• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಮೋಷನ್ ಸಿಗುತ್ತಾ, ಸಂಬಳ ಜಾಸ್ತಿ ಆಗುತ್ತಾ?: 12 ರಾಶಿ ಉದ್ಯೋಗ ಭವಿಷ್ಯ

By ಪಂಡಿತ್ ಶಂಕರ್ ಭಟ್
|
   ಕಾರ್ತೀಕ ಅಮಾವಾಸ್ಯೆಯ ದಿನ ಶನೈಶ್ಚರ ಪೂಜೆ ಬಹಳ ವಿಶೇಷ | Oneindia Kannada

   ಹೊಸ ವರ್ಷದಲ್ಲಿ ಈ ಕೆಲಸ ಬದಲಾಯಿಸಬೇಕು. ನಾನು ಬದಲಿಸಲೋ ಬೇಡವೋ? ನನ್ನ ಬಾಸ್ ಜತೆಗೆ ಸಿಕ್ಕಾಪಟ್ಟೆ ಜಗಳ ಆಡಿದ್ದೀನಿ ಪ್ರಮೋಷನ್ ಸಿಗುತ್ತೋ ಇಲ್ಲವೋ? ಊರಿನಲ್ಲಿನ ಆಸ್ತಿ ಮಾರಿ ಹೊಸ ವ್ಯಾಪಾರ ಶುರು ಮಾಡುವ ಆಲೋಚನೆ ಇದೆ. ಅದು ಯಶಸ್ವಿ ಆಗಬಹುದಾ? ಹೀಗೆ ಒಬ್ಬೊಬ್ಬರ ಪ್ರಶ್ನೆ ಬೇರೆ ಬೇರೆ ಥರ ಇರುತ್ತದೆ.

   ಮುಖ್ಯವಾಗಿ ಉದ್ಯೋಗ- ವ್ಯಾಪಾರ- ವ್ಯವಹಾರ ಹೇಗೆ ಕೈ ಹಿಡಿಯಲಿದೆ. ಹೊಸ ವರ್ಷದ ಭವಿಷ್ಯ ಹೇಗಿರುತ್ತದೆ ಎಂಬುದು ಎಲ್ಲರ ಧಾವಂತ. ಆದ್ದರಿಂದ ಆ ಪ್ರಶ್ನೆಗಳಿಗಷ್ಟೇ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರೆ ಹೇಗೆ ಅಂತ ಅನಿಸಿದ್ದರಿಂದ 2018ನೇ ಇಸವಿ ದ್ವಾದಶ ರಾಶಿಗಳ ಪಾಲಿಗೆ ಉದ್ಯೋಗ ಜೀವನ ಅಥವಾ ವೃತ್ತಿ ಜೀವನದ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

   ಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂ

   ಪರಿಹಾರ ಏನು ಎಂಬ ಪ್ರಶ್ನೆ ಕೂಡ ಅದರ ಬೆನ್ನ ಹಿಂದೆಯೇ ಬರುತ್ತದೆ. ಹಲವರು ತಮ್ಮ ಗುಣ-ಸ್ವಭಾವದಲ್ಲೇ ಬದಲಾವಣೆ ಮಾಡಿಕೊಂಡರೆ ಅಷ್ಟರ ಮಟ್ಟಿಗೆ ಸಮಸ್ಯೆಗಳು ತಡೆದಂತೆ ಅಥವಾ ನಿವಾರಿಸಿಕೊಂಡಂತೆ. ಇನ್ನು ಮುಂದೆ ಹೀಗಾಗಬಹುದು ಎಂದು ತಿಳಿದರೆ ಅದಕ್ಕೆ ಬೇಕಾದ ಮುಜಾಗ್ರತೆಯೂ ವಹಿಸಬಹುದು. ಇನ್ನೇಕೆ ತಡ, ನಿಮ್ಮ ರಾಶಿಯ ಫಲವನ್ನು ಓದಿರಿ.

   ಮೇಷ

   ಮೇಷ

   ನೀವು ಹೆಚ್ಚಿನ ಪರಿಶ್ರಮ ಹಾಕುವ ಅಗತ್ಯ ಇದೆ. ಹೊಸ ಅವಕಾಶಗಳು ಜತೆಗೆ ಕಲಿಯಲು ಪಾಠಗಳಿವೆ. ಉದ್ಯೋಗ ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡುತ್ತೀರಿ ಮತ್ತು ಸಂಪಾದನೆಯಲ್ಲೂ ಸಮಾಧಾನಕರ ಬದಲಾವಣೆ ಇದೆ. ಆದರೆ ಕೌಟುಂಬಿಕ ಜೀವನದಲ್ಲಿ ಕೆಲ ಸಮಸ್ಯೆಗಳಾಗಬಹುದು.

   ಮಾರ್ಚ್ ನಿಂದ ಜುಲೈವರೆಗೆ ಎಚ್ಚರದಿಂದಿರಿ. ಖರ್ಚು ಕೈ ಮೀರಿ ಹೋಗುತ್ತದೆ. ವಿದೇಶದ ವ್ಯವಹಾರಗಳನ್ನು ಮಾಡಬೇಡಿ. ನೀವು ವ್ಯಾಪಾರಸ್ಥರಾಗಿದ್ದಲ್ಲಿ ಯಾವುದೇ ಹೊಸ ವ್ಯಾಪಾರ ಶುರು ಮಾಡಬೇಡಿ. ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ನಷ್ಟವನ್ನು ಸೂಚಿಸುತ್ತಿದೆ.

   ವೃಷಭ

   ವೃಷಭ

   ಈ ವರ್ಷ ಉದ್ಯೋಗದಲ್ಲಿ ಪ್ರಗತಿಯಿದೆ. ಆದರೆ ಮಾರ್ಚ್ ಹಾಗೂ ಜುಲೈ ಮಧ್ಯೆ ಯಾವುದೇ ಕಾರಣಕ್ಕೆ ಕೆಲಸ ಬದಲಾಯಿಸಬೇಡಿ. ಈ ಸಂದರ್ಭದಲ್ಲಿ ನಿಮ್ಮ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುವಂಥ ವಿಚಾರವನ್ನು ಮನಸ್ಸಿನಿಂದ ತೆಗೆದು ಹಾಕಿ.

   ಮೇ ನಂತರ ಬಾಳ ಸಂಗಾತಿಗೆ ಸಕಾರಾತ್ಮಕ ಸಮಯ. ನಿಮಗೆ 'ಬಡ್ತಿ' ಕಾದಿದೆ! ಒಂದು ವೇಳೆ ವಿದೇಶದಲ್ಲಿ ಉದ್ಯೋಗಕ್ಕಾಗಿ ವಿದೇಶದಲ್ಲೇ ವಾಸ್ತವ್ಯ ಹೂಡಬೇಕು ಅಂತಿದ್ದರೆ ಹೊಸ ವರ್ಷ ಭರವಸೆದಾಯಕ ಆಗಿದೆ. ಈ ಹಿಂದೆ ತೆಗೆದುಕೊಂಡಿದ್ದ ಸಾಲವನ್ನು ಚುಕ್ತಾ ಮಾಡುತ್ತೀರಿ.

   ಮಿಥುನ

   ಮಿಥುನ

   ಹೊಸ ವ್ಯವಹಾರ ಮತ್ತು ಬೆಳವಣಿಗೆಯ ಅವಕಾಶಗಳು ಎದುರಿಗಿವೆ. ಆದರೆ ಮೇ ಹಾಗೂ ನವೆಂಬರ್ ಮಧ್ಯೆ ಎಚ್ಚರವಾಗಿರಿ. ಆ ಸಂದರ್ಭದಲ್ಲಿ ನಿಮ್ಮ ಶತ್ರುಗಳ ಚಟುವಟಿಕೆ ಹೆಚ್ಚಾಗುತ್ತದೆ. ಅಪಘಾತ/ಗಾಯ ಆಗುವ ಸಾಧ್ಯತೆಗಳು ಕೂಡ ಇವೆ. ನಿಮ್ಮ ಶಕ್ತಿ ಬಹಳ ಹೆಚ್ಚಾಗುತ್ತದೆ. ರಾಹುಲ್ ನಿಮ್ಮ ಭಾಷೆಯ ಮೇಲೆ ಪರಿಣಾಮ ಬೀರುವುದರಿಂದ ಮಾತಿನ ಮೂಲಕ ಯಾವುದೇ ವಿವಾದಕ್ಕೆ ಸಿಲುಕಬೇಡಿ.

   ಒಟ್ಟಾರೆ, ಯಾರಿಗಾದರೂ ಹಣ ಕೊಡುವಾಗ ಎಚ್ಚರಿಕೆಯಿಂದ ಇರಿ. ಪರಿಶ್ರಮ ಹಾಕಿ ಕೆಲಸ ಮಾಡಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗುತ್ತದೆ. ವಿವಾಹಿತರಿಗೆ ಅಕ್ಟೋಬರ್ ನಂತರ ಸ್ವಲ್ಪ ಕಷ್ಟದ ಸಮಯ.

   ಕರ್ಕಾಟಕ

   ಕರ್ಕಾಟಕ

   ಸ್ವಲ್ಪ ಗೊಂದಲ ಹಾಗೂ ಒತ್ತಡ ಎದುರಾಗುತ್ತದೆ. ಆದರೆ ಆಶಾವಾದಿಗಳಾಗಿ ಇದ್ದರೆ ಮೇಲ್ನೋಟಕ್ಕೆ ಕಾಣುವಷ್ಟು ಬದುಕು ಕಠಿಣವಾಗುವುದಿಲ್ಲ. ದಿಢೀರ್ ಎಂದು ಕಾಣಿಸಿಕೊಳ್ಳುವ ಅವಕಾಶವೊಂದು ಹಣವನ್ನು ಕೊಡಮಾಡಲಿದೆ. ಆ ಹಣ ಬಾಡಿಗೆಯಿಂದ ಬರುವಂಥದ್ದಾಗಿರಬಹುದು ಅಥವಾ ಪಿತ್ರಾರ್ಜಿತ ಆಸ್ತಿ ಮಾರಿದಂಥದ್ದಾಗಿರಬಹುದು ಅಥವಾ ಹೊಸ ವ್ಯಾಪಾರದ ಅವಕಾಶ ಇರಬಹುದು.

   ಕೆಲಸದ ಒತ್ತಡ ವಿಪರೀತ ಹೆಚ್ಚಾಗುತ್ತದೆ. ನಿಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನವನ್ನು ಸಂಭಾಳಿಸಬೇಕು. ಇಲ್ಲದಿದ್ದರೆ ಅದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ.

   ಸಿಂಹ

   ಸಿಂಹ

   ಮಾನಸಿಕ ಸಮಾಧಾನ ದೊರೆಯುತ್ತದೆ. ಆದರೆ ನಿಮ್ಮ ಕೋಪ ಅದನ್ನು ಕಸಿದುಕೊಳ್ಳದಂತೆ ನೋಡಿಕೊಳ್ಳಿ. ನಿಮ್ಮ ಶತ್ರುಗಳಂತೂ ತಮ್ಮ ಪ್ರಯತ್ನ ಮುಂದುವರಿಸುತ್ತಾರೆ. ಆದರೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕೆಂದು ನಿಮಗೆ ಗೊತ್ತಿದೆ. ಕೋರ್ಟ್ ನಲ್ಲಿ ವ್ಯಾಜ್ಯಗಳಿದ್ದರೆ ನಿಮ್ಮ ಪರವಾಗಿ ಆಗುವಂತಿದೆ.

   ನೀವು ವ್ಯಾಪಾರಿಗಳಾಗಿದ್ದಲ್ಲಿ ಮಾರುಕಟ್ಟೆಯಲ್ಲಿನ ನಿಮ್ಮ ಸ್ಪರ್ಧಿಗಳ ಮೇಲೆ ಕಣ್ಣಿಡಿ. ಒಟ್ಟಾರೆ ನಿಮ್ಮ ವ್ಯಾಪಾರ ವೃದ್ಧಿಸುತ್ತದೆ.ಮಾರ್ಚ್ ಹಾಗೂ ಜುಲೈ ಮಧ್ಯೆ ಸಾಕಷ್ಟು ಪ್ರಯಾಣ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

   ಕನ್ಯಾ

   ಕನ್ಯಾ

   ಸಂವಹನ ಹಾಗೂ ಬುದ್ಧಿಮತ್ತೆ ನಿಮ್ಮ ಅಸ್ತ್ರಗಳು. ತುಂಬ ಒಳ್ಳೆ ಎನರ್ಜಿ ಕೂಡ ಇರುತ್ತದೆ. ಆದರೆ ಮೇ ಹಾಗೂ ನವೆಂಬರ್ ಮಧ್ಯೆ ನಿಮ್ಮ ಸಿಟ್ಟು ವಿಪರೀತವಾಗುತ್ತದೆ. ಹೊಸದಾಗಿ ಮನೆ ಖರೀದಿ ಮಾಡುವ ಆಲೋಚನೆಯಿದ್ದರೆ ಅದನ್ನು ಕೈ ಬಿಡಿ. ವ್ಯಾಪಾರದ ವಿಚಾರದಲ್ಲಿ ವರ್ಷದ ಎರಡನೇ ಅವಧಿಗೆ ಯಾರನ್ನೂ ನಂಬಬೇಡಿ.

   ನಿಮ್ಮ ಬಾಳಸಂಗಾತಿ ಹಾಗೂ ಅವರ ಕುಟುಂಬದವರಿಗೆ ಗೌರವ ನೀಡಿದರೆ ಬದುಕು ಸಿಹಿಯಾಗಿರುತ್ತದೆ.

   ತುಲಾ

   ತುಲಾ

   ಉದ್ಯೋಗ ನಿಮ್ಮ ಆದ್ಯತೆಯಾಗುತ್ತದೆ. ಸಾಮಾಜಿಕವಾಗಿಯೂ ತುಂಬ ಚಟುವಟಿಕೆಯಿಂದ ಇರುತ್ತೀರಿ. ಈ ವರ್ಷ ಹೆಚ್ಚು ವಾಸ್ತವವಾದಿಗಳಾಗಿ ಯೋಚನೆ ಮಾಡಿ. ಯಾರಿಗೇ ಆದರೂ ಸುಳ್ಳುಸುಳ್ಳೇ ಭರವಸೆ ಕೊಡಬೇಡಿ. ನಿಮ್ಮನ್ನು ನಂಬದವರ ವಿಶ್ವಾಸವನ್ನು ಬಲವಂತವಾಗಿ ಪಡೆಯುವ ಪ್ರಯತ್ನ ಬೇಡ.

   ಮೇನಿಂದ ನವೆಂಬರ್ ವರೆಗೆ ಕೌಟುಂಬಿಕ ಜೀವನ ಅಷ್ಟು ಚೆನ್ನಾಗಿರುವುದಿಲ್ಲ. ಆದರೆ ಈ ಅವಧಿಯಲ್ಲಿ ಬಾಳಸಂಗಾತಿಗೆ ಧನಲಾಭ ಆಗುತ್ತದೆ. ಮಾರ್ಚ್ ಹಾಗೂ ಜುಲೈ ಮಧ್ಯೆ ಕೆಲಸ ಬದಲಿಸುವಂತಹ ನಿರ್ಧಾರ ತೆಗೆದುಕೊಳ್ಳಬೇಡಿ.

   ವೃಶ್ಚಿಕ

   ವೃಶ್ಚಿಕ

   ವರ್ಷದ ಶುರುವಿನಲ್ಲಿ ಉತ್ತಮ ಆರಂಭ ಇದೆ. ಆದರೆ ನಿಮ್ಮ ಎಲ್ಲ ಶಕ್ತಿಯನ್ನೂ ಬಳಸಬೇಕು. ಕೆಲವು ವ್ಯಕ್ತಿಗಳು ಮತ್ತು ಅವರ ಮಾತುಕತೆಯಿಂದ ಅಸಹಿಷ್ಣುತೆ ಆಗುತ್ತದೆ. ಈ ಸಮಯ ಗಂಭೀರವಾಗಿದ್ದು ಮತ್ತು ಇನ್ನೊಬ್ಬರಿಗೆ ಸಹಾಯ ಮಾಡುವಂತಿದೆ. ವಿದೇಶದಲ್ಲೇ ನೆಲೆಸಬೇಕು ಅಂತಿದ್ದರೆ ಮಾರ್ಚ್ ಹಾಗೂ ಜುಲೈ ಮಧ್ಯೆ ಪ್ರಯತ್ನಿಸಿ.

   ವಿದೇಶ ಹಾಗೂ ತೀರ್ಥ ಯಾತ್ರೆ ಅವಕಾಶಗಳು ಈ ಸಂದರ್ಭದಲ್ಲೇ ಇವೆ. ಯಾವುದೇ ಕಾರಣಕ್ಕೂ ಸಾಲ ಮಾಡಿ ಹೊಸ ವ್ಯವಹಾರ ಆರಂಭಿಸಬೇಡಿ. ಸಂಬಳ ನೀವಂದುಕೊಂಡಷ್ಟು ಏರಿಕೆ ಆಗದಿದ್ದಲ್ಲಿ ಕೆಲಸ ಬದಲಿಸುವ ನಿರ್ಧಾರ ಬೇಡ.

   ಧನು

   ಧನು

   ನೀವು ಗಂಭೀರರಾಗುತ್ತೀರಿ, ಶಿಸ್ತು ಮೈಗೂಡುತ್ತದೆ ಹಾಗೂ ಉದಾರಿಗಳಾಗುತ್ತೀರಿ. ಏಪ್ರಿಲ್ ಹಾಗೂ ಸೆಪ್ಟೆಂಬರ್ ಮಧ್ಯೆ ನಿಮ್ಮ ಮನಸ್ಥಿತಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳಬೇಡಿ. ವಿದೇಶದಲ್ಲಿ ನೆಲೆಸಲು ಇದು ಸೂಕ್ತ ಸಮಯ.

   ಉದ್ಯೋಗ ಹಾಗೂ ಸಂಪಾದನೆಯು ಮೇಲ್ಮುಖ ಪ್ರಯಾಣವನ್ನು ತೋರಿಸುತ್ತಿದೆ. ಆದರೆ ಇದು ತೀವ್ರ ಜಿದ್ದಾಜಿದ್ದಿ ಹಾಗೂ ಪೈಪೋಟಿ ಇಲ್ಲದೆ ಸಾಧ್ಯವಿಲ್ಲ. ಮಾರ್ಚ್ ಹಾಗೂ ಜುಲೈ ಮಧ್ಯದ ಅವಧಿಯಲ್ಲಿ ಉದ್ಯೋಗ ಮತ್ತು ಹಣಕಾಸಿನ ವಿಚಾರದಲ್ಲಿ ಜಾಗ್ರತೆಯಿಂದ ಇರಿ. ಆಸ್ತಿ ಖರೀದಿ ಅನುಕೂಲ ಕಾಣುತ್ತಿದೆ. ಆದರೆ ಅದು ಅಕ್ಟೋಬರ್ ಮುಂಚೆ ಆಗಬೇಕು.

   ಮಕರ

   ಮಕರ

   ನಿಮ್ಮ ಪ್ರತಿಭೆ ಹಾಗೂ ಕೌಶಲ ಬೆಳಕಿಗೆ ಬರುತ್ತವೆ. ಸಮಾಧಾನವಾಗಿರಿ ಹಾಗೂ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಇವೆರಡನ್ನೂ ಪಾಲಿಸಿದರೆ ನಿಮಗೆ ಹಿನ್ನಡೆ ಆಗುವುದಿಲ್ಲ. ಮಾರ್ಚ್ ಹಾಗೂ ಜುಲೈ ಮಧ್ಯದ ಅವಧಿ ಸ್ವಲ್ಪ ಸವಾಲಿನದಾಗಿದ್ದು, ಯಾವುದೇ ಕಾರಣಕ್ಕೂ ಕೆಲಸದಲ್ಲಿ ಬದಲಾವಣೆ ಮಾಡಬೇಡಿ.

   ವ್ಯವಹಾರ ಪಾಲುದಾರಿಕೆ ಈ ವರ್ಷ ಭರವಸೆದಾಯಕವಾಗಿಲ್ಲ. ಎಲ್ಲ ಕಾಗದ ಪತ್ರಗಳನ್ನು ನೀವೇ ಕಣ್ಣಾರೆ ನೋಡಿ, ಓದಿ ಆ ನಂತರವೇ ಒಪ್ಪಿಗೆ ಕೊಡಿ. ಏಪ್ರಿಲ್ ಹಾಗೂ ಸೆಪ್ಟೆಂಬರ್ ಮಧ್ಯೆ ವಿದೇಶಿ ಮೂಲದಿಂದ ಲಾಭ ಬರುವಂತಿದೆ. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ನೀವು ಅಂದುಕೊಂಡ ಫಲಿತಾಂಶಕ್ಕಾಗಿ ಇನ್ನೂ ಸ್ವಲ್ಪ ಕಾಯಬೇಕು. ಸಂಬಂಧದಲ್ಲಿ ಭಿನ್ನಾಭಿಪ್ರಾಯ ಬರದಂತೆ ಎಚ್ಚರ.

   ಕುಂಭ

   ಕುಂಭ

   ಅದೆಷ್ಟು ಮೂಲದಿಂದ ಹಣ ಗಳಿಸಬಹುದೋ ಎಂದು ಎಲ್ಲ ಕಡೆಗೂ ಕಣ್ಣು ಹರಿಸುತ್ತಿದ್ದೀರಿ. ಆದರೆ ತಾಳ್ಮೆ ಮುಖ್ಯ. ನಿಮಗೆ ಸಿಗಬೇಕಾದ ಮಾನ್ಯತೆ ಖಂಡಿತಾ ಸಿಗುತ್ತದೆ. ರಾಜಿ ಮಾಡಿಕೊಳ್ಳಬೇಕಾದ ಸನ್ನಿವೇಶ ಬಂದರೆ ಹೆದರಬೇಡಿ. ಹೊಸ ಪರಿಚಯಗಳಿಂದ ಈ ವರ್ಷ ಅನುಕೂಲಗಳಿವೆ.

   ಪದೇಪದೇ ಮನಸ್ಸು ಬದಲಾಯಿಸುವುದರ ದುಷ್ಪ್ರಭಾವವನ್ನು ಅನುಭವಿಸಬೇಕಾಗುತ್ತದೆ. ಇದರಿಂದ ವೈಯಕ್ತಿಕ ಹಾಗೂ ವೃತ್ತಿ ಜೀವನದ ಸಂಬಂಧಕ್ಕೆ ತೊಡಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಹೇಗೆ ಮಾತನಾಡಬೇಕು ಎಂಬ ಬಗ್ಗೆ ಅರಿವಿರಲಿ. ಇದರಿಂದ ವೇಗವಾದ ಪ್ರಗತಿ ನಿರೀಕ್ಷಿಸಬಹುದು.

   ಮೀನ

   ಮೀನ

   ನಿಮ್ಮ ಅಧ್ಯಾತ್ಮದ ಬಗೆಗಿನ ಆಸಕ್ತಿ ಹೆಚ್ಚುತ್ತದೆ. ಶಾಂತಿ- ನೆಮ್ಮದಿ ದೊರೆಯುತ್ತದೆ. ಆದರೆ ಉದ್ಯೋಗ ಜೀವನದಲ್ಲಿ ಹೆಚ್ಚು ಒತ್ತಡ ಆಗುತ್ತದೆ. ಪರಿಸ್ಥಿತಿ ನಿಮ್ಮ ಕೈ ಮೀರಿ ಹೋಗುತ್ತಿರುವುದು ಗಮನಕ್ಕೆ ಬರುತ್ತದೆ. ಇದರಿಂದ ಉದ್ಯೋಗದಲ್ಲಿ ವರ್ಗಾವಣೆ ಕೂಡ ಆಗಲಿದೆ. ಅಕ್ಟೋಬರ್ ನಂತರವೇ ಉದ್ಯೋಗದಲ್ಲಿ ಸ್ಥಿರತೆ ಕಾಣುತ್ತದೆ.

   ತಾಳ್ಮೆಯಿಂದ ಇರುವುದನ್ನು ರೂಢಿ ಮಾಡಿಕೊಳ್ಳಿ ಹಾಗೂ ನಿರೀಕ್ಷೆಯನ್ನು ಕಡಿಮೆ ಮಾಡಿಕೊಳ್ಳಿ. ಏಪ್ರಿಲ್ ಹಾಗೂ ಸೆಪ್ಟೆಂಬರ್ ಮಧ್ಯೆ ಫಲಿತಾಂಶಗಳು ನಿಧಾನ ಆಗುತ್ತವೆ. ತಾಳ್ಮೆ ಕಳೆದುಕೊಳ್ಳದಿರಿ.

   English summary
   Career yearly Predictions for 12 zodiac signs : Career predictions in Kannada language for 2018 by renowned Karnataka astrologer Pandit Shankar Bhat.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X