ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃಷಭ ವರ್ಷಭವಿಷ್ಯ : ಪಲಾವ್ ಇಲ್ಲದಿದ್ದರೂ ಚಿತ್ರಾನ್ನಕ್ಕೆ ಕೊರತೆಯಿಲ್ಲ

ವೃಷಭ ರಾಶಿಯವರಿಗೆ 2017ರ ವರ್ಷ ಭವಿಷ್ಯ ಇಲ್ಲಿದೆ. ಈ ರಾಶಿಯವರಿಗೆ ಈ ವರ್ಷ ಮಿಶ್ರಫಲ. ಯಾವುದೇ ರಿಸ್ಕ್ ತೆಗೆದುಕೊಳ್ಳದಂತೆ, ಸೇಫ್ ಗೇಮ್ ಆಡುವುದು ಶ್ರೇಯಸ್ಕರ. ಸಮಸ್ಯೆಗಳಿಗೆ ಪರಿಹಾರವನ್ನೂ ಈ ಲೇಖನದಲ್ಲಿ ನೀಡಲಾಗಿದೆ. ಒಳ್ಳೆಯದಾಗಲಿ.

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ವೃಷಭ ರಾಶಿಯವರಿಗೆ 2017ರ ವರ್ಷ ಮಿಶ್ರ ಫಲ ಹೆಚ್ಚಿನದಾಗಿ ಕಾಣುತ್ತಿದೆ. ಅನಿರೀಕ್ಷಿತ ಕಷ್ಟಗಳು ಹೇರಳವಾಗಿ ಕಂಡರೂ ಸಹ ಆಪದ್ಭಾಂಧವರಾಗಿ ಯಾರೋ ಬಂದು ನಿಮಗೆ ಸಹಾಯ ಮಾಡಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಾರೆ.

ಹಿಂದಿನ ವರುಷ ನಡೆದಷ್ಟು ಸಲೀಸಾಗಿ ಅಥವಾ ಅತ್ಯುತ್ತಮವಾಗಿ ಈ ವರುಷ ಸಾಗದು. ಹಿಂದಿನ ವರುಷದಂತೆ ಪಂಚತಾರಾ ಹೋಟೆಲಿನ ಪಲಾವ್ ಸಿಗೆದೇ ಹೋದರೂ ಸಹ ಮನೆಯಲ್ಲಿ ಅಮ್ಮ ಅಥವಾ ಹೆಂಡತಿ ಮಾಡಿದ ಚಿತ್ರಾನ್ನಕ್ಕೆ ಕೊರತೆ ಆಗುವುದಿಲ್ಲ. ಆದರೆ ಸಮಾಧಾನ ಹಾಗು ಸಂತೃಪ್ತಿ ಮುಖ್ಯ.

ಈ ವರುಷದಲ್ಲಿ ಬಹಳ ಪ್ರಮುಖವಾಗಿ ನೆನಪಿಟ್ಟುಕೊಳ್ಳಬೇಕಾದ ವಿಷಯ ಎಂದರೆ ಯಾವುದೇ ಕಾರಣಕ್ಕೂ ಸಹ ನೀವು ಇರುವ ಉತ್ತಮವಾದ ಉದ್ಯೋಗವನ್ನು ವಿನಾಕಾರಣ ಬಿಡಬೇಡಿ. ಇನ್ನು ಬಿಡಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಈ ವರ್ಷದ ಸೆಪ್ಟೆಂಬರ್ ಒಳಗೆ ಸಾಧ್ಯವಾದಷ್ಟು ಹೊಸ ಉದ್ಯೋಗವನ್ನು ಹುಡುಕಿಕೊಳ್ಳಿ. ಇನ್ನೂ ಉತ್ತಮ ಮಾರ್ಗ ಅಂದರೆ ಸದೃಢವಾದ ಉತ್ತಮವಾದ ಉದ್ಯೋಗ ದೊರಕುವುದೆಂದು ಖಾತ್ರಿ ಆದಮೇಲೆಯೇ ಈಗಿರುವ ಉದ್ಯೋಗಕ್ಕೆ ರಾಜೀನಾಮೆ ಕೊಡಿ. ನೆನಪಿಡಿ ಇದು ಬಹಳ ಮುಖ್ಯ.

Taurus yearly horoscope 2017

ಇನ್ನು ವ್ಯಾಪಾರ ಮಾಡುವವರೂ ಸಹ ಸೆಪ್ಟೆಂಬರ್ ಒಳಗೆ ತೀರಿಸುವೆ ಎಂಬ ದೃಢ ನಂಬಿಕೆ ಇದ್ದಲ್ಲಿ ಮಾತ್ರ ಸಾಲ ಮಾಡಿ ಬಂಡವಾಲ ಹೂಡಿ. ಇನ್ನು ಯಾವುದೇ ವಿಧದಲ್ಲಿ ಲಾಭಕ್ಕಾಗಿ ಕಾಯಬೇಕಾದ ಹೂಡಿಕೆ ಆಗಿದ್ದಲ್ಲಿ ಈ ವರುಷದ ಆಗಸ್ಟ್ ತನಕ ಮಾತ್ರ ಕಾದು ಬಂದಷ್ಟೇ ಲಾಭ ಸಾಕು ಎಂದು ವ್ಯಾಪಾರ ಮುಗಿಸಿಬಿಡಿ. ಎಷ್ಟೇ ಲಾಭ ಕಂಡರೂ ಸಹ ಈ ವರ್ಷದ ಕೊನೇಯ ಭಾಗದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಸಹಾ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿ ಅಥವಾ ಸ್ವಂತ ದುಡ್ಡನ್ನೇ ಆಗಲಿ ಹೂಡಿಕೆ ಮಾಡದಿರಿ.

ಸ್ತ್ರೀಯರು ವಸ್ತ್ರಾಭರಣಗಳನ್ನು ಸಹ ವರ್ಷದ ಆರಂಭದಲ್ಲಿಯೇ ಕೊಂಡುಕೊಳ್ಳುವುದಿದ್ದರೆ ಉತ್ತಮ. ಅಲ್ಲಿಯೂ ಸಹ ಸಾಲ ಆಗದಂತೆ ಎಚ್ಚರ ವಹಿಸಿ. ವಿದ್ಯಾರ್ಥಿಗಳಿಗೆ ಕಷ್ಟದ ಕಾಲ ಹೌದು. ಆದರೆ ಅವರಿಗೆ ಈ ವರ್ಷ ಅತ್ಯುತ್ತಮ ಮಾರ್ಗದರ್ಶನ ಸಿಗುತ್ತದೆ. ಎಷ್ಟೇ ಕಷ್ಟಗಳಾಗಲಿ ನೀನು ಓದು ಬಿಡ ಬೇಡ ನಾನಿದ್ದೇನೆ ಎಂಬ ಹಿರಿಯರ ಅಭಯ ಸಿಗುತ್ತದೆ.

ಅಕ್ಟೋಬರ್ ಒಳಗಡೆ ಹಿಂತಿರುಗುವ ಯಾವುದೇ ವಿದೇಶ ಪ್ರವಾಸಕ್ಕೆ ಅಡ್ಡಿಯಿಲ್ಲ. ಆದರೆ ಅದರ ನಂತರವೂ ಸಹ ಅಲ್ಲಿಯೇ ಉಳಿದರೆ ಕಷ್ಟಗಳು ಹಾಗು ಅಪವಾದಗಳನ್ನು ಎದುರಿಸಬೇಕಾಗುತ್ತದೆ. ವರುಷದ ಮೊದಲರ್ಧ ಭಾಗ ಮಾತ್ರ ನೇರ ಹಣಕಾಸಿನ ವ್ಯವಹಾರ ಮಾಡುವವರಿಗೆ ಹಾಗು ಶೇರು ಪೇಟೆಯಲ್ಲಿ ಹೂಡಿಕೆದಾರರಿಗೆ ಉತ್ತಮವಿದೆ. ನಂತರ ಆದಷ್ಟೂ ಬೇಗ ನಿಮ್ಮ ಹೂಡಿಕೆ ಮರಳಿ ಪಡೆದು ಸುಮ್ಮನಿದ್ದು ಬಿಡಿ.

ವರ್ಷಾಂತ್ಯದಲಿ ಮಾತ್ರ ಕರೆದು ಸಾಲ ಕೊಟ್ಟರೂ ಸಹ ತೆಗೆದುಕೊಳ್ಳಬೇಡಿ. ಆರೋಗ್ಯದ ವಿಚಾರದಲ್ಲಿ ಬೆನ್ನು, ಸೊಂಟ ಹಾಗೂ ಮೊಣಕಾಲು ಈ ಭಾಗದಲ್ಲಿ ನಿಮಗೆ ನೋವು ಹೆಚ್ಚಾಗುತ್ತದೆ. ಔಷಧಿ ಮಾಡುವಾಗ ಆದಷ್ಟೂ ಸಹ ಆಯುರ್ವೇದ ಬಳಸಿ.

ಪ್ರತಿ ತಿಂಗಳು ವೃಷಭ ರಾಶಿಗೆ ಫಲಾಫಲ ಹೇಗಿರಲಿದೆ?

ಜನವರಿ : ಸಂತಾನ ಇಲ್ಲದ ಸಂತಾನ ಅಪೇಕ್ಷಿಗಳಿಗೆ ಶುಭ ಸಮಾಚಾರ ಸಿಗಬಹುದು. ನಿರುದ್ಯೋಗಿಗಳಿಗೆ ಸ್ವಲ್ಪ ಪ್ರಯತ್ನಿಸಿದರೂ ಸಹ ಉದ್ಯೋಗ ಖಚಿತ.

ಫೆಬ್ರವರಿ : ಹಿಂದೆಂದೂ ಆಗದ ವಿಧದಲ್ಲಿ ಅವಕಾಶಗಳು ಕೈತಪ್ಪಿ ಹೋಗುವ ಸಾಧ್ಯತೆಗಳಿವೆ. ಊಹಿಸದ ವಿಧದಲ್ಲಿ ಖರ್ಚುವೆಚ್ಚಗಳು ಹೆಚ್ಚಾಗುತ್ತವೆ.

ಮಾರ್ಚ್ : ಕೊಟ್ಟ ಮಾತು ಅಥವಾ ಪ್ರಾರಂಭಿಸಿದ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಲಗಳು ಆಗುತ್ತವೆ. ಆದರೆ ಸಾಲಕ್ಕಾಗಿ ಹೆಚ್ಚು ಅಲೆಯ ಬೇಕಾಗಿಲ್ಲ, ಸುಲಭವಾಗಿ ಸಿಗುತ್ತದೆ.

ಏಪ್ರಿಲ್ : ವ್ಯಾಪಾರ ಮಾಡುವವರಿಗೆ ಈ ಹಿಂದೆ ಇದ್ದ ಪ್ರಮಾಣದಲ್ಲಿ ಲಾಭಗಳಿಲ್ಲ. ಉದ್ಯೋಗಿಗಳಿಗೆ ಕಛೇರಿಯಲ್ಲಿ ತಮ್ಮ ಅನಿವಾರ್ಯತೆ ಹಾಗು ಪ್ರಾಮುಖ್ಯತೆ ಕಡಿಮೆ ಆಗುತ್ತಿರುವುದು ಭಾಸವಾಗುವುದು.

ಮೇ : ಸ್ವಲ್ಪ ಪ್ರಯತ್ನಿಸಿದರೂ ಸಹ ಈ ತಿಂಗಳು ನಿಮಗೆ ಬರಬೇಕಿರುವ ಹಳೆಯ ಸಾಲದ ಮೊತ್ತ ತಿರುಗಿ ಬರುತ್ತದೆ. ಅಸಡ್ಡೆ ತೋರದೆ ಪ್ರಯತ್ನಿಸಿ ನಿಮಗೆ ಆ ದುಡ್ಡಿನ ಅವಶ್ಯಕತೆ ಬಹಳ ಇದೆ.

ಜೂನ್ : ಇಲ್ಲದ ವ್ಯಸನಗಳು ಹೊಸದಾಗಿ ಪ್ರಾರಂಭವಾಗಬಹುದು ಎಚ್ಚರ, ಅದರಿಂದ ದೂರವಿರಿ. ಪುರುಷರು ಅಪರಿಚಿತ ಸ್ತ್ರೀಯರಿಂದ ದೂರ ಇರುವುದು ಉತ್ತಮ ಹೊಸ ಗೆಳೆತನ ಬೇಡ.

ಜುಲೈ : ವಾಹನ ಚಾಲನೆಯಲ್ಲಿ ಬಹಳ ಜಾಗ್ರತೆ ಅವಶ್ಯ. ಅನಿವಾರ್ಯ ಇಲ್ಲದಿದ್ದಲ್ಲಿ ಹೊಸ ವಾಹನ ಖರೀದಿ ಬೇಡ. ಚತುಷ್ಚಕ್ರ ವಾಹನವಾದಲ್ಲಿ ನಿಮ್ಮ ಹೆಸರಿನಲ್ಲಿ ಖರೀದಿ ಬೇಡ.

ಆಗಸ್ಟ್ : ರಾಜಾರೋಷವಾಗಿ ಎಲ್ಲಾ ಕಡೆ ನುಗ್ಗುವುದು, ಜಗಳ ಮಾಡುವುದು ಪೂರ್ಣವಾಗಿ ನಿಲ್ಲಿಸಿದರೆ ಮಾತ್ರ ನೆಮ್ಮದಿ ಇದೆ, ಇಲ್ಲದಿರೆ ಇಲ್ಲ.

ಸೆಪ್ಟೆಂಬರ್ : ಆಗಲೇಬೇಕಾದ ಕೆಲಸಗಳನ್ನು ಕಷ್ಟವಾದರೂ ಸಹ ಈ ತಿಂಗಳಿನಲ್ಲಿ ಮುಗಿಸಿ. ಮನೆಕಟ್ಟುವ ಯೋಚನೆಗಳಿದ್ದರೆ ನಿಮ್ಮ ಹೆಸರಿನಲ್ಲಿ ಬೇಡ.

ಅಕ್ಟೋಬರ್ : ಯಾವುದೇ ಕಾರಣಕ್ಕೂ ಸಹ ನ್ಯಾಯಾಲಯದಲ್ಲಿ ದಾವೆಗಳು ಪ್ರಾರಂಭ ಆಗದಂತೆ ಎಚ್ಚರವಹಿಸಿ. ಸಮಸ್ಯೆಗಳೇನಾದರೂ ಇದ್ದಲ್ಲಿ ಸಾಧ್ಯವಾಷ್ಟು ಮಾತುಕತೆಯಲ್ಲಿ ಪರಿಹರಿಸಿಕೊಳ್ಳಲು ಪ್ರಯತ್ನಿಸಿ.

ನವೆಂಬರ್ : ಮಾಡಿದ ಕೆಲಸಗಳೆಲ್ಲಾ ವಿಪರೀತವಾದ ಪರಿಣಾಮಗಳನ್ನು ನೀಡುತ್ತವೆ. ಆದರೆ ಎಲ್ಲದಕ್ಕೂ ಸಹ ಗ್ರಹಚಾರ ಒಂದೇ ಕಾರಣ ಎಂದು ಕೈಕಟ್ಟಿ ಕೂರುವುದು ಬೇಡ, ಪ್ರಯತ್ನಗಳು ಚಾಲ್ತಿಯಲ್ಲಿ ಇರಲಿ.

ಡಿಸೆಂಬರ್ : ಪುರುಷರಿಗೆ ಮದುವೆ ಮಾಡಿಕೊಟ್ಟ ತನ್ನ ಆಕ್ಕ ಅಥವಾ ತಂಗಿ ಮನೆಯಲ್ಲಿ ನಡೆಯುವ ಮಂಗಲ ಕಾರ್ಯಗಳಿಗಾಗಿ ಸಹಾಯ ಮಾಡಬೇಕಾದ ಸ್ಥಿತಿ. ಆದರೆ ಹಾಗೆ ಸಹಾಯ ಮಾಡಲು ನಿಮ್ಮ ಆರ್ಥಿಕವಾಗಿ ಸದೃಢರಾಗಿ ಉಳಿದಿರುವುದಿಲ್ಲ.

ಒಟ್ಟಾರೆ ವರ್ಷಫಲ - 2.5/5

ಪರಿಹಾರ

ವೈದಿಕ : ಶಕ್ತರು ಹಾಗೂ ಅಶಕ್ತರು ಯಾರೆ ಇರಲಿ ತಪ್ಪದೇ ಕಡ್ಡಾಯವಾಗಿ ಶನಿ ಜಪ ಹಾಗು ದಶಾಂಶ ತರ್ಪಣ ಸಹಿತ ಕೃಸರಾನ್ನ ದ್ರವ್ಯ ಹಾಗೂ ಶಮೀ ಸಮಿಧದಲ್ಲಿ ಶನಿ ಶಾಂತಿ ಹವನ ಮಾಡಿಸಿ.

ಕ್ಷೇತ್ರ : ಈ ವರ್ಷದಲ್ಲಿ ಮೂರು ಬಾರಿ (ಅಸಾಧ್ಯವಾದರೆ ಕನಿಷ್ಟ ಒಂದು ಬಾರಿ) ಶ್ರೀ ಕ್ಷೇತ್ರ ಧರ್ಮಸ್ಠಳದಲ್ಲಿ ನೇತ್ರಾವತಿ ನದೀ ಸ್ನಾನ ಹಾಗು ಗರ್ಭಗುಡಿಯ ಸನಿಹದಲ್ಲಿ ಹಗಲಿನಲ್ಲಿ ಮಾಡಿಸುವ ತೀರ್ಥ ಸ್ನಾನ ಮಾಡಿ ಶ್ರೀದೇವರ ದರ್ಶನ ಮಾಡಿ ಯಥಾಶಕ್ತಿ ಅನ್ನ ದಾನ ಮಾಡಿ.

ರತ್ನ : ಉತ್ತಮ ಗುಣಮಟ್ಟದ ಕನಕ ಪುಷ್ಯರಾಗ ರತ್ನವನ್ನು ತ್ರಿದಿನ ಸಂಸ್ಕರಿಸಿ ಪೂಜಿಸಿ ಬೆಳ್ಳಿಯಲ್ಲಿ ಧರಿಸಿ.

ಸ್ತೋತ್ರ : ಪ್ರತಿ ದಿನ ತಪ್ಪದೇ ಶ್ರೀ ಶನಿ ಅಷ್ಟೋತ್ತರವನ್ನು ಪಠಿಸಿ.

English summary
Taurus yearly horoscope 2017 : It is mixed year for Taurus zodiac sign. They will have to be careful with their health, investments, jobs, business, loans etc. It is time for Vrishabh people to play safe. Predictions by Pandit Vittal Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X