ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಯಾ ರಾಶಿ ವರ್ಷ ಭವಿಷ್ಯ: ಘಟ ಇದ್ದರಷ್ಟೇ ಮಠ, ಆರೋಗ್ಯ ಜೋಪಾನ

ಕನ್ಯಾ ರಾಶಿಯವರು ಈ ವರ್ಷ ಆರೋಗ್ಯದ ಕಡೆಗೆ ಜಾಸ್ತಿ ಗಮನಹರಿಸಬೇಕು. ವರ್ಷಾಂತ್ಯದ ವೇಳೆಗೆ ನೀವು ಅಂದುಕೊಂಡ ಹಾಗೂ ನಿರೀಕ್ಷಿಸದ ಉತ್ತಮ ಕೆಲಸಗಳು ಅಗುತ್ತವೆ.

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ಕನ್ಯಾ ರಾಶಿಯವರಿಗೆ ಈ ವರ್ಷ ಹೆಚ್ಚಿನ ವಿಚಿತ್ರ, ವಿಶೇಷ ತಿರುವುಗಳು ಕಾಣದಿದ್ದರೂ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಗಮನ ಹರಿಸಲೇಬೇಕಿದೆ. ನಿಮ್ಮ ಆರೋಗ್ಯದತ್ತ ಗಮನ ಹರಿಸುವುದು ಅಂದರೆ ಆಹಾರ ಪದ್ಧತಿಯತ್ತ ಗಮನ ಹರಿಸುವುದೆಂದರ್ಥ. ಕಾರಣ ಕೇವಲ ಆಹಾರದ ವ್ಯತ್ಯಾಸದಿಂದಲೇ ಈ ವರ್ಷ ನೀವು ಆರೋಗ್ಯ ಹಾಳು ಮಾಡಿಕೊಳ್ಳಲಿದ್ದೀರಿ ಎಂದರೆ ಆಶ್ಚರ್ಯ ಆದರೂ ನಂಬಲೇ ಬೇಕು.

ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಹೆಚ್ಚು ಖಾರ ಹಾಗೂ ಮಸಾಲೆ ಇರುವ ಪದಾರ್ಥಗಳನ್ನು ವರ್ಜಿಸಿದಷ್ಟೂ ಉತ್ತಮ. ಆಹಾರ ಸೇವನೆಯ ಇನ್ನೊಂದು ಬಹು ಮುಖ್ಯವಾಗಿ ನೀವು ಪಾಲಿಸಲೇ ಬೇಕಾದ ಅಂಶ ಎಂದರೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ. ಹೌದು ಕೇವಲ ಉತ್ತಮ ಗುಣಮಟ್ಟದ ಹಾಗೂ ಕೊಬ್ಬಿನಾಂಶ ಕಡಿಮೆ ಇರುವ ಆಹಾರ ಸೇವನೆ ಸಾಲದು. ಜೊತೆಯಲ್ಲಿ ಆಹಾರವನ್ನು ಪ್ರತಿದಿನ ನಿಗದಿತ ಸಮಯಕ್ಕೆ ಸರಿಯಾಗಿ ಸೇವಿಸಬೇಕು.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]

Virgo

ಹೀಗೆ ಆಹಾರ ವಿಚಾರದಲ್ಲಿ ಈ ವರ್ಷ ಎಚ್ಚರಿಕೆ ವಹಿಸಿದರೆ ಈ ನೂತನ ವರ್ಷದ ಸಮಸ್ಯೆ ಅರ್ಧ ಪರಿಹಾರವಾದಂತೆ ಎಂದಿಟ್ಟುಕೊಳ್ಳಿ. ಇನ್ನು ವಿವಾಹಿತ ಸ್ತ್ರೀಯರು ತವರು ಮನೆಯೊಂದಿಗಿನ ಸಂಬಂಧಗಳ ಸೂಕ್ಷ್ಮತೆ ಅರಿತು ವ್ಯವಹರಿಸ ಬೇಕು. ಅಲ್ಲಿಂದ ದುಡ್ಡು, ಬಂಗಾರ ಅಥವಾ ಸ್ಥಿರಾಸ್ತಿಗಳು ಬರಬೇಕಿದ್ದಲ್ಲಿ ಅಥವಾ ಹಕ್ಕಿದೆ ಆದುದರಿಂದ ನನಗೂ ಬರಲೀ ಎಂದು ನೀವು ಆಸೆ ಪಟ್ಟಲ್ಲಿ ಈ ವರ್ಷ ಇದ್ದಕಿದ್ದಂತೆ ಮೈಮೇಲೆ ಎರಗಿ ಕೇಳಲು ಹೋಗದಿರಿ. ಸಮಯ ಸಂದರ್ಭ ನೋಡಿಕೊಂಡು ವ್ಯವಹರಿಸಿ.

ಕಾರಣ ನಿಮ್ಮ ನಡೆ ಅಥವಾ ಕೇಳುವ ವಿಧಾನ ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಒಂದೇ ನಿಮ್ಮ ಕಡೆಯಿಂದ ಅಥವಾ ಅವರ ಕಡೆಯಿಂದ ನ್ಯಾಯಾಲಯದ ಮೆಟ್ಟಿಲು ಹತ್ತುವ ಸಾಧ್ಯತೆಗಳಿವೆ. ಕನ್ಯಾ ರಾಶಿಯವರ ಈ ವರ್ಷದ ಇನ್ನೊಂದು ಸಮಸ್ಯೆ ಅಂದರೆ ಅವರು ಲೆಕ್ಕಾಚಾರದಲ್ಲಿ ಎಷ್ಟೇ ಪರಿಣಿತರಾಗಿದ್ದರೂ ಅವರ ಎಲ್ಲಾ ಅಂದಾಜೂ ಮೀರಿ ಖರ್ಚುಗಳನ್ನು ಮಾಡುತ್ತಾರೆ.[ನರೇಂದ್ರ ಮೋದಿ ಜನ್ಮ ಜಾತಕ - ಮುಖ್ಯಾಂಶಗಳು]

ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ದುಡಿದರೆ ಮಾತ್ರ ಖರ್ಚು ಮಾಡಬಹುದಾದುದರಿಂದ ಈ ವರ್ಷ ಬಹಳ ಉತ್ತಮವಾಗಿ ದುಡಿಯುತ್ತೀರಿ ಎನ್ನಬಹುದು. ಇನ್ನು ಗ್ರಹಚಾರ ಕೆಟ್ಟು, ಸಂಪಾದನೆ ಇಲ್ಲದವರು ಮೈಕೈಎಲ್ಲ ಸಾಲ ಮಾಡಿಕೊಂಡಾದರೂ ಖರ್ಚು ಮಾಡುತ್ತಾ ಇರುತ್ತಾರೆ.

ಇನ್ನು ವಿದೇಶ ಪ್ರಯಾಣದ ಕನಸು ಕಾಣುತ್ತಿರುವವರು ಅಥವಾ ಅದಕ್ಕಾಗಿ ಕಾಯುತ್ತ ಕುಳಿತವರಿಗೆ ಈ ವರ್ಷದ ಮಧ್ಯ ಅಥವಾ ಅಂತ್ಯದಲ್ಲಿ ಅವರ ಕನಸು ಸಾಕಾರಗೊಳ್ಳಲಿದೆ. ಅವಿವಾಹಿತರೂ ಸೆಪ್ಟೆಂಬರ್ ನಂತರ ಪ್ರಯತ್ನಿಸಿದರೆ ಉತ್ತಮ ವಿಧದಲ್ಲಿ ವಿವಾಹದ ಸಾಧ್ಯತೆಗಳು ಕಂಡು ಬರುತ್ತಿವೆ. ಭೂಮಿ ಖರೀದಿ, ನೂತನ ಗೃಹ ನಿರ್ಮಾಣ, ಬಂಗಾರ ಖರೀದಿ ಇತ್ಯಾದಿಗಲೆಲ್ಲವೂ ಈ ವರ್ಷದ ಮಧ್ಯ ಭಾಗದ ನಂತರ ಸಾಕಾರಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಒಟ್ಟಾರೆ ವರ್ಷ ಫಲ 3/5

ಜನವರಿಯಿಂದ ಏಪ್ರಿಲ್ ವರೆಗೆ

ಜನವರಿಯಿಂದ ಏಪ್ರಿಲ್ ವರೆಗೆ

ಈ ವರ್ಷದ ಆರಂಭದ ದಿನಗಳು ವಿಶೇಷವಾದ ವ್ಯತ್ಯಾಸಗಳನ್ನು ತೋರದಿದ್ದರೂ ಎರಡು ಅಥವಾ ಮೂರನೇ ತಿಂಗಳ ಪ್ರವೇಶ ಆದಲ್ಲಿ ನೀವು ಕೆಲವು ಪ್ರಮುಖವಾದ ವ್ಯತ್ಯಾಸಗಳನ್ನು ಕಾಣುತ್ತೀರಿ. ಈ ಮೊದಲೇ ತಿಳಿಸಿದಂತೆ ಆರೋಗ್ಯ ಹಾನಿಯತ್ತ ನಿಧಾನವಾಗಿ ನಿಮ್ಮ ಪ್ರಯಾಣ ನಿಮಗೆ ಅರಿವಿಲ್ಲದಂತೆ ಸಾಗುತ್ತದೆ. ಇಲ್ಲೇ ನೀವು ಎಚ್ಚರವಾಗಿ ಇರಬೇಕಾದುದು. ಅಜೀರ್ಣ ಅಥವಾ ಅಸಿಡಿಟಿ ಸಮಸ್ಯೆಗಳು ಪ್ರಮುಖವಾಗಿ ಕಾಡಬಹುದು. ಚಿಕ್ಕ ಸಮಸ್ಯೆಯನ್ನು ಅರಿವಿಲ್ಲದೆ ದೊಡ್ಡದಾಗಿಸಿಕೊಂಡು ಆಸ್ಪತ್ರೆ- ವೈದ್ಯರು ಎಂದು ಸ್ವಲ್ಪ ಖರ್ಚು
ಹಾಗೂ ಓಡಾಟಗಳನ್ನು ವೃಥಾ ಹೆಚ್ಚು ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಹಲವು ವೈದ್ಯರು ಹಾಗೂ ಹತ್ತು ವಿಧದ ಔಷಧಿ ಮಾಡಿ ವ್ಯಥೆ ಪಡುವುದರ ಬದಲು ನಿಧಾನ ಆದರೂ ಪರವಾಗಿಲ್ಲ ಉತ್ತಮ ಆಯುರ್ವೇದ ಪದ್ಧತಿ ಅನುಸರಿಸಿ. ಆಲಸ್ಯ ಸಹ ನಿಮ್ಮಲ್ಲಿ ಹೆಚ್ಚಾಗಬಹುದು. ಇಲ್ಲಸಲ್ಲದ ಕಾರಣಗಳನ್ನು ಕೊಡುತ್ತ ನಿಮಗೆ ವಹಿಸಿದ ಕೆಲಸಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತ ಇರುತ್ತೀರಿ. ದೂರ ಪ್ರಯಾಣಗಳಿಗೆ ಈ ಸಮಯದಲ್ಲಿ ಕರೆ ಬಂದರೂ ಸಹ ಪ್ರಯಾಣ ಬೆಳೆಸುವುದು ಅಷ್ಟು ಉಚಿತವಾಗಿ ಕಾಣುತ್ತಿಲ್ಲ.

ಮೇನಿಂದ ಅಗಸ್ಟ್ ವರೆಗೆ

ಮೇನಿಂದ ಅಗಸ್ಟ್ ವರೆಗೆ

ಈ ನಾಲ್ಕು ತಿಂಗಳು ನಿಮಗೆ ಅನುಭವಕ್ಕೆ ಬರುವಂಥ ಬದಲಾವಣೆಗಳನ್ನು ಕಾಣುತ್ತೀರಿ. ಅದರಲ್ಲಿಯೂ ದುಡಿದ ಹಣವನ್ನು ಉಳಿಸಲಾಗದೆ ಚಿಂತಿಸುತ್ತೀರಿ. ನೀವು ಎಷ್ಟೇ ಜಾಗ್ರತೆ ವಹಿಸಿ ಖರ್ಚು ಮಾಡುತ್ತಿದ್ದರೂ ಎಲ್ಲೋ ನಿಮಗೆ ತಿಳಿಯದೇ ಅಥವಾ ತಿಳಿದರೂ ನೀವು ಏನನ್ನೂ ಮಾಡಲಾಗದ ಸ್ಥಿತಿಯಲ್ಲಿ ಅನಿವಾರ್ಯವಾಗಿ ಖರ್ಚು ಮಾಡಲೇ ಬೇಕಾದ ವಾತಾವರಣ ಉದ್ಭವಿಸುತ್ತದೆ. ಇದೇ ಸಮಯದಲ್ಲಿ ಹೊಸದಾದ ವ್ಯವಹಾರಗಳಲ್ಲಿ ಹಣ ವಿನಿಯೋಗ ಮಾಡುವುದು ಬೇಡ. ಇನ್ನು ಮಾಡಲೇ ಬೇಕಾದಲ್ಲಿ ಈ ಅಗಸ್ಟ್ ಕಳೆದ ನಂತರ ಆ ವಿಚಾರದಲ್ಲಿ ಚಿಂತನೆಯನ್ನು ಮಾಡಿ. ಯಾರಿಗೂ ದೊಡ್ಡ ಪ್ರಮಾಣದಲ್ಲಿ ಸಾಲ ಕೊಡಬೇಡಿ ಹಾಗೂ ಯಾರಿಂದಲೂ ಈ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆಯಲೂ ಹೋಗದಿದ್ದರೆ ಉತ್ತಮ. ಈ ಸಮಯದಲ್ಲಿ ಪ್ರಮುಖವಾಗಿ ನೀವು ಗಮನಿಸ ಬೇಕಾದ ವಿಚಾರ ಅಂದರೆ ಯಾರೂ ನಿಮ್ಮ ಹೆಸರನ್ನು ದುರುಪಯೋಗ ಮಾಡಿಕೊಂಡು ತಮ್ಮ ಕೆಲಸಗಳನ್ನು ಮಾಡಿಕೊಳ್ಳದಂತೆ ಎಚ್ಚರವಹಿಸಬೇಕು. ಅದೇ ಸಮಯದಲ್ಲಿ ನಿಮ್ಮ ಸ್ನೇಹಿತರೊಂದಿಗೂ ಸಹ ಉತ್ತಮ ಸಂಬಂಧಗಳು ಹಾಗೆ ಇರುವಂತೆ ನೋಡಿಕೊಳ್ಳುವುದು ಅಷ್ಟೇ ಪ್ರಮುಖವಾದ ವಿಚಾರ.

ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ

ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ

ವರ್ಷದ ಈ ಕೊನೇ ನಾಲ್ಕು ತಿಂಗಳು ನಿಮಗೆ ಬಂಪರ್ ಗಿಫ್ಟ್ ತರಹ ಇರುತ್ತದೆ. ಎಲ್ಲಾ ನಿಂತು ಹೋದ ಕೆಲಸಗಳಿಗೆ ಪುನಃ ಜೀವಕಳೆ ಬರುತ್ತದೆ. ನೀವು ನಷ್ಟವಾಗಿ ಹೋಯಿತು ಎಂದು ತಿಳಿದುಕೊಂಡ ಹಣ ಅನಿರೀಕ್ಷಿತವಾಗಿ ಮತ್ತೆ ಲಭ್ಯವಾಗುವ ಸಮಯ. ಮದುವೆಗೆ ಯಾವುದೂ ಒಂದು ಉತ್ತಮ ಸಂಬಂಧಗಳು ಬರುತ್ತಿಲ್ಲ ಎಂದು ಚಿಂತಿಸುತ್ತಾ ಕುಳಿತಿದ್ದಲ್ಲಿ ಈ ಕೊನೆ ತಿಂಗಳುಗಳಲ್ಲಿ ಇಷ್ಟ ಆಗುವ ಅವಕಾಶಗಳು ಬರುವ ಸಾಧ್ಯತೆಗಳು ಹೆಚ್ಚು ಇವೆ. ಭೂಮಿ ಖರೀದಿಸ ಬೇಕು ಅಥವಾ ಖರೀದಿಸಿದ ಭೂಮಿಯಲ್ಲಿ ನೂತನ ನಿರ್ಮಾಣಗಳೇನಾದರೂ ಮಾಡಲು ಬಯಸಿದಲ್ಲಿ ಈಗಲೇ ಪ್ರಯತ್ನ ಆರಂಭಿಸಿದರೆ ಉತ್ತಮ ನಿರೀಕ್ಷಿತ ಫಲ ಸಿಗುತ್ತದೆ. ಸರಕಾರಿ ಉದ್ಯೋಗಿಗಳಿಗೆ ಬಡ್ತಿ ಸಿಗುವ ಯೋಗಗಳಿವೆ. ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ತಮಗೆ ಇಷ್ಟವಾದ ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳಿವೆ. ಒಂದೇ ವಾಕ್ಯದಲ್ಲಿ ಹೇಳ ಬೇಕಾದಲ್ಲಿ ಈ ವರ್ಷದಲ್ಲಿ ಕಳೆದುಕೊಂಡದ್ದು ಅಥವಾ ಪಡೆಯಲು ಆಗದೇ ಹೋಗಿದ್ದನ್ನು ಪಡೆದು ತೃಪ್ತರಾಗಬಹುದಾಗಿದೆ.

ವಿವಿಧ ಪರಿಹಾರ

ವಿವಿಧ ಪರಿಹಾರ

ವೈದಿಕ: ಶ್ರೀ ಧನ್ವಂತರಿ ಹವನ ಮಾಡಿಸಿ
ಕ್ಷೇತ್ರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಇರುವ ಸ್ವರ್ಣವಲ್ಲಿ ದೇಗುಲಕ್ಕೆ ಹೋಗಿ ಅಲ್ಲಿ ನೆಲೆಸಿರುವ ಗಂಗಾಧರೇಶ್ವರನಿಗೆ ರುದ್ರಾಭಿಷೇಕ ಮಾಡಿಸಿ. ಸಂಪರ್ಕ ಸಂಖ್ಯೆ 08384279311, 08384279359
ರತ್ನ: ಉತ್ತಮ ಗುಣಮಟ್ಟದ "ಪಚ್ಚೆ"ಯನ್ನು (ಕನಿಷ್ಠ 5cts ತೂಕ) ಬೆಳ್ಳಿಯಲ್ಲಿ ಉಂಗುರ ಅಥವಾ ಡಾಲರ್ ಮಾಡಿಸಿ ಮೂರು ದಿನ ಪೂಜಿಸಿ ಅಭಿಮಂತ್ರಿಸಿ ಬುಧವಾರದಂದು ಕಿರು ಬೆರಳಿಗೆ ಅಥವಾ ಕುತ್ತಿಗೆಯಲ್ಲಿ ಧರಿಸಿ.
ಸ್ತೋತ್ರ: ಪ್ರತೀ ದಿನ ತಪ್ಪದೇ ಗುರು ಗ್ರಹದ ಅಷ್ಟೋತ್ತರ ಪಠಿಸಿ

English summary
Virgo yearly horoscope 2017: You should act cautiously Virgo zodiac sign. Don't neglect your health and avoid long journey - Predictions by Pandit Vittal Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X