ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021 varsha bhavishya: ತುಲಾ ದಿಂದ ಮೀನದ ತನಕ ರಾಶಿ ಭವಿಷ್ಯ

By ಶ್ರೀ ಶ್ರೀನಿವಾಸ್ ಗುರೂಜಿ
|
Google Oneindia Kannada News

2021ರ ವರ್ಷ ಭವಿಷ್ಯದ ಬಗೆಗಿನ ಲೇಖನ ಇದು. ಒಂದು ವರ್ಷ ತುಲಾ ದಿಂದ ಮೀನ ರಾಶಿಯ ತನಕ ಯಾರಿಗೆ ಹೇಗಿದೆ ಏರಿಳಿತಗಳು ಎಂದು ತಿಳಿಯುವುದಕ್ಕೆ ಈ ಲೇಖನ ಸಹಾಯ ಮಾಡಲಿದೆ. ಏಪ್ರಿಲ್ ಆರಂಭದ ತನಕ ಗುರು ಮಕರ ರಾಶಿಯಲ್ಲಿದ್ದು, ಆ ನಂತರ ಕುಂಭ ರಾಶಿಗೆ ಪ್ರವೇಶ ಆಗುತ್ತದೆ. ಸೆಪ್ಟೆಂಬರ್ ತನಕ ಅಲ್ಲೇ ಇರುತ್ತದೆ.

ಆ ನಂತರ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಮಕರ ರಾಶಿಯಲ್ಲಿದ್ದು, ಮತ್ತೆ ಕುಂಭಕ್ಕೆ ಪ್ರವೇಶ ಆಗುತ್ತದೆ. ವರ್ಷದ ಕೊನೆಯ ತನಕ ಗುರು ಕುಂಭ ರಾಶಿಯಲ್ಲಿ ಇದ್ದರೆ, ಶನಿ ಮಕರ ರಾಶಿಯಲ್ಲಿ, ರಾಹು ವೃಷಭ ಹಾಗೂ ಕೇತು ವೃಶ್ಚಿಕದಲ್ಲಿ ವರ್ಷ ಪೂರ್ತಿ ಇರುತ್ತವೆ. ಇನ್ನುಳಿದಂತೆ ಬಹುತೇಕ ಗ್ರಹಗಳು ದಿನದಿನಕ್ಕೂ, ಪ್ರತಿ ತಿಂಗಳು ಬದಲಾವಣೆ ಆಗುತ್ತವೆ.

2021 varsha bhavishya: ಮೇಷದಿಂದ ಕನ್ಯಾದ ತನಕ ರಾಶಿ ಭವಿಷ್ಯ2021 varsha bhavishya: ಮೇಷದಿಂದ ಕನ್ಯಾದ ತನಕ ರಾಶಿ ಭವಿಷ್ಯ

ಆದ್ದರಿಂದ ಪ್ರಮುಖ ಗ್ರಹಗಳು ಎನಿಸಿದ ಗುರು, ಶನಿ, ರಾಹು- ಕೇತು ಗ್ರಹಗಳನ್ನು ಗಣನೆಗೆ ತೆಗೆದುಕೊಂಡು, ರಾಶಿ ಭವಿಷ್ಯದ ಬಗ್ಗೆ ತಿಳಿಸಲಾಗುತ್ತಿದೆ. ಇನ್ನು ಆಯಾ ವ್ಯಕ್ತಿಯ ಜನ್ಮ ಜಾತಕದಲ್ಲಿನ ಗ್ರಹಗಳ ಸ್ಥಿತಿಗತಿ ಹಾಗೂ ದಶಾ ಕಾಲ ಮುಖ್ಯವಾಗುತ್ತದೆ. ಆದ್ದರಿಂದ ವೈಯಕ್ತಿಕ ಜಾತಕವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ- ಪ್ರೇಮ ವಿಚಾರ. ಪ್ರೀತಿಯಲ್ಲಿ ನಂಬಿ ಮೋಸ. ಅತ್ತೆ-ಸೊಸೆ ಕಲಹ. ಹಣಕಾಸಿನ ತೊಂದರೆ. ಮದುವೆಯಲ್ಲಿ ಅಡೆತಡೆ. ಸತಿ ಪತಿ ಕಲಹ. ಸಂತಾನ ಸಮಸ್ಯೆ. ಆರೋಗ್ಯ. ಉದ್ಯೋಗ. ಸಾಲ ಭಾದ ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ 5 ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ 5 ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ಮನೆ ವಿಳಾಸ- #37/17 27ನೇ ಅಡ್ಡರಸ್ತೆ, 12ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ್, ಬೆಂಗಳೂರು. ಮೊ. 9986623344.

ತುಲಾ

ತುಲಾ

ವರ್ಷದ ಮೊದಲ ಮೂರು ತಿಂಗಳು ಸ್ನೇಹಿತರನ್ನು ಉಳಿಸಿಕೊಳ್ಳಿ. ಪ್ರತಿಯೊಂದಕ್ಕೂ ಅನುಮಾನ ಪಡುವ ಪ್ರವೃತ್ತಿ ಬೇಡ. ಇನ್ನು ಒರಟು ಮಾತುಗಳಂತೂ ಬೇಡವೇ ಬೇಡ. ಈ ಅವಧಿಯಲ್ಲಿ ಹಾಗೂ ಸೆಪ್ಟೆಂಬರ್ ಮೊದಲಾರ್ಧದ ನಂತರ ನವೆಂಬರ್ ತನಕ ಹೀಗೆಲ್ಲ ಆಗುತ್ತದೆ. ಇನ್ನು ನಿಮಗೆ ಯಾರು ಸರಿ ಹಾಗೂ ಯಾರು ತಪ್ಪು ಎಂದು ಆರಿಸಿಕೊಳ್ಳುವುದೇ ಕಷ್ಟ ಎಂಬಂತೆ ಆಗುತ್ತದೆ. ಆದರೆ ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಸಕಾರಾತ್ಮಕವಾದ ಬದಲಾವಣೆ ನಿರೀಕ್ಷೆ ಮಾಡಬಹುದು. ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಇನ್ನು ವಿದೇಶ ಪ್ರಯಾಣಗಳನ್ನು ಮಾಡಬೇಕು ಎಂದಿದ್ದಲ್ಲಿ ಅಲ್ಪಾವಧಿಯ ಪ್ರಯಾಣ ಮಾಡಬಹುದು. ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಬೇಕು ಎಂದಿರುವ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಮಾರ್ಗದರ್ಶನ ದೊರೆಯಲಿದೆ. ಸೈಟು- ಮನೆ, ಕಾರು ಖರೀದಿಗೆ ಅವಕಾಶ ಇದೆ. ಸಣ್ಣ ಪುಟ್ಟ ವಿಚಾರದಲ್ಲಿಯೂ ಕಾನೂನು ಮೀರದಿರಿ. ಶಾರ್ಟ್ ಕಟ್ ಮೂಲಕ ಹಣ ಮಾಡುವ ಆಲೋಚನೆ ಬಂದಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದು ಉತ್ತಮ. ಗಣಪತಿ ಹಾಗೂ ಸುಬ್ರಹ್ಮಣ್ಯ ಆರಾಧನೆಯಿಂದ ಹಲವು ಅಡೆತಡೆ ಹಾಗೂ ಸವಾಲುಗಳು ನಿವಾರಣೆ ಆಗುತ್ತವೆ. ವಿಷ ಜಂತುಗಳಿಂದ ಅಪಾಯ ಇದೆ. ಆದ್ದರಿಂದ ಅಂಥ ಪ್ರದೇಶಗಳಲ್ಲಿ ವಾಸಿಸುವವರು, ಪ್ರಯಾಣ ಮಾಡುವಂಥವರು, ಉದ್ಯೋಗ ಮಾಡುತ್ತಿರುವವರು ಇನ್ನೂ ಹೆಚ್ಚು ಎಚ್ಚರಿಕೆ ವಹಿಸಬೇಕು.

ವೃಶ್ಚಿಕ

ವೃಶ್ಚಿಕ

ಜನವರಿಯಿಂದ ಮಾರ್ಚ್ ತನಕ ಸೋದರ- ಸೋದರಿಯರ ಜತೆಗೆ ಅಸಮಾಧಾನ ಇರುತ್ತದೆ. ಆದರೆ ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಮನೆ ನಿರ್ಮಾಣ ಕಾರ್ಯಗಳನ್ನು ಶುರು ಮಾಡುವುದಕ್ಕೆ ಉತ್ತಮ ಸಮಯ. ಶನೈಶ್ಚರನ ಅನುಗ್ರಹ ಇರುವುದರಿಂದ ಹಲವು ಮೂಲಗಳಿಂದ ಅನುಕೂಲ ಒದಗಿ ಬರಲಿದೆ. ನಿಮಗೆ ಯಶಸ್ಸನ್ನು ಸಂಭಾಳಿಸುವುದು ಕಷ್ಟವಾಗಲಿದೆ. ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಸ್ನೇಹಿತರನ್ನು ಕಳೆದುಕೊಳ್ಳಬೇಕಾಗುತ್ತದೆ. ನಿಮ್ಮ ಜತೆಗೆ ಹೊಸಬರು ಸೇರಲಿದ್ದಾರೆ. ಈ ಸನ್ನಿವೇಶವನ್ನು ಎದುರಿಸುವುದು ಹೇಗೆ ಎಂಬುದಕ್ಕೆ ಮುಂಚಿತವಾಗಿಯೇ ಸಿದ್ಧರಾಗಿ. ಇನ್ನು ಸಂಗಾತಿ ಬಗ್ಗೆ ಅನುಮಾನ ಪಡಲಿದ್ದೀರಿ. ಜತೆಗೆ ಪಾರ್ಟನರ್ ಷಿಪ್ ವ್ಯವಹಾರ ಮಾಡುವವರು ನಂಬಿಕೆ ಎಂಬ ಸಂಗತಿ ಬಂದಾಗ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಈ ವರ್ಷ ತೀರ್ಥ ಕ್ಷೇತ್ರಗಳ ಪ್ರವಾಸ ಹೆಚ್ಚಿಗೆ ಇರುತ್ತದೆ. ತಂದೆ- ತಾಯಿಯ ಜತೆಗೆ ತೆರಳುವಂಥ ಯೋಗ ಇದೆ. ಇನ್ನು ಸ್ತ್ರೀಯರಿಗೆ ಉಷ್ಣಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಾಡಬಹುದು. ವಿದ್ಯಾರ್ಥಿಗಳು ವಾಹನ, ಗ್ಯಾಜೆಟ್ ಹಾಗೂ ಮೊಬೈಲ್ ಎಂದು ಸಮಯ ವ್ಯರ್ಥ ಮಾಡಿಕೊಳ್ಳದಿರಿ. ಏಕೆಂದರೆ ನಿಮ್ಮ ಪ್ರಯತ್ನಕ್ಕೆ ಫಲ ದೊರೆಯಲಿದೆ. ಆದರೆ ನೀವು ಯಾವುದಕ್ಕೆ ಪ್ರಯತ್ನ ಪಡುತ್ತೀರಿ ಎಂಬುದರ ಮೇಲೆ ಫಲ ನಿಶ್ಚಯ ಆಗುತ್ತದೆ. ನವೆಂಬರ್- ಡಿಸೆಂಬರ್ ನಲ್ಲಿ ಪಿತ್ರಾರ್ಜಿತ ಆಸ್ತಿ ವ್ಯಾಜ್ಯ ತಲೆದೋರಬಹುದು. ಗುರು ಆರಾಧನೆ ಮಾಡಿ.

ಧನುಸ್ಸು

ಧನುಸ್ಸು

ಈ ವರ್ಷ ನಿಮ್ಮ ಮಾತು ಹಾಗೂ ಸೋದರ ಸಂಬಂಧಿಗಳೇ ಸಮಸ್ಯೆ ಆಗಬಹುದು. ದುಡ್ಡಿನ ವಿಚಾರದಲ್ಲಿ ಪಾರದರ್ಶಕವಾಗಿ ಇರಿ. ಯಾರ ಬಗ್ಗೆಯೂ ಹಗುರವಾದ ಮಾತನಾಡಬೇಡಿ. ನಿಮಗೆ ಬರಬೇಕಾದ ಹಳೇ ಬಾಕಿ ಇದ್ದಲ್ಲಿ ಬರುವ ಸಾಧ್ಯತೆ ಇದೆ. ಅದನ್ನು ಆಪತ್ ಕಾಲಕ್ಕೆ ಎಂದು ಎತ್ತಿಟ್ಟುಕೊಳ್ಳಿ. ಧಾರ್ಮಿಕ ಕಾರ್ಯಕ್ರಮಗಳಿಗೆ ಹಣ ಖರ್ಚಾಗಲಿದೆ. ಪುಣ್ಯ ಸಂಪಾದನೆ ಮಾಡಲಿದ್ದೀರಿ. ಆದರೆ ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಕೆಲವು ಕಾನೂನು ತೊಡಕುಗಳು ನಿಮ್ಮ ಬೆನ್ನತ್ತಿ ಬರಬಹುದು. ಆದ್ದರಿಂದ ನೀವಾಗಿಯೇ ಯಾವ ಸಮಸ್ಯೆಯನ್ನೂ ಮೈಮೇಲೆ ಎಳೆದುಕೊಳ್ಳಬೇಡಿ. ಅದರಲ್ಲೂ ಮುಖ್ಯವಾಗಿ ಇತರರ ಸಾಲಕ್ಕೆ ಜಾಮೀನಾಗಿ ನಿಲ್ಲದಿರಿ. ನೀವು ನಿರೀಕ್ಷೆಯೇ ಮಾಡದ ರೀತಿಯನ್ನು ಬಡ್ತಿಯೊಂದು ದೊರೆಯುವ ಯೋಗ ಇದೆ. ಅದರ ಜತೆಜತೆಗೆ ಬರುವ ಜವಾಬ್ದಾರಿಗಳನ್ನು ನಿರ್ವಹಿಸುವುದು ಸವಾಲಾಗಿ ಪರಿಣಮಿಸಬಹುದು. ಇಂಥ ಸನ್ನಿವೇಶದಲ್ಲಿ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿ. ಆದರೆ ಇಡೀ ವರ್ಷ ಯಾವುದಾದರೂ ಒಂದು ವಿಚಾರವಾಗಿ ಚಿಂತೆ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಅದನ್ನು ಇತರರ ಜತೆಗೆ ಹಂಚಿಕೊಳ್ಳುವುದು ಸಹ ಸಾಧ್ಯ ಇರುವುದಿಲ್ಲ. ಮಹಿಳೆಯರು ಸಂಸಾರದ ಗುಟ್ಟನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರಿ. ವಿವಾಹದ ಆಚೆಗಿನ ಸಂಬಂಧದ ಕಡೆಗೆ ಆಕರ್ಷಿತರಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ. ಆ ಬಗ್ಗೆ ಎಚ್ಚರ ಇರಲಿ. ಇನ್ನು ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಸೇರುವ ಮುನ್ನ ಅಳೆದು, ತೂಗಿ ಮುಂದಕ್ಕೆ ಹೆಜ್ಜೆ ಇಡಿ.

ಮಕರ

ಮಕರ

ಜನ್ಮರಾಶಿಯಲ್ಲಿನ ಗುರು ನಾನಾ ದುಃಖಗಳನ್ನು ನೀಡುತ್ತಾನೆ. ಜನವರಿಯಿಂದ ಏಪ್ರಿಲ್ ಮೊದಲ ವಾರ ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ಮೂರನೇ ವಾರದ ತನಕ ಪರಿಸ್ಥಿತಿ ಹೀಗೇ ಇರುತ್ತದೆ. ಅಂದುಕೊಳ್ಳದ ರೀತಿಯಲ್ಲಿ ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ. ನಾನಾ ಬಗೆಯ ಚಿಂತೆ- ಬೇಸರ, ಅನಾರೋಗ್ಯ ಕಾಡುತ್ತದೆ. ಆದರೆ ಹೇಗಾದರೂ ಹಣ ಹೊಂದಾಣಿಕೆ ಆಗುತ್ತದೆ. ಪೌರೋಹಿತ್ಯ- ಜ್ಯೋತಿಷ್ಯ ವೃತ್ತಿಯಲ್ಲಿ ಇರುವವರಿಗೆ ಹಣದ ಹರಿವು ಉತ್ತಮವಾಗಿರುತ್ತದೆ. ಇನ್ನು ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಇದೆ. ಈ ವರ್ಷ ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆ ಆಗಲೇಬೇಕಿದೆ. ಆಲೋಚನೆ ಮಾಡಿ, ಕೆಲಸವನ್ನು ಕೈಗೆತ್ತಿಕೊಳ್ಳುವ ಸ್ವಭಾವವನ್ನು ರೂಢಿಸಿಕೊಳ್ಳಿ. ಯಾರ ಮೇಲೂ ವೈಯಕ್ತಿಕ ದ್ವೇಷ ಸಾಧಿಸಲು ಹೋಗದಿರಿ. ಏಪ್ರಿಲ್ ಮೊದಲ ವಾರದಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಉದ್ಯೋಗ ಬದಲಾವಣೆಗೆ ಅವಕಾಶಗಳಿವೆ. ಇನ್ನು ಆಸ್ತಿ ಮಾರಾಟ ಮಾಡಬೇಕು ಎಂದಿದ್ದಲ್ಲಿ ಈ ಅವಧಿಯಲ್ಲಿ ಸಾಧ್ಯವಾಗಲಿದೆ. ಆದರೆ ಆ ಹಣ ಹೇಗೆ ವಿನಿಯೋಗ ಆಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ. ಈ ವರ್ಷ ಹೂಡಿಕೆ ಮಾಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ. ನಿಮ್ಮದಲ್ಲದ ವಿಷಯಗಳಿಗೆ ತಲೆ ಹಾಕದಿರಿ. ಗರ್ಭಿಣಿಯರು ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ಮಾಡಿ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಿ.

ಕುಂಭ

ಕುಂಭ

ಈ ವರ್ಷ ಯಾವುದೇ ಕೆಲಸಕ್ಕೂ ಅಗತ್ಯಕ್ಕಿಂತ ಹೆಚ್ಚು ಶ್ರಮ ಹಾಕಬೇಕು. ಹಣದ ಖರ್ಚನ್ನು ಸಂಭಾಳಿಸುವುದರಲ್ಲಿ ಹೈರಾಣಾಗುತ್ತೀರಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಮಸಾಲೆ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಿಂದ ದೂರ ಇರಿ. ವಾಹನ ಖರೀದಿ ಮಾಡಬೇಕು ಎಂದಿರುವವರು, ಸಾಲ ಮಾಡುತ್ತಿದ್ದಲ್ಲಿ ನಿಮ್ಮ ಸಾಮರ್ಥ್ಯ ಏನು ಎಂಬುದನ್ನು ಅಳೆದುಕೊಂಡ ನಂತರವೇ ಮುಂದಕ್ಕೆ ಹೆಜ್ಜೆ ಇಡಿ. ಯಾರದೋ ಮೇಲಿನ ಸವಾಲಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಾಡಿದರೆ ಅದನ್ನು ತೀರಿಸುವುದು ಹರಸಾಹಸ ಆಗಲಿದೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಅತ್ಯುತ್ತಮ ಬೆಂಬಲ ಸಿಗಲಿದೆ. ಅದನ್ನು ಹೇಗೆ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂಬುದು ನಿಮ್ಮ ಕೈಲೇ ಇದೆ. ವರ್ಷದ ಮೊದಲ ಮೂರು ತಿಂಗಳು ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಖರ್ಚು ಸಿಕ್ಕಾಪಟ್ಟೆ ಜಾಸ್ತಿ ಇರುತ್ತದೆ. ಜತೆಗೆ ಆರೋಗ್ಯ ಸಮಸ್ಯೆಗಳು ಕೂಡ ಕಾಡಬಹುದು. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ನೆಮ್ಮದಿಯ ಆಯ್ಕೆ ನಿಮ್ಮ ಕೈಯಲ್ಲೇ ಇರುತ್ತದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಪ್ರಯತ್ನಿಸುತ್ತಾ ವಿದೇಶಕ್ಕೆ ತೆರಳಬೇಕು ಎಂದಿದ್ದಲ್ಲಿ ಮಧ್ಯವರ್ತಿಗಳಿಂದ ಹುಷಾರಾಗಿರಬೇಕು.

ಮೀನ

ಮೀನ

ಬಹುತೇಕ ಶುಭಫಲಗಳೇ ಇರುವ ವರ್ಷ ಇದಾಗಿರಲಿದೆ. ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಡಿಸೆಂಬರ್ ನಲ್ಲಿ ಖರ್ಚಿನ ಪ್ರಮಾಣ ಸ್ವಲ್ಪ ಹೆಚ್ಚಾಗಿರುತ್ತದೆ. ವ್ಯಾಪಾರ- ಉದ್ಯಮ ನಡೆಸುತ್ತಿರುವವರಿಗೆ ಲಾಭದ ಪ್ರಮಾಣದಲ್ಲಿ ಕಡಿಮೆ ಆಗಬಹುದು ಅಥವಾ ತಡವಾಗಿ ಬರಬಹುದು, ಆದರೆ ಬರಲಿದೆ. ಇನ್ನು ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ಅದು ದೊರೆಯಲಿದೆ. ಹಣದ ಹರಿವು ಉತ್ತಮವಾಗಿರಲಿದೆ. ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಅಂದುಕೊಂಡಂತೆಯೇ ದೊರೆಯಲಿದೆ. ಆದರೆ ಒಮ್ಮೆ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ. ಏಳ್ಗೆ ಅಥವಾ ಪ್ರಗತಿಗೆ ತಡೆಯೊಡ್ಡುವ ದೋಷಗಳೇನಾದರೂ ಇದ್ದಲ್ಲಿ ಅದನ್ನು ಪರಿಹರಿಸಿಕೊಳ್ಳಿ. ಹಣ ಬರುತ್ತಿದೆ ಅಥವಾ ಬರಲಿದೆ ಎಂಬ ಕಾರಣಕ್ಕೆ ವಿಪರೀತ ಖರ್ಚು ಮಾಡದೆ ಉಳಿತಾಯದ ಕಡೆಗೂ ಗಮನ ನೀಡಿ. ಇಲ್ಲದಿದ್ದಲ್ಲಿ ಆ ನಂತರ ಪರಿತಪಿಸಬೇಕಾಗುತ್ತದೆ. ಮಧುಮೇಹದಂಥ ಆರೋಗ್ಯ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರ ಪಡೆಯಿರಿ. ಏಕೆಂದರೆ, ಈ ವರ್ಷ ಸ್ಥೂಲಕಾಯದ ಸಮಸ್ಯೆ ಎದುರಿಸಬೇಕಾಗುತ್ತದೆ. ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿ ಅಥವಾ ಹಣ ದೊರೆಯುವ ಅವಕಾಶ ಇದೆ. ಇನ್ನು ವಿದೇಶಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅದರಲ್ಲಿ ಯಶಸ್ಸಿದೆ. ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್ ಮೆಂಟ್ ನಲ್ಲಿ ಸುಲಭಕ್ಕೆ ಉದ್ಯೋಗ ದೊರೆಯುವ ಯೋಗವಿದೆ.

English summary
2021 Yearly Horoscope in Kannada: Read your Varshika Bhavishya for all 12 rashi in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X