• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರ್ಷಭವಿಷ್ಯ 2016 : ಮಿಥುನ ರಾಶಿಗೆ ಪರಿಹಾರೋಪಾಯ

By ನಾಗನೂರಮಠ ಎಸ್ಎಸ್
|
Google Oneindia Kannada News

ಮಿಥುನ ರಾಶಿಯವರು ಮೊದಲೇ ಮಹಾನ್ ಸ್ವಾರ್ಥಿಗಳು. ಜೊತೆಗೆ ಅತೀ ಬುದ್ಧಿವಂತಿಕೆ ಬೇರೆ. ಇನ್ನು ಸೊಕ್ಕು ಸ್ವಲ್ಪ ಇದ್ದದ್ದೇ. ಹೀಗಾಗಿ ಇವರನ್ನು ಭಾರೀ ಬುದ್ಧಿವಂತರೆಂದು ಜನ ಆಡಿಕೊಳ್ಳುತ್ತಿರುತ್ತಾರೆ. ಕೆಲ ಬೇನಾಮಿ ಹೆಸರಿನವರು "ಆನ್ ಲೈನ್" "ಆಫ್ ಲೈನ್" ಆಗ್ತೀರಾ ಹಂಗೆ, ಹಿಂಗೆ ಎಂದು ಹೆದರಿಸುತ್ತಿರುತ್ತಾರೆ. ಹೆದರಬೇಡಿ, ಆದರೆ ಅಂತಹ ಬೇನಾಮಿಗಳ ಬಗ್ಗೆ ಕಿಂಚಿತ್ತೂ ಯೋಚಿಸಬೇಡಿ.

ಮಾಡುತ್ತಿರುವ ಮಂತ್ರ ಪಠಣಗಳ ಬಗ್ಗೆ ಸಂಶಯ ವ್ಯಕ್ತಪಡಿಸಬೇಡಿ. ಬೇಕಿದ್ದರೆ ಎದುರಿಗೆ ಬಂದು ಹೇಳೋ "ಅರ್ಧನಾರೀಶ್ವರ" ಎಂದು ಉಗಿರಿ ಅಂಥವರ ಮಕಕ್ಕೆ. ಗೊತ್ತಾಗಲಿ ಅವರಿಗೆ ನೀವು "ಆನ್ ಲೈನ್" ಇದ್ದವರನ್ನು ಹೆಂಗೆ ಆಟೋಮ್ಯಾಟಿಕ್ ಆಗಿ "ಲೈಫ್ ಆಫ್" ಮಾಡುವುದು ಸುಲಭ ಎಂದು.

ಇನ್ನು ಕೆಲ ವಿಷಯಗಳ ಕುರಿತು ಬಹಳಷ್ಟು ಜನ ಇವರ ಬಳಿ ಸಲಹೆ-ಸೂಚನೆ ಕೇಳುತ್ತಾರೆ. ಈ ರಾಶಿಯವರ ಕಾಲು ಒಂದು ಸ್ಥಳದಲ್ಲಿ ನಿಲ್ಲೋದೇ ಇಲ್ಲ. ಇಲ್ಲಿ ಇದ್ದಾರೆಂದರೆ, ಅಲ್ಲಿ ಇರುತ್ತಾರೆ. ಅಲ್ಲಿ ಇದ್ದಾರೆಂದರೆ ಇಲ್ಲಿ ಇರುತ್ತಾರೆ. ಅಷ್ಟೊಂದು ಸ್ಪೀಡ್ ಆಗಿ ಸ್ಥಳ ಮತ್ತು ಗುಣ ಬದಲಿಸಿಕೊಳ್ಳುವ ಗೋಸುಂಬೆಗಳಿವರು. [ವೃಷಭದವರಿಗೆ ಪರಿಹಾರ, ಮಿಥುನದವರಿಗೆ ವರ್ಷಫಲ]


ಆದರೆ, ಈ ವರ್ಷ ಮಾತ್ರ ಮೇಲ್ಕಂಡ ಕೆಲ ಗುಣಾವಗುಣಗಳನ್ನು ಬಿಟ್ಟಾಕಿ ಸೂಪರ್ ಆಗಿರುವುದನ್ನು ಕಲಿಯಬೇಕು ಇವರು. ಮಹಾವಿಷ್ಣುವನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಆರಾಧಿಸುವುದರಿಂದ ಶುಭಫಲಗಳೇ ಸಿಗುತ್ತವೆ. ಆದಷ್ಟು ಏನೇ ಮಾಡಿದರೂ, ಪಶ್ಚಿಮ ಅಥವಾ ಉತ್ತರ ದಿಕ್ಕಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಈ ವರ್ಷ ಪೂರ್ತಿ ಗುಲಾಬಿ, ತಿಳಿಹಸಿರು ಮತ್ತು ಬಿಳಿ ಬಣ್ಣದ ವಸ್ತುಗಳು ಮತ್ತು ವಸ್ತ್ರಗಳನ್ನು ಬಳಸುವುದನ್ನು ಸೂಕ್ತ.

ಇನ್ನು 5, 1, 7, 9 ಸಂಖ್ಯೆಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳಬಹುದು. ಹೆಸರುಕಾಳು ಮತ್ತು ಹೆಸರುಬೇಳೆಯ ಪದಾರ್ಥಗಳನ್ನು ಹೆಚ್ಚು ಇಷ್ಟಪಡುವ ಇವರು ಕರ್ಕ ಮತ್ತು ಧನುಸ್ಸು ರಾಶಿಯವರೊಂದಿಗೆ ಈ ವರ್ಷ ಯಾವುದೇ ವ್ಯವಹಾರ ಇಟ್ಟುಕೊಳ್ಳಬಾರದು. ಸ್ನೇಹವಿದ್ದರೆ ಅಂಥವರನ್ನು ಎಷ್ಟು ಬೇಕೋ ಅಷ್ಟರಮಟ್ಟಿಗೆ ದೂರ ಇಡುವುದು ಒಳ್ಳೆಯದು ಮಾನ ಮರ್ಯಾದೆಗಾಗಿ.

ಆದರೆ, ಕನ್ಯಾ, ವೃಷಭ, ತುಲಾ ಹಾಗೂ ಸಿಂಹ ರಾಶಿಯವರು ನಿಮಗೆ ಒಳ್ಳೆಯದನ್ನೇ ಬಯಸುವುದರಿಂದ ಅವರೊಂದಿಗೆ ಹೊಸ ವ್ಯವಹಾರಕ್ಕೆ ಕೈ ಹಾಕಬಹುದು ಮತ್ತು ನಿಮ್ಮಲ್ಲಿರುವ ಯೋಚನೆ ಹಾಗೂ ಯೋಜನೆಗಳನ್ನು ವಿವರಿಸಿ ಯಶಸ್ಸಿಗೆ ಸಹಕರಿಸಿರೆಂದು ಕೇಳಿಕೊಳ್ಳಬಹುದು. [ಪುನರ್ವಸು ನಕ್ಷತ್ರದವರು ಸಕಲಕಲಾವಲ್ಲಭರು]

ಖರ್ಚು ಮಾಡದ ನಿಮ್ಮ ಗುಣ ಇತರರಿಗೆ ನೀವು ಶಿಸ್ತಿನ ಸಿಪಾಯಿಯಂತೆ ಕಾಣುತ್ತದೆ. ಜೊತೆ ಜೊತೆಗೆ ಸ್ವಲ್ಪ ಕಲಾತ್ಮಕ ಗುಣ ಹಾಗೂ ಕಲ್ಪನಾ ಗುಣವು ಹೆಚ್ಚಿಗಿರುವುದರಿಂದ ಸಾಹಿತ್ಯದೆಡೆಗೆ ಒಲವು ಈ ಬಾರಿ ಹೆಚ್ಚಾಗುತ್ತದೆ. ಅದರಿಂದ ಹೆಸರು ಕೂಡ ಆಗುತ್ತದೆ.

ಗುರುವಾರ, ಶುಕ್ರವಾರ ಅಥವಾ ರವಿವಾರ, ಬುಧವಾರ ನೀವು ಖುಷಿಯಾಗಿರುವುದರಿಂದ ಆ ದಿನಗಳಲ್ಲೇ ಮುಖ್ಯವಾದ ಕೆಲಸಗಳನ್ನು ಇಟ್ಟುಕೊಳ್ಳಬೇಕು. ಏಕಾಂಗಿಯಾಗಿದ್ದರೆ ತಲೆಯಲ್ಲಿ ನೂರೆಂಟು ಯೋಚನೆಗಳು ಹೊಳೆದು ಹೆದರಿಕೆಯಾಗುವುದು ಸಹಜ. ಹೀಗಾಗಿ ಏಕಾಂಗಿಯಾಗಿರದೇ ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು.

ಸಿರಿವಂತಿಕೆಯನ್ನು ಎಲ್ಲರೆದುರು ತೋರಿಸಿಕೊಳ್ಳದೇ ಸಾಮಾನ್ಯರಂತೆ ಜೀವನಶೈಲಿ ಅಳವಡಿಸಿಕೊಂಡು ಹೋಗುತ್ತಿದ್ದರೆ, ಶ್ರೀಮಂತಿಕೆ ಇನ್ನಷ್ಟು ಹೆಚ್ಚುತ್ತದೆ ನೆನಪಿರಲಿ. [ಸರಸ ಜನನ ವಿರಸ ಮರಣ ಸಮರಸವೇ ಜೀವನ]

ಪರಿಹಾರೋಪಾಯಗಳು : ಇನ್ನು ಕೆಲವೊಂದು ಪರಿಹಾರಗಳನ್ನು ಈ ವರ್ಷ ಮಾಡಲೇಬೇಕು. ಅದರಲ್ಲೂ ಶನಿವಾರದಂದು ಶನಿದೇವನಿಗೆ ಎಳ್ಳೆಣ್ಣೆ ದೀಪ ಬೆಳಗಿಸುವುದು ಮತ್ತು ಎಳ್ಳೆಣ್ಣೆ ಅಭಿಷೇಕ ಮಾಡುವುದನ್ನು ತಪ್ಪಿಸುವಂತೆಯೇ ಇಲ್ಲ. ಏಕೆಂದರೆ ಈ ವರ್ಷ ಕೊಡುವವನೇ ಅವನು. ಅವನನ್ನು ಕೇರ್ ಮಾಡಿಲ್ಲ ಅಂದರೆ. ಅವನು ನಿಮ್ಮನ್ನೂ ಕೇರ್ ಮಾಡಲ್ಲ ಅರ್ಥ ಮಾಡಿಕೊಳ್ಳಿ.

ಇದೇ ರೀತಿ ಶಂಭೋಲಿಂಗನ ಆಲಯದಲ್ಲಿ ಬಿಲ್ವಪತ್ರೆ ಕೊಡಿ ಅನುಕೂಲವಿದ್ದರೆ. ಶಿವನಿಗೆ ಸಂಬಂಧಿಸಿದ ಮಂತ್ರಗಳು ಗೊತ್ತಿದ್ದರೆ ಅಥವಾ ಶನಿಮಂತ್ರ ಪಠಿಸುತ್ತಿದ್ದರೆ ಶುಭಫಲದೊಂದಿಗೆ ದೇಹಾತ್ಮವೂ ಖುಷಿಯಾಗಿರುತ್ತದೆ. [ಶಿವರಾತ್ರಿ : ಜ್ಯೋತಿರ್ಲಿಂಗಗಳ ಪೌರಾಣಿಕ ಹಿನ್ನೆಲೆ ಗೊತ್ತಾ?]

ಸಾಧ್ಯವಾದರೆ ಶಂಭೋಲಿಂಗನಿಗೊಮ್ಮೆ ರುದ್ರಾಭಿಷೇಕ ಮಾಡಿಸಿ ಅಥವಾ ಪಾಲ್ಗೊಳ್ಳಿ. ರುದ್ರ ಪಾರಾಯಣ ಮಾಡುವುದರಿಂದ ಮಾನಸಿಕ ನೆಮ್ಮದಿಯ ಹೆಚ್ಚಳವಾಗುತ್ತದೆ. ಒಟ್ಟಿನಲ್ಲಿ 2017ರ ಕೊನೆವರೆಗೆ ಓಡುವ ಕುದುರೆಯ ಮೇಲೆ ನೀವಿರುವುದರಿಂದ ಒಂದು ಕ್ಷಣವನ್ನೂ ವೇಸ್ಟ್ ಪ್ರತಿಕ್ಷಣವೂ ಜೀವನದ ಏಳ್ಗೆಗೆ ಶ್ರಮಪಡಬೇಕು. ನೆನಪಿರಲಿ ಇಂಥ ಸಮಯ ಮತ್ತೆ ಬರುವುದು 30 ವರ್ಷಗಳ ನಂತರವೇ. ಏಕೆಂದರೆ ಅಷ್ಟಮಶನಿ ಅದೃಷ್ಟ ನೀಡುತ್ತಾರೆ ಅಪಾರ. ಸಮಯದ ಸದುಪಯೋಗ ಪಡಿಸಿಕೊಳ್ಳುವುದು ಮುಖ್ಯ ಈ ರಾಶಿಯವರು.

English summary
Yearly horoscope 2016 for Gemini zodiac sign. Astrologer SS Naganurmath explains what lies ahead of Gemini people. It is good year for Gemini people, they have to make most of the opportunities. But, only hard work rewards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X