್‌ವರೆಗೂ ಅನ್ವಯಿಸುತ್ತದೆ. ತದನಂತರ ಶನಿಯು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ ನಂತರ ಮತ್ತೆ ಎಲ್ಲ ರಾಶಿಗಳವರ ವರ್ಷ ಭವಿಷ್ಯವೂ ಬದಲಾಗುತ್ತದೆ. ಮುಂದಿನ ದಿನಗಳಲ್ಲಿ ಆ ಕುರಿತು ತಿಳಿಸಲಾಗುವುದು. ಅದೇ ರೀತಿ ರಾಶಿಗಳವರ ಗುಣ ವಿಶೇಷ ಮತ್ತು ಅವರು ವಹಿಸಬೇಕಾದ ಮುಂಜಾಗೃತೆಗಳನ್ನು ನಕ್ಷತ್ರ ವಿಶೇಷ ಸರಣಿಗಳ ಮೂಲಕ ತಾವು ತಿಳಿದುಕೊಂಡಿದ್ದೀರಿ.

ಇನ್ನೊಂದು ವಿಷಯ, ಈ "ವರ್ಷ ಭವಿಷ್ಯ - 2014" ನಮ್ಮ ಹಿಂದೂ ಸಂಪ್ರದಾಯ ಪ್ರಕಾರದ ಪಂಚಾಂಗದಂತೆ ಜನ್ಮರಾಶಿ, ಜನ್ಮನಕ್ಷತ್ರ ಹಾಗೂ ಗೋಚಾರ ಫಲಗಳನ್ನು ಆಧರಿಸಿದೆ. ಆದ್ದರಿಂದ ಜನ್ಮದಿನಾಂಕ ಆಧರಿಸಿ ಇಂಗ್ಲಿಷ್ ರಾಶಿಭವಿಷ್ಯ ಹಾಗೂ ಸಂಖ್ಯಾಶಾಸ್ತ್ರ ಆಧಾರದ ಮೇಲೆ ತಮ್ಮ ಭವಿಷ್ಯ ತಿಳಿದುಕೊಳ್ಳಬೇಕೆನ್ನುವವರಿಗೆ ಈ "ವರ್ಷ ಭವಿಷ್ಯ - 2014" ನೋಡುವ ಅವಶ್ಯಕತೆಯಿಲ್ಲ. ಇದು ಇಂಥವರಿಗೆ ಅನ್ವಯಿಸುವುದಿಲ್ಲ ಎಂಬುದು ಅವರು ಅರ್ಥ ಮಾಡಿಕೊಳ್ಳಬೇಕು.

"ಹೊಸ ವರ್ಷ 2014" ಕ್ಕೆ ಮೇಷ ರಾಶಿಯವರ ವರ್ಷ ಭವಿಷ್ಯ ಹೇಗಿದೆ ಎಂಬುದು ಮುಂದಿನ ಲೇಖನದಲ್ಲಿ. ಬರುವ ದಿನಗಳಲ್ಲಿ ಎಲ್ಲ ರಾಶಿಗಳ ವರ್ಷ ಭವಿಷ್ಯವನ್ನು ವಿಸ್ತೃತವಾಗಿ ನೀಡಲಾಗುವುದು ನಿರೀಕ್ಷಿಸಿ. (ಒನ್‌ಇಂಡಿಯಾ ಕನ್ನಡ)

(ಲೇಖಕರ ಮೊಬೈಲ್ : 94815 22011)

English summary
Yearly horoscope predictions for all zodiac signs by astrologer S.S. Naganurmath. These yearly forecast is based on birth sign, birth star and gochara phala. People may use these predictions to make their life more beautiful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X