ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021 Career, Job Horoscope: ತುಲಾದಿಂದ ಮೀನದ ತನಕ ರಾಶಿ ಭವಿಷ್ಯ

By ಶ್ರೀ ಶ್ರೀನಿವಾಸ್ ಗುರೂಜಿ
|
Google Oneindia Kannada News

2021ನೇ ಇಸವಿಯ ವರ್ಷ ಭವಿಷ್ಯದ ಬಗ್ಗೆ ಎಲ್ಲ ಅಂಶಗಳನ್ನು ಒಳಗೊಂಡಂತೆ ಲೇಖನ ಪ್ರಕಟಿಸಲಾಗಿದೆ. ಇನ್ನು ಪ್ರೀತಿ- ಪ್ರೇಮ, ಮದುವೆ ಭವಿಷ್ಯ ಹೇಗಿರುತ್ತದೆ ಅಂತಲೂ ವರ್ಷ ಭವಿಷ್ಯ ಪ್ರಕಟಿಸಲಾಗಿದೆ. ಆ ಹಿನ್ನೆಲೆಯಲ್ಲಿ ಈ ವರ್ಷ ತುಲಾದಿಂದ ಮೀನ ರಾಶಿ ತನಕ ಉದ್ಯೋಗ, ವೃತ್ತಿಗೆ ಸಂಬಂಧಿಸಿದಂತೆ ಭವಿಷ್ಯ ಹೇಗಿರುತ್ತದೆ ಎಂಬ ಬಗೆಗಿನ ಲೇಖನ ಇದು.

ಅಂದ ಹಾಗೆ, ಜನವರಿಯಿಂದ ಏಪ್ರಿಲ್ ಆರಂಭದ ತನಕ ಗುರು ಗ್ರಹವು ಮಕರ ರಾಶಿಯಲ್ಲಿದ್ದು, ಆ ನಂತರ ಕುಂಭ ರಾಶಿಗೆ ಪ್ರವೇಶ ಆಗುತ್ತದೆ. ಸೆಪ್ಟೆಂಬರ್ ತನಕ ಅಲ್ಲೇ ಇರುತ್ತದೆ. ಆ ನಂತರ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಮಕರ ರಾಶಿಯಲ್ಲಿದ್ದು, ಮತ್ತೆ ಕುಂಭಕ್ಕೆ ಪ್ರವೇಶ ಆಗುತ್ತದೆ. ವರ್ಷದ ಕೊನೆಯ ತನಕ ಗುರು ಕುಂಭ ರಾಶಿಯಲ್ಲಿ ಇದ್ದರೆ, ಶನಿ ಮಕರ ರಾಶಿಯಲ್ಲಿ, ರಾಹು ವೃಷಭ ಹಾಗೂ ಕೇತು ವೃಶ್ಚಿಕದಲ್ಲಿ ವರ್ಷ ಪೂರ್ತಿ ಇರುತ್ತವೆ.

2021 Career, Job Horoscope: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ2021 Career, Job Horoscope: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ

ಆದ್ದರಿಂದ ಪ್ರಮುಖ ಗ್ರಹಗಳು ಎನಿಸಿದ ಗುರು, ಶನಿ, ರಾಹು- ಕೇತು ಗ್ರಹಗಳನ್ನು ಗಣನೆಗೆ ತೆಗೆದುಕೊಂಡು, ರಾಶಿ ಭವಿಷ್ಯದ ಬಗ್ಗೆ ತಿಳಿಸಲಾಗುತ್ತಿದೆ. ಇನ್ನು ಆಯಾ ವ್ಯಕ್ತಿಯ ಜನ್ಮ ಜಾತಕದಲ್ಲಿನ ಗ್ರಹಗಳ ಸ್ಥಿತಿಗತಿ ಹಾಗೂ ದಶಾ ಕಾಲ ಮುಖ್ಯವಾಗುತ್ತದೆ. ಆದ್ದರಿಂದ ವೈಯಕ್ತಿಕ ಜಾತಕವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ- ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಬಾಧೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ.

ಜೀವನದಲ್ಲಿ ಜುಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ 5 ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ಮನೆ ವಿಳಾಸ- #37/17, 27ನೇ ಅಡ್ಡರಸ್ತೆ, 12ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು. ಮೊ. 99866 23344.

ತುಲಾ

ತುಲಾ

ವರ್ಷದ ಮೊದಲ ಮೂರು ತಿಂಗಳು, ಜನವರಿಯಿಂದ ಏಪ್ರಿಲ್ ಮೊದಲ ವಾರದ ತನಕ ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ತನಕ ನಿಮ್ಮ ಸ್ನೇಹವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲ ಕೆಲಸವೂ ಸಲೀಸಾಗಿ ಬಿಡುತ್ತದೆ ಎಂಬ ಧೋರಣೆ ಬೇಡ. ನಿಮ್ಮ ನಿರ್ಲಕ್ಷ್ಯ ಸ್ವಭಾವದಿಂದ ಸ್ನೇಹಿತರನ್ನು ದೂರ ಮಾಡಿಕೊಳ್ಳುವ ಯೋಗ ಇದೆ. ಇದರಿಂದ ಉದ್ಯೋಗ- ವೃತ್ತಿ ಮೇಲೆ ನಕಾರಾತ್ಮಕ ಪರಿಣಾಮ ಆಗಲಿದೆ. ಸಾಫ್ಟ್ ವೇರ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಏಪ್ರಿಲ್ ನಿಂದ ಸೆಪ್ಟೆಂಬರ್ ಮತ್ತು ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಉತ್ತಮ ಅವಕಾಶಗಳು ಒದಗಿಬರುತ್ತವೆ. ವಿದೇಶ ಪ್ರವಾಸಕ್ಕೆ ತೆರಳುವ ಅವಕಾಶ ದೊರೆಯುವ ಸಾಧ್ಯತೆ ಕಂಡುಬಂದಲ್ಲಿ ವೀಸಾಗಾಗಿ ಗಂಭೀರವಾಗಿ ಪ್ರಯತ್ನಿಸಿ. ಇನ್ನು ಉದ್ಯೋಗ ಸ್ಥಳದಲ್ಲಿ ನಿಮ್ಮ ಬಗ್ಗೆ ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಜತೆಯಲ್ಲಿ ಇದ್ದವರು, ನಿಮಗೆ ಆಪ್ತರಾದವರೇ ಅಡ್ಡಗಾಲಾಗುವ ಸಾಧ್ಯತೆ ಇದೆ. ವೃತ್ತಿಪರರಿಗೆ ಖರ್ಚನ್ನು ನಿಭಾಯಿಸುವುದು ಬಹಳ ಕಷ್ಟವಾಗುತ್ತದೆ. ಸ್ವಂತ ಕಚೇರಿ ನಡೆಸುತ್ತಿರುವವರು ಏಕಾಏಕಿ ದೊಡ್ಡ ಮಟ್ಟದಲ್ಲಿ ಮಾಡುವ ಕಡೆಗೆ ಆಲೋಚನೆ ಮಾಡಬೇಡಿ.

ವೃಶ್ಚಿಕ

ವೃಶ್ಚಿಕ

ಜನವರಿಯಿಂದ ಏಪ್ರಿಲ್ ಮೊದಲ ವಾರದ ತನಕ ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಉದ್ಯೋಗದಲ್ಲಿ ನಿಮಗೆ ಬರಬೇಕಾದ ಬಡ್ತಿ ಇದ್ದಲ್ಲಿ ನಿಧಾನವಾಗುತ್ತದೆ. ಸರ್ಕಾರಿ ಉದ್ಯೋಗಿಗಳು ಕಾನೂನು ದಾರಿಯ ಮೂಲಕ ಸಿಗಬೇಕಾದ ಸ್ಥಾನಮಾನಗಳಿಗಾಗಿ ಹೋರಾಟ ನಡೆಸಬೇಕಾಗುತ್ತದೆ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಉದ್ಯೋಗ ಹಾಗೂ ವೃತ್ತಿ ಬದುಕಿನಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಹಣಕಾಸು ಹರಿವು ಉತ್ತಮವಾಗಿದ್ದರೂ ಅದನ್ನು ದಕ್ಕಿಸಿಕೊಳ್ಳಲು ಹರಸಾಹಸವನ್ನು ಪಡಬೇಕಾಗುತ್ತದೆ. ಪಾರ್ಟನರ್ ಷಿಪ್ ನಲ್ಲಿ ಅಕೌಂಟಿಂಗ್ ಸಂಸ್ಥೆ ಅಥವಾ ವೈದ್ಯಕೀಯ ಸಂಸ್ಥೆಗಳನ್ನು ನಡೆಸುತ್ತಿದ್ದಲ್ಲಿ ಸಣ್ಣ- ಪುಟ್ಟ ವಿಚಾರಕ್ಕೆ ಮನಸ್ತಾಪಗಳು ಹಾಗೂ ಬೇರ್ಪಡುವ ಮಾತುಗಳು ಪದೇಪದೇ ಕೇಳಿಬರುತ್ತವೆ. ಈ ಅವಧಿಯಲ್ಲಿ ಹೇಳಿಕೆ ಮಾತುಗಳನ್ನು ಕೇಳದಿರಿ. ಕಾಗದ- ಪತ್ರಗಳನ್ನು ಹಾಗೂ ಹಣಕಾಸು ವ್ಯವಹಾರವನ್ನು ನೀವೇ ನೋಡಿಕೊಳ್ಳುವವರಾಗಿದ್ದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳಿ. ಯಾವುದೇ ಅನುಮಾನ ಮೂಡದಂತೆ ವ್ಯವಹಾರ- ವ್ಯಾಪಾರ ಇರಲಿ. ವಿದೇಶ ಪ್ರಯಾಣದ ವೇಳೆ ಪಾಸ್ ಪೋರ್ಟ್ ಮೊದಲಾದ ಅಗತ್ಯ ದಾಖಲಾತಿಗಳನ್ನು ಜೋಪಾನ ಮಾಡಿಟ್ಟುಕೊಳ್ಳಿ. ಲಗೇಜ್ ಗೆ ಇನ್ಷೂರೆನ್ಸ್ ಮಾಡಿಸಿಕೊಳ್ಳಿ.

ಧನುಸ್ಸು

ಧನುಸ್ಸು

ಉದ್ಯೋಗದಲ್ಲಿ ನಿರೀಕ್ಷೆಯಂತೆ ಬಡ್ತಿ ಅಥವಾ ವೇತನ ಹೆಚ್ಚಳ ಆಗದಿದ್ದಲ್ಲಿ ಬೇಸರ ಆಗದಿರಿ. ಈ ಸಲ ಇಷ್ಟು ಸಂಬಳ ಜಾಸ್ತಿ ಮಾಡ್ತೀವಿ ಅಥವಾ ಇಂಥ ಹುದ್ದೆ ಕೊಡ್ತೀವಿ ಅಂತ ಹೇಳಿದವರೇ ಮಾತು ತಪ್ಪುವ ಸಾಧ್ಯತೆ ಇದೆ. ಅಥವಾ ನಿಮ್ಮದೇ ಒರಟು ಮಾತುಗಳು ಹಾಗೂ ಇತರರ ಬಳಿ ಆಡಿದ ಹಗುರ ಮಾತುಗಳಿಂದ ಅವಕಾಶ ವಂಚಿತರಾಗುವ ಸಾಧ್ಯತೆಗಳಿವೆ. ಆದರೆ ನಿಮಗೆ ಬರಬೇಕಾದ ದೊಡ್ಡ ಮೊತ್ತದ ಬಾಕಿ ಇದ್ದಲ್ಲಿ ಅದು ಬರುವ ಹಾಗೂ ಅದೇ ರೀತಿ ಖರ್ಚಾಗುವಂಥ ಯೋಗ ಇದೆ. ಹೊಗಳುಭಟರ ಮಾತುಗಳಿಗೆ ಮರುಳಾಗಿ ಇರುವ ಕೆಲಸವನ್ನು ಬಿಟ್ಟು, ವ್ಯಾಪಾರ- ವ್ಯವಹಾರ ಎಂದು ಹೊರಟು ನಿಂತು ಬಿಡಬೇಡಿ. ಏಕೆಂದರೆ, ಅದಕ್ಕಾಗಿ ಸಾಲ ಸುಲಭವಾಗಿ ಸಿಗುತ್ತದೆ ಹಾಗೂ ಆರಂಭದಲ್ಲಿ ವ್ಯವಹಾರವೂ ಉತ್ತಮವಾಗಿರುತ್ತದೆ. ಆದರೆ ಆ ನಂತರದಲ್ಲಿ ನಾನಾ ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಎಚ್ಚರವಾಗಿರಿ. ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ನಡೆಸುತ್ತಿದ್ದಲ್ಲಿ ಅಂದುಕೊಂಡಷ್ಟು ಆದಾಯ ಬರುವುದಿಲ್ಲ. ಕೌಟುಂಬಿಕ ವ್ಯವಹಾರವನ್ನೇ ಮುಂದುವರಿಸಿಕೊಂಡು ಬರುತ್ತಿರುವವರಿಗೆ ಕಕ್ಷೀದಾರರ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗಲಿದೆ.

ಮಕರ

ಮಕರ

ವರ್ಷದ ಮೊದಲ ಮೂರು ತಿಂಗಳು ಹಾಗೂ ಸೆಪ್ಟೆಂಬರ್ ಹಾಗೂ ನವೆಂಬರ್ ಮಧ್ಯೆ ಉದ್ಯೋಗ ಹಾಗೂ ವೃತ್ತಿ ಬದುಕಿನಲ್ಲಿ ವಿಪರೀತ ಒತ್ತಡ ಇರುತ್ತದೆ. ವಕೀಲ ವೃತ್ತಿಯಲ್ಲಿ ಇರುವವರು, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವವರು ಆದಾಯ ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ತೀವ್ರಗೊಳಿಸಬೇಕಾಗುತ್ತದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮುಂದೆ ದಾರಿ ತೋಚದಂತೆ ಆಗುತ್ತದೆ. ಮಾನಸಿಕವಾಗಿ ಕೆಲ ಸಮಯ ಬಿಡುವ ತೆಗೆದುಕೊಳ್ಳಬೇಕು ಎಂದು ಬಲವಾಗಿ ಅನಿಸುವುದಕ್ಕೆ ಶುರು ಆಗುತ್ತದೆ. ಪಿತ್ರಾರ್ಜಿತವಾದ ಆಸ್ತಿ ವ್ಯವಹಾರಗಳಿಗಾಗಿಯೇ ಹೆಚ್ಚು ಸಮಯ ಮೀಸಲಿಡಬೇಕಾದ ಪರಿಸ್ಥಿತಿ ಎದುರಾಗುವುದರಿಂದ ಉದ್ಯೋಗ ಅಥವಾ ವೃತ್ತಿಯ ಕಡೆಗೆ ಗಮನ ನೀಡುವುದು ಕಷ್ಟವಾಗಿ ಪರಿಣಮಿಸಲಿದೆ. ಜನ್ಮ ಶನಿಯ ಪ್ರಭಾವದಿಂದಾಗಿ ಆಲಸ್ಯ ಸ್ವಭಾವ ಹೆಚ್ಚಾಗಲಿದೆ. ಅದರ ಪರಿಣಾಮವಾಗಿಯೇ ನಿಮ್ಮ ಮೇಲಧಿಕಾರಿಗಳ ನಂಬಿಕೆಯನ್ನು ಕಳೆದುಕೊಳ್ಳಲಿದ್ದೀರಿ. ವೃತ್ತಿಪರರು ಸುಲಭವಾಗಿ ಹಣ ಮಾಡುವುದು ಹೇಗೆ ಎಂಬ ಕಡೆಗೆ ಗಮನ ಹರಿಸಲಿದ್ದೀರಿ. ನಿಮ್ಮಲ್ಲಿ ಕೆಲವರು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ, ಎಚ್ಚರ.

ಕುಂಭ

ಕುಂಭ

ಈ ವರ್ಷ ದಿಢೀರನೇ ಉದ್ಯೋಗ ಬದಲಾಯಿಸುವ ಅಥವಾ ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮಗೆ ಇಷ್ಟ ಇಲ್ಲದಿದ್ದರೂ ಬದಲಾವಣೆಗೆ ಒಗ್ಗಿಕೊಳ್ಳಬಹುದಾದ ಅನಿವಾರ್ಯ ಎದುರಾಗಲಿದೆ. ಹಣದ ಆದಾಯ ಹೆಚ್ಚಿಸಿಕೊಳ್ಳಬೇಕು ಎಂಬ ಪ್ರಯತ್ನ ವರ್ಷದ ಮೊದಲ ಮೂರು ತಿಂಗಳು ಪ್ರಯತ್ನ ತೀವ್ರಗೊಳಿಸಲಿದ್ದೀರಿ. ಇದೇ ಪ್ರಯತ್ನ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಸಹ ಇರುತ್ತದೆ. ಆದರೆ ಆ ಪ್ರಯತ್ನ ಸಫಲವಾಗುವುದಿಲ್ಲ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಮೇಲಧಿಕಾರಿಗಳ ಕಿರುಕುಳ ಇರುತ್ತದೆ. ಇರುವ ಕೆಲಸವನ್ನು ಬಿಟ್ಟು, ಹೊಸ ವ್ಯವಹಾರ- ವ್ಯಾಪಾರ ಶುರು ಮಾಡಬೇಕು ಎಂಬ ಆಲೋಚನೆ ತೀವ್ರ ಆಗುತ್ತದೆ. ಆದರೆ ಈ ಅವಧಿಯಲ್ಲಿ ನಿಮ್ಮ ಏಕಾಗ್ರತೆ ಕೆಲಸದ ಕಡೆಗೆ ಹೆಚ್ಚಾಗಿರಬೇಕಾಗುತ್ತದೆ. ಇನ್ನು ವೃತ್ತಿಪರರು ಕಚೇರಿ ಬದಲಾವಣೆ, ನವೀಕರಣ ಎಂದು ಹೆಚ್ಚಿನ ಖರ್ಚು ಮಾಡದಿರುವುದು ಸೂಕ್ತ. ಇನ್ನು ಹೊಸಬರ ಜತೆಗೆ ಸೇರಿ ಪಾರ್ಟನರ್ ಷಿಪ್ ವ್ಯವಹಾರವಂತೂ ಸುತರಾಂ ಸರಿಯಲ್ಲ. ನಿಮ್ಮ ಕಣ್ಣಿಗೆ ಕಾಣುವ ಶತ್ರುಗಳಿಗಿಂತ ಕಾಣದ ಶತ್ರುಗಳಿಂದಲೇ ಹೆಚ್ಚಿನ ಉಪದ್ರವ ಇರುತ್ತದೆ.

ಮೀನ

ಮೀನ

ವರ್ಷದ ಮೊದಲ ಮೂರು ತಿಂಗಳು ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ಮಧ್ಯೆ ಅದೃಷ್ಟವು ನಿಮ್ಮ ಪಾಲಿಗೆ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಇನ್ನೇನು ಕೆಲಸ ಆಗಿಯೇ ಹೋಯಿತು ಎಂದುಕೊಳ್ಳುವ ಹೊತ್ತಿಗೆ ತುದಿಯಲ್ಲಿ ನಿಂತುಹೋಗಿ, ತಡವಾಗಲಿದೆ. ಕೆಲವು ಕೋರ್ಸ್ ಗಳನ್ನು ಪೂರ್ಣಗೊಳಿಸದ ಹೊರತು ಬಡ್ತಿಯನ್ನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಹೆಚ್ಚು ಆಲೋಚನೆ ಮಾಡದೆ ಆ ಕಡೆಗೆ ಹೆಜ್ಜೆ ಇಡಿ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಹಾಗೂ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಉದ್ಯೋಗಸ್ಥರಿಗೆ ಕೆಲಸದಲ್ಲಿ ಬದಲಾವಣೆ ಆಗಲಿದೆ. ಬೇರೆ ಇಲಾಖೆಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಆದರೆ ಈ ಅವಧಿಯಲ್ಲಿ ಆದಾಯ ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು. ತೀರಾ ಚಿಂತೆ ಪಡುವಂಥ ಅಗತ್ಯ ಇಲ್ಲ. ವೃತ್ತಿಪರರು ಆದಾಯದ ಸದ್ಬಳಕೆ ಬಗ್ಗೆ ಸರಿಯಾಗಿ ಯೋಚನೆ ಮಾಡಿಕೊಳ್ಳಬೇಕು. ತುಂಬ ಒಳ್ಳೆ ಹೆಸರಿದೆ ಎಂದು ನಂಬಿಕೊಂಡು, ಸಂಸ್ಥೆ ಅಥವಾ ವ್ಯಕ್ತಿಯೊಂದಿಗೆ ಮಾಡಿಕೊಂಡ ಒಪ್ಪಂದದಿಂದ ನಷ್ಟವಾಗುವ ಸಾಧ್ಯತೆಗಳಿವೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ವ್ಯವಹಾರ ಒಪ್ಪಂದಗಳನ್ನು ಮಾಡಿಕೊಳ್ಳಿ.

English summary
2021 Career And Profession Yearly Horoscope in Kannada: Read your Varshika Bhavishya for all 12 rashi in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X